ಅಮೆರಿಕ ಅಧ್ಯಕ್ಷ ಜೋ ಬೈಡನ್‌ರಂತೆ ಮೋದಿಗೂ ನೆನಪಿನ ಶಕ್ತಿ ಕಡಿಮೆಯಾಗಿದೆ : ರಾಹುಲ್ ವ್ಯಂಗ್ಯ
‘ಅಮೆರಿಕ ಅಧ್ಯಕ್ಷ ಜೋ ಬೈಡನ್‌ರಂತೆ ಮೋದಿ ಅವರಿಗೂ ನೆನಪಿನ ಶಕ್ತಿ ಕಡಿಮೆಯಾಗಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
ಅಮರಾವತಿ (ಮಹಾರಾಷ್ಟ್ರ): ‘ಅಮೆರಿಕ ಅಧ್ಯಕ್ಷ ಜೋ ಬೈಡನ್‌ರಂತೆ ಮೋದಿ ಅವರಿಗೂ ನೆನಪಿನ ಶಕ್ತಿ ಕಡಿಮೆಯಾಗಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
ಶನಿವಾರ ಮಹಾರಾಷ್ಟ್ರದ ಅಮರಾವತಿಯಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ರಾಹುಲ್, ‘ಇತ್ತೀಚೆಗೆ ಮೋದಿ ಅವರ ಭಾಷಣಗಳನ್ನು ಗಮನಿಸಿ ನನ್ನ ಸೋದರಿ ಪ್ರಿಯಾಂಕಾ ಕೆಲವು ವಿಷಯಗಳನ್ನು ನನ್ನ ಗಮನಕ್ಕೆ ತಂದಿದ್ದಾರೆ. ನಾನು ಸಂಸತ್ತಿನಲ್ಲಿ ಮಾತನಾಡುವಾಗ ಶೇ.50ರ ಮೀಸಲು ಮಿತಿ ತೆಗೆದು ಹಾಕಿ ಮೀಸಲು ಹೆಚ್ಚಿಸಿ ಹಾಗೂ ಜಾತಿ ಗಣತಿ ನಡೆಸಿ ಎಂದಿದ್ದೆ. ಆದರೆ ಮೋದಿ ಪ್ರಚಾರದ ವೇಳೆ ನಾನು ಮೀಸಲಿಗೆ ವಿರುದ್ಧವಾಗಿದ್ದೇನೆ ಎಂದು ಹೇಳುತ್ತಿದ್ದಾರೆ. ಇದರೊಂದಿಗೆ ಅಮೆರಿಕದ ನಿರ್ಗಮಿತ ಅಧ್ಯಕ್ಷ (ಜೋ ಬೈಡೆನ್) ರೀತಿ ಮೋದಿ ಕೂಡ ನೆನಪಿನ ಶಕ್ತಿ ಕಳೆದುಕೊಂಡಂತಿದೆ’ ಎಂದು ವ್ಯಂಗ್ಯವಾಡಿದರು.
ಇತ್ತೀಚೆಗೆ ಅಮೆರಿಕ ಚುನಾವಣೆ ವೇಳೆ ಬೈಡೆನ್ ಅವರು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ ಅವರನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎಂದು ಕರೆದಿದ್ದರು. ಇದೇ ರೀತಿಯ ಅನೇಕ ಎಡವಟ್ಟು ಹೇಳಿಕೆ ನೀಡಿ ನೆನಪಿನ ಶಕ್ತಿ ಕುಂದಿದೆ ಎಂಬ ಟೀಕೆಗೆ ಒಳಗಾಗಿದ್ದರು.
ಲೂಟಿ ಆಗಿದ್ದ ₹83 ಕೋಟಿ ಮೌಲ್ಯದ 1400 ಪ್ರಾಚ್ಯ ವಸ್ತು ಅಮೆರಿಕದಿಂದ ಮರಳಿ ಭಾರತಕ್ಕೆ
ಬಿಜೆಪಿ ಪಾಲಿಗೆ ಖಾಲಿ ಪುಸ್ತಕ:
ಈ ನಡುವೆ, ರಾಹುಲ್ ಅವರು, ‘ಸಂವಿಧಾನವೇ ದೇಶದ ಡಿಎನ್ಎ, ಆದರೆ ಬಿಜೆಪಿ, ಆರೆಸ್ಸೆಸ್ ಪಾಲಿಗೆ ಅದು ಬರೀ ಖಾಲಿ ಪುಸ್ತಕ’ ಎಂದು ಕಿಡಿಕಾರಿದರು
‘ಮಹಾರಾಷ್ಟ್ರದಲ್ಲಿ ಶಾಸಕರನ್ನು ಖರೀದಿಸಿ ಸರ್ಕಾರಗಳನ್ನು ಬೀಳಿಸಬಹುದು ಮತ್ತು ಉದ್ಯಮಿಗಳ 16 ಲಕ್ಷ ಕೋಟಿ ರು. ಸಾಲವನ್ನು ಮನ್ನಾ ಮಾಡಬಹುದು ಎಂದು ಸಂವಿಧಾನದಲ್ಲಿ ಎಲ್ಲೂ ಉಲ್ಲೇಖಿಸಿಲ್ಲ’ ಎಂದು ಟಾಂಗ್ ನೀಡಿದರು.
ವೋಟ್‌ಬ್ಯಾಂಕ್‌ನಿಂದ ನಮ್ಮ ಸರ್ಕಾರ ಬಲು ದೂರ: ಪ್ರದಾನಿ ಮೋದಿ
ಚುನಾವಣಾಧಿಕಾರಿಗಳಿಂದ ರಾಹುಲ್ ಕಾಪ್ಟರ್, ಚೀಲ ತಪಾಸಣೆ
ಅಮರಾವತಿ (ಮಹಾರಾಷ್ಟ್ರ): ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಹಾರಾಷ್ಟ್ರದ ಅಮರಾವತಿಗೆ ಚುನಾವಣಾ ಪ್ರಚಾರಕ್ಕೆ ಬಂದಿದ್ದ ವೇಳೆ ಚುನಾವಣಾ ಆಯೋಗದ ಅಧಿಕಾರಿಗಳು ಅವರ ಹೆಲಿಕಾಪ್ಟರ್ ಹಾಗೂ ಚೀಲ ಪರಿಶೀಲಿಸಿದರು.ಈ ಕುರಿತಾದ ವಿಡಿಯೋ ಬಿಡುಗಡೆಯಾಗಿದ್ದು, ಅದರಲ್ಲಿ ಅಧಿಕಾರಿಗಳು ರಾಹುಲ್ ಗಾಂಧಿಯವರು ಆಗಮಿಸಿದ್ದ ಹೆಲಿಕಾಪ್ಟರ್‌ನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ ಅವರ ಬ್ಯಾಗ್ ಅನ್ನು ಕೂಡ ಪರಿಶೀಲಿಸಿದ್ದಾರೆ.
ಕಳೆದ ವಾರ ಅಧಿಕಾರಿಗಳು ಉದ್ಧವ ಠಾಕ್ರೆ, ಅಮಿತ್ ಶಾ, ಏಕನಾಥ ಶಿಂಧೆ ಹಾಗೂ ನಿತಿನ್ ಗಡ್ಕರಿ ಅವರ ಹೆಲಿಕಾಪ್ಟರ್ ಹಾಗೂ ಚೀಲಗಳನ್ನು ಪರಿಶೀಲಿಸಿದ್ದರು.