Asianet Suvarna News Asianet Suvarna News

ಈ ಬಾರಿ ಸರ್ಕಾರ ಯಾರದ್ದು ..? ಸಿಎಂ ಯಾರು..?

ರಾಜ್ಯವಷ್ಟೇ ಅಲ್ಲದೆ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಕುತೂಹಲ ಮೂಡಿಸಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು  ಹೊರಬೀಳಲಿದೆ. ಈ ಫಲಿತಾಂಶ ಕೇವಲ ರಾಜ್ಯದಲ್ಲಿ ಅಷ್ಟೇ ಅಲ್ಲದೆ, ರಾಷ್ಟ್ರ ರಾಜಕಾರಣದಲ್ಲೂ ಹಲವು ಬದಲಾವಣೆಗಳಿಗೆ ಮತ್ತು ಬೆಳವಣಿಗೆಗಳಿಗೆ ನಾಂದಿ ಹಾಡುವ ಸಾಧ್ಯತೆಯೂ ಇದೆ. 

Who will be the next CM of Karnataka

ಬೆಂಗಳೂರು : ರಾಜ್ಯವಷ್ಟೇ ಅಲ್ಲದೆ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಕುತೂಹಲ ಮೂಡಿಸಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು  ಹೊರಬೀಳಲಿದೆ. ಈ ಫಲಿತಾಂಶ ಕೇವಲ ರಾಜ್ಯದಲ್ಲಿ ಅಷ್ಟೇ ಅಲ್ಲದೆ, ರಾಷ್ಟ್ರ ರಾಜಕಾರಣದಲ್ಲೂ ಹಲವು ಬದಲಾವಣೆಗಳಿಗೆ ಮತ್ತು ಬೆಳವಣಿಗೆಗಳಿಗೆ ನಾಂದಿ ಹಾಡುವ ಸಾಧ್ಯತೆಯೂ ಇದೆ. 

ಇಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, 11 ಗಂಟೆ ವೇಳೆಗೆ ಫಲಿತಾಂಶದ ಚಿತ್ರಣ ದೊರೆಯುವ ನಿರೀಕ್ಷೆ ಇದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಅಥವಾ ಕಾಂಗ್ರೆಸ್‌ಗೆ ಸರಳ ಬಹುಮತ ಲಭಿಸುತ್ತದೆಯೋ ಅಥವಾ ಅತಂತ್ರ ವಿಧಾನಸಭೆ ಸೃಷ್ಟಿಯಾಗಿ ಜೆಡಿಎಸ್ ಪಕ್ಷದ ಮನೆ ಬಾಗಿಲಿಗೆ ಈ ಉಭಯ ಪಕ್ಷಗಳ ನಾಯಕರು ಎಡತಾಕಬೇಕೋ ಎಂಬುದು ಮಧ್ಯಾಹ್ನದ ವೇಳೆಗೆ ಸ್ಪಷ್ಟವಾಗಲಿದೆ. ರಾಜ್ಯ ರಾಜಕೀಯದಲ್ಲಿ ಹಲವು ಸಣ್ಣ ಪುಟ್ಟ ರಾಜಕೀಯ ಪಕ್ಷಗಳ ಅಸ್ತಿತ್ವವೂ ಈ ಫಲಿತಾಂಶದೊಂದಿಗೆ ನಿರ್ಧಾರವಾಗಲಿದೆ.

ಕಾಂಗ್ರೆಸ್ ಗೆದ್ದರೆ

ಗೆಲುವು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ಗೆ ಚೈತನ್ಯ
ತುಂಬಲಿದೆ. ಕಾಂಗ್ರೆಸ್ ಮುಕ್ತ ಭಾರತ ಸಾಧ್ಯವಿಲ್ಲ
ಎಂಬ ಸಂದೇಶ ರವಾನೆ. ಲೋಕ ಸಭಾ
ಚುನಾವಣೆಗೆ ರಾಹುಲ್‌ಗೆ ಟಾನಿಕ್.

ಸ್ಥಳೀಯ ನಾಯಕತ್ವ ಪ್ರಬಲವಾಗಿರುವ ಕಡೆ
ಬಿಜೆಪಿ ಆಟ ನಡೆಯುವುದಿಲ್ಲ ಎಂಬ ಸಂದೇಶ.
ದೇಶಾದ್ಯಂತ ಸ್ಥಳೀಯ ನಾಯಕತ್ವಕ್ಕೆ ಮನ್ನಣೆ.

 ಸಹಜವಾಗಿಯೇ ಸಿದ್ದರಾಮಯ್ಯ ಮತ್ತೆ
ಮುಖ್ಯಮಂತ್ರಿ. ಮೂಲ ಕಾಂಗ್ರೆಸ್- ವಲಸೆ
ಕಾಂಗ್ರೆಸ್ ಎಂಬ ಭೇದ ನಿರ್ನಾಮ. 

ಬಿಜೆಪಿ ಗೆದ್ದರೆ 

ಉತ್ತರ ಭಾರತದ ನಂತರ ಯಶಸ್ಸಿನ ನಂತರ
ದಕ್ಷಿಣ ಭಾರತದಲ್ಲೂ ಕೇಸರಿ ಧ್ವಜ ರಾರಾಜಿಸಲು
ಕರ್ನಾಟಕದ ಈ ಗೆಲುವು ಪ್ರವೇಶ ದ್ವಾರವಾಗಿ
ಸ್ವಾಗತಿಸಲಿದೆ.

 ರಾಜ್ಯದಲ್ಲೂ ಪ್ರಧಾನಿ ನರೇಂದ್ರ ಮೋದಿ ಮೋಡಿ
ಕೆಲಸ ಮಾಡಿದೆ ಎಂಬ ಸ್ಪಷ್ಟ ಸಂದೇಶ
ರವಾನೆಯಾದಂತಾಗುತ್ತದೆ.

ಕಾಂಗ್ರೆಸ್‌ಮುಕ್ತ ಕರ್ನಾಟಕ ಮಾಡಬೇಕು ಎಂಬ
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಘೋಷಣೆ
ನೆರವೇರಿದಂತಾಗಲಿದೆ

ಜೆಡಿಎಸ್ ಹೆಚ್ಚು ಸ್ಥಾನ ಗೆದ್ದರೆ

ಕಿಂಗ್ ಮೇಕರ್ ಆಗುವಷ್ಟು ಸ್ಥಾನ ಗೆದ್ದರೆ ಮಾಡು
ಇಲ್ಲವೇ ಮಡಿ ಎಂಬ ಪರಿಸ್ಥಿತಿಯಲ್ಲಿರುವ ಈ
ಪಕ್ಷಕ್ಕೆ ಸಂಜೀವಿನಿ ಸಿಕ್ಕಂತಾಗಿ ಪುನಶ್ಚೇತನಗೊಳ್ಳಲು
ಸಹಾಯಕವಾಗಲಿದೆ.

ಜೆಡಿಎಸ್ ಲೆಕ್ಕಕ್ಕೇ ಇಲ್ಲ ಎಂದು ಆಡಿಕೊಳ್ಳುತ್ತಿದ್ದ
ತಮ್ಮ ರಾಜಕೀಯ ವಿರೋಧಿಗಳಿಗೆ ತಕ್ಕ ಉತ್ತರ
ನೀಡಿದಂತಾಗುತ್ತದೆ.

ಹತ್ತು ವರ್ಷಗಳ ನಂತರ ಅಧಿಕಾರ ಸಿಗುವುದರಿಂದ
ಪಕ್ಷವನ್ನು ಬೇರುಮಟ್ಟದಲ್ಲಿ ಪುನರ್‌ಸಂಘಟಿಸಲು
ಬಲ ಬಂದಂತಾಗುತ್ತದೆ.

-----------
ಕಾಂಗ್ರೆಸ್ ಸೋತರೆ

ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆ
ಆಗುತ್ತದೆ. ರಾಹಲ್ ಗಾಂಧಿ ನಾಯಕತ್ವದ ಬಗ್ಗೆ
ಮತ್ತೆ ಪ್ರಶ್ನೆಗಳು ಹುಟ್ಟತ್ತವೆ.

ರಾಜ್ಯದಲ್ಲಿ ಪ್ರಭುತ್ವ ವಿರೋಧಿ ಅಲೆಯಿಲ್ಲ ಎಂಬ
ಮುಖ್ಯಂತ್ರಿ ಸಿದ್ದರಾಮಯ್ಯ ಅವರ ಕ್ಲೇಮ್
ಸುಳ್ಳಾಗುತ್ತದೆ.

ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯ ಅವರ ಪ್ರಭಾವ
ಸಹಜವಾಗಿಯೇ ಮಂಕಾಗುತ್ತದೆ. ಎರಡನೇ
ಹಂತದ ನಾಯಕತ್ವಕ್ಕೆ ಬಲ ಬರುತ್ತದೆ.

--------
ಬಿಜೆಪಿ ಸೋತರೆ

ಪ್ರಧಾನಿ ಮೋದಿ ಅವರ ಪ್ರಭಾವ ಮಂಕಾಗಿದೆ
ಎಂದು ಪ್ರತಿಪಕ್ಷಗಳು ಟೀಕೆ ಮಾಡುವುದಕ್ಕೆ ಅಸ್ತ್ರ
ಕೊಟ್ಟಂತಾಗುತ್ತದೆ.

ದಕ್ಷಿಣ ಭಾರತದಲ್ಲೂ ಆಡಳಿತದ ಸಾಮ್ರಾಜ್ಯ
ವಿಸ್ತರಿಸಬೇಕು ಎಂಬ ಬಿಜೆಪಿ ವರಿಷ್ಠರ ಆಸೆಗೆ
ತಣ್ಣೀರು ಎರಚಿದಂತಾಗುತ್ತದೆ.

ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷ
ಅನುಸರಿಸಬೇಕಾದ ರಣತಂತ್ರದಲ್ಲಿ ಗಮನಾರ್ಹ
ಬದಲಾವಣೆ ಮಾಡಬೇಕಾಗಿ ಬರಬಹುದು.

-----
ಬಿಜೆಪಿ ಸೋತರೆ

ರಾಜ್ಯ ರಾಜಕಾರಣದಲ್ಲಿ ತೃತೀಯ ಶಕ್ತಿಯೇ ಕ್ಷೀ
ಣಿಸಿದಂತಾಗಿ ಅದನ್ನು ನೆಚ್ಚಿಕೊಂಡ ಮುಖಂಡರು,
ಕಾರ್ಯಕರ್ತರು ವಲಸೆ ಹೋಗಬಹುದು

ಮುಂದಿನ ಐದು ವರ್ಷಗಳ ಕಾಲ ಪಕ್ಷವನ್ನು
ಮುನ್ನಡೆಸುವುದು ಜೆಡಿಎಸ್‌ನ ಅಗ್ರ ನಾಯಕರಿಗೆ
ಕಷ್ಟವಾಗಬಹುದು

ರಾಜಕೀಯ ವಿರೋಧಿಗಳ ಬಾಯಿಗೆ ಆಹಾರ
ವಾಗಿ ಸದಾಕಾಲ ಟೀಕೆಗೆ ಆಹಾರವಾಗಬೇಕಾಗಿ
ಬರಬಹುದು

Follow Us:
Download App:
  • android
  • ios