ತಿಂಗಳಷ್ಟು ಕಾಲ ಜೈಲಿನಲ್ಲಿದ್ದ ರಿಯಾ ಚಕ್ರವರ್ತಿಗೆ ಕೊನೆಗೂ ಬೇಕ್ ಸಿಕ್ಕಿದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಡ್ರಗ್ಸ್ ಸಂಬಂಧಿಸಿ ಬಂಧನಕ್ಕೊಳಗಾಗಿದ್ದ ನಟಿಗೆ ಈಗ ಜಾಮೀನು ಸಿಕ್ಕಿದೆ. ನಿನ್ನೆಯಷ್ಟೇ ನ್ಯಾಯಾಲಯ ಅ.20ರ ತನಕ ಜೈಲು ವಿಸ್ತರಿಸಿತ್ತು.

ಎನ್‌ಸಿಬಿ ನಟಿ ರಿಯಾಳನ್ನು ಸೆ.08ರಂದು ಅರೆಸ್ಟ್ ಮಾಡಿತ್ತು. ಸುಶಾಂತ್‌ಗೆ ಡ್ರಗ್ಸ್ ಒದಗಿಸುತ್ತಿದ್ದ ಆರೋಪದಲ್ಲಿ ನಟಿಯನ್ನು ಬಂಧಿಸಲಾಗಿತ್ತು. ಡ್ರಗ್ಸ್ ಸಿಂಡಿಕೇಟ್‌ನ ಆಕ್ಟಿವ್ ಸದಸ್ಯೆಯಾಗಿರುವ ಆರೋಪವೂ ನಟಿಯ ಮೇಲಿದೆ.

ಟಾಪ್ ಸೆಲೆಬ್ರಟಿಗಳಿಗೆ ಡ್ರಗ್ಸ್ ಸಪ್ಲೈ ಮಾಡ್ತಿದ್ದ ನಟಿ: ಜಾಮೀನು ವಿರೋಧಿಸಿ NCB ಅರ್ಜಿ

ಸುಶಾಂತ್ ಡ್ರಗ್ಸ್ ಪಡೆಯುವುದಕ್ಕಾಗಿ ತನ್ನ ಆತ್ಮೀಯರ ಸಂಬಂಧಗಳನ್ನು ದುರುಪಯೋಗಪಡಿಸಿಕೊಂಡಿದ್ದ ಎಂದು ರಿಯಾ ಜಾಮೀನು ಅರ್ಜಿಯಲ್ಲಿ ತಿಳಿಸಲಾಗಿದೆ. ಇದರ ಪರಿಣಾಮವಾಗಿ ರಿಯಾ ಮತ್ತು ಶೋವಿಕ್ ಈ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.

ಸುಶಾಂತ್‌ ಬೈಪೊಲಾರ್ ಡಿಸಾರ್ಡರ್‌ಗೆ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಕುಟುಂಬದವರ ಜೊತೆಯೂ ಖಿನ್ನತೆ ಬಗ್ಗೆ ಮಾತನಾಡುತ್ತಿರಲಿಲ್ಲ. ಲಾಕ್‌ಡೌನ್ ಸಂದರ್ಭ ಆತನ ಮಾನಸಿಕ ಸ್ಥಿತಿ ಹದೆಗೆಟ್ಟಿತ್ತು. ಇರ್ಫಾನ್ ಖಾನ್ ಹಾಗೂ ರಿಶಿ ಕಪೂರ್ ಸಾವು ಕೂಡಾ ನಟನ ಮೇಲೆ ಪರಿಣಾಮ ಬೀರಿತ್ತು ಎನ್ನಲಾಗಿದೆ.

ಸೋನಮ್ ಕಪೂರ್ ಸಹೋದರ ಜೊತೆ ರಿಲೆಷನ್‌ಶಿಪ್‌ನಲ್ಲಿದ್ದರಂತೆ ರಿಯಾ ಚಕ್ರವರ್ತಿ!

ಸಿನಿಮಾ ಒಂದಕ್ಕೆ 14 ಕೋಟಿ ಆಫರ್ ಸಿಕ್ಕಾಗ ಸುಶಾಂತ್ ಖುಷಿಯಾಗಿದ್ದ, ಆದರೆ ಕುಟುಂಬದ ಜೊತೆಗಿನ ಸಂಬಂಧ ಬೇಸರ ತಂದಿತ್ತು ಎಂದು ಜಾಮೀನು ಅರ್ಜಿಯಲ್ಲಿ ಹೇಳಲಾಗಿದೆ.