ಸಾಮಾನ್ಯವಾಗಿ ಟೈರ್-3 ಎಂಜಿನಿಯರಿಂಗ್ ಕಾಲೇಜು ಎಂದ ಕೂಡಲೇ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ 3 ರಿಂದ 4 ಲಕ್ಷ ರೂಪಾಯಿ ಪ್ಯಾಕೇಜ್ ಸಿಕ್ಕರೆ ಹೆಚ್ಚು ಎಂಬ ಭಾವನೆ ವಿದ್ಯಾರ್ಥಿಗಳಲ್ಲಿದೆ. ಪ್ರತಿಭೆ ಜೊತೆಗೆ ಸರಿಯಾದ ಮಾರ್ಗದರ್ಶನ ಮತ್ತು ಕಠಿಣ ಪರಿಶ್ರಮವಿದ್ದರೆ ಕಾಲೇಜು ಅಥವಾ ಕ್ಯಾಂಪಸ್ ಮಿತಿಗಳು ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಭಾರತೀಯ ಯುವ ಎಂಜಿನಿಯರ್ ಒಬ್ಬರು ಸಾಬೀತುಪಡಿಸಿದ್ದಾರೆ.
ಸಾಮಾನ್ಯವಾಗಿ ಟೈರ್-3 ಎಂಜಿನಿಯರಿಂಗ್ ಕಾಲೇಜು ಎಂದ ಕೂಡಲೇ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ 3 ರಿಂದ 4 ಲಕ್ಷ ರೂಪಾಯಿ ಪ್ಯಾಕೇಜ್ ಸಿಕ್ಕರೆ ಹೆಚ್ಚು ಎಂಬ ಭಾವನೆ ವಿದ್ಯಾರ್ಥಿಗಳಲ್ಲಿದೆ. ಪ್ರತಿಭೆ ಜೊತೆಗೆ ಸರಿಯಾದ ಮಾರ್ಗದರ್ಶನ ಮತ್ತು ಕಠಿಣ ಪರಿಶ್ರಮವಿದ್ದರೆ ಕಾಲೇಜು ಅಥವಾ ಕ್ಯಾಂಪಸ್ ಮಿತಿಗಳು ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಭಾರತೀಯ ಯುವ ಎಂಜಿನಿಯರ್ ಒಬ್ಬರು ಸಾಬೀತುಪಡಿಸಿದ್ದಾರೆ.
ಕೇವಲ 4 ಲಕ್ಷ ರೂಪಾಯಿ ಸರಾಸರಿ ಪ್ಯಾಕೇಜ್ ನೀಡುತ್ತಿದ್ದ ಸಾಮಾನ್ಯ ಸರ್ಕಾರಿ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಯೊಬ್ಬ, ಇಂದು ಜಾಗತಿಕ ಟೆಕ್ ದೈತ್ಯ ಅಮೆಜಾನ್ (Amazon) ಸಂಸ್ಥೆಯಲ್ಲಿ ಬರೋಬ್ಬರಿ 64 ಲಕ್ಷ ರೂಪಾಯಿ ವಾರ್ಷಿಕ ವೇತನದೊಂದಿಗೆ 'ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಎಂಜಿನಿಯರ್ 2' ಹುದ್ದೆ ಗಿಟ್ಟಿಸಿಕೊಂಡು ಹುಬ್ಬೇರಿಸಿದ್ದಾರೆ!
ವಿಕಾಸ್ ಅಲ್ವಿಸ್ (Vikas Alwys) ಎಂಬುವವರು 'X' (ಟ್ವಿಟರ್) ಜಾಲತಾಣದಲ್ಲಿ ಹಂಚಿಕೊಂಡಿರುವ ಯಶೋಗಾಥೆಯ ಪ್ರಕಾರ, ಈ ಯುವಕ ತೆಲಂಗಾಣದ ಜವಾಹರಲಾಲ್ ನೆಹರೂ ತಾಂತ್ರಿಕ ವಿಶ್ವವಿದ್ಯಾಲಯದ (JNTU ಜಗಿತ್ಯಾಲ) ಟೈರ್-3 ಸರ್ಕಾರಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಬಿ.ಟೆಕ್ ಮುಗಿಸಿದ್ದರು. ಈ ಕಾಲೇಜಿನಲ್ಲಿ ಸರಾಸರಿ ವೇತನ ಪ್ಯಾಕೇಜ್ ಸುಮಾರು 4 ಲಕ್ಷ ರೂ. ಇತ್ತು. ಹೆಚ್ಚಿನ ವಿದ್ಯಾರ್ಥಿಗಳು ಟಿಸಿಎಸ್, ಕಾಗ್ನಿಜೆಂಟ್, ಕ್ಯಾಪ್‌ಜೆಮಿನಿ, ಅಕ್ಸೆಂಚರ್‌ನಂತಹ ಸಾಫ್ಟ್‌ವೇರ್ ಸರ್ವಿಸ್ ಕಂಪನಿಗಳಿಗೆ ಮಾತ್ರ ಆಯ್ಕೆಯಾಗುತ್ತಿದ್ದರು. ಜೊತೆಗೆ ಕಾಲೇಜಿನಲ್ಲಿ ಕಾಂಪಿಟಿಟಿವ್ ಪ್ರೋಗ್ರಾಮಿಂಗ್ ಅಥವಾ ಹೈ-ಲೆವೆಲ್ ಟೆಕ್ ಇಂಟರ್ವ್ಯೂಗಳಿಗೆ ತರಬೇತಿ ನೀಡುವ ಪೂರಕ ವಾತಾವರಣವೂ ಇರಲಿಲ್ಲ.
ಸ್ನೇಹಿತರ ನೆಟ್‌ವರ್ಕ್
ಕಾಲೇಜಿನ ಮಿತಿಗಳನ್ನೇ ನೆಪ ಮಾಡಿಕೊಳ್ಳದ ಎಂಜಿನಿಯರ್ ತಮಗೆ ತಾವೇ ಒಂದು ಹೊಸ ದಾರಿ ಕಂಡುಕೊಂಡರು. ಐಐಟಿ (IIT) ಮತ್ತು ಎನ್‌ಐಟಿ (NIT) ಕಾಲೇಜುಗಳಲ್ಲಿ ಓದುತ್ತಿದ್ದ ಸ್ನೇಹಿತರೊಂದಿಗೆ ನಿರಂತರ ಸಂಪರ್ಕ ಸಾಧಿಸಿದರು. ಅವರ ಮೂಲಕ ಕಾಂಪಿಟಿಟಿವ್ ಪ್ರೋಗ್ರಾಮಿಂಗ್, ಕೋಡಿಂಗ್ ಚರ್ಚೆಗಳು ಮತ್ತು ಇತ್ತೀಚಿನ ಟೆಕ್ ಟ್ರೆಂಡ್‌ಗಳ ಬಗ್ಗೆ ಮಾಹಿತಿ ಪಡೆದರು. ಕಾಲೇಜು ಪಠ್ಯಕ್ಕೆ ಸೀಮಿತವಾಗದೆ ಆನ್‌ಲೈನ್ ಕೋಡಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ತಾಂತ್ರಿಕ ಸಾಮರ್ಥ್ಯವನ್ನು ಜಾಗತಿಕ ಮಟ್ಟಕ್ಕೆ ಹೆಚ್ಚಿಸಿಕೊಂಡರು.
ಇನ್ಫೋಸಿಸ್‌ನಿಂದ ಅಮೆಜಾನ್‌ವರೆಗೆ
ಕಠಿಣ ಪರಿಶ್ರಮದ ಫಲವಾಗಿ ಕಾಲೇಜಿನ ಸರಾಸರಿಗಿಂತ ಮೂರು ಪಟ್ಟು ಹೆಚ್ಚು ಅಂದರೆ ವಾರ್ಷಿಕ 11 ಲಕ್ಷ ರೂ. ಪ್ಯಾಕೇಜ್‌ನೊಂದಿಗೆ ಇನ್ಫೋಸಿಸ್‌ನಲ್ಲಿ 'ಸ್ಪೆಷಲಿಸ್ಟ್ ಪ್ರೋಗ್ರಾಮರ್' ಆಗಿ ಮೊದಲ ಉದ್ಯೋಗ ಪಡೆದರು. ಇನ್ಫೋಸಿಸ್‌ಗೆ ಸೇರಿಕೊಂಡ ನಂತರವೂ ಕಲಿಕೆಯನ್ನು ನಿಲ್ಲಿಸದ ಅವರು, ಕೇವಲ 3 ವರ್ಷಗಳ ವೃತ್ತಿಜೀವನದಲ್ಲಿ ನೇರವಾಗಿ ಅಮೆಜಾನ್ ಸಂಸ್ಥೆಯ 'SDE 2' ಹುದ್ದೆಗೆ ಆಯ್ಕೆಯಾಗುವ ಮೂಲಕ ವಾರ್ಷಿಕ 64 ಲಕ್ಷ ರೂ. ವೇತನ ಪಡೆಯುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.
ನೀವು ಓದುವ ಕಾಲೇಜು ನಿಮ್ಮ ವೃತ್ತಿಜೀವನದ ಭವಿಷ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ. ಟೈರ್-3 ಕಾಲೇಜಿನಲ್ಲಿದ್ದರೂ, ಸ್ವಯಂ ಕಲಿಕೆ, ಉನ್ನತ ಕನಸು ಕಾಣುವ ಗೆಳೆಯರ ನೆಟ್‌ವರ್ಕ್ ಮತ್ತು ನೈಜ ತಾಂತ್ರಿಕ ಕೌಶಲಗಳು ನಿಮ್ಮಲ್ಲಿದ್ದರೆ ಗೂಗಲ್, ಅಮೆಜಾನ್‌ನಂತಹ ಜಾಗತಿಕ ದೈತ್ಯ ಸಂಸ್ಥೆಗಳ ಬಾಗಿಲುಗಳು ತಾನಾಗಿಯೇ ತೆರೆದುಕೊಳ್ಳುತ್ತವೆ ಎಂಬುದಕ್ಕೆ ಈ ಯುವಕನ ಪಯಣವೇ ಸಾಕ್ಷಿ!


