ಭಾರತೀಯ ಜನತಾ ಪಕ್ಷಕ್ಕೆ ಜನಾಶೀರ್ವಾದ, ಅಮಿತ್ ಶಾ ಖುಷ್

BJP all set to form government in Karnataka
Highlights

ಒಳ ಜಗಳ, ರಗಳೆಗಳು , ಒಡೆದ ಮನೆ ಆಗಿದ್ದ ಬಿಜೆಪಿ ಮತ್ತೆ ಒಂದಾದರ ಫಲವೋ, ಮೋದಿ, ಅಮಿತ್ ಶಾ ಅವರ ರಣತಂತ್ರದ ಪ್ರತಿಫಲವೋ, ಕಾಂಗ್ರೆಸ್ ಸರಕಾರದಿಂದ ಆಡಳಿತದಿಂದ ಬೇಸತ್ತಿದ್ದ ಕರ್ನಾಟಕ ಮತದಾರನ ಸಿಟ್ಟೋ, ಅಂತೂ ಕರ್ನಾಟಕದಲ್ಲಿ ಮತ್ತೆ ಅರಳುತ್ತಿದೆ ಕಮಲ. ಹೌದು, ಈ ಬಾರಿ ಬಿಜೆಪಿ. 

ಒಳ ಜಗಳ, ರಗಳೆಗಳು, ಒಡೆದ ಮನೆ ಆಗಿದ್ದ ಬಿಜೆಪಿ ಮತ್ತೆ ಒಂದಾದರ ಫಲವೋ, ಮೋದಿ, ಅಮಿತ್ ಶಾ ಅವರ ರಣತಂತ್ರದ ಪ್ರತಿಫಲವೋ, ಕಾಂಗ್ರೆಸ್ ಸರಕಾರದಿಂದ ಆಡಳಿತದಿಂದ ಬೇಸತ್ತಿದ್ದ ಕರ್ನಾಟಕ ಮತದಾರನ ಸಿಟ್ಟೋ, ಅಂತೂ ಕರ್ನಾಟಕದಲ್ಲಿ ಮತ್ತೆ ಅರಳುತ್ತಿದೆ ಕಮಲ. ಹೌದು, ಈ ಬಾರಿ ಬಿಜೆಪಿ. 

ಇದುವರೆಗಿನ ಮತ ಎಣಿಕೆಯನ್ನು ಗಮನಿಸಿದರೆ, ಬಿಜೆಪಿ ಸರಳ ಬಹುಮತದ ಮ್ಯಾಜಿಕ್ ನಂಬರಿಗೆ ಮುತ್ತಿಕ್ಕುವುದು ಗ್ಯಾರಂಟಿ. ಜೆಡಿಎಸ್ 42 ಸ್ಥಾನಗಳಿಗೆ ಮುಂದಿದ್ದು, ಕಾಂಗ್ರೆಸ್ ಪಕ್ಷದ ಬಲವನ್ನು ಕಸಿಯುವಲ್ಲಿ ಯಶಸ್ವಿಯಾಗಿದೆ. 

ಜನತೆಗೆ ಬೇಕಾಗಿದ್ದು, ಸುಭದ್ರ ಸರಕಾರ. ಹಾಗೇನೇ ನೆಮ್ಮದಿಯ ಕರ್ನಾಟಕ. ಲಂಚ ಮುಕ್ತ ಕರ್ನಾಟಕ. ಅಭಿವೃದ್ಧಿಯತ್ತ ಸಾಗುವ ನಾಡು. ಇದನ್ನೆಲ್ಲ ಸರಕಾರದ ಜವಾಬ್ದಾರಿ ಹೊರುವವರು ಕೊಡುತ್ತಾರಾ ಎನ್ನುವುದೇ ಪ್ರಶ್ನೆ.

ಅದೇನೇ ಇರಲಿ, ಬಿಜೆಪಿಯ ಕ್ಯಾಂಪಿನಲ್ಲಿ ಸಂತಸದ ಹೊಳೆ ಹರಿಯುತ್ತಿದೆ. ಹೊಳಲ್ಕೆರೆಯಿಂದ- ದಿಲ್ಲಿಯವರೆಗೆ, ಚಾಮುಂಡಿಯಿಂದ-ನಾಗಪುರದವರೆಗೆ ಸಂಭ್ರಮದ ವಾತಾವರಣ ಹರಿದಾಡುತ್ತಿದೆ.

ಕರ್ನಾಟಕದ ಗೆಲುವಿನ ಬಗ್ಗೆ ಇದುವರೆಗೆ ಮೋದಿ ಮತ್ತು ಶಾ ತಮ್ಮ ಪ್ರತಿಕ್ರಿಯೆಯನ್ನು ಇನ್ನೂ ಕೊಟ್ಟಿಲ್ಲ. ಅವರೇನು ಕೊಡುತ್ತಾರೆಂದು ಊಹಿಸುವುದು ಕಷ್ಟವೇನಲ್ಲ.

loader