ಗ್ಯಾರಂಟಿಗೆ ಹಣ ಹೊಂದಿಸಲು ರೇಷನ್ ಕಾರ್ಡ್ ರದ್ದು: ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದ ಸುನಿಲ್ ಕುಮಾರ್
ಸರ್ಕಾರವು ವ್ಯಾಪಕವಾಗಿ ರೇಷನ್ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಿದ್ದು, ಬಿಪಿಎಲ್ ಕಾರ್ಡ್‌ಗಳನ್ನು ಗುರಿ ಯಾಗಿಸಿಕೊಂಡು ಎರಡು ತಿಂಗಳ ಅವಧಿಯಲ್ಲಿ 11 ಲಕ್ಷ ರೇಷನ್ ಕಾರ್ಡ್, ಇಷ್ಟು ದೊಡ್ಡ ಪ್ರಮಾಣದಲ್ಲಿ ರದ್ದು ಮಾಡಿದ್ದಾರೆ. ಈ ಪ್ರಕ್ರಿಯೆ ನಿಂತಿಲ್ಲ ಇನ್ನೂ ಮುಂದುವರಿದಿದೆ ಎಂದ ಮಾಜಿ ಸಚಿವ ಸುನಿಲ್ ಕುಮಾರ್
ಹಾಸನ(ನ.17): ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸಾಧ್ಯವಾಗದೇ ವ್ಯಾಪಕವಾಗಿ ಎಲ್ಲಾ ಕಡೆ ರೇಷನ್ ಕಾರ್ಡ್ ರದ್ದು ಮಾಡುತ್ತಿದೆ ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಸುನಿಲ್ ಕುಮಾರ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಮಾಧ್ಯ ಮದೊಂದಿಗೆ ಮಾತನಾಡಿ, ರಾಜ್ಯದಲ್ಲಿ ಇರುವುದು ಶೂನ್ಯ ಅಭಿವೃದ್ಧಿಯ ಸರ್ಕಾರವಾಗಿದ್ದು ಹಗರಣಗಳ ಸರ್ಕಾರ ಭ್ರಷ್ಟ ಸರ್ಕಾರ ಎಂದು ಟೀಕಿಸಿದರು.
ಸರ್ಕಾರವು ವ್ಯಾಪಕವಾಗಿ ರೇಷನ್ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಿದ್ದು, ಬಿಪಿಎಲ್ ಕಾರ್ಡ್‌ಗಳನ್ನು ಗುರಿ ಯಾಗಿಸಿಕೊಂಡು ಎರಡು ತಿಂಗಳ ಅವಧಿಯಲ್ಲಿ 11 ಲಕ್ಷ ರೇಷನ್ ಕಾರ್ಡ್, ಇಷ್ಟು ದೊಡ್ಡ ಪ್ರಮಾಣದಲ್ಲಿ ರದ್ದು ಮಾಡಿದ್ದಾರೆ. ಈ ಪ್ರಕ್ರಿಯೆ ನಿಂತಿಲ್ಲ ಇನ್ನೂ ಮುಂದುವರಿದಿದೆ ಎಂದರು.
ಕಾಂಗ್ರೆಸ್‌ನಿಂದ ಕಾರ್ಕಳ ಪ್ರವಾಸೋದ್ಯಮ ಕಗ್ಗೋಲೆ: ಸುನಿಲ್ ಕುಮಾರ್
ಸರ್ಕಾರ ಇಲ್ಲಿಯವರೆಗೆ ಯಾವುದೇ ಸ್ಪಷ್ಟ ತೀರ್ಮಾನತೆಗೆದುಕೊಂಡಿರುವುದಿಲ್ಲ ಇದರಿಂದಾಗಿ ಬಡವರು ಕೇಂದ್ರ, ರಾಜ್ಯ ಸರ್ಕಾರ ಅನೇಕ ಸೌಲಭ್ಯ ಗಳಿಂದ ವಂಚಿತರಾಗುತ್ತಾರೆ. ಪ್ರಮುಖವಾಗಿ ಆಯು ಪ್ಲಾನ್‌ಭಾರತ್, ಗೃಹಲಕ್ಷ್ಮಿ ಅನೇಕಯೋಜನೆಗಳಿಂದ ಬಿಪಿಎಲ್ ಕುಟುಂಬವುವಂಚಿತರಾಗುತ್ತಾರೆ. ಬಡವರ ಪರ ಎಂದು ಭಾಷಣ ಮಾಡಿ ಇಷ್ಟು ಪ್ರಮಾಣದಲ್ಲಿ ರೇಷನ್ ಕಾರ್ಡ್ ರದ್ದು ಮಾಡಿದ ಸರ್ಕಾರ ಬಂದಿರುವುದು ಕರ್ನಾಟಕದ ಇತಿಹಾಸದಲ್ಲೇ ಇದೇ ಮೊದಲು. ರೇಷನ್ ಕಾರ್ಡ್ ರದ್ದು ಮಾಡಬಾರದು ಎನ್ನುವ ಕುರಿತು ನಾವು ಹೋರಾಟ ಮಾಡಲಿದ್ದೇವೆ. ಕಸ್ತೂರಿ ರಂಗನ್ ವರದಿಗೆ ಸಂಬಂಧಪಟ್ಟಂತೆ ಕರ್ನಾಟಕದ 17 ಜಿಲ್ಲೆಗಳು ಇದರ ವ್ಯಾಪ್ತಿ ಅಡಿಯಲ್ಲಿ ಬರುತ್ತಿದೆ. ಅತಿ ಸೂಕ್ಷ್ಮ ವಲಯವಾದ ಸಕಲೇಶಪುರ, ಬೇಲೂರು, ಮೂಡಿಗೆರೆಕೂಡಸೇರುತ್ತಿದೆ. ಸರ್ಕಾರವು ಇಲ್ಲಿವರೆಗೂ ಒಂದು ಸ್ಪಷ್ಟವಾದ ತೀರ್ಮಾನ ತೆಗೆದುಕೊಂಡಿರುವುದಿಲ್ಲ. ಇದರಿಂದ ದೊಡ್ಡ ಪ್ರಮಾಣದಲ್ಲಿ ಜನ ಜೀವನಕ್ಕೆ ತೊಂದರೆ ಆಗುತ್ತಿದೆ. ಈ ವಿಚಾರವನ್ನು ಕೂಡ ವಿಧಾನಸಭೆ ಅಧಿವೇಶನದಲ್ಲಿ ಇದರ ಬಗ್ಗೆ ಪ್ರಸ್ತಾವನೆ ಮಾಡುತ್ತೇವೆ ಎಂದು ತಿಳಿಸಿದರು.
ದ್ವೇಷದ ರಾಜಕಾರಣ ಒಳ್ಳೆಯದಲ್ಲ:
ವ್ಯಕ್ತಿಯನ್ನು ಟೇಕಿಸುವುದು, ವೈಯಕ್ತಿಕ ದ್ವೇಷಗಳು ಸರ್ವಾಜನಿಕ ಬದುಕಿನಲ್‌ಲ್ಲಿ ಒಳ್ಳೆಯದಲ್ಲ. ಸಭ್ಯತೆಮೀರಿಯಾರೂ ಕೂಡ ನಡೆದುಕೊಳ್ಳಬಾರದು ಸಾರ್ವಜನಿಕರುದೃಶ್ಯ ಮಾಧ್ಯಮದ ಮೂಲಕ ಎಲ್ಲವನ್ನೂ ವೀಕ್ಷಣೆ ಮಾಡುತ್ತಿ ರುತ್ತಾರೆ. ಸಭ್ಯತೆ ಎನ್ನುವುದು ಎಲ್ಲರಲ್ಲೂ ಇರಬೇಕು. ಆಡಳಿತ ಪಕ್ಷದಲ್ಲಿ ಇದ್ದೇವೆ ಎನ್ನುವ ಕಾರಣಕ್ಕೆ ದ್ವೇಷವನ್ನು ಮಾಡುತ್ತಾ ವ್ಯಕ್ತಿಗಳನ್ನು ಟಾರ್ಗೆಟ್ ಮಾಡುವುದು ಈ ಸರ್ಕಾರದಲ್ಲಿ ಹೆಚ್ಚಾಗಿದೆ. ಇವತ್ತು ಅವರು ಆಡಳಿತದಲ್ಲಿದ್ದರೇ ನಾಳೆ ನಾವು ಆಡಳಿತದಲ್ಲಿ ಇದು ತ್ತೇವೆ. ಯಾವ ಸಂದರ್ಭದಲ್ಲೂ ಕೂಡಗ ರೀತಿ ಸಭ್ಯತೆ ಮೀರಿದ ವರ್ತನೆ ಮತ್ತು ವೈಯಕ್ತಿಕ ದ್ವೇಷದ ರಾಜ ಕಾರಣ ಒಳ್ಳೆಯದಲ್ಲ ಎಂದು ಸಲಹೆ ನೀಡಿದರು.
ಉಪ ಚುನಾವಣೆ ಫಲಿತಾಂಶ ಬಂದ ನಂತರ ಮುಖ್ಯಮಂತ್ರಿ ಸ್ಥಾನವನ್ನು ಸಿದ್ದರಾಮಯ್ಯ ಕಳೆದು ಕೊಳ್ಳುತ್ತಾರೆ. ಮೂರು ಸ್ಥಾನವನ್ನು ಬಿಜೆಪಿ ಅಭ್ಯರ್ಥಿ ಗಳು ಗೆಲ್ಲುತ್ತಾರೆ. ಈ ಸೂಕ್ಷ್ಮ ಕಾಂಗ್ರೆಸ್‌ಗೆ ಗೊತ್ತಾಗಿರುವುದರಿಂದ ತಮ್ಮ ಶಾಸಕರನ್ನು ಹಿಡಿದಿಟ್ಟು ಕೊಳ್ಳುವುದಕ್ಕೆ ಆಗದೆ ನಮ್ಮ ಮೇಲೆ ಬೊಟ್ಟು ಮಾಡುತ್ತಿ ದ್ದಾರೆ. ನಮ್ಮ ಹೆಗಲ ಮೇಲೆ ಗನ್ ಇಟ್ಟುಕೊಂಡು ಅವರ ಹೈಕಮಾಂಡಿಗೆ ಗುಂಡು ಹಾರಿಸುವಂತಹ ಪ್ರಯತ್ನವನ್ನು ಈ ಆಫರ್ ಮೂಲಕ ಮಾಡುತ್ತಿದ್ದಾರೆ. ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಹಣವ ಆಮಿಷವನ್ನು ಕೊಡುವಂತಹ ದುಸ್ಥಿತಿ ಇವತ್ತು ಕಾಂಗ್ರೆಸ್ ಪಕ್ಷಕ್ಕೆ ಬಂದಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.
ತಮ್ಮ ಕುರ್ಚಿ ಉಳಿಸಿಕೊಳ್ಳಲು ಹಿಂದುಳಿದ ವರ್ಗ ಆಸ್ತ್ರ, ಅಹಿಂದ ಆಸ್ತ್ರ, ಹಣದ ಆಫರ್ ಆಸ್ತ್ರ ಇವುಗಳೆ ಲಾವನ್ನು ಸಿದ್ದರಾಮಯ್ಯ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು. ಆದರೆ ನಾವು ಸರ್ಕಾರ ಬೀಳಿ ಸುವುದಕ್ಕೆ ಹೋಗುವುದಿಲ್ಲ. ಇದೆಲ್ಲ ಗೊತ್ತಾದಮೇಲೆ ಸಿಎಂ ಈ ಥರ ಮಾತನಾಡುತ್ತಿದ್ದಾರೆ. 'ಸಿದ್ದರಾಮಯ್ಯನ ಸುದ್ದಿಗೆ ಬಂದ್ರೆ ರಾಜ್ಯದ ಜನ್ನು ಸುಮ್ಮನಿರುವುದಿಲ್ಲ' ಎಂಬ ಹೇಳಿಕೆ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಇದನ್ನು ಹೇಳಿರುವುದು ಬಿಜೆಪಿಯವರಿಗಲ್ಲ, ಇದು ಡಿ.ಕೆ.ಶಿವಕುಮಾರ್ ಮತ್ತು ಜಿ. ಪರಮೇಶ್ವರ್ ರವರಿಗೆ ಹಾಗೂ ಕಾಂಗ್ರೆಸ್ ಹೈಕಮಾಂಡ್‌ಗೆ ಎಂದು ಮುಖ್ಯಮಂತ್ರಿ ವಿರುದ್ಧ ಇದೇ ವೇಳೆ ವ್ಯಂಗ್ಯವಾಗಿ ಮಾತನಾಡಿದರು.
ಎಸ್‌ಐಟಿ ತನಿಖೆ ಆಗಲಿ:
ಕೋವಿಡ್ ಸಂದರ್ಭದ ಪರಿಸ್ಥಿತಿ 2020ರ ಅಸುಪಾಸಿನಲ್ಲಿ ಮಾಸ್ಕ್ ಸಮೇತ ಸಿಗುತ್ತಿರಲಿಲ್ಲ. ಸ್ವಸಹಾಯ ಸಂಘದ ಮೂಲಕ ಬಿಜೆಪಿ ಮೋರ್ಚಾ ಮಹಿಳೆಯರು ಹೊಲಿದು ಕೊಟ್ಟಿದ್ದರಿಂದ ನಾವು ಜನರಿಗೆ ನೀಡಿದ್ದೇವೆ. ಸ್ಯಾನಿಟೈಸರ್ ಸಿಗುತ್ತಿರ ಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚುವರಿ ಖರೀದಿ ಯನ್ನು ಕರ್ನಾಟಕ ಒಂದೇ ಅಲ್ಲ, ಜಗತ್ತಿನಲ್ಲಿನ ಎಲ್ಲಾ ರಾಷ್ಟ್ರಗಳು ಕೂಡ ಖರೀದಿ ಮಾಡಿದೆ. ಅಗತ್ಯಕ್ಕಿಂತ ಹೆಚ್ಚಿನ ಬೆಲೆಯನ್ನು ಕೊಟ್ಟು ಖರೀದಿ ಮಾಡಲಾಗಿದೆ ಎಂದು ಆರೋಪ ಮಾಡುತ್ತಿರುವುದು ಸರಿಯಲ್ಲ. ಎಸ್‌ಐಟಿ ತನಿಖೆ ಆಗಲಿ, ನಾವು ಯಾವತನಿಖೆಯನ್ನು ಕೂಡ ವಿರೋಧ ಮಾಡುತ್ತಿಲ್ಲ. ಆದರೆ ಕೋವಿಡ್ ಪರಿಸ್ಥಿತಿಯನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಕೋಮಾಗೆ ಹೋಗಿ ಆರು ತಿಂಗಳು ಕಳೆದಿದೆ: ಶಾಸಕ ಸುನಿಲ್ ಕುಮಾರ್
ಸಿದ್ದರಾಮಯ್ಯ ಅವರ ತನ್ನ ಕುರ್ಚಿ ಅಭದ್ರತೆ ಬಿಜೆಪಿಯಿಂದ ಕಾಡುತ್ತಿಲ್ಲ. ಹೈಕಮಾಂಡ್‌ನಿಂದ ಮತ್ತು ಸಚಿವ ಸಂಪುಟದ ಸಹೋದ್ಯೋಗಿಗಳಿಂದ ಅಭದ್ರತೆ ಕಾಣುತ್ತಿದೆ. ಸ್ವಾಭಿಮಾನಿ ಸಮಾವೇಶ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಾಸಕರು, ಲೋಕಾಯುಕ್ತದ ಮುಂದೆ ಮುಖ್ಯಮಂತ್ರಿ ಕೈಕಟ್ಟಿ ನಿಲ್ಲುತ್ತಾರೆ ಎಂದರೆ ಎಲ್ಲಿ ಸ್ವಾಭಿಮಾನ ಅನಿಸುತ್ತದೆ. ತನ್ನ ಇಡೀ ಕುಟುಂಬ ಸೈಟ್ ವಾಪಸ್ ಕೊಟ್ಟಮೇಲೆ ಸ್ವಾಭಿಮಾನ ಇದೆ ಅನಿಸುತ್ತಿದಿಯೇ? ಒಂದು ವರ್ಷದಲ್ಲಿ ಸಾಲು ಸಾಲು ಹಗರಣ ಬಂದರೂ ನನಗೆ ಏನುಗೊತ್ತಿಲ್ಲ ಎಂದರೇ ಅದಕ್ಕೆ ಸ್ವಾಭಿಮಾನ ಎಂದು ಕರೆಯಬಹುದಾ! ಸ್ವಾಭಿಮಾನ ಎಂದರೇ ಏನು ಎಂಬುದನ್ನು ಅವರಿಗೆ ಕೇಳಬೇಕು ಎಂದು ಕುಟುಕಿದರು.
ಇದೇ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಜಿಲ್ಲಾ ಪ್ರಧಾನಕಾರ್ಯದರ್ಶಿ ಅಮಿತ್ ಶೆಟ್ಟಿ, ಮುಖಂಡರಾದ ರೇಣುಕುಮಾರ್, ಇತರರು ಉಪಸ್ಥಿತರಿದ್ದರು.