ನವ​ದೆ​ಹ​ಲಿ(ಮೇ.26): ಕೇಂದ್ರ ಸರ್ಕಾರ ವಿದೇಶಿ ಲಸಿ​ಕೆ​ಗ​ಳಿಗೆ ಅನು​ಮತಿ ನೀಡುವ ಪ್ರಕ್ರಿ​ಯೆ​ಯನ್ನು ಸರ​ಳ​ಗೊ​ಳಿ​ಸಿರುವ ಹೊರ​ತಾ​ಗಿಯೂ ಅಮೆ​ರಿ​ಕದ ಮಾಡೆರ್ನಾ ಹಾಗೂ ಫೈಝರ್‌ ಲಸಿ​ಕೆ​ಗಳು ಸದ್ಯದ ಭವಿ​ಷ್ಯ​ದಲ್ಲಿ ಭಾರ​ತಕ್ಕೆ ಆಗ​ಮಿ​ಸು​ವ ಸಾಧ್ಯತೆ ಇಲ್ಲ. ಭಾರತ ತನ್ನ ಲಸಿಕೆಯನ್ನೇ ನಂಬಿಕೊಂಡಿದ್ದ ಕಾರಣ, ಆರಂಭದಲ್ಲಿ ವಿದೇಶಿ ಲಸಿಕೆಗಳಿಗೆ ಬೇಡಿಕೆ ಸಲ್ಲಿಸಿರಲಿಲ್ಲ. ಆದರೆ ಈ ಹಂತದಲ್ಲಿ ಬಹುತೇಕ ಶ್ರೀಮಂತ ದೇಶಗಳು ಅಮೆರಿಕ ಮೂಲದ ಮಾರ್ಡೆನಾ, ಫೈಝರ್‌ನ ನೂರಾರು ಕೋಟಿ ಡೋಸ್‌ ಲಸಿಕೆಗಳನ್ನು ಮುಂಗಡವಾಗಿ ಕಾದಿರಿಸಿವೆ. ಆ ದೇಶಗಳಿಗೆ ಪೂರೈಕೆ ಪೂರ್ಣಗೊಳ್ಳುವುದೇ 2023ರಲ್ಲಿ. ಹೀಗಾಗಿ ಅಲ್ಲಿಯವರೆಗೂ ಭಾರತಕ್ಕೆ ಲಸಿಕೆ ಸಿಗುವುದು ಅನುಮಾನ ಎಂದು ಮೂಲಗಳು ಹೇಳಿವೆ.

ಸ್ಫುಟ್ನಿಕ್ ಲಸಿಕೆ ಪ್ರವಾಸ, ರಷ್ಯಾಗೆ ಹೋಗಿ ವ್ಯಾಕ್ಸಿನ್ ಹಾಕಿಸಿಕೊಂಡು ಬನ್ನಿ!

ಈ ನಡುವೆ ಮಾರ್ಡೆನಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಸಿಂಗಲ್‌ ಡೋಸ್‌ ಲಸಿಕೆ ಮುಂದಿನ ವರ್ಷದ ವೇಳೆಗಷ್ಟೇ ಭಾರತಕ್ಕೆ ಲಭ್ಯವಾಗಬಹುದು ಎಂದು ಕಂಪನಿ ತಿಳಿಸಿವೆ. ಹೀಗಾಗಿ ಡಬಲ್‌ ಡೋಸ್‌ ಮತ್ತು ಸಿಂಗಲ್‌ ಡೋಸ್‌ ತಕ್ಷಣಕ್ಕೆ ಸಿಗುವ ಯಾವುದೇ ಸಾಧ್ಯತೆ ದೂರವಾಗಿದೆ.

ವಿಮಾನ ಬಾಡಿಗೆ ಪಡೆದು ಆಗಸದಲ್ಲಿ ಮದುವೆ; ಬೆಂಗಳೂರಲ್ಲಿ ಲ್ಯಾಂಡ್ ಆದಾಗ ಶಾಕ್!

ಮತ್ತೊಂದೆಡೆ ಫೈಝರ್‌ ಭಾರತಕ್ಕೆ ಲಸಿಕೆ ನೀಡಲು ಸಣ್ಣ ಪ್ರಮಾಣದಲ್ಲಿ ಆಸಕ್ತಿ ತೋರಿದೆಯಾದರೂ, ತನಗೆ ಹಲವು ರಿಯಾಯಿತಿ ನೀಡಬೇಕು ಎಂದು ಭಾರತ ಸರ್ಕಾರಕ್ಕೆ ಷರತ್ತು ಒಡ್ಡಿದೆ. ಒಂದು ವೇಳೆ ಈ ಷರತ್ತುಗಳನ್ನು ಸರ್ಕಾರ ಪೂರೈಸಿದಲ್ಲಿ ಇದೇ ವರ್ಷಾಂತ್ಯಕ್ಕೆ 5 ಕೋಟಿ ಡೋಸ್‌ ನೀಡಲು ಸಿದ್ಧ ಎಂಬ ಭರವಸೆ ನೀಡಿದೆ ಎನ್ನಲಾಗಿದೆ. ಆದರೆ ವಿದೇಶಗಳಲ್ಲಿ ಭಾರೀ ಟೀಕೆಗೆ ಗುರಿಯಾಗಿರುವ ಇಂಥ ಷರತ್ತುಗಳನ್ನು ಕೇಂದ್ರ ಸರ್ಕಾರ ಒಪ್ಪಲಿದೆಯೇ ಎಂಬುದು ಕುತೂಹಲದ ವಿಷಯ. ಹೀಗಾಗಿ ತುರ್ತು ಬಳಕೆಗೆ ವಿದೇಶಿ ಲಸಿಕೆಗಳಿಗೆ ಮೊರೆ ಹೋಗಿದ್ದ ರಾಜ್ಯ ಸರ್ಕಾರಗಳು ಇದೀಗ ಬೇರೆ ಬೇರೆ ಕಂಪನಿಗಳಿಗೆ ಮೊರೆ ಹೋಗುವುದು ಅನಿವಾರ್ಯ. ಇಲ್ಲವೇ ದೇಶೀ ಲಸಿಕೆಗಳು ಲಭ್ಯವಾಗುವವರೆಗೂ ಕಾಯುವುದು ಅನಿವಾರ್ಯ ಎಂದು ಮೂಲಗಳು ತಿಳಿಸಿವೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona