ಏರ್‌ಪೋರ್ಟ್‌ ಟಾಯ್ಲೆಟ್‌ ಅನ್ನೂ ಮೋದಿಗೆ ರಿಸರ್ವ್‌ ಮಾಡ್ತೀರಾ?: ಲಾಂಜ್‌ಗೆ ಬಿಡದ್ದಕ್ಕೆ ಖರ್ಗೆ ಕಿಡಿ

‘ನನಗೆ ವಿಮಾನ ನಿಲ್ದಾಣದ ಲಾಂಜ್‌ ಪ್ರವೇಶಿಸಲು ಅಧಿಕಾರಿಗಳು ಬಿಟ್ಟಿಲ್ಲ. ಅದು ಪ್ರಧಾನಿಗಳಿಗೆ ಮೀಸಲಾಗಿದೆ ಎಂಬ ಉತ್ತರ ಕೊಟ್ಟಿದ್ದಾರೆ. ಪ್ರಧಾನಿಗಾಗಿ ವಿಮಾನ ನಿಲ್ದಾಣದ ಟಾಯ್ಲೆಟ್‌ ಅನ್ನೂ ರಿಸರ್ವ್‌ ಮಾಡುತ್ತೀರಾ?’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Can toilet be reserved for PM modi? Congress chief sparks over airport lounge entry rav

ಜಾರ್ಖಂಡ (ನ.17): ರಾಂಚಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಬರುತ್ತಿದ್ದಾರೆ ಎಂಬ ಕಾರಣಕ್ಕೆ ತಮ್ಮ ಹೆಲಿಕಾಪ್ಟರ್‌ ಅನ್ನು ಶನಿವಾರ 20 ನಿಮಿಷ ಕಾಯಿಸಲಾಯಿತು ಎಂದು ಕಿಡಿಕಾರಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ನನಗೆ ವಿಮಾನ ನಿಲ್ದಾಣದ ಲಾಂಜ್‌ ಪ್ರವೇಶಿಸಲು ಅಧಿಕಾರಿಗಳು ಬಿಟ್ಟಿಲ್ಲ. ಅದು ಪ್ರಧಾನಿಗಳಿಗೆ ಮೀಸಲಾಗಿದೆ ಎಂಬ ಉತ್ತರ ಕೊಟ್ಟಿದ್ದಾರೆ. ಪ್ರಧಾನಿಗಾಗಿ ವಿಮಾನ ನಿಲ್ದಾಣದ ಟಾಯ್ಲೆಟ್‌ ಅನ್ನೂ ರಿಸರ್ವ್‌ ಮಾಡುತ್ತೀರಾ?’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಜಾರ್ಖಂಡಲ್ಲಿ ಮಾತನಾಡಿದ ಅವರು, ಜಾರ್ಖಂಡ್‌ನಲ್ಲಿ ಪ್ರಧಾನಿ ವಿಮಾನ ಹಾರಾಟ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಹೆಲಿಕಾಪ್ಟರ್‌ ಅನ್ನು ಶುಕ್ರವಾರ 2 ಗಂಟೆ ಕಾಯಿಸಲಾಗಿದೆ. ಶನಿವಾರ ನನ್ನ ಹೆಲಿಕಾಪ್ಟರ್‌ ಅನ್ನು ಅಮಿತ್‌ ಶಾ ಕಾರಣ ನೀಡಿ 20 ನಿಮಿಷ ಕಾಯುವಂತೆ ಮಾಡಲಾಗಿದೆ. ರಾಹುಲ್‌ ಹಾಗೂ ನಾನು ಸಂಪುಟ ದರ್ಜೆ ಸ್ಥಾನ ಹೊಂದಿದ್ದೇವೆ. ಆದರೂ ಏರ್‌ಪೋರ್ಟ್‌ ಲಾಂಜ್‌ ಪ್ರವೇಶಿಸಲು ಬಿಡುತ್ತಿಲ್ಲ ಎಂದಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ರಂತೆ ಮೋದಿಗೂ ನೆನಪಿನ ಶಕ್ತಿ ಕಡಿಮೆಯಾಗಿದೆ : ರಾಹುಲ್‌ ವ್ಯಂಗ್ಯ

ನೀತಿ ಸಂಹಿತೆ ಉಲ್ಲಂಘನೆ: ಖರ್ಗೆ, ನಡ್ಡಾಗೆ ನೋಟಿಸ್‌

ನವದೆಹಲಿ: ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ ಪರಸ್ಪರ ಎರಡೂ ಪಕ್ಷಗಳ ನಾಯಕರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರುಗಳು ಸಲ್ಲಿಕೆ ಆಗಿದ್ದ ಹಿನ್ನೆಲೆಯಲ್ಲಿ ಶನಿವಾರ, ಚುನಾವಣಾ ಆಯೋಗವು ಈ ಆರೋಪಗಳ ಬಗ್ಗೆ ಎರಡೂ ಪಕ್ಷಗಳ ಅಧ್ಯಕ್ಷರಿಂದ ಪ್ರತಿಕ್ರಿಯೆ ಕೇಳಿದೆ.

ಲೂಟಿ ಆಗಿದ್ದ ₹83 ಕೋಟಿ ಮೌಲ್ಯದ 1400 ಪ್ರಾಚ್ಯ ವಸ್ತು ಅಮೆರಿಕದಿಂದ ಮರಳಿ ಭಾರತಕ್ಕೆ

ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿರುವ ಆಯೋಗ ನ.18 ರಂದು ಮಧ್ಯಾಹ್ನ 1 ಗಂಟೆಯೊಳಗೆ ಉತ್ತರ ನೀಡಬೇಕೆಂದು ಸೂಚಿಸಿದೆ.ಮಹಾರಾಷ್ಟ್ರ ಹಾಗೂ ಜಾರ್ಖಂಡ್ ಚುನಾವಣೆ ಪ್ರಚಾರದ ವೇಳೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಾಡಿದ ಭಾಷಣಗಳಿಂದ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಎರಡೂ ಪಕ್ಷದವರೂ ಚುನಾವಣಾ ಆಯೋಗಕ್ಕೆ ದೂರು ನೀಡದ್ದರು.

Latest Videos
Follow Us:
Download App:
  • android
  • ios