ಮೃತ ಸೋಂಕಿತರ ಅಂತ್ಯಸಂಸ್ಕಾರ: ಮೂರು ಲೋಡ್ ಕಟ್ಟಿಗೆ ಕಳಿಸಿದ ಸೋನಿಯಾ ಗಾಂಧಿ
- ರಾಯ್‌ಬರೇಲಿಗೆ 3 ಟ್ರಕ್ ಕಟ್ಟಿಗೆ ಕಳಿಸಿದ ಸೋನಿಯಾ ಗಾಂಧಿ
- ಕೊರೋನಾ ವಿರುದ್ಧ ಹೋರಾಟದಲ್ಲಿ ಬಡವರ ನೆರವಿಗೆ ನಿಂತ ಕಾಂಗ್ರೆಸ್ ಅಧ್ಯಕ್ಷೆ
ಲಕ್ನೋ(ಮೇ.25): ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಮಧ್ಯೆ ರಾಜ್ಯದ ಆರೋಗ್ಯ ಮೂಲಸೌಕರ್ಯಗಳನ್ನು ಸುಧಾರಿಸಲು ಉತ್ತರ ಪ್ರದೇಶದ ಸಚಿವರು ಮತ್ತು ಶಾಸಕರು ಸರ್ಕಾರಿ ಆರೋಗ್ಯ ಕೇಂದ್ರಗಳನ್ನು ದತ್ತು ತೆಗೆದುಕೊಳ್ಳುತ್ತಿದ್ದರೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬಡವರಿಗೆ ಮೃತದೇಹ ಸಂಸ್ಕಾರಕ್ಕೆ ಸಹಾಯ ಮಾಡಲು ಮೂರು ಟ್ರಕ್ ಲೋಡ್ ಕಟ್ಟಿಗೆ ಕಳುಹಿಸಿದ್ದಾರೆ. ಅವರ ಲೋಕಸಭಾ ಕ್ಷೇತ್ರವಾದ ರಾಯ್ ಬರೇಲಿಯಲ್ಲಿ ಜನರಿಗೆ ನೆರವಾಗಿದ್ದಾರೆ ಸೋನಿಯಾ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮನವಿಗೆ ಹಲವಾರು ಯುಪಿ ಸಚಿವರು ಪ್ರತಿಕ್ರಿಯಿಸಿದ್ದಾರೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕರು ಸರ್ಕಾರ ನಡೆಸುವ ಪ್ರಾಥಮಿಕ ಅಥವಾ ಸಮುದಾಯ ಆರೋಗ್ಯ ಕೇಂದ್ರಗಳನ್ನು (ಪಿಎಚ್‌ಸಿ ಅಥವಾ ಸಿಎಚ್‌ಸಿ) ದತ್ತುಪಡೆಯುವಂತೆ ಸಿಎಂ ಕೇಳಿಕೊಂಡಿದ್ದರೆ.
ಡೌಟ್ ಪಟ್ಟೋರೆಲ್ಲಾ ವ್ಯಾಕ್ಸೀನ್‌ಗಾಗಿ ಓಡ್ತಿದ್ದಾರೆ: ಯೋಗಿ
ಯುಪಿ ಸುಮಾರು 3,500 ಪಿಎಚ್‌ಸಿ ಮತ್ತು ಸುಮಾರು 850 ಸಿಎಚ್‌ಸಿಗಳನ್ನು ಹೊಂದಿದೆ, ಅವುಗಳಲ್ಲಿ ಹೆಚ್ಚಿನವು ಸಮರ್ಪಕ ಮಾನವಶಕ್ತಿ ಇಲ್ಲದೆ ಶಿಥಿಲಾವಸ್ಥೆಯಲ್ಲಿವೆ. 2015 ರಲ್ಲಿ ಮಾಹಿತಿ ಹಕ್ಕು (ಆರ್‌ಟಿಐ) ಪ್ರಶ್ನೆಯಲ್ಲಿ ರಾಜ್ಯಕ್ಕೆ ತನ್ನ ಜನಸಂಖ್ಯೆಗೆ ಹೋಲಿಸಿದರೆ ಬಹಳ ಕಡಿಮೆ ಆರೋಗ್ಯ ಕೇಂದ್ರಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಈ ಪರಿಸ್ಥಿತಿಯು ಹೆಚ್ಚು ಸುಧಾರಿಸಿಲ್ಲ ಎಂದು ಹೇಳಿದ್ದಾರೆ.
ಶಿಕ್ಷಣ ಸಚಿವ ಸತೀಶ್ ದ್ವಿವೇದಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಮೊಹ್ಸಿನ್ ಅವರು ಸಿದ್ಧಾರ್ಥ್ ನಗರ ಜಿಲ್ಲೆಯ ಇಟ್ವಾದಲ್ಲಿ ಆರೋಗ್ಯ ಕೇಂದ್ರಗಳನ್ನು ದತ್ತು ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ.
ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಮೂರು ಟ್ರಕ್ ಲೋಡ್ ಕಟ್ಟಿಗೆಯನ್ನು ಕಳುಹಿಸಿ ರಾಯ್ ಬರೇಲಿಯಲ್ಲಿ ಬಡವರಿಗೆ ಅಂತ್ಯಕ್ರಿಯೆ ಮಾಡಲು ಅನುವು ಮಾಡಿಕೊಟ್ಟಿದ್ದಾರೆ.
ಕೊರೋನಾದಿಂದ ತಂದೆ-ತಾಯಿ ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ
ಮೃತದೇಹ ಸಂಸ್ಕಾರಕ್ಕೆ ವ್ಯವಸ್ಥೆ ಮಾಡುವಂತೆ ಸೋನಿಯಾ ತಮ್ಮ ಪ್ರತಿನಿಧಿ ಕೆ.ಎಲ್.ಶರ್ಮಾ ಜಿ ಅವರಿಗೆ ನಿರ್ದೇಶನ ನೀಡಿದ್ದರು. ಈಗ ಪಕ್ಷದ ಕಾರ್ಯಕರ್ತರು ಬಡವರಿಗೆ ಅವರ ಹತ್ತಿರದ ಮತ್ತು ಆತ್ಮೀಯರನ್ನು ಅಂತ್ಯಸಂಸ್ಕಾರ ಮಾಡಲು ಸಹಾಯ ಮಾಡುತ್ತಾರೆ ಎಂದು ಪಕ್ಷದ ವಕ್ತಾರ ವಿನಯ್ ದ್ವಿವೇದಿ ಹೇಳಿದ್ದಾರೆ.
ರಾಯ್ ಬರೇಲಿಯಲ್ಲಿ ಶವಸಂಸ್ಕಾರವು ಗಂಗಾ ತೀರದಲ್ಲಿರುವ ಗೋಕ್ನಾ, ಡಾಲ್ಮೌ ಮತ್ತು ಗೆಗಾಸೊ ಘಾಟ್‌ಗಳಲ್ಲಿ ನಡೆಯುತ್ತದೆ. ಅನೇಕ ಬಡ ಜನರು ಅಂತ್ಯಸಂಸ್ಕಾರಕ್ಕೆ ಕಟ್ಟಿಗೆ ಖರೀದಿಸಲು ಹಣವಿಲ್ಲದೆ ಸತ್ತವರನ್ನು ನದಿ ಸಮೀ[ ಸಮಾಧಿ ಮಾಡುತ್ತಿದ್ದಾರೆ. ಈ ತಿಂಗಳ ಆರಂಭದಲ್ಲಿ ಯುಪಿ ಯ ಹಲವಾರು ಸ್ಥಳಗಳಲ್ಲಿ ಗಂಗಾದಲ್ಲಿ ಹಲವಾರು ಶಂಕಿತ ಕೋವಿಡ್ -19 ರೋಗಿಗಳ ಮೃತದೇಹ ತೇಲುತ್ತಿರುವುದು ಕಂಡುಬಂದಿತ್ತು.
ಹಳ್ಳಿಗಳಲ್ಲಿನ ಎಲ್ಲ ಬಡವರ ಅಂತ್ಯಕ್ರಿಯೆಗಾಗಿ ಯೋಗಿ ಸರ್ಕಾರ ₹ 5,000 ಘೋಷಿಸಿದರೆ, ರಾಜ್ಯದ ಕಾರ್ಮಿಕ ಕಲ್ಯಾಣ ಮಂಡಳಿಯು ಪ್ರತ್ಯೇಕವಾಗಿ7,500 ನೆರವು ಘೋಷಿಸಿದೆ.