ಕೊರೋನಾತಂಕ ನಡುವೆಯೂ ಉಪ ಚುನಾವಣಾ ಕಣ ಗರಿಗೆದರಿದೆ. ಕೊನೆಗೂ ಕಾಂಗ್ರೆಸ್‌ ಶಿರಾ ಹಾಗೂ ಆರ್‌ಆರ್‌ ನಗರದಲ್ಲಿ ತಾನು ಕಣಕ್ಕಿಳಿಸುತ್ತಿರುವ ಅಭ್ಯರ್ಥಿಯ ಹೆಸರು ಘೋಷಿಸಿದೆ. ಈ ನಡುವೆ ಮಕ್ಕಳಿಗೆ ಶಾಲೆ ಆರಂಭಿಸಬೇಕಾ ಎಂಬ ಸಮೀಕ್ಷೆ ನಡೆಸಿದ್ದು, ಇದಕ್ಕೆ ವಿದೇಶಿಗರೂ ನೋ ಎಂದಿದ್ದಾರೆ. ಏನೇ ಆದರೂ ಆನ್‌ಲೈನ್ ಕ್ಲಾಸೇ ಬೆಸ್ಟ್‌ ಎಂದಿದ್ದಾರೆ. ಇನ್ನು ಡ್ರಗ್ಸ್ ಕೇಸ್‌ ಸಂಬಂಧ ರಿಯಾ ಚಕ್ರವರ್ತಿಗೆ ಬೇಲ್ ಸಿಕ್ಕಿದ್ದು, ಅವರ ತಮ್ಮ ಶೋವಿಕ್‌ ಇನ್ನೂ ಕೆಲ ದಿನ ಜೈಲಿನಲ್ಲಿ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿದೆ ನೋಡಿ ಅ. 07ರ ಟಾಪ್ ಹತ್ತು ಸುದ್ದಿಗಳು. 

ಗರಿಗೆದರಿದ ಚುನಾವಣಾ ಅಖಾಡ, ಆರ್‌ಆರ್ ನಗರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಫೈನಲ್!

ಕರ್ನಾಟಕದಲ್ಲಿ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಆರ್‌ಆರ್‌ ನಗರ ಹಾಗೂ ಶಿರಾ ಕ್ಷೇತ್ರದ ಈ ಚುನಾವಣೆ ಕಾಂಗ್ರೆಸ್ ಹಾಗೂ ಬಿಜೆಪಿ ಪ್ರತಿಷ್ಠೆಯಾಗಿ ಸ್ವೀಕರಿಸಿವೆ. ಹೀಗಾಗಿ ಅಭ್ಯರ್ಥಿ ಆಯ್ಕೆ ಕೂಡಾ ಬಹಳ ಕುತೂಹಲ ಮೂಡಿಸಿತ್ತು. ಸದ್ಯ ಕಾಂಗ್ರೆಸ್ ಆರ್‌ಆರ್‌ ಕ್ಷೇತ್ರದ ತನ್ನ ಅಭ್ಯರ್ಥಿ ಹೆಸರನ್ನು ಘೋಷಿಸಿದೆ.

ಬಿಜೆಪಿಯತ್ತ ಒಲವು ತೋರಿದ್ದ ಜೆಡಿಎಸ್ ಶಾಸಕ, ಇದೀಗ ಕಾಂಗ್ರೆಸ್‌ನತ್ತ ಮುಖ..?

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನ ಸೋಲಿಸಿ ರಾಜ್ಯದ ಗಮನಸೆಳೆದಿದ್ದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರ ರಾಜಕೀಯ ನಡೆ ಭಾರೀ ಕುತೂಹಲ ಮೂಡಿಸಿದೆ.

ಶಾಲೆ ಆರಂಭಕ್ಕೆ ವಿದೇಶದಲ್ಲೂ ಪೋಷಕರ ವಿರೋಧ!

ರಾಜ್ಯದಲ್ಲಿ ಶಾಲೆ ಕಾಲೇಜುಗಳನ್ನು ತೆರೆಯಲು ಸರ್ಕಾರ ಮಾರ್ಗಸೂಚಿ ಸಿದ್ಧಪಡಿಸಿರುವುದು ವಿವಾದಕ್ಕೆ ಗುರಿಯಾಗಿದೆ. ಇದೇ ವೇಳೆ ಕೇಂದ್ರ ಸರ್ಕಾರ ಕೂಡ ಅನ್‌ಲಾಕ್‌ 5.0 ಮಾರ್ಗಸೂಚಿಯಡಿ ರಾಜ್ಯಗಳು ಬೇಕಾದರೆ ಶಾಲೆಗಳನ್ನು ಆರಂಭಿಸಬಹುದು ಎಂದು ಹೇಳಿದೆ. ಆದರೆ, ಸಂಸದರು ಹಾಗೂ ಶಾಸಕರಿಗೆ ಕೊರೋನಾ ಬರಬಹುದು ಎಂಬ ಭೀತಿಯಿಂದ ಸಂಸತ್‌ ಮತ್ತು ವಿಧಾನಮಂಡಲದ ಅಧಿವೇಶನಗಳನ್ನೇ ಅರ್ಧಕ್ಕೆ ಮೊಟಕುಗೊಳಿಸಿದ ಸರ್ಕಾರಗಳು ಮಕ್ಕಳನ್ನು ಹೇಗೆ ಶಾಲೆಗೆ ಕಳುಹಿಸಿ ಅಪಾಯಕ್ಕೆ ದೂಡುವ ನಿರ್ಧಾರ ಕೈಗೊಳ್ಳಲು ಸಾಧ್ಯ ಎಂದು ಪೋಷಕರಿಂದ ಆಕ್ಷೇಪ ವ್ಯಕ್ತವಾಗಿದೆ.

ಕೊರೋನಾ ಟೆಸ್ಟ್‌ಗೆ ಒಪ್ಪದಿದ್ದರೆ 3 ವರ್ಷ ಜೈಲು, ಭಾರೀ ದಂಡ!

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮಹ​ತ್ವದ ಕಠಿಣ ಆದೇ​ಶ​ವೊಂದನ್ನು ಹೊರ​ಡಿ​ಸಿ​ದೆ. ಸರ್ಕಾ​ರ​ದಿಂದ ಗುರು​ತಿ​ಸ​ಲ್ಪ​ಡುವ ವ್ಯಕ್ತಿ​ಗಳು ಕೊರೋನಾ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿ​ಸಿ​ಕೊ​ಳ್ಳ​ಬೇಕು ಎಂದು ಮಂಗಳವಾರ ಆದೇಶಿಸಿದೆ. ಆದೇಶ ಪಾಲಿಸದವರಿಗೆ 50 ಸಾವಿರ ರು.ವರೆಗೆ ದಂಡ ಹಾಗೂ 6 ತಿಂಗಳಿಂದ 3 ವರ್ಷದವರೆಗೆ ಶಿಕ್ಷೆ ವಿಧಿ​ಸುವ ಅವ​ಕಾಶ ಕಲ್ಪಿ​ಸ​ಲಾ​ಗಿ​ದೆ.

'ನಾವು ಅಧಿಕಾರದಲ್ಲಿದ್ರೆ ಚೀನಾವನ್ನು 15 ನಿಮಿಷದಲ್ಲಿ ಹೊರಗಟ್ಟುತ್ತಿದ್ದೆವು'

ಕೆಲ ದಿನಗಳ ಹಿಂದಷ್ಟೇ, ಮಳೆಗಾಲದ ಅಧಿವೇಶನದಲ್ಲಿ ಜಾರಿಯಾದ ಕೃಷಿ ಮಸೂದೆ ಸಂಬಂಧ ಪರ, ವಿರೋಧಗಳು ವ್ಯಕ್ತವಾಗಿವೆ. ಇದು ರೈತರಿಗೆ ಉಪಯೋಗಕಾರಿ ಎಂದು ಕೇಂದ್ರ ಸರ್ಕಾರ ಹೇಳಿದ್ದರೆ, ವಿಪಕ್ಷ ನಾಯಕರು ಇದನ್ನು ಖಂಡಿಸಿದ್ದಾರೆ. ಅನೇಕ ಕಡೆ ರೈತರೂ ಇದನ್ನು ಜಾರಿಗೊಳಿಸದಂತೆ ಪ್ರತಿಭಟನೆ ನಡೆಸಿದ್ದಾರೆ. ಇನ್ನು ಕಾಂಗ್ರೆಸ್ ಈ ಮಸೂದೆ ವಿರೋಧಿಸಿ ಮೂರು ದಿನಗಳವರೆಗೆ ಇದನ್ನು ವಿರೋಧಿಸಿ ಹರ್ಯಾಣದಲ್ಲಿ ಅಭಿಯಾನ ನಡೆಸಿದ್ದು, ಈ ವೇಳೆ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ. ಕೃಷಿ ಮಸೂದೆ ಮಾತ್ರವಲ್ಲದೇ, ಹತ್ರಾಸ್ ಅತ್ಯಾಚಾರ ಪ್ರಕರಣ ಹಾಗೂ ಲಡಾಖ್‌ನಲ್ಲಿ ಕ್ಯಾತೆ ತೆಗೆದಿರುವ ಚೀನಾ ನಡೆ ವಿಚಾರವಾಗಿ ಸರ್ಕಾರ ತೆಗೆದುಕೊಂಡ ಕ್ರಮ ಸರಿಯಲ್ಲ ಎಂದಿದ್ದಾರೆ.

ಸಿಎಎ ವಿರುದ್ಧ ಪ್ರತಿಭಟನೆ ಮಾಡ್ತಾ ಕೂತವರಿಗೆ ಜಾಗ ಖಾಲಿ ಮಾಡಿ ಎಂದ ಸುಪ್ರೀಂ!

ಪ್ರತಿಭಟನೆ ನಡೆಸುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶವೊಂದನ್ನು ನೀಡಿದೆ. ಯಾವುದೆ ವ್ಯಕ್ತಿ ಅಥವಾ ಸಂಘಟನೆ ಪ್ರತಿಭಟನೆ ಹೆಸರಿನಲ್ಲಿ ಶಾಹೀನ್ ಬಾಗ್ ನಂತಹ ಸಾರ್ವಜನಿಕ ಸ್ಥಳಗಳನ್ನು ಅನಿರ್ದಿಷ್ಟಾವಧಿಗೆ ಬಳಸಿಕೊಳ್ಳುವ ಹಾಗಿಲ್ಲ ಎಂದು ಹೇಳಿದೆ.

ಡ್ರಗ್ಸ್ ಕೇಸ್: ನಟಿ ರಿಯಾ ಚಕ್ರವರ್ತಿಗೆ ಜಾಮೀನು..! ತಮ್ಮ ಶೋವಿಕ್‌ ಜೈಲಲ್ಲಿ

ತಿಂಗಳಷ್ಟು ಕಾಲ ಜೈಲಿನಲ್ಲಿದ್ದ ರಿಯಾ ಚಕ್ರವರ್ತಿಗೆ ಕೊನೆಗೂ ಬೇಕ್ ಸಿಕ್ಕಿದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಡ್ರಗ್ಸ್ ಸಂಬಂಧಿಸಿ ಬಂಧನಕ್ಕೊಳಗಾಗಿದ್ದ ನಟಿಗೆ ಈಗ ಜಾಮೀನು ಸಿಕ್ಕಿದೆ. ನಿನ್ನೆಯಷ್ಟೇ ನ್ಯಾಯಾಲಯ ಅ.20ರ ತನಕ ಜೈಲು ವಿಸ್ತರಿಸಿತ್ತು.

IPL 2020: ಇಂದಾದರೂ ಆ ಮಿಸ್ಟೇಕ್ ಸರಿಪಡಿಸಿಕೊಳ್ಳುತ್ತಾ KKR?

13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಬಲಿಷ್ಠ ಕೋಲ್ಕತ ನೈಟ್‌ ರೈಡರ್ಸ್ ತಂಡ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅಬುಧಾಬಿಯ ಶೇಖ್ ಜಾಯೆದ್ ಮೈದಾನದಲ್ಲಿ ಎದುರಿಸಲಿದೆ.

ಗುಜರಾತ್ ಸಿಎಂನಿಂದ ದೇಶದ ಪ್ರಧಾನಿವರೆಗೆ: 20 ವರ್ಷದಿಂದ ಸರ್ಕಾರ ಮುನ್ನಡೆಸುತ್ತಿರುವ ಮೋದಿ!

ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮುಖ್ಯಸ್ಥರಾಗಿ ಬುಧವಾರದಂದು 20ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಅವರು ಬ್ರೇಕ್ ಪಡೆದದ್ದೇ ಇಲ್ಲ. ಈ ಮೂಲಕ ಓರ್ವ ರಾಜಕೀಯ ನಾಯಕನಾಗಿ ಈ ಕ್ಷೇತ್ರಕ್ಕೆ ಕಾಲಿಡಲಿಚ್ಛಿಸುವವರಿಗೆ ಅವರೊಬ್ಬ ಮಾರ್ಗದರ್ಶಕರೂ ಹೌದು ಎಂದರೆ ತಪ್ಪಾಗುವುದಿಲ್ಲ. ಅಲ್ಲದೇ ಅವರು ತಮ್ಮ ಕೆಲಸ, ಕಾರ್ಯಗಳ ಮೂಲಕ ಬಿಜೆಪಿಗೆ ಪ್ರತಿಷ್ಠೆಯನ್ನೂ ತಂದು ಕೊಟ್ಟಿದ್ದಾರೆ. ಬಿಜೆಪಿಯೊಳಗೆ ಅಸಮಾಧಾನದ ಹೊಗೆಯಾಡುತ್ತಿದ್ದ ಸಂದರ್ಭದಲ್ಲಿ ಮೋದಿಯನ್ನು ಆರ್‌ಎಸ್‌ಎಸ್‌ನಿಂದ ತೆಗೆದು ಅಚಾನಕ್ಕಾಗಿ ಗುಜರಾತ್‌ನ ಸಿಎಂ ಆಗುವ ಅವಕಾಶ ನೀಡಲಾಗಿತ್ತು. ಇಂತಹ ಪರಿಸ್ಥಿತಿಯಲ್ಲೂ ನರೇಂದ್ರ ಮೋದಿ ಗುಜರಾತ್‌ನಲ್ಲಿ ನಿರಂತರ ಮೂರು ಅವಧಿಗೆ ಸರ್ಕಾರದ ನೇತೃತ್ವ ವಹಿಸಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್‌ಗೆ ಸವಾಲೆಸೆಯಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದರು. ಇಲ್ಲಿದೆ ನೋಡಿ ಮೋದಿ ರಾಜಕೀಯ ಪಯಣದ ಒಂದು ಝಲಕ್

ಸ್ಥಗಿತಗೊಂಡಿದ್ದ ಈ ಮಾರ್ಗದ ಬಸ್‌ ಸಂಚಾರ ಮತ್ತೆ ಆರಂಭ

ಸಕಲೇಶಪುರದಿಂದ ಕೊಡ್ಲಿಪೇಟೆ- ಸೋಮವಾರಪೇಟೆ ಮಾರ್ಗವಾಗಿ ಮಂಗಳೂರಿಗೆ ಹೋಗಿ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ತಿಂಗಳಿನಿಂದ ಸ್ಥಗಿತಗೊಂಡಿದ್ದು ಸಂಚಾರ ಮತ್ತೆ ಪ್ರಾರಂಭಿಸಲಾಗಿದೆ.