ಕಮ್ಮಿ ಸಂಬಳಕ್ಕೆ ಮನೆಗೆಲಸಕ್ಕೆ ಸೇರ್ತಾರೆ! ಅವರು​​​ ಸ್ಕೆಚ್​​​ ಹಾಕಿದ್ರೆ ಮಿಸ್​​ ಆಗೋ ಮಾತೆ ಇಲ್ಲ!

ದೂರದ ನೇಪಾಳದಿಂದ ಬರುವ ಈ ಗ್ಯಾಂಗ್​​​ ಕಡಿಮೆ ಸಂಬಳಕ್ಕೆ ಶ್ರೀಮಂತರ ಮನೆಗಳನ್ನ ಸೇರಿಕೊಳ್ಳುತ್ತೆ. ಎರಡ್ಮೂರು ವರ್ಷ ನಿಯತ್ತಿನಿಂದ ಕೆಲಸ ಮಾಡಿ ನಂಬಿಕೆ ಗಿಟ್ಟಿಸಿಕೊಳ್ತಾರೆ. ನಂತರ ಒಳ್ಳೆ ಸಮಯಕ್ಕೆ ಕಾದು ಕುಳಿತುಕೊಳ್ತಾರೆ. ಯಾವಾಗ ಸೇಫ್​ ಅನ್ನಿಸುತ್ತೋ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಬೆಲೆಬಾಳುವ ಚಿನ್ನಾಭರಣಗಳನ್ನ ಕದ್ದು ಎಸ್ಕೇಪ್​ ಆಗ್ತಾರೆ.

First Published Nov 15, 2024, 4:38 PM IST | Last Updated Nov 15, 2024, 4:38 PM IST

ಆತ ಬೆಂಗಳೂರಿನ ಪ್ರತಿಷ್ಠಿತ ಸಿನಿಮಾ ಥಿಯೇಟರ್​ನ ಮಾಲೀಕ. ನೂರಾರು ಕೋಟಿ ಒಡೆಯ. ಭವ್ಯ ಬಂಗಲೆಯಲ್ಲಿ ಐಶಾರಾಮಿ ಜೀವನ. ಇನ್ನೇನು ಬೇಕು. ಆವತ್ತು ಮನೆಯಲ್ಲಿ ಅವರು ಒಬ್ಬರೇ ಇದ್ದರು. ಹೆಂಡತಿ ಮಕ್ಕಳೆಲ್ಲಾ ಹೊರಗಡೆ ಹೋಗಿದ್ರು. ಒಬ್ಬನೇ ಏನ್​ ಮಾಡೋದು ಅಂತ ಎರಡು ಪೆಗ್​​ ಹಾಕಿ ಮಲಗಿದ್ದಾರೆ ಅಷ್ಟೇ. ಬೆಳಗಾಗುವಷ್ಟರಲ್ಲಿ ಮನೆಯಲ್ಲಾ ಖಾಲಿ ಖಾಲಿ. ಖಜಾನೆಯಲ್ಲಿದ್ದ ಕೆಜಿಗಟ್ಟಲೆ ಚಿನ್ನ ಮಂಗಮಾಯ.

ಐಪಿಎಲ್ ಮೆಗಾ ಹರಾಜಿನಲ್ಲಿದ್ದಾರೆ ಟಾಪ್ 5 ಮ್ಯಾಚ್ ಫಿನಿಶರ್ಸ್‌! ಇಬ್ಬರ ಮೇಲೆ ಕಣ್ಣಿಟ್ಟ ಆರ್‌ಸಿಬಿ

ಇನ್ನೂ ಕದ್ದವರು ಯಾರು ಅನ್ನೋದನ್ನ ಪತ್ತೆ ಮಾಡಲು ಅವರಿಗೆ ಹೆಚ್ಚು ಸಮಯ ಬೇಕಾಗಿರಲಿಲ್ಲ. ಕಾರಣ ಅದೇ ಮನೆಯಲ್ಲಿ ಕೆಲಸ ಮಾಡ್ತಿದ್ದ ಅದೊಂದು ಗ್ಯಾಂಗೇ ತಂದ ಮನೆಗೆ ಕನ್ನ ಹಾಕಿತ್ತು. ಇನ್ನೂ ಆ ಗ್ಯಾಂಗ್​​ ಇದ್ಯಲ್ಲ. ಇಡೀ ಬೆಂಗಳೂರನ್ನೇ ಥಂಡಾ ಹೊಡೆಸಿದೆ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲೇ ಮನೆಯನ್ನ ಗುಡಿಸಿ ಗುಂಡಾಂತರ ಮಾಡಿಬಿಡುತ್ತೆ. ಅಷ್ಟಕ್ಕೂ ಯಾವುದು ಆ ಗ್ಯಾಂಗ್? ಆ ಗ್ಯಾಂಗ್​​ನ ನೆಟ್​ವರ್ಕ್​ ಹೇಗೆ ವರ್ಕ್​ ಮಾಡುತ್ತೆ ಅನ್ನೋದನ್ನ ತಿಳಿದುಕೊಳ್ಳೋಣ ಬನ್ನಿ