ಈ ಬಾರಿ ವಿಧಾನ ಸಭಾ ಚುನಾವಣೆಗಾಗಿ ಮಾಡಿದ ವೆಚ್ಚವೆಷ್ಟು..?

Karnataka Assembly Election 2018 witnessed most expensive poll
Highlights

ಕರ್ನಾಟಕದ ವಿಧಾನಸಭೆ ಚುನಾವಣೆಯ ವೇಳೆ ವಶಪಡಿಸಿಕೊಳ್ಳಲಾದ ಅಕ್ರಮ ಹಣ, ಮದ್ಯ ಹಾಗೂ ಇತರ ವಸ್ತುಗಳ ಮೌಲ್ಯ 150 ಕೋಟಿಯನ್ನೂ ದಾಟಿದೆ ಎಂದು ಚುನಾವಣಾ ಆಯೋಗ ಹೇಳಿತ್ತು. ಆದರೆ, ಈ 150 ಕೋಟಿ ಬಹಳ ಸಣ್ಣ ಮೊತ್ತವಾಗಿದ್ದು, ನಿಜವಾಗಿಯೂ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಇದರ ಹತ್ತಾರು ಪಟ್ಟು ಹೆಚ್ಚು ಹಣವನ್ನು ಖರ್ಚು ಮಾಡಿವೆ.

ಬೆಂಗಳೂರು(ಮೇ 15) : ಕರ್ನಾಟಕದ ವಿಧಾನಸಭೆ ಚುನಾವಣೆಯ ವೇಳೆ ವಶಪಡಿಸಿಕೊಳ್ಳಲಾದ ಅಕ್ರಮ ಹಣ, ಮದ್ಯ ಹಾಗೂ ಇತರ ವಸ್ತುಗಳ ಮೌಲ್ಯ 150 ಕೋಟಿಯನ್ನೂ ದಾಟಿದೆ ಎಂದು ಚುನಾವಣಾ ಆಯೋಗ ಹೇಳಿತ್ತು. ಆದರೆ, ಈ 150 ಕೋಟಿ ಬಹಳ ಸಣ್ಣ ಮೊತ್ತವಾಗಿದ್ದು, ನಿಜವಾಗಿಯೂ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಇದರ ಹತ್ತಾರು ಪಟ್ಟು ಹೆಚ್ಚು ಹಣವನ್ನು ಖರ್ಚು ಮಾಡಿವೆ. ಅದರ ಮೊತ್ತ ಸುಮಾರು 10,500 ಕೋಟಿ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ಎಂಬ ಸ್ವಯಂ ಸೇವಾ ಸಂಸ್ಥೆ ಈ ಕುರಿತು ಅಧ್ಯಯನ ನಡೆಸಿ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಕರ್ನಾಟಕದ ಚುನಾವಣೆಯಲ್ಲಿ ಒಟ್ಟು 9500 ಕೋಟಿ ರು.ನಿಂದ 10, 500 ಕೋಟಿ ರು.ಗಳಷ್ಟು ಹಣ ಖರ್ಚು ಮಾಡಲಾಗಿದೆ. ಇದು ನಮ್ಮ ದೇಶದಲ್ಲಿ ಇಲ್ಲಿಯವರೆಗೆ ಯಾವುದೇ ರಾಜ್ಯದ ವಿಧಾನಸಭೆ ಚುನಾವಣೆಗೆ ಮಾಡಿದ ಖರ್ಚಿಗಿಂತ ಹೆಚ್ಚು. ಹಾಗೂ 2013ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮಾಡಲಾದ ಖರ್ಚಿನ ದುಪ್ಪಟ್ಟಿಗಿಂತ ಹೆಚ್ಚು ಎಂದು ಹೇಳಲಾಗಿದೆ.

ಮೇಲೆ ಹೇಳಿದ ಖರ್ಚು ಪ್ರಧಾನಿ ನರೇಂದ್ರ ಮೋದಿ ಅವರ ರ‌್ಯಾಲಿಗಳಿಗೆ ಬಿಜೆಪಿ ಮಾಡಿದ ಖರ್ಚನ್ನು ಒಳಗೊಂಡಿಲ್ಲ. ಆದರೆ, ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಅಧಿಕೃತವಾಗಿ ಮತ್ತು ಅನಧಿಕೃತವಾಗಿ ಮಾಡಿದ ಖರ್ಚನ್ನು ಒಳಗೊಂಡಿದೆ. ಒಟ್ಟಾರೆ ಖರ್ಚಿನಲ್ಲಿ ಅರ್ಧಕ್ಕಿಂತಲೂ ಹೆಚ್ಚು ಹಣವನ್ನು ಕರ್ನಾಟಕದ ಆಡಳಿತಾರೂಢ ಪಕ್ಷವೇ ಖರ್ಚು ಮಾಡಿರುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.

ಕಳೆದ 20  ವರ್ಷಗಳಿಂದ ನಾವು ನಡೆಸಿದ ಅಧ್ಯಯನದಲ್ಲಿ ಸಾಮಾನ್ಯವಾಗಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮುಂತಾದ ದಕ್ಷಿಣದ ರಾಜ್ಯಗಳ ಚುನಾವಣಾ ವೆಚ್ಚವು ಉತ್ತರದ ರಾಜ್ಯಗಳಿಗಿಂತ ಸ್ವಲ್ಪ ಹೆಚ್ಚೇ ಇರುತ್ತಿತ್ತು. ಆದರೆ, ಈ ಬಾರಿ ಎಲ್ಲಾ ದಾಖಲೆಗಳನ್ನೂ ಮುರಿದು ಕರ್ನಾಟಕದಲ್ಲಿ ಅತಿ ಹೆಚ್ಚು ಖರ್ಚು ಮಾಡಲಾಗಿದೆ ಎಂದು ವರದಿ ಹೇಳಿದೆ. 

loader