ಶನಿವಾರಸಂತೆ (ಅ.07): ಸಕಲೇಶಪುರದಿಂದ ಕೊಡ್ಲಿಪೇಟೆ- ಸೋಮವಾರಪೇಟೆ ಮಾರ್ಗವಾಗಿ ಮಂಗಳೂರಿಗೆ ಹೋಗಿ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ತಿಂಗಳಿನಿಂದ ಸ್ಥಗಿತಗೊಂಡಿದ್ದು ಸಂಚಾರ ಮತ್ತೆ ಪ್ರಾರಂಭಿಸಲಾಗಿದೆ.

ಕೊಡಗಿನ ಸೋಮವಾರಪೇಟೆ, ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಭಾಗದ ಪ್ರಯಾಣಿಕರಿಗೆ ಸಕಲೇಶಪುರ ಮತ್ತು ಮಂಗಳೂರು ಕಡೆಗೆ ಹೋಗಲು ತುಂಬಾ ಉಪಯೋಗವಾಗುತ್ತಿದ್ದ ಬಸ್‌ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಈ ಭಾಗದ ಪ್ರಯಾಣಿಕರಿಗೆ ಅನಾನುಕೂಲವಾಗಿತ್ತು. ಈ ಸಂಬಂಧ ಪ್ರಯಾಣಿಕರ ಪರವಾಗಿ ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್‌. ಆರ್‌. ಹರೀಶ್‌ ಸ್ಥಗಿತಗೊಂಡಿದ್ದ ಬಸ್‌ ಸಂಚಾರ ಮತ್ತೆ ಪ್ರಾರಂಭಿಸುವಂತೆ ಮಡಿಕೇರಿ ಶಾಸಕ ಎಂ. ಪಿ. ಅಪ್ಪಚ್ಚುರಂಜನ್‌ ಹಾಗೂ ಮಂಗಳೂರು ಡಿಪೋ ವ್ಯವಸ್ಥಾಪಕ ದಿವಾಕರ್‌ ಅವರಿಗೆ ಮನವಿ ನೀಡಿದ್ದರು. ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಶಾಸಕ ಮತ್ತು ಡಿಪೋ ಅಧಿಕಾರಿ ಸ್ಥಗಿತಗೊಂಡಿದ್ದ ಬಸ್‌ ಸಂಚಾರ ಮತ್ತೆ ಪ್ರಾರಂಭಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.

5 ರಾಜ್ಯ​ಗ​ಳಿಗೆ ಕೆಎ​ಸ್ಸಾ​ರ್ಟಿಸಿ ಸೇವೆ ಪುನಾ​ರಂಭ ...

ಮಂಗಳೂರಿನಿಂದ ಮಧ್ಯಾಹ್ನ 1.15 ಗಂಟೆಗೆ ಹೊರಟು ಬಿ.ಸಿ.ರೋಡ್‌, ಉಪ್ಪಿನಂಗಡಿ, ಗುಂಡ್ಯ ಮಾರ್ಗವಾಗಿ ಸಕಲೇಶಪುರಕ್ಕೆ ಸಂಜೆ 4. 50ಎಕ್ಕ ತಲುಪುವ ಬಸ್ಸು ಬಾಳುಪೇಟೆ ಮಾರ್ಗವಾಗಿ ಕೊಡ್ಲಿಪೇಟೆಗೆ ಸಂಜೆ 6. 10ಕ್ಕೆ ಬಂದು ತಲುಪುತ್ತದೆ. ನಂತರ ಶನಿವಾರಸಂತೆ ಮಾರ್ಗವಾಗಿ ರಾತ್ರಿ 7. 30 ಗಂಟೆಗೆ ಸೋಮವಾರಪೇಟೆ ತಲುಪುತ್ತದೆ. ಮರುದಿನ ಮುಂಜಾನೆ 6 ಗಂಟೆಗೆ ಹೊರಡುವ ಬಸ್ಸು ಇದೇ ಮಾರ್ಗವಾಗಿ ಮಂಗಳೂರನ್ನು ಬೆಳಗ್ಗೆ 11. 30 ಗಂಟೆಗೆ ತಲುಪುತ್ತದೆ.