ಸಿದ್ದರಾಮಯ್ಯ ಸಂಪುಟದ ಬಹುತೇಕ ಸಚಿವರು ಸೋಲುಂಡಿದ್ದು, ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್, ಆರ್.ವಿ.ದೇಶಪಾಂಡೆಯಂಥ ಕೆಲವರಿಗೆ ಮಾತ್ರ ವಿಜಯಲಕ್ಷ್ಮಿ ಒಲಿದಿದ್ದಾಳೆ. ಘಟಾನುಘಟಿ ನಾಯಕರೇ ಸೋಲುಂಡಿದ್ದು, ಕೆಲವೆಡೆ ಮಾತ್ರ ನಿರೀಕ್ಷಿತ ಫಲಿತಾಂಶ ಹೊರ ಬಿದ್ದಿದೆ.
ಸಿಎಂ ಮೇಲೆ ಮುನಿಸು ತೋರಿದ ಚಾಮುಂಡೇಶ್ವರಿ
ಸಾವಿರ ಕೋಟಿ ಒಡೆಯನಿಗೆ ಒಲೆಯದ ವಿಜಯಲಕ್ಷ್ಮಿ
ಗೋವಿಂದರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾ ಕೃಷ್ಣ ವಿರುದ್ಧ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಜಯದ ರುಚಿ ಸವಿದಿದ್ದಾರೆ.

ವಾಟಾಳ್‌ಗೆ ಹ್ಯಾಟ್ರಿಕ್ ಸೋಲು
ಚಾಮರಾಜನಗರದಲ್ಲಿ ಕನ್ನಡ ಚಳುವಳಿ ವಾಟಾಳ್ ನಾಗರಾಜು ಹ್ಯಾಟ್ರಿಕ್ ಸೊಲು ಅನುಭವಿಸಿದ್ದಾರೆ. ಮೂರು ಬಾರಿಯೂ ಠೇವಣಿ ಕಳೆದುಕೊಳ್ಳುವ ಮೂಲಕ ವಾಟಾಳ್ ಮುಖಭಂಗ ಅನುಭವಿಸಿದ್ದಾರೆ.

ಭದ್ರಾವತಿಯಲ್ಲಿ ಸಂಗಮೇಶ್ ಗೆಲವು
ಭದ್ರಾವತಿಯಲ್ಲಿ ಜೆಡಿಎಸ್ ಅಭ್ಯರ್ಥಿ ಅಪ್ಪಾಜಿಗೌಡ ಎದುರು ಸಂಗಮೇಶ್ ಗೆಲುವಿನ ಸಿಹಿ ಉಂಡಿದ್ದಾರೆ. ಕಳೆದ ಬಾರಿ ಸೊರಬ, ಶಿವಮೊಗ್ಗ ಗ್ರಾಮಾಂತರ ಹಾಗೂ ಭದ್ರಾವತಿಯಲ್ಲಿ ಜೆಡಿಎಸ್ ಗೆಲುವು ಕಂಡಿತ್ತು.
ಉಡುಪಿ: ಪ್ರಮೋದ್ ಮಧ್ವರಾಜ್‌ಗೆ ಸೋಲು

ಕೇವಲ ಸಾವಿರ ಮತಗಳಿಂದ ಗೆದ್ದ ಎಚ್.ಕೆ.ಪಾಟೀಲ್
ಗದಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ ಪಾಟೀಲ್ ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವಿನ ನಿಟ್ಟುಸಿರು ಬಿಟ್ಟಿದ್ದಾರೆ. ಬಿಜೆಪಿ ಅನಿಲ್ ಮೆಣಸಿನಕಾಯಿ ವಿರುದ್ದ ಪಾಟೀಲ್ ಗೆಲುವು ಸಾಧಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಕಚೇರಿಗೆ ಬೀಗ
ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರಕಾರ ಅಧಿಕಾರ ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದ್ದು, ಇಂದು ಸಂಜೆ ಅವರು ರಾಜೀನಾಮೆ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಕಚೇರಿಗೆ ಬೀಗ ಜಡಿಯಲಾಗಿದೆ

ಬಿಜೆಪಿ ಸಂಭ್ರಮಾಚರಣೆ
ಬಿಜೆಪಿ ಈಗಾಗಲೇ 63 ಕ್ಷೇತ್ರಗಳಲ್ಲಿ ಗೆದ್ದಿದ್ದು, 71 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ವಿವಿಧೆಡೆ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡುತ್ತಿದ್ದಾರೆ.

ಮಂಡ್ಯದ 7 ಕ್ಷೇತ್ರಗಳಲ್ಲೂ ಜೆಡಿಎಸ್ ಜೆಡಿಎಸ್ ಭರ್ಜರಿ ಜಯ ಸಾಧಿಸಿದೆ.
ಸೊರಬ: ಅಣ್ಣ ಮುಂದೆ ತಲೆ ಬಾಗಿದ ತಮ್ಮ
ಸಾಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಾಗೋಡು ತಿಮ್ಮಪ್ಪ ಮುಗ್ಗರಿಸಿದ್ದರೆ, ಸೊರಬದಲ್ಲಿ ಮಧು ಬಂಗಾರಪ್ಪ ಸೋಲಿನ ಕಹಿ ಉಂಡಿದ್ದಾರೆ.

ಸೊರಬ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಮುನ್ನಡೆ ಸಾಧಿಸಿದ್ದಾರೆ. ಸಹೋದರ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ 3000 ಮತಗಳಿಂದ ಪರಾಭವಗೊಂಡಿದ್ದಾರೆ. ಬಾದಾಮಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಗೆಲುವಿನ ನಿಟ್ಟುಸಿರು ಬಿಟ್ಟಿದ್ದಾರೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಲ್ಲಿ ಲುವಿನ ನಿಟ್ಟುಸಿರು ಬಿಟ್ಟ ಜಗದೀಶ್ ಶೆಟ್ಟರ್.

ಗೆಲುವಿನ ನಗೆ ಬೀರಿದ ಡಿಕೆಶಿ, ಕುಮಾರಸ್ವಾಮಿ
ಡಿ.ಕೆ.ಶಿವಕುಮಾರ್‌ಗೆ ಭರ್ಜರಿ ಗೆಲವು. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಹೆಚ್ಚು ಮತಗಳಿಂದ ಗೆದ್ದ ಪ್ರಮುಖರಲ್ಲಿ ಶಿವಕುಮಾರ್ ಸಹ ಒಬ್ಬರು. ತಮ್ಮ ವಿರುದ್ಧ ಐಟಿ ದಾಳಿ ನಡೆದು, ಇಮೇಜ್ ಡ್ಯಾಮೇಜ್ ಆದರೂ, ಕ್ಷೇತ್ರದ ಜನತೆಯ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಡಿಕೆಶಿ.

ಎರಡೂ ಕ್ಷೇತ್ರಗಳಲ್ಲಿಯೂ ಗೆದ್ದ ಎಚ್ಡಿಕೆ
ರಾಮನಗರ ಹಾಗೂ ಚನ್ನಪಟ್ಟಣ ಎರಡೂ ಕಡೆ ಎಚ್.ಡಿ.ಕುಮಾರಸ್ವಾಮಿ ಗೆಲವು ಸಾಧಿಸಿದ್ದಾರೆ.
ಶಿವಮೊಗ್ಗ ಗ್ರಾಮೀಣದಲ್ಲಿ ಶಾರದಾ ಪೂರ್ಯನಾಯ್ಕ ಮುಗ್ಗರಿಸಿದ್ದು, ಬಿಜೆಪಿ ಅಭ್ಯರ್ಥಿ ಅಶೋಕ್ ನಾಯ್ಕ್ ಜಯಭೇರಿ ಬಾರಿಸಿದ್ದಾರೆ.
ವರ್ತೂರು ಪ್ರಕಾಶ್‌ಗೆ ಮುಖಭಂಗ
ಕೈ ಹಿಡಿಯದ ಚಾಮುಂಡಿ, ಸಿಎಂ ಕೈ ಹಿಡಿದ ಬನಶಂಕರಿ
ಬದಾಮಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ, ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಶ್ರೀರಾಮುಲು ವಿರುದ್ಧ ವಿಜಯದ ನಗೆ ಬೀರಿದ್ದಾರೆ.
ಮುಜರಾಯಿ ಸಚಿವರ ಕೈ ಹಿಡಿಯದ ದೇವರು
ಮುಜರಾಯಿ ಸಚಿವ ರುದ್ರಪ್ಪ ಲಮಾಣಿಗೂ ಸೋಲು. ಅವರ ಸಮೀಪ ಪ್ರತಿಸ್ಪರ್ಧಿ ಬಿಜೆಪಿಯ ನೆಹರು ಓಲೇಕಾರ್‌ಗೆ ಗೆಲವು.
ಲಿಂಗಾಯತ ಮಂತ್ರ ಜಪಿಸಿದವರಿಗೆ ಸೋಲುಣಿಸಿದ ಜನತೆ
ಗಣಿ ಸಚಿವ ವಿನಯ್ ಕುಮಾರ್ ಕುಲಕರ್ಣಿಗೂ ಸೋಲು. ಬಬಲೇಶ್ವರದಲ್ಲಿ ಎಂ.ಬಿ.ಪಾಟೀಲ್ ಮುನ್ನಡೆ ಕಾಯ್ದುಕೊಂಡಿದ್ದು, ಗೆಲವು ಅಧಿಕೃತವಾಗಿ ಘೋಷಣೆಯಾಗಬೇಕಷ್ಟೆ. ಸೋತ ಬಹುತೇಕ ಸಚಿವರಲ್ಲಿ ಹಲವರು ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹೋರಾಡಿದವರೆಂಬುವುದು ಮುಖ್ಯ.
ಉಮಾಶ್ರೀಗೂ ಮಣೆ ಹಾಕದ ಜನತೆ
ಬಾಗಲಕೋಟೆ ತೇರದಾಳದಲ್ಲಿ ಸಚಿವೆ ಉಮಾಶ್ರೀ ಗೆಲ್ಲುವ ಮೂಲಕ ಕಾಂಗ್ರೆಸ್ ಸಂಪುಟದ ಮತ್ತೊಂದು ಸಚಿವರು ಸೋತಿದ್ದಾರೆ.
ಶ್ರೀನಿವಾಸಪುರದಲ್ಲಿ ಸಚಿವ ರಮೇಶ್ ಕುಮಾರ್‌ಗೆ ಗೆಲವು
ಪದ್ಮನಾಭನಗರದಲ್ಲಿ ಆರ್.ಅಶೋಕ್ ಒಲಿದ ಜಯಲಕ್ಷ್ಮಿ.
ಮಂಡ್ಯದಲ್ಲಿ ಜೆಡಿಎಸ್ ಕ್ಲೀನ್ ಸ್ವೀಪ್: ಚೆಲುವರಾಯ ಸ್ವಾಮಿಗೆ ಹೀನಾಯ ಸೋಲು
ಗೀತಾಗೆ ಕೈ ಹಿಡಿಯಲಿಲ್ಲ ಅನುಕಂಪ
ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಅನುಕಂಪದ ಅಲೆ ಮೇಲೆ ಗೆದ್ದಿದ್ದ ಸಚಿವೆ ಗೀತಾ ಮಹಾದೇವ ಪ್ರಸಾದ್‌ಗೆ ಸೋಲು. ಬಿಜೆಪಿ ಅಭ್ಯರ್ಥಿ ನಿರಂಜನ್ ಗೆದಿದ್ದಾರೆ. ಅಲ್ಲಿಗೆ ಸಿದ್ದರಾಮಯ್ಯ ಸಂಪುಟದ ಮಾಜಿ ಹಾಗೂ ಅನೇಕ ಹಾಲಿ ಸಚಿವರು ಸೋಲು ಕಂಡಿದ್ದು, ಸರಕಾರದ ವಿರೋಧಿ ಅಲೆ ಕಾರ್ಯ ನಿರ್ವಹಿಸಿದೆ.
ಗೀತಾ ಮಹಾದೇವ ಪ್ರಸಾದ್, ಎಚ್.ಸಿ.ಮಹಾದೇವಪ್ಪ, ಆಂಜನೇಯ, ರಮಾನಾಥ್ ರೈ, ಅಭಯಚಂದ್ರ ಜೈನ್ ಸೇರಿ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಸೋತಿದ್ದಾರೆ.
ಚಾಮರಾಜಪೇಟೆಯಲ್ಲಿ ಜಮೀಲ್ ಅಹ್ಮದ್‌ಗೆ ಭಾರೀ ಅಂತರದ ಗೆಲವು.
ಶಿವಾಜಿನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೋಷನ್ ಬೇಗ್’ಗೆ ಗೆಲುವು. ಬಿಜೆಪಿ ಅಭ್ಯರ್ಥಿ ಕಟ್ಟಾ ಸುಬ್ರಮಣ್ಯಗೆ ಮುಖಭಂಗ.
ಉತ್ತರ ಕನ್ನಡ- 6 ಸ್ಥಾನಗಳ ಪೈಕಿ 5 ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಉಡುಪಿಯಲ್ಲಿ-5 ಕ್ಷೇತ್ರಗಳಲ್ಲೂ ಬಿಜೆಪಿ ಮುನ್ನಡೆ ಸಾಧಿಸಿದೆ.
ಬೆಂಗಳೂರಿನಲ್ಲಿ ಭಾರೀ ಮುನ್ನಡೆ ಕಾಯ್ದುಕೊಂಡ ಬಿಜೆಪಿ ಇದುವರೆಗೆ ಬೆಂಗಳೂರು ನಗರ 26 ಕ್ಷೇತ್ರಗಳಲ್ಲಿ 15 ಬಿಜೆಪಿ, 9 ಕಾಂಗ್ರೆಸ್, 2 ಜೆಡಿಎಸ್ ಮುನ್ನಡೆ ಸಾಧಿಸಿದೆ. ಬಿಜೆಪಿ ಕಚೇರಿ ಮುಂಭಾಗದಲ್ಲಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ.
ಕಾಂಗ್ರೆಸ್‌ನ ಬಹುತೇಕ ಸಚಿವರಿಗೆ ಸೋಲು
ಬದಾಮಿಯಲ್ಲಿ ಸೋಲು, ಮೊಳಕಾಲ್ಮೂರಿನಲ್ಲಿ ಶ್ರೀರಾಮುಲುಗೆ ಭರ್ಜರಿ ಗೆಲವು
ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು 25000 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ
ಮತ ಕೇಂದ್ರದಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ್ ಆತ್ಮಹತ್ಯೆಗೆ ಯತ್ನ. ಬಬಲೇಶ್ವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ ಎಣಿಕೆಯಲ್ಲಿ ಗೋಲ್ ಮಾಲ್ ನಡೆದಿದೆ ಎಂದು ಆರೋಪಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಎಂ.ಬಿ.ಪಾಟೀಲ್ ಈ ಕ್ಷೇತ್ರದಲ್ಲಿ ಗೆಲುವಿನತ್ತ ಹೆಜ್ಜೆ ಹಾಕುತ್ತಿದ್ದಾರೆ.
ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪಗೆ ಸೋಲು. ಟಿ.ನರಸೀಪುರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮಹಾದೇವಪ್ಪ.
ಭಾರತೀಯ ಜನತಾ ಪಕ್ಷಕ್ಕೆ ಜನಾಶೀರ್ವಾದ, ಅಮಿತ್ ಶಾ ಖುಷ್
ಹೊಳಲ್ಕೆರೆಯಿಂದ ಸಚಿವ ಹೆಚ್ ಆಂಜನೇಯ ಸೋಲು. ಬಿಜೆಪಿ ಅಭ್ಯರ್ಥಿ ಚಂದ್ರಪ್ಪ ಭರ್ಜರಿ ಜಯ ಸಾಧಿಸಿದ್ದಾರೆ.
ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಅಭ್ಯರ್ಥಿ ಶ್ರೀರಾಮುಲುಗೆ 2420 ಮತಗಳ ಹಿನ್ನಡೆ
ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪ್ರಸನ್ನ ಕುಮಾರ್ ವಿರುದ್ಧ ಈಶ್ವರಪ್ಪ ಗೆಲುವಿನ ಕೇಕೆ ಹಾಕಿದ್ದಾರೆ

ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಗೆಲವು. ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ಶಂಕರ್ ವಿರುದ್ಧ ನಗುವಿನ ನಗೆ ಬೀರಿದ ರವಿ.
ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಮೊಯಿದ್ದೀನ್ ಬಾವಾ ವಿರುದ್ಧ ಬಿಜೆಪಿ ಅಭ್ಯರ್ಥಿ ಭರತ್ ಶೆಟ್ಟಿಗೆ ಗೆಲುವು.
ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಕೆ ಎಸ್ ಈಶ್ವರಪ್ಪಗೆ 20,000 ಸಾವಿರ ಮತಗಳಿಂದ ಮುನ್ನಡೆ. ಕಾಂಗ್ರೆಸ್‌ನ ಪ್ರಸನ್ನ ಕುಮಾರ್‌ಗೆ ಎರಡನೇ ಸ್ಥಾನ.
ರಾಮನಗರಲ್ಲಿ ಕಾಂಗ್ರೆಸ್ನ ಅಭ್ಯರ್ಥಿ ಇಕ್ಬಾಲ್ ಹುಸೇನ್, ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ವಿರುದ್ಧ 186 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ
ಪ್ರಿಯಾಂಕ ಖರ್ಗೆ ಚಿತ್ತಾಪುರದಲ್ಲಿ ಹಿನ್ನಡೆ
ಸಾಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಾಗೋಡು ತಿಮ್ಮಪ್ಪರನ್ನು ಹಿಂದಿಕ್ಕಿ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಮುನ್ನಡೆ
ಬಿಜೆಪಿಯ ಹಾಲಾಡಿ ಶ್ರೀನಿವಾಸ ಶೆಟ್ಟಿ ಒಂದು ಲಕ್ಷಕ್ಕೂ ಹೆಚ್ಚಿನ ಮತಗಳಿಂದ ಜಯಭೇರಿ
ರಾಮನಗರದಲ್ಲಿ ಕುಮಾರಸ್ವಾಮಿಗೆ ಭಾರೀ ಹಿನ್ನಡೆ
ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಮುನ್ನಡೆ
ಮೋಹಿದ್ದೀನ್ ಭಾವಗೆ ಸೋಲು
ಯಡಿಯೂರಪ್ಪ ಶಿಕಾರಿಪುರದಲ್ಲಿ ಗೆಲವು

ರಾಮಲಿಂಗಾ ರೆಡ್ಡಿ ಬಿಟಿಎಂ ಲೇ ಔಟ್ ನಲ್ಲಿ ಮುನ್ನಡೆ
ಲಕ್ಷ್ಮೀ ಹೆಬ್ಬಾಳ್ ಕರ್ ಬೆಳಗಾವಿ ಗ್ರಾಮೀಣದಲ್ಲಿ ಮುನ್ನಡೆ
ಸಿ ಪಿ ಯೋಗೇಶ್ವರ್ ಚನ್ನ ಪಟ್ಟಣದಲ್ಲಿ ಹಿನ್ನಡೆ, ಕುಮಾರಸ್ವಾಮಿಗೆ ಮುನ್ನಡೆ
ವಿಧಾನಸಭಾ ಚುನಾವಣೆ ಫಲಿತಾಂಶ: ಕಾಂಗ್ರೆಸ್ ಮುಕ್ತ ಕರ್ನಾಟಕದ ಮೋದಿ ಕನಸು ನನಸು
ಸರ್ವಜ್ಞನಗರದಲ್ಲಿ ಕೆ ಜೆ ಜಾರ್ಜ್ ಮುನ್ನಡೆ ಹರಪ್ಪನ ಹಳ್ಳಿ ಕರುಣಾಕರ ರೆಡ್ಡಿ ಮುನ್ನಡೆ ಯಶವಂತಪುರದಲ್ಲಿ ಜಗ್ಗೇಶ್ ಹುನ್ನಡೆ, ಕನಕಪುರದಲ್ಲಿ ಡಿ ಕೆ ಶಿವಕುಮಾರ್ 1526 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ವರುಣಾದಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯಗೆ ಮುನ್ನಡೆ, ಗಾಂಧಿ ನಗರದಲ್ಲಿ ದಿನೇಶ್ ಗುಂಡೂರಾವ್.
ತೀರ್ಥಹಳ್ಳಿಯಲ್ಲೂ ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ ಗೆಲವು, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮನೆಗೆ
ಸ್ಪಷ್ಟ ಬಹುಮತದ ಹೊಸ್ತಿಲಿನಲ್ಲಿ ಕಮಲದ ಹೂವು.
ಅನೇಕ ಲೆಕ್ಕಚಾರಗಳನ್ನು ತಿರುವು ಮುರುವು ಮಾಡಿ, ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದ ಚಿತ್ರ ಕಣ್ಣು ಮುಂದೆ ಬಂದಿದೆ. ಯಾವ ಪೂರ್ವ ಚುನಾವಣೆ ಸಮೀಕ್ಷೆಗಳೂ ಏನೇ ಹೇಳಿರಲಿ, ಬಿಜೆಪಿ ಮಾತ್ರ ದಾಪುಗಾಲಿನಿಂದ ಮುನ್ನಡೆ ಸಾಧಿಸಿ, ಸರಕಾರ ರಚನೆಯ ಹೊಸಿಲಿಗೆ ಬಂದು ನಿಂತಿದೆ.
ಕಾಂಗ್ರೆಸ್ ಮುಕ್ತ ಭಾರತದ ಮೋದಿ, ಅಮಿತ್ ಶಾ ಕನಸು ಕರ್ನಾಟಕದಲ್ಲಿ ನನಸಾಗುತ್ತಿರುವ ಚಿತ್ರ ಸಿಕ್ಕಿದೆ.
110 ಕ್ಷೇತ್ರಗಳಲ್ಲಿ ಬಿಜೆಪಿಗೆ ಮುನ್ನಡೆ, 66 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿನ ಹಾದಿಯಲ್ಲಿ ಯು.ಟಿ.ಖಾದರ್.
ಮೂಡಬಿದರೆಯಲ್ಲಿ ಬಿಜೆಪಿ ಗೆಲುವಿನ ಖಾತೆ ತೆರಿದ್ದು, 22 ಸಾವಿರ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಉಮಾನಾಥ್ ಕೋಟ್ಯಾನ್ ಗೆಲವು ಸಾಧಿಸಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಮ್‌ನಲ್ಲಿಯೂ ಬಿಜೆಪಿ ಅಭ್ಯರ್ಥಿ ಅಶ್ವಥನಾರಾಯಣ್ ಅವರು ಗೆಲವು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ.
ಕರ್ನಾಟಕದ ಚುನಾವಣೆ ಫಲಿತಾಂಶ ಇನ್ನೇನು ಕೆಲವೇ ಗಂಟೆಗಳಲ್ಲಿ ಹೊರ ಬೀಳಲಿದ್ದು, ಮೊದಲ ಕೆಲವು ಹಂತಗಳ ಮತದಾನ ಮುಗಿದಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಸಮಬಲ ಕಾಯ್ದುಕೊಂಡಿದ್ದು, ಯಾವ ಪಕ್ಷ ಸ್ಪಷ್ಟ ಬಹುಮತ ಪಡೆಯುತ್ತೆ ಎಂಬ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಗುತ್ತಿಲ್ಲ. ಆಗಲೇ, ಜೆಡಿಎಸ್ ಅಧ್ಯಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಸುಳಿವು ನೀಡಿದ್ದು, ರಾಜ್ಯ ಚುನಾವಣಾ ಕಣ ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿ ಕೊಟ್ಟಿದೆ.
ಮೂಡಬಿದರೆಯಲ್ಲಿ ಬಿಜೆಪಿ ಗೆಲುವಿನ ಖಾತೆ ತೆರಿದ್ದು, 17 ಸಾವಿರ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಉಮಾನಾಥ್ ಕೋಟ್ಯಾನ್ ಗೆಲವು ಸಾಧಿಸಿದ್ದಾರೆ.
ಮುನ್ನಡೆಯಲ್ಲಿ ಸೆಂಚುರಿ ಹೊಡೆಯುತ್ತಿದೆ ಬಿಜೆಪಿ

ಬಿಜೆಪಿಯೊಂದಿಗೆ ಮೈತ್ರಿ ಸುಳಿವು ನೀಡಿದ ಎಚ್ಡಿಕೆ

2ನೇ ಸುತ್ತಿನಲ್ಲಿಯೂ ಸಿಎಂ ಸಿದ್ದರಾಮಯ್ಯಗೆ ಚಾಮುಂಡೇಶ್ವರಿಯಲ್ಲಿ ಹಿನ್ನಡೆ

ಉತ್ತರಕನ್ನಡ ಜಿಲ್ಲೆಯಲ್ಲಿ ಎರಡು ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ. ಶಿರಸಿ, ಭಟ್ಕಳದಲ್ಲಿ ಬಿಜೆಪಿ ಮುನ್ನಡೆ. ಹಳಿಯಾಳದಲ್ಲಿ ಆರ್ ವಿ ದೇಶಪಾಂಡೆಗೆ ಮುನ್ನಡೆ
ಬೊಮ್ಮನಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಸುಮಾರು ಮೂರು ಸಾವಿರ ಮತಗಳ ಮುನ್ನಡೆ
ಗೋವಿಂದರಾಜ ನಗರದಲ್ಲಿ ಬಿಜೆಪಿ - 4335, ಕಾಂಗ್ರೆಸ್ - 3134, ಜೆಡಿಎಸ್ - 504
ಬಳ್ಳಾರಿಯಲ್ಲಿ ಅನಿಲ್ ಲಾಡ್ ಹಿನ್ನಡೆ ಸಾಗರದಲ್ಲಿ ಹರತಾಳು ಹಾಲಪ್ಪ ಹಿನ್ನಡೆ. ಉಡುಪಿಯಲ್ಲಿ ಪ್ರಮೋದ್ ಮಧ್ಯರಾಜ್ ಮುನ್ನಡೆ. ಬೀದರ್ ದಕ್ಷಿನ ಅಶೋಕ್ ಖೇಣಿ ಹಿನ್ನಡೆ. ಬಾದಾಮಿಯಲ್ಲಿ ಶ್ರೀರಾಮುಲುಗೆ ಹಿನ್ನಡೆ.
ಚುನಾವಣೆ ವಿಧಾನಸಭೆ ಚುನಾವಣೆಯ ಫಲಿತಾಂಶದ ದಲ ಹಂತದ ಎಣಿಕೆ ಮುಕ್ತಾಯಗೊಂಡಿದ್ದು, ಕಾಂಗ್ರೆಸ್ 76, ಬಿಜೆಪಿ 74 ಹಾಗೂ ಜೆಡಿಎಸ್ 26 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಕೆಲವೆಡೆ ಮೊದಲ ಹಂತದ ಮತದಾನ ಮುಗಿದ್ದು, ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಮತ ಎಣಿಕೆಯಲ್ಲಿಯೂ ಕಾಂಗ್ರೆಸ್ ಹೆಚ್ಚು ಮತಗಳನ್ನು ಪಡೆದಿದೆ.
ಬಬಲೇಶ್ವರದಲ್ಲಿ ಮುಗಿದಿದೆ ಮೊದಲ ಹಂತದ ಮತದಾನ, ಎಂ.ಬಿ.ಪಾಟೀಲ್‌ಗೆ ಮುನ್ನಡೆ
ಬಳ್ಳಾರಿಯಲ್ಲಿ ಆರು ಕ್ಷೇತ್ರದಲ್ಲಿ 5 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡ
ಮಧ್ಯ ಕರ್ನಾಟಕದಲ್ಲಿ ಜೆಡಿಎಸ್ ಮುನ್ನಡೆ
ಮೊಳಕಾಲ್ಮೂರಿನಲ್ಲಿ ಶ್ರೀರಾಮುಲುವಿಗೆ ಮುನ್ನಡೆ
ಬಾದಾಮಿಯಲ್ಲಿ ಸಿದ್ದರಾಮಯ್ಯಗೆ ಮುನ್ನಡೆ. ಸಿಎಂಗೆ ತೀವ್ರ ಸ್ಪರ್ಧೆ ನೀಡುತ್ತಿರುವ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು.
ಚಾಮುಂಡೇಶ್ವರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುಖ್ಯಮುಂತ್ರಿ ಸಿದ್ದರಾಮಯ್ಯ ಅವರಿಗಿಂತ ಜಿಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡರು 3000 ಮತಗಲಿಂದ ಮುನ್ನಡೆ ಸಾಧಿಸಿದ್ದಾರೆ.

ಮತ ಎಣಿಕೆಗೂ ಮುನ್ನವೇ ಕಾಂಗ್ರೆಸ್‌ನಿಂದ ಸಂಭ್ರಮಾಚರಣೆ
ಮಣ ಎಣಿಕೆ ಆರಂಭಕ್ಕೂ ಮುನ್ನ ಅಭ್ಯರ್ಥಿಗಳಿಂದ ವಿಶೇಷ ಪೂಜೆ

ಕರ್ನಾಟಕ ಚುನಾವಣೆಯಲ್ಲಿ ಫ್ಯಾಮಿಲಿ ಪೊಲಿಟಿಕ್ಸ್ ಹೀಗಿತ್ತು
ಈ ಭಾರಿ ವಿಧಾನಸಭೆ ಚುನಾವಣೆಗೆ ಮಾಡಿದ ಖರ್ಚೆಷ್ಟು?
ಬೆಂಗಳೂರು: ಐದು ಕೇಂದ್ರಗಳಲ್ಲಿ ಬೆಳಗ್ಗೆ 8ರಿಂದ 30 ಕ್ಷೇತ್ರಗಳ ಮತ ಎಣಿಕೆ
ಕರ್ನಾಟಕದಲ್ಲಿಯೂ ವಿಸ್ತರಣೆಯಾಗುತ್ತಾ ಕೇಸರಿ ಸಾಮ್ರಾಜ್ಯ?
ಈ ಬಾರಿ ಸರಕಾರ ಯಾರದ್ದು? ಯಾರು ಸಿಎಂ?








