ಕರ್ನಾಟಕ ಚುನಾವಣೆಯಲ್ಲಿ ಫ್ಯಾಮಿಲಿ ಪಾಲಿಟಿಕ್ಸ್ ಹೀಗಿತ್ತು...

This is how the family politics in Karnataka Assembly Election
Highlights

ಕರ್ನಾಟಕ ವಿಧಾನಸಭೆ ಮಹಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ತಂದೆ-ಮಕ್ಕಳು, ಗಂಡ-ಹೆಂಡತಿ, ಸಹೋದರರ ಸವಾಲು ಎಲ್ಲವೂ ಈ ಚುನಾವಣೆಯ ವಿಶೇಷವಾಗಿತ್ತು. ಕೆಲವೆಡೆ ಅಣ್ಣ-ತಮ್ಮ ಇಬ್ಬರೂ ಒಂದೇ ಪಕ್ಷಗಳಿಂದ ಸ್ಪರ್ಧಿಸಿದರೆ, ಮತ್ತೆ ಹಲವೆಡೆ ಬೇರೆ ಬೇರೆ ಪಕ್ಷಗಳಿಂದಲೂ ಸ್ಪರ್ಧಿಸಿದ್ದಾರೆ. ಏನಾಗಬಹುದು ಫಲಿತಾಂಶ?

ಕರ್ನಾಟಕ ವಿಧಾನಸಭೆ ಮಹಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ತಂದೆ-ಮಕ್ಕಳು, ಗಂಡ-ಹೆಂಡತಿ, ಸಹೋದರರ ಸವಾಲು ಎಲ್ಲವೂ ಈ ಚುನಾವಣೆಯ ವಿಶೇಷವಾಗಿತ್ತು. ಕೆಲವೆಡೆ ಅಣ್ಣ-ತಮ್ಮ ಇಬ್ಬರೂ ಒಂದೇ ಪಕ್ಷಗಳಿಂದ ಸ್ಪರ್ಧಿಸಿದರೆ, ಮತ್ತೆ ಹಲವೆಡೆ ಬೇರೆ ಬೇರೆ ಪಕ್ಷಗಳಿಂದಲೂ ಸ್ಪರ್ಧಿಸಿದ್ದಾರೆ.

ಅತ್ತ ವರುಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಗ ಡಾ.ಯತೀಂದ್ರ ಅವರಿಗೆ ತಮ್ಮ ಸ್ವ ಕ್ಷೇತ್ರವನ್ನು ಬಿಟ್ಟುಕೊಟ್ಟು, ತಮ್ಮ ಅದೃಷ್ಟವನ್ನು ಚಾಮುಂಡೇಶ್ವರಿ ಹಾಗೂ ಬಾದಾಮಿಯಿಂದ ಪರೀಕ್ಷಿಸಿ ಕೊಳ್ಳುತ್ತಿದ್ದಾರೆ. ದಾವಣಗೆರೆ ಉತ್ತರ, ದಕ್ಷಿಣದಲ್ಲಿ ಶ್ಯಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್.ಮಲ್ಲಿಕಾರ್ಜುನ್, ತುಮಕೂರಿನ ಶಿರಾ ಹಾಗೂ ಚಿಕ್ಕನಾಯಕನಹಳ್ಳಿಯಿಂದ ಟಿ.ಬಿ.ಜಯಚಂದ್ರ, ಸಂತೋಷ್ ಜಯಚಂದ್ರ, ಬೆಂಗಳೂರಿನ ವಿಜಯನಗರ ಹಾಗೂ ಗೋವಿಂದರಾಜ ನಗರದಿಂದ ಎಂ.ಕೃಷ್ಣಪ್ಪ ಹಾಗೂ ಪ್ರಿಯಾಕೃಷ್ಣ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಬಾಗಲಕೋಟೆಯ ಮುಧೋಳದಿಂದ ಗೋವಿಂದ ಕಾರಜೋಳ, ನಾಗಠಾಣದಿಂದ ಅವರ ಪುತ್ರ ಗೋಪಾಲ ಕಾರಜೋಳ ಬಿಜೆಪಿಯಿಂದ ಅದೃಷ್ಟ ಪರೀಕ್ಷಿಸಿಕೊಳ್ಳುತ್ತಿದ್ದಾರೆ. ಒಟ್ಟಾರೆ ಈ ಚುನಾವಣೆಯಲ್ಲಿ ಕೌಟುಂಬಿಕ ರಾಜಕಾರಣ ಹೀಗಿತ್ತು.

 

ಪತಿ-ಪತ್ನಿ ಸ್ಪರ್ಧೆ:

ಅತ್ತ ನಿಪ್ಪಾಣಿಯಿಂದ ಶಶಿಕಲಾ ಜೊಲ್ಲೆ, ಚಿಕ್ಕೋಡಿ ಸದಲಗದಿಂದ ಪತಿ ಅಣ್ಣಾ ಸಾಹೇಬ್ ಜೊಲ್ಲೆ ಬಿಜೆಪಿಯಿಂದ ಸ್ಪರ್ಧಿಸುತ್ತಿರುವುದು ರಾಜ್ಯ ಫ್ಯಾಮಿಲಿ ಪಾಲಿಟಿಕ್ಸ್‌ನ ಮತ್ತೊಂದು ವಿಶೇಷ|

loader