ಮುಂಬೈ(ಮೇ.25): ಕೊರೋನಾ 3ನೇ ಅಲೆ ಮಕ್ಕ​ಳನ್ನು ಹೆಚ್ಚಾಗಿ ಬಾಧಿ​ಸ​ಲಿದೆ ಎಂಬ ಆತಂಕದ ಹಿನ್ನೆ​ಲೆ​ಯಲ್ಲಿ ಮುಂಗಾ​ರು ಋುತು​ವಿನ ಒಳ​ಗಾಗಿ ಎಲ್ಲಾ ಮಕ್ಕ​ಳಿಗೂ ಶೀತ​ಜ್ವ​ರಕ್ಕೆ ನೀಡುವ ಲಸಿ​ಕೆ​ಯನ್ನು ನೀಡ​ಬೇಕು ಎಂದು ಮಕ್ಕಳ ವೈದ್ಯರ ಕಾರ್ಯ​ಪಡೆ ಮಹಾ​ರಾಷ್ಟ್ರ ಸರ್ಕಾ​ರಕ್ಕೆ ಸಲ​ಹೆ ನೀಡಿದೆ.

ಸ್ಫುಟ್ನಿಕ್ ಲಸಿಕೆ ಪ್ರವಾಸ, ರಷ್ಯಾಗೆ ಹೋಗಿ ವ್ಯಾಕ್ಸಿನ್ ಹಾಕಿಸಿಕೊಂಡು ಬನ್ನಿ!

ಭಾನು​ವಾರ ನಡೆದ ಸಭೆಯ ವೇಳೆ ಮುಖ್ಯ​ಮಂತ್ರಿ ಉದ್ಧವ್‌ ಠಾಕ್ರೆ ಅವ​ರಿಗೆ ತಜ್ಞ ವೈದ್ಯರ ತಂಡ ಈ ಸಲಹೆ ನೀಡಿದೆ. ಮಕ್ಕ​ಳಿಗೆ ಜ್ವರದ ಲಸಿಕೆ ಹಾಕಿ​ಸು​ವು​ದ​ರಿಂದ ಮಳೆ​ಗಾ​ಲದ ವೇಳೆ ಮಕ್ಕಳು ಜ್ವರದಿಂದ ಬಳ​ಲು​ವು​ದ​ನ್ನು ತಪ್ಪಿ​ಸ​ಬ​ಹುದು. ಇದ​ರಿಂದ ಅನಾ​ವ​ಶ್ಯ​ಕ​ವಾಗಿ ಕೊರೋನಾ ಟೆಸ್ಟ್‌​ಗಾ​ಗಿ ಆಸ್ಪ​ತ್ರೆಗೆ ಬರು​ವುದು ತಪ್ಪ​ಲಿದೆ.

ಇನ್ಫು ಟೈಪ್‌ ಎ ಹಾಗೂ ಬಿ ಲಸಿ​ಕೆ​ಗ​ಳು ಮಾರು​ಕ​ಟ್ಟೆ​ಯಲ್ಲಿ ಹೇರ​ಳ​ವಾಗಿ ಲಭ್ಯ​ವಿ​ದೆ. ಆದರೆ, ರಾಷ್ಟ್ರೀ​ಯ ಲಸಿಕೆ ನೀಡಿಕೆ ಯೋಜ​ನೆಯ ಅಡಿ​ಯಲ್ಲಿ ಶೀತ​ಜ್ವ​ರದ ಲಸಿ​ಕೆ​ಯನ್ನು ಸೇರಿ​ಸಿಲ್ಲ. ಲಸಿ​ಕೆಯ ಒಂದು ಡೋಸ್‌ಗೆ 1500 ರು.ನಿಂದ 2000 ರು. ವೆಚ್ಚ​ವಾ​ಗ​ಲಿದೆ. ಈ ಲಸಿಕೆ ಸುರ​ಕ್ಷಿತ ಎಂಬುದು ಸಾಬೀ​ತಾ​ಗಿದ್ದು, 5 ವರ್ಷದ ಒಳ​ಗಿನ ಮಕ್ಕ​ಳಿಗೆ ನೀಡ​ಬ​ಹು​ದಾ​ಗಿದೆ ಎಂದು ಮಾಹಿತಿ ನೀಡಿ​ದ್ದಾ​ರೆ. ಈ ಬಗ್ಗೆ ಪರಿ​ಶೀ​ಲನೆ ನಡೆ​ಸ​ಲಾ​ಗು​ವುದು ಎಂದು ಉದ್ಧವ್‌ ಠಾಕ್ರೆ ಹೇಳಿ​ದ್ದಾ​ರೆ.

ವಿಮಾನ ಬಾಡಿಗೆ ಪಡೆದು ಆಗಸದಲ್ಲಿ ಮದುವೆ; ಬೆಂಗಳೂರಲ್ಲಿ ಲ್ಯಾಂಡ್ ಆದಾಗ ಶಾಕ್!

ಭಾರತದಲ್ಲಿ ದಾಖಲಾದ ಕೊರೋನಾ ಪ್ರಕರಣಗಳ ಸಂಖ್ಯೆ:

India reports 1,96,427 new #COVID19 cases, 3,26,850 discharges & 3,511 deaths in last 24 hrs, as per Health Ministry Total cases: 2,69,48,874 Total discharges: 2,40,54,861 Death toll: 3,07,231 Active cases: 25,86,782 Total vaccination: 19,85,38,999.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona