ರಾಜ್ಯಾದ್ಯಂತ ಭರದಿಂದ ಸಾಗಿದೆ ಅಂಚೆ ಮತ ಎಣಿಕೆ

First Published 15, May 2018, 8:06 AM IST
Postal Voting Counting begin
Highlights

ಬೆಂಗಳೂರು (ಮೇ. 15): ರಾಜ್ಯಾದ್ಯಂತ ಅಂಚೆ  ಮತ ಎಣಿಕೆ ಭರದಿಂದ ಸಾಗಿದೆ. ಹೈ ವೋಲ್ಟೇಜ್ ಕ್ಷೇತ್ರ ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಅಂಚೆ ಮತ ಎಣಿಕೆಯಲ್ಲಿ ಮುನ್ನಡೆ ಸಾಧಿಸಿದ್ದಾರೆ.  ದಾವಣಗೆರೆಯಲ್ಲಿ  ಶಾಮನೂರು ಶಿವಶಂಕರಪ್ಪ ಮುನ್ನಡೆ ಸಾಧಿಸಿದ್ದಾರೆ. 

ಬೆಂಗಳೂರು (ಮೇ. 15): ರಾಜ್ಯಾದ್ಯಂತ ಅಂಚೆ  ಮತ ಎಣಿಕೆ ಭರದಿಂದ ಸಾಗಿದೆ. ಹೈ ವೋಲ್ಟೇಜ್ ಕ್ಷೇತ್ರ ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಅಂಚೆ ಮತ ಎಣಿಕೆಯಲ್ಲಿ ಮುನ್ನಡೆ ಸಾಧಿಸಿದ್ದಾರೆ.  

ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಮುನ್ನಡೆ ಸಾಧಿಸಿದ್ದಾರೆ.

ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್ ಎಸ್ ಪ್ರಕಾಶ್ ಮುನ್ನಡೆ ಸಾಧಿಸಿದ್ದಾರೆ. ಹರಿಹರ ಕ್ಷೇತ್ರದಲ್ಲಿ ಬಿಜೆಪಿಯ ಬಿ ಪಿ ಹರೀಶ್ ಮುನ್ನಡೆ ಸಾಧಿಸಿದ್ದಾರೆ. ಚನ್ನಗಿರಿ ಕ್ಷೇತ್ರದಲ್ಲಿ ಮಾಡಾಳು ವಿರೂಪಾಕ್ಷಪ್ಪ ಮುಂದಿದ್ದರೆ ರಾಮನಗರದಲ್ಲಿ ಡಿಕೆಶಿ ಮುನ್ನಡೆ ಸಾಧಿಸಿದ್ದಾರೆ. 

ಹರಪ್ಪನ ಹಳ್ಳಿಯಲ್ಲಿ ಬಿಜೆಪಿಯ ಕರುಣಾಕರ ರೆಡ್ಡಿ ಮುನ್ನಡೆ ಸಾಧಿಸಿದ್ದಾರೆ. ಜಗಳೂರಿನಲ್ಲಿಯೂ ಸಹ ಬಿಜೆಪಿ ಅಭ್ಯರ್ಥಿ ರಾಮಚಂದ್ರ ಮುನ್ನಡೆ ಸಾಧಿಸಿದ್ದಾರೆ. 

ಬಬಲೇಶ್ವರದಿಂದ ಎಂ.ಬಿ. ಪಾಟೀಲ ಕಾಂಗ್ರೆಸ್ ಮುನ್ನಡೆ, ಇಂಡಿಯಿಂದ ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ್,  ವಿಜಯಪುರ ನಗರದಿಂದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ್  ಮುನ್ನಡೆ ಸಾಧಿಸಿದ್ದರೆ,  ಸಿಂದಗಿಯಿಂದ ಎಂ.ಸಿ. ಮನಗೂಳಿ ಮುನ್ನಡೆ ಸಾಧಿಸಿದ್ದಾರೆ. 

ಮುದ್ದೇಬಿಹಾಳದಲ್ಲಿ ಎ.ಎಸ್. ಪಾಟೀಲ ನಡಹಳ್ಳಿ ಮುನ್ನಡೆ ಸಾಧಿಸಿದ್ದರೆ ಬಸವನಬಾಗೇವಾಡಿಯಲ್ಲಿ  ಬಿಜೆಪಿ ಅಭ್ಯರ್ಥಿ  ಸಂಗರಾಜ್ ದೇಸಾಯಿ ಮುನ್ನಡೆ ಸಾಧಿಸಿದ್ದಾರೆ.  ದೇವರಹಿಪ್ಪರಗಿಯಲ್ಲಿ  ಸೋಮನಗೌಡ ಪಾಟೀಲ ಮುಂದಿದ್ದಾರೆ. 

loader