Author: Akhilesh Mishra, New Delhi

ಕೊರೋನಾ ಸೋಂಕಿನ ವಿರುದ್ಧ ಭಾರತ ಕೈಗೊಂಡಿರುವ ಲಸಿಕಾ ಅಭಿಯಾನ ಸದ್ಯ ಇಡೀ ದೇಶದ ಗಮನ ಸೆಳೆಯುತ್ತಿದೆ. ಇದಕ್ಕೆ ಭಾರತ ವಿಶ್ವದಲ್ಲೇ ಅತೀ ದೊಡ್ಡ ಲಸಿಕಾ ಉತ್ಪಾದಕ ಎನ್ನುವುದರ ಜೊತೆ ಅನೇಕ ಕಾರಣಗಳಿವೆ. ಇನ್ನು ಕಳೆದ ಕೆಲ ವರ್ಷಗಳಲ್ಲಿ ಅದರಲ್ಲೂ ವಿಶೇಷವಾಗಿ ಮೋದಿ ನಾಯಕತ್ವದಡಿ ಭಾರತ ಇಂತಹ ವಿಚಾರಗಳಲ್ಲಿ ಅತ್ಯಂತ ವೇಗವಾಗಿ ಸಾಧನೆಯ ಉತ್ತುಂಗಕ್ಕೇರಲಾರಂಭಿಸಿದೆ. 

ದೇಶದಲ್ಲಿ 423ಮಿಲಿಯನ್‌ಗೂ ಅಧಿಕ ಬ್ಯಾಂಕ್‌ ಖಾತೆ ಇಲ್ಲದವರು ಇಂದು ಜನ್‌ಧನ್‌ ಯೋಜನೆ ಮೂಲಕ ಖಾತೆ ಹೊಂದಿದ್ದಾರೆ. ವಿಮೆಗೆ ಒತ್ತು ನೀಡದ, ಅದರ ಬಗ್ಗೆ ಮಾಹಿತಿಯೇ ಇಲ್ಲದವರು ಜನ್‌ ಸುರಕ್ಷಾದಡಿ ವಿಮೆ ಹೊಂದಿದ್ದಾರೆ. ಅಲ್ಲದೇ  288 ಮಿಲಿಯನ್ ಮಂದಿ ಮುದ್ರಾ ಯೋಜನೆಯಡಿ ತಮ್ಮದೇ ಸ್ವಂತ ಉದ್ಯಮ ಆರಂಭಿಸಿದ್ದಾರೆ. 

2 ವರ್ಷ ಫೈಝರ್‌, ಮಾಡೆ​ರ್ನಾ ಲಸಿಕೆ ಡೌಟ್‌!

ಇನ್ನು 2016ರ ನವೆಂಬರ್‌ನಲ್ಲಿ ಆರಂಭಿಸಿದ ಡಿಜಿಟಲ್ ವ್ಯವಹಾರ ಮತ್ತೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಮಾಡಿದ ಸಾಧನೆಯಾಗಿದೆ. 2020 ರಲ್ಲಿ, ಭಾರತವು 25 ಬಿಲಿಯನ್ ಗಿಂತ ಹೆಚ್ಚು ವಹಿವಾಟುಗಳೊಂದಿಗೆ ವಿಶ್ವದ ಅತಿದೊಡ್ಡ ರಿಯಲ್‌ ಟೈಂ ಪೇಮೆಂಟ್‌ ಮಾರ್ಕೆಟ್‌ ಆಗಿ ಹೊರಹೊಮ್ಮಿದೆ. ಅಲ್ಲದೇ ಕೇವಲ 2021 ರ ಮಾರ್ಚ್ ತಿಂಗಳಲ್ಲಿ ಯುಪಿಐ ಚೌಕಟ್ಟಿನಡಿ 80 ಬಿಲಿಯನ್ ಡಾಲರ್ ಮೌಲ್ಯದ 2.73 ಬಿಲಿಯನ್‌ಗೂ ಅಧಿಕ ವಹಿವಾಟು ನಡೆದಿದೆ. 

ಇಂತಹ ಸಾಧನೆ ಮಾಡಿರುವ ಭಾರತ ಕೊರೋನಾ ವಿರುದ್ಧದ ಹೋರಾಟದ ಭಾಗವಾಗಿ ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನ ಆರಂಭಿಸಿದಾಗ ಸಾಮಾನ್ಯವಾಗಿ ವಿಶ್ವದ ಗಮನ ಭಾರತದತ್ತ ಹೊರಳಿತು. ಹೀಗಿರುವಾಗ ಲಸಿಕೆ ವಿಚಾರವಾಗಿ ಭಾರತ ಎದುರಿಸಿದ ಕೆಲ ಪ್ರಶ್ನೆಗಳ ಉತ್ತರ ಇಲ್ಲಿದೆ.

ರಾಜ್ಯಗಳಿಗೆ ನೇರ ಲಸಿಕೆ ವಿತರಿಸಲು ಫೈಝರ್‌ ಕೂಡಾ ನಕಾರ!

* ಭಾರತದ ವ್ಯಾಕ್ಸಿನೇಷನ್ ಸ್ಪೀಡ್ ಜಾಗತಿಕ ಗುಣಮಟ್ಟಕ್ಕಿಂತ ನಿಧಾನವಾಗಿದೆಯೇ?

2021ರ ಮೇ 25ರವರೆಗೆ ಭಾರತ ಒಟ್ಟು 196.4 ಮಿಲಿಯನ್ ಡೋಸ್‌ ಲಸಿಕೆಗಳನ್ನು ನೀಡಿದೆ. ಲಸಿಕೆ ನೀಡಿರುವ ವಿಚಾರದಲ್ಲಿ ವಿಶ್ವಾಸಾರ್ಹ ಡೇಟಾವನ್ನು ವರದಿಯನ್ವಯ ಅಮೆರಿಕ ಮಾತ್ರ ಭಾರತಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವ್ಯಾಕ್ಸಿನ್ ನೀಡಿದೆ. ಇನ್ನು ಅಮೆರಿಕಾ ಭಾರತದಲ್ಲಿ ಲಸಿಕೆ ಅಭಿಯಾನ ಆರಂಭವಾಗುವ ಸುಮಾರು ಒಂದು ತಿಂಗಳ ಮೊದಲೇ ವ್ಯಾಕ್ಸಿನೇಷನ್ ಆರಂಭಿಸಿದೆ ಎಂಬುವುದು ಉಲ್ಲೇಖನೀಯ. ಹೀಗಾಗಿ ಭಾರತ ಲಸಿಕೆ ಅಭಿಯಾನದಲ್ಲಿ ಹಿಂದುಳಿದಿಲ್ಲ ಎಂಬುವುದು ಖಚಿತ. ಭಾರತವು 114 ದಿನಗಳಲ್ಲಿ 170 ಮಿಲಿಯನ್ ಡೋಸ್‌ಗಳನ್ನು ನೀಡಿದ್ದರೆ, ಅಮೆರಿಕ 155 ಹಾಗೂ ಚೀನಾ 119 ದಿನಗಳಲ್ಲಿ ಇಷ್ಟು ಪ್ರಮಾಣದ ಲಸಿಕೆ ನೀಡಿತ್ತು. 

* ಭಾರತದಲ್ಲಿ ಲಸಿಕೆ ಕೊರತೆ ಇದೆಯೇ?

ತನ್ನದೇ ದೇಶದಲ್ಲಿ ಉತ್ಪಾದಿಸುವ ಲಸಿಕೆಗಳನ್ನು ಬಳಸುತ್ತಿರುವ ಕೆಲವೇ ರಾಷ್ಟ್ರಗಳಲ್ಲಿ ಭಾರತವೂ ಒಂದು. ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಸಂಪೂರ್ಣ ಸ್ವದೇಶಿಯಾಗಿದ್ದರೆ, ಕೋವಿಶೀಲ್ಡ್‌ ಭಾರತದಲ್ಲಿ ಉತ್ಪಾದನೆಯಾಗುತ್ತಿರುವ ಲಸಿಕೆಯಾಗಿದೆ. ಅಲ್ಲದೇ ಇನ್ನು ಕೆಲವೇ ದಿನಗಳಲ್ಲಿ ಸ್ಪುಟ್ನಿಕ್ ವಿ ಕೂಡಾ ನೀಡಲಾಗುತ್ತದೆ. ಇನ್ನು ಭಾರತ ಅತ್ಯಂತ ಕಡಿಮೆ ಸಮಯದಲ್ಲಿ ಅತೀ ಹೆಚ್ಚು ಮಂದಿಗೆ ಲಸಿಕೆ ನೀಡಿದ್ದು, ಇಂತಹ ಸಾಧನೆ ಬೇರೆ ಯಾವುದೇ ರಾಷ್ಟ್ರ ಕೂಡಾ ಮಾಡಿಲ್ಲ. ಇನ್ನು ಕೊರೋನಾ ಎರಡನೇ ಅಲೆ ದಾಳಿ ಇಟ್ಟ ಸಂದರ್ಭದಲ್ಲೂ ಭಾರತ ತನ್ನ ಲಸಿಕೆ ಅಭಿಯಾನ ನಿಲ್ಲಿಸಿರಲಿಲ್ಲ. ಪ್ರ್ಯಾಕ್ಟಿಕಲ್ ಆಗಿ ಯೋಚಿಸುವುದಾದರೆ ಭಾರತ ಅತೀ ಹೆಚ್ಚು ಲಸಿಕೆ ಉತ್ಪಾದಿಸಿದ್ದು, ಇದನ್ನು ಕೊರತೆ ಎನ್ನಲು ಸಾಧ್ಯವಿಲ್ಲ.

'ಮಳೆ​ಗಾ​ಲಕ್ಕೂ ಮುನ್ನ ಮಕ್ಕ​ಳಿ​ಗೆ ಶೀತ​ಜ್ವ​ರದ ಲಸಿಕೆ ನೀಡಿ'

* ಈವರೆಗೂ ಲಸಿಕೆಯ ಶೇಕಡಾವಾರು ಜನಸಂಖ್ಯೆ ಗಮನಿಸಿದರೆ ಭಾರತ ಹಿಂದುಳಿದಿದೆಯಾ? 

ಲಸಿಕೆ ತಯಾರಿಕೆಗೆ ದಿನದ ಅನುಸಾರ ತನ್ನದೇ ಆದ ಸಾಮರ್ಥ್ಯವಿದೆ. ಈ ಸಾಮರ್ಥ್ಯವನ್ನು ಸಾಧ್ಯವಾದಷ್ಟು ಮಟ್ಟಿಗೆ ಭಾರತ ಹೆಚ್ಚಿಸಿದೆ. ಇನ್ನು ಭಾರತ ವಿಶ್ವದಲ್ಲೇ ಅತೀ ಹೆಚ್ಚು ಜನಸಂಖ್ಯೆಯುಳ್ಳ ರಾಷ್ಟ್ರಗಳಲ್ಲೊಂದು. ಹೀಗಿರುವಾಗ ಲಸಿಕಾ ಅಭಿಯಾನಕ್ಕೆ ಹೆಚ್ಚು ಸಮಯ ತಗುಲುವುದು ಸಾಮಾನ್ಯ. ಲಸಿಕೆಯ ಉತ್ಪಾದನಾ ಸಾಮರ್ಥ್ಯ ಗಮನಿಸಿದರೆ ಭಾರತ ನಿಜಕ್ಕೂ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಅಂಕಿ ಅಂಶಗಳೂ ಇದಕ್ಕೆ ಸಾಕ್ಷಿಯಾಗಿವೆ. 

* ಭಾರತವು ಸಾಕಷ್ಟು ಲಸಿಕೆಗಳನ್ನು ಮುಂಚಿತವಾಗಿ ಆರ್ಡರ್‌ ಮಾಡಿದೆಯೇ?

ಸಾಕಷ್ಟು ಲಸಿಕೆಗಳನ್ನು ಆರ್ಡರ್ ಮಾಡಿದೆಯೇ? ಇಲ್ಲವೇ ಎಂಬ ಪ್ರಶ್ನೆ ಅನ್ವಯಿಸುವುದು ತನ್ನದೇ ಆದ ಲಸಿಕೆ ಉತ್ಪಾದಿಸದ ದೇಶಗಳಿಗೆ, ಅಥವಾ ಬೇರೆ ದೇಶಗಳಿಂದ ಲಸಿಕೆ ಆಮದು ಮಾಡಿಕೊಳ್ಳುವ ರಾಷ್ಟ್ರಗಳಿಗೆ. ಈ ವಿಚಾರದಲ್ಲಿ ಭಾರತಕ್ಕೆ ಅಗತ್ಯವಿರುವಷ್ಟು ಲಸಿಕೆ ಪೂರೈಕೆ ಅಥವಾ ಉತ್ಪಾದನೆಯಾಗುತ್ತಿದೆ. 

'ಕೊರೋನಾ ಗೆಲ್ಲಲು ಇನ್ನೆರಡು ವರ್ಷ : ಜೈವಿಕ ಲಸಿಕೆ ಜತೆ ಸಾಮಾಜಿಕ ಲಸಿಕೆ ಬೇಕು'

* ಹಾಗಾದ್ರೆ ಭಾರತ ಯಾಕೆ ಲಸಿಕೆ ರಫ್ತು ಮಾಡಿಕೊಳ್ಳುತ್ತಿದೆ?

ಭಾರತ ಈಗಾಗಲೇ ತನ್ನ ದೇಶದ ಜನತೆಗೆ 196.4 ಮಿಲಿಯನ್ ಡೋಸ್‌ಗಳನ್ನು ನೀಡಿದೆ. ಇದೇ ವೇಳೆ ವಿದೇಶಗಳಿಗೆ ರಫ್ತು ಮಾಡಿದ್ದು ಕೇವಲ 66 ಮಿಲಿಯನ್ ಡೋಸ್‌ಗಳನ್ನಷ್ಟೇ. ಅಂದರೆ ರಫ್ತು ಮಾಡಿದ ಲಸಿಕೆಗಿಂತಲೂ ಮೂರು ಪಟ್ಟು ಹೆಚ್ಚು ಲಸಿಕೆ ಭಾರತ ಈಗಾಗಲೇ ತನ್ನ ನಾಗರಿಕರಿಗೆ ನೀಡಿದೆ. ಇನ್ನು ಅದರಲ್ಲೂ ಕೇವಲ 10 ಮಿಲಿಯನ್‌ ಡೋಸ್‌ಗಳನ್ನಷ್ಟೇ ಮಾನವೀಯತೆ ದೃಷ್ಟಿಯಿಂದ ಉಚಿತವಾಗಿ ವಿದೇಶಗಳಿಗೆ ರಫ್ತು ಮಾಡಿದೆ. ಈ ಹತ್ತು ಮಿಲಿಯನ್ ಡೋಸ್‌ ಲಸಿಕೆ ರಫ್ತು ಮಾಡಿದ ದೇಶಗಳಲ್ಲಿ ಹಲವು ಆರ್ಥಿಕವಾಗಿ ಹಿಂದುಳಿದ, ಅತ್ಯಂತ ಸಣ್ಣ ಹಾಗೂ ಸ್ವದೇಶೀ ಲಸಿಕೆ ಉತ್ಪಾದಿಸಲಾಗದ ರಾಷ್ಟ್ರಗಳಾಗಿವೆ. ಅಲ್ಲದೇ ಈ ರಾಷ್ಟ್ರಗಳಿಗೆ ಹೆಚ್ಚಾಗಿ ಬೇರಾವುದೇ ದೊಡ್ಡ ರಾಷ್ಟ್ರಗಳು ಸಹಾಯ ಮಾಡಲು ಮುಂದಾಗುವುದಿಲ್ಲ ಎಂಬ ವಿಚಾರವೂ ಉಲ್ಲೇಖನೀಯ.

ಇನ್ನು ಈ 66 ಮಿಲಿಯನ್‌ನಲ್ಲಿ 35 ಮಿಲಿಯನ್ ಡೋಸ್‌ಗಳನ್ನು ಒಪ್ಪಂದಗಳಿಗೆ ಅನ್ವಯವಾಗಿ ರಫ್ತು ಮಾಡಲಾಗಿದೆ. ಇನ್ನು 20 ಮಿಲಿಯನ್ ಡೋಸ್‌ಗಳನ್ನು ಅಮೆರಿಕ ನೇತೃತ್ವದಲ್ಲಿ ಬಡ ರಾಷ್ಟ್ರಗಳಿಗೆ ವಿತರಿಸಲಾಗುವ ಕೋವ್ಯಾಕ್ಸ್‌ನಡಿ ಕಳುಹಿಸಲಾಗಿದೆ. ಇನ್ನು ಭಾರತಕ್ಕೆ ಎರಡನೇ ಅಲೆ ದಾಳಿ ಇಟ್ಟ ಸಂದರ್ಭದಲ್ಲಿ ಭಾರತ ಖುದ್ದು ಲಸಿಕೆ ರಫ್ತನ್ನು ಸ್ಥಗಿತಗೊಳಿಸಿತು. ಭಾರತದ ಈ ನಡೆಗೆ ಕಾರಣವೇನೆಂದು ಎಲ್ಲಾ ರಾಷ್ಟ್ರಗಳಿಗೆ ಅರ್ಥವಾಗಿತ್ತು. ಇನ್ನು ಒಂದು ವೇಳೆ ಭಾರತ ಎರಡನೇ ಅಲೆ ಬರುವ ಮುನ್ನವೇ ಲಸಿಕೆ ರಫ್ತನ್ನು ನಿಲ್ಲಿಸಿದ್ದರೆ, ದೇಶದಲ್ಲೆಡೆ ಕೊರೋನಾ ಅಬ್ಬರಿಸುತ್ತಿದ್ದ ವೇಳೆ ವಿದೇಶಗಳಿಂದ ಸಹಾಯ ಬರುತ್ತಿರಲಿಲ್ಲ. 

* ಸಾಮರ್ಥ್ಯ ವಿಸ್ತರಣೆ ಹೇಗೆ?

ಲಸಿಕೆ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ಸರ್ಕಾರ ರಾಜ್ಯಗಳಿಗೇ ಎಲ್ಲಾ ಜವಾಬ್ದಾರಿ ವಹಿಸಿತು. 2021ರ ಜುಲೈ ತಿಂಗಳೊಳಗೆ ಭಾರತ  510 ಮಿಲಿಯನ್ ಜನರಿಗೆ ಲಸಿಕೆ ನೀಡುವ ಗುರಿ ಇಟ್ಟುಕೊಂಡಿದೆ. ಹೀಗಿರುವಾಗ ಇಂತಹುದ್ದೊಂದು ನಿರ್ಧಾರ ಬಹಳ ಮಹತ್ವ ಪಡೆಯುತ್ತದೆ. 

ಭಾರತದಲ್ಲಿ ರಷ್ಯಾದ ಸ್ಫುಟ್ನಿಕ್ V ಲಸಿಕೆ ಉತ್ಪಾದನೆ ಆರಂಭ; ವರ್ಷಕ್ಕೆ 100 ಮಿಲಿಯನ್ ಡೋಸ್!

* ಸದ್ಯ ಲಸಿಕೆ ಅಭಿಯಾನ ಎಲ್ಲಿಗೆ ತಲುಪಿದೆ?

ವಿಜ್ಞಾನಿಗಳ ಮಾರ್ಗಸೂಚಿ ಹಾಗೂ ವಿಶ್ವ ಸಂಸ್ಥೆಯ ನಿಯಮಗಳ ಅನುಸಾರ ಭಾರತದ ಲಸಿಕಾ ಅಭಿಯಾನ ಅಭಿವೃದ್ಧಿ ಪಥದಲ್ಲಿ ಸಾಗಿದೆ. ಈ ಮೂಲಕ ಸಾವಿನ ಸಂಖ್ಯೆ ಕುಗ್ಗಿಸ, ಸೋಂಕು ತಡೆಗಟ್ಟುವ ಉದ್ದೇಶ ಭಾರತದ್ದಾಗಿದೆ. ಆರಂಭದಲ್ಲಿ, ಫೆಬ್ರವರಿ ತಿಂಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಯ್ತು. ಬಳಿಕ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆಡ ಅಭಿಯಾನ ಆರಂಭಿಸಲಾಯ್ತು. ತದ ನಂತರ ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ಕಾರ್ಯ ಆರಂಭವಾಯ್ತು. ಇದಾದ ಬಳಿಕ ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಅಭಿಯಾನ ಜಾರಿಯಾಗಿದೆ.

ಅಲ್ಲದೇ ಸದ್ಯ ರಾಜ್ಯ ಹಾಗೂ ಖಾಸಗಿ ಕ್ಷೇತ್ರಗಳೂ ಲಸಿಕೆ ನೀಡುವ ಕಾರ್ಯದಲ್ಲಿ ತೊಡಗಿದ್ದು, ಈ ನಿಟ್ಟಿನಲ್ಲಿ ದೇಶದಲ್ಲಿ ಒಟ್ಟು 46,000 ಸೈಟ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಇಂತಹುದ್ದೊಂದು ಕಾರ್ಯ ಆರಂಭವಾದ ಕೇವಲ 25 ದಿನಗಳೊಳಗೆ 28.6 ಮಿಲಿಯನ್ ಭಾರತೀಯರಿಗೆ ಲಸಿಕೆ ನೀಡಲಾಗಿದೆ. 

ಮುಂದೇನು?

ಈಗಾಗಲೇ ಭರವಸೆ ನೀಡಿದ ದೇಶೀಯ ಪೂರೈಕೆಯಂತೆ, ಅನೇಕ ವಿದೇಶಿ ಲಸಿಕೆ ತಯಾರಕರು ಮಾತುಕತೆ ನಡೆಸುವ ಹಂತದಲ್ಲಿದ್ದಾರೆ. ಯುಎಸ್ ಎಫ್ಡಿಎಯಂತಹ ನಿಯಂತ್ರಕರು ಇದನ್ನು ಅನುಮೋದಿಸಿದರೆ ಅವರಿಗೆ ತುರ್ತು ಅನುಮೋದನೆ ನೀಡಲಾಗುತ್ತದೆ. ಇನ್ನು ದೇಶದಲ್ಲಿ ಈಗಾಗಲೇ ಹದಿನೆಂಟು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಲಸಿಕೆ ಅಭಿಯಾನ ಆರಂಭಿಸುವ ನಿಟ್ಟಿನಲ್ಲಿ, ವ್ಯಾಕ್ಸಿನ್ ಪ್ರಯೋಗಕ್ಕೆ ಭಾರತ್‌ ಬಯೋಟೆಕ್‌ಗೆ ಸರ್ಕಾರ ಗ್ರೀನ್‌ ಸಿಗ್ನಲ್ ನೀಡಿದೆ.ಅಲ್ಲದೇ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಗುರಿ ಹೊಂದಿರುವ ಭಾರತ ದೇಶದ ಎಲ್ಲಾ ನಾಗರಿಕರಿಗೂ ಲಸಿಕೆ ನೀಡುವ ಹಂತದಲ್ಲಿ ಕಾರ್ಯ ನಿರ್ವಹಿಸುತ್ತಿದೆ. 

ಮೃತ ಸೋಂಕಿತರ ಅಂತ್ಯಸಂಸ್ಕಾರ: ಮೂರು ಲೋಡ್ ಕಟ್ಟಿಗೆ ಕಳಿಸಿದ ಸೋನಿಯಾ ಗಾಂಧಿ

ಇನ್ನು ಇವೆಲ್ಲದರ ಪರಿಣಾಮ ಎಂಬಂತೆ ಈಗಾಗಲೇ ದೇಶದಲ್ಲಿ ಲಗ್ಗೆ ಇಟ್ಟಿದ್ದ ಕೊರೋನಾ ಎರಡನೇ ಅಲೆಯ ತೀವ್ರತೆ ಕಡಿಮೆಯಾಗಲು ಪ್ರಾರಂಭಿಸಿದೆ. ಆಮ್ಲಜನಕ, ಆಸ್ಪತ್ರೆಯ ಹಾಸಿಗೆಗಳು ಮತ್ತು ಅಗತ್ಯ ವೈದ್ಯಕೀಯ ಸರಬರಾಜುಗಳು ಸ್ಥಿರವಾಗಿವೆ ಮತ್ತು ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೆ ತರಲಾಗಿದೆ. ಮುಂದಿನ ಕೆಲ ವಾರಗಳಲ್ಲಿ ಈ ಕೆಟ್ಟ ದಿನಗಳು ಕೊನೆಯಾಗುವ ಆಶಾಭಾವನೆ ಇದೆ. 

ಲೇಖಕರು: ಅಖಿಲೇಶ್ ಮಿಶ್ರಾ
ಸಿಇಒ, ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್ ಹಾಗೂ MyGovನ ಮಾಜಿ ನಿರ್ದೇಶಕ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

ಈ ಸುದ್ದಿಯ ಇಂಗ್ಲೀಷ್‌ ಲಿಂಕ್‌ಗಾಗಿ ಇಲ್ಲಿ  ಕ್ಲಿಕ್ ಮಾಡಿ: So how has India's vaccination strategy really fared?