ಮೈಸೂರು: ನಿರೀಕ್ಷೆಯಂತೆ ಚಾಮುಂಡೇಶ್ವರಿಯಲ್ಲಿ ಸಿಎಂ ಸಿದ್ದರಾಮಯ್ಯ 35 ಸಾವಿರ ಮತಗಳಿಂದ ಹೀನಾಯ ಸೋಲು ಕಂಡಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಜಿ.ಟಿ.ದೇವೇಗೌಡ ಗೆಲುವಿನ ನಗೆ ಬೀರಿದ್ದಾರೆ.

ಸ್ವಕ್ಷೇತ್ರ ವರುಣಾವನ್ನು ಮಗ ಡಾ.ಯತೀಂದ್ರ ಅವರಿಗೆ ಬಿಟ್ಟು ಕೊಟ್ಟ ಸಿದ್ದರಾಮಯ್ಯ ಪಕ್ಕದ
 ಚಾಮುಂಡೇಶ್ವರಿಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. ಆದರೆ, ಸದಾ ಜನರೊಂದಿಗೆ ಬೆರೆತಿದ್ದ ಜಿ.ಟಿ.ದೇವೇಗೌಡರು ಇಲ್ಲಿ ಮೊದಲಿನಿಂದಲೂ ಗೆಲುವಿನ ವಿಶ್ವಾಸ ವ್ಯಕ್ತಪಡಿಸುತ್ತಲೇ ಇದ್ದರು. ಒಮ್ಮೆಯಂತೂ ಸಿದ್ದರಾಮಯ್ಯ ಈ ಕ್ಷೇತ್ರದಲ್ಲಿ ಪ್ರಚಾರಕ್ಕೆ ತೆರಳಿದಾಗ 'ಸಿಎಂಗೆ ಯಾಕ್ರೀ ವೋಟು ಹಾಕೋದು?'ಎಂದೇ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಅದನ್ನು ಇದೀಗ ಸಾಬೀತು ಪಡಿಸಿದ್ದಾರೆ.

ಸಿಎಂ ಈ ಕ್ಷೇತ್ರದಲ್ಲಿ ಸೋಲುಂಡರೂ, ಬದಾಮಿಯಲ್ಲಿ ಬನಶಂಕರಿ ಕೈ ಹಿಡಿದಿದ್ದಾಳೆ. ಬಿಜೆಪಿ ಅಭ್ಯರ್ಥಿ ಇಲ್ಲಿ ತೀವ್ರ ಪ್ರತಿಸ್ಪರ್ಧಿ ನೀಡಿದ್ದಾರೆ.