ಭಾರತದಲ್ಲಿ ರಷ್ಯಾದ ಸ್ಫುಟ್ನಿಕ್ V ಲಸಿಕೆ ಉತ್ಪಾದನೆ ಆರಂಭ; ವರ್ಷಕ್ಕೆ 100 ಮಿಲಿಯನ್ ಡೋಸ್!
- ಕೊರೋನಾ ಲಸಿಕೆ ಅಭಾವ ನೀಗಿಸಲು ಮಹತ್ವದ ಕ್ರಮ
- ರಷ್ಯಾದ ಸ್ಫುಟ್ನಿಕ್ ವಿ ಲಸಿಕೆ ಭಾರತದಲ್ಲಿ ಉತ್ಪಾದನೆ ಆರಂಭ
- ವರ್ಷಕ್ಕೆ 100 ಮಿಲಿಯನ್ ಡೋಸ್ ಉತ್ಪಾದನಾ ಸಾಮರ್ಥ್ಯ
ನವದೆಹಲಿ(ಮೇ.24): ಕೊರೋನಾ ವೈರಸ್ ಹರಡುತ್ತಿರುವ ವೇಗಕ್ಕೆ ಪೂರಕವಾಗಿ ಚಿಕಿತ್ಸೆ ನೀಡಲು, ವೈದ್ಯಕೀಯ ಸಲಕರಣೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಇನ್ನು ದೇಶದ ಎಲ್ಲರಿಗೂ ಲಸಿಕೆ ಒದಗಿಸುವುದು ಸುಲಭದ ಮಾತಲ್ಲ. ವಿಶ್ವದ ದೊಡ್ಡಣ್ಣ ಎಂದೇ ಕರೆಯಿಸಿಕೊಂಡಿರುವ ಅಮೆರಿಕದಲ್ಲೂ ಲಸಿಕೆ ಅಭಿಯಾನ ನಡೆಯುತ್ತಲೇ ಇದೆ. ಹೀಗಿರುವಾಗ ಭಾರತದಲ್ಲಿ 130ಕ್ಕೂ ಅಧಿಕ ಜನಸಂಖ್ಯೆಗೆ ಲಸಿಕೆ ಪೂರೈಕೆ ಬೆಟ್ಟಕ್ಕಿಂತ ದೊಡ್ಡ ಸವಾಲು. ಆದರೆ ಲಸಿಕೆ ಉತ್ಪಾದನೆಯನ್ನೇ ಹೆಚ್ಚಿಸಲು ಕೇಂದ್ರ ಹಲವು ಕ್ರಮ ಕೈಗೊಂಡಿದೆ. ಇದೀಗ ರಷ್ಯಾದ ಸ್ಫುಟ್ನಿಕ್ ವಿ ಲಸಿಕೆ ಕೂಡ ಭಾರತದಲ್ಲೇ ಉತ್ಪಾದನ ಆರಂಭಿಸಿದೆ.
ಕೋವಿಶೀಲ್ಡ್, ಕೋವ್ಯಾಕ್ಸಿನ್, ಸ್ಪುಟ್ನಿಕ್: ಯಾವ ಲಸಿಕೆ ಉತ್ತಮ?
ರಷ್ಯಾದ ಪ್ರಮುಖ ಲಸಿಕೆ ಮತ್ತು ಔಷಧೀಯ ಸಂಸ್ಥೆಗಳಲ್ಲಿ ಒಂದಾದ ಸಾರ್ವಭೌಮ ಸಂಪತ್ತು ನಿಧಿಯೊಂದಿಗೆ ಭಾರತ ಕೈಜೋಡಿಸಿದೆ. ದೆಹಲಿಯ ಪ್ಯಾನೇಸಿಯಾ ಬಯೋಟೆಕ್ ಸಹಯೋಗದೊಂದಿದೆ ಸ್ಫುಟ್ನಿಕ್ ವಿ ಲಸಿಕೆ ಉತ್ಪಾದನೆ ಆರಂಭಿಸಿದೆ. ರಷ್ಯಾದ ಸ್ಫುಟ್ನಿಕ್ ಲಸಿಕೆ ವಿಶ್ವದ ಮೊದಲ ಕೊರೋನಾ ವೈರಸ್ ಲಸಿಕೆ ಎಂದು RDIF ಹೇಳಿದೆ.
ನವದೆಹಲಿಯಲ್ಲಿ ಪ್ಯಾನೇಸಿಯಾ ಬಯೋಟೆಕ್ ಘಟಕದಲ್ಲಿ ಸ್ಫುಟ್ನಿಕ್ ಲಸಿಕೆ ಉತ್ಪಾದನೆ ಇಂದಿನಿಂದ(ಮೇ.24) ಆರಂಭಗೊಂಡಿದೆ. ಮೊದಲ ಹಂತದ ಲಸಿಕೆಯನ್ನು ರಷ್ಯಾದ ಮಾಸ್ಕೋಗೆ ಕಳುಹಿಸಲಾಗುತ್ತಿದೆ. ಈ ಲಸಿಕೆ ಗುಣಮಟ್ಟ ಪರಿಶೀಲನೆ ನಡೆಯಲಿದೆ. ಸ್ಫುಟ್ನಿಕ್ ಮೂಲಕ ಲಸಿಕೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆಗಳ ಮಾನದಂಡಗಳ ಕುರಿತು ಪರಿಶೀಲನೆ ನಡೆಯಲಿದೆ. ಈ ಲಸಿಕೆಗೆ ಅನುಮೋದನೆ ಸಿಕ್ಕ ಬಳಿಕ ಮಂದಿನ ಹಂತಗಳ ಉತ್ಪಾದನೆ ಮುಂದುವರಿಯಲಿದೆ.
ಸ್ಫುಟ್ನಿಕ್ ಲಸಿಕೆ ಪ್ರವಾಸ, ರಷ್ಯಾಗೆ ಹೋಗಿ ವ್ಯಾಕ್ಸಿನ್ ಹಾಕಿಸಿಕೊಂಡು ಬನ್ನಿ!.
ಪ್ರತಿ ವರ್ಷ ಭಾರತದಲ್ಲಿ 100 ಮಿಲಿಯನ್ ಡೋಸ್ ಉತ್ಪಾದನೆಯಾಗಲಿದೆ. ಭಾರತದಲ್ಲಿ ಕೊರೋನಾ ಅಟ್ಟಹಾಸ ಹೆಚ್ಚಾದಾಗ ರಷ್ಯಾದ ಸ್ಫುಟ್ನಿಕ್ ವಿ ಲಸಿಕೆ ತುರ್ತು ಬಳೆಕೆಗೆ ಅನುಮತಿ ನೀಡಲಾಗಿದೆ. ಎಪ್ರಿಲ್ 12 ರಂದು ಸ್ಫುಟ್ನಿಕ್ ಲಸಿಕೆ ಬಳಕೆಗೆ ಅನುಮತಿ ನೀಡಲಾಗಿದೆ. ಮೇ. 14 ರಿಂದ ಸ್ಫುಟ್ನಿಕ್ ಲಸಿಕೆ ಭಾರತದಲ್ಲಿ ಕೆಲ ಭಾಗಗಳಲ್ಲಿ ಲಭ್ಯವಿದೆ. ವಿಶ್ವದ 66 ದೇಶಗಳಲ್ಲಿ ಸ್ಪುಟ್ನಿಕ್ ವಿ ಲಸಿಕೆ ನೋಂದಾಯಿಸಲಾಗಿದೆ. ಈ ಲಸಿಕೆ ದಕ್ಷತೆ 97.6% ಎಂದು ಹೇಳಲಾಗಿದೆ.