11:13 PM (IST) Aug 09

India News Live 9th August: 'ಎಂ ಫಾರ್ ಮಸೀದಿ, ಎನ್‌ ಫಾರ್ ನಮಾಜ್..' ಮಧ್ಯಪ್ರದೇಶದ ಖಾಸಗಿ ಶಾಲೆಯ ಕಲಿಕಾ ಸಾಮಗ್ರಿಯಲ್ಲಿ ಇಸ್ಲಾಮಿಕ್ ಪದಗಳು ಭಾರೀ ವಿವಾದ!

ರೈಸನ್‌ನ ಖಾಸಗಿ ಶಾಲೆಯೊಂದು ನರ್ಸರಿ ಮಕ್ಕಳಿಗೆ 'ಕೆ ಫಾರ್ ಕಾಬಾ', 'ಎಂ ಫಾರ್ ಮಸೀದಿ' ಇತ್ಯಾದಿ ಉರ್ದು ಪದಗಳನ್ನು ಕಲಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಪೋಷಕರು ಮತ್ತು ABVP ಪ್ರತಿಭಟಿಸಿದ್ದು, ಶಾಲೆ ತಪ್ಪೊಪ್ಪಿಕೊಂಡಿದೆ. 

Read Full Story
09:56 PM (IST) Aug 09

India News Live 9th August: ಚುನಾವಣಾ ಆಯೋಗದ ಮೇಲೆ ನಂಬಿಕೆ ಇಲ್ಲದಿದ್ರೆ ರಾಜೀನಾಮೆ ನೀಡಿ, ರಾಹುಲ್ ಗಾಂಧಿ ಮತಗಳ್ಳತನ ಆರೋಪಕ್ಕೆ ಬಿಜೆಪಿ ತಿರುಗೇಟು!

ರಾಹುಲ್ ಗಾಂಧಿಯವರ 'ಮತ ಕಳ್ಳತನ' ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಚುನಾವಣಾ ಆಯೋಗದ ಮೇಲೆ ನಂಬಿಕೆ ಇಲ್ಲದಿದ್ದರೆ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ರಾಜೀನಾಮೆ ನೀಡಬೇಕೆಂದು ಬಿಜೆಪಿ ಒತ್ತಾಯಿಸಿದೆ. 

Read Full Story
08:17 PM (IST) Aug 09

India News Live 9th August: 'ವಿದೇಶಿ ಕಂಪನಿಗಳು ಭಾರತ ತೊರೆಯಿರಿ..' ಟ್ರಂಪ್ ಸುಂಕದ ವಿರುದ್ಧ ಸಿಡಿದೆದ್ದ ಸ್ವದೇಶಿ ಜಾಗರಣ್ ಮಂಚ್ , ಅಮೆರಿಕನ್ ಕಂಪನಿಗಳ ಬಹಿಷ್ಕರಿಸುವಂತೆ ಕರೆ!

ಅಮೆರಿಕದ ಸುಂಕ ಹೆಚ್ಚಳದ ವಿರುದ್ಧ ಆರ್‌ಎಸ್‌ಎಸ್ ಬೆಂಬಲಿತ ಸ್ವದೇಶಿ ಜಾಗರಣ್ ಮಂಚ್ ದೇಶಾದ್ಯಂತ ಬೃಹತ್ ಅಭಿಯಾನ ಆರಂಭಿಸಿದೆ. ಆಗಸ್ಟ್ 9 ರಿಂದ 'ಸ್ವದೇಶಿ ಸುರಕ್ಷಾ ಸ್ವಲಂಬನ್' ಹೆಸರಿನಲ್ಲಿ ಈ ಅಭಿಯಾನ ನಡೆಯಲಿದ್ದು, ವಿದೇಶಿ ಕಂಪನಿಗಳ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ನೀಡಲಾಗಿದೆ.
Read Full Story
07:02 PM (IST) Aug 09

India News Live 9th August: 'ದೂರು ಬರುವವರೆಗೆ ಕಾಯಬೇಡಿ, ತನಿಖೆ ಮಾಡಿ..' ರಾಹುಲ್ ಗಾಂಧಿ 'ಮತಗಳ್ಳತನ' ಆರೋಪಕ್ಕೆ ಮಾಜಿ ಮುಖ್ಯ ಚುನಾವಣಾ ಆಯುಕ್ತ ಬೆಂಬಲ!

ರಾಹುಲ್ ಗಾಂಧಿಯವರ ನಕಲಿ ಮತದಾರರ ಆರೋಪಕ್ಕೆ ಮಾಜಿ ಚುನಾವಣಾ ಆಯುಕ್ತ ಒಪಿ ರಾವತ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಹದೇವಪುರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ನಕಲಿ ಮತದಾರರಿದ್ದಾರೆ ಎಂಬ ಆರೋಪದ ತನಿಖೆಗೆ ಒತ್ತಾಯಿಸಿದ್ದಾರೆ. 

Read Full Story
06:43 PM (IST) Aug 09

India News Live 9th August: ಹೆಚ್ಚಿನ ಆದಾಯ ನೀಡುವ ಟಾಪ್ 16 ಸುರಕ್ಷಿತ ಹೂಡಿಕೆಗಳು - ಬಡ್ಡಿ ಸಹಿತ ಫುಲ್​ ಡಿಟೇಲ್ಸ್​ ಇಲ್ಲಿದೆ...

ಭಾರತದಲ್ಲಿ ಹೆಚ್ಚಿನ ಆದಾಯ ನೀಡುವ ಸುರಕ್ಷಿತ ಹೂಡಿಕೆಗಳು ಯಾವುದು ಎಂದು ಹುಡುಕುತ್ತಾ ಇದ್ದೀರಾ? ಹಾಗಿದ್ದರೆ ಇಲ್ಲಿ ನಿಮಗಾಗಿ 16 ಸುರಕ್ಷಿತ ಹೂಡಿಕೆಗಳ ಪಟ್ಟಿ ನೀಡಲಾಗಿದೆ. ಇದರ ಫುಲ್​ ಡಿಟೇಲ್ಸ್​ ಇಲ್ಲಿದೆ...

Read Full Story
06:30 PM (IST) Aug 09

India News Live 9th August: ಸುಂಕ ಹೆಚ್ಚಳದಿಂದ ಭಾರತ ಚೀನಾ ರಷ್ಯಾ ಒಗ್ಗಟ್ಟು, ಅಮೆರಿಕಕ್ಕೆ ಕೆಟ್ಟ ಪರಿಣಾಮ, ಟ್ರಂಪ್ ವಿರುದ್ಧ ಯುಎಸ್‌ ಮಾಜಿ ಭದ್ರತಾ ಅಧಿಕಾರಿ ಗರಂ!

ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್, ಭಾರತದ ಮೇಲಿನ ಟ್ರಂಪ್‌ರ ಸುಂಕ ನೀತಿಯನ್ನು ಟೀಕಿಸಿದ್ದಾರೆ. ಈ ನೀತಿಯು ಭಾರತವನ್ನು ರಷ್ಯಾ ಮತ್ತು ಚೀನಾಕ್ಕೆ ಹತ್ತಿರ ತರುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ.
Read Full Story
06:09 PM (IST) Aug 09

India News Live 9th August: ಓಡಿ ಹೋಗಿ ಮದುವೆಯಾದ ಅಕ್ಕ-ತಂಗಿ! ಸಹೋದರಿಯರೀಗ ಗಂಡ-ಹೆಂಡತಿ.. ಆಗಿದ್ದೇನು ನೋಡಿ...

ಓಡಿ ಹೋಗುವಾಗ ಸಹೋದರಿಯರಾಗಿದ್ದವರು ವಾಪಸ್​ ಬಂದಾಗ ಪತಿ-ಪತ್ನಿಯಾಗಿರುವ ವಿಚಿತ್ರ ಘಟನೆ ನಡೆದಿದೆ. ಅಸಲಿಗೆ ಆಗಿದ್ದೇನು? ಏನಿದು ಅಕ್ಕ-ತಂಗಿ ಸ್ಟೋರಿ? 

Read Full Story
01:13 PM (IST) Aug 09

India News Live 9th August: ಆಪರೇಷನ್‌ ಸಿಂದೂರ್‌ ವೇಳೆ 5 ಪಾಕಿಸ್ತಾನಿ ಜೆಟ್‌, 1 ಎಫ್‌ 16 ಧ್ವಂಸ - ಏರ್‌ ಫೋರ್ಸ್‌ ಚೀಫ್‌ ಅಧಿಕೃತ ಮಾಹಿತಿ

ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ವಾಯುಪಡೆಯು ಐದು ಪಾಕಿಸ್ತಾನಿ ಯುದ್ಧ ವಿಮಾನಗಳು ಮತ್ತು ಒಂದು ದೊಡ್ಡ ವಿಮಾನವನ್ನು ಹೊಡೆದುರುಳಿಸಿದೆ. ಕ್ಷಿಪಣಿ ದಾಳಿಯಲ್ಲಿ ಹ್ಯಾಂಗರ್‌ನಲ್ಲಿದ್ದ ಎರಡು ಯುದ್ಧವಿಮಾನಗಳು ನಾಶವಾಗಿವೆ. 

Read Full Story
11:01 AM (IST) Aug 09

India News Live 9th August: ಸೇವಿಂಗ್ಸ್‌ ಅಕೌಂಟ್‌ನ ಕನಿಷ್ಠ ಬ್ಯಾಲೆನ್ಸ್‌ ಮೊತ್ತವನ್ನ ಭಾರೀ ಪ್ರಮಾಣದಲ್ಲಿ ಏರಿಸಿದ ICICI Bank

ಐಸಿಐಸಿಐ ಬ್ಯಾಂಕ್ 2025ರ ಆಗಸ್ಟ್ 1ರಿಂದ ಹೊಸ ಉಳಿತಾಯ ಖಾತೆಗಳಿಗೆ ಕನಿಷ್ಠ ಬ್ಯಾಲೆನ್ಸ್ ಅನ್ನು ಗಣನೀಯವಾಗಿ ಹೆಚ್ಚಿಸಿದೆ. ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿ ₹50,000, ಅರೆ ನಗರಗಳಲ್ಲಿ ₹25,000 ಮತ್ತು ಗ್ರಾಮೀಣ ಶಾಖೆಗಳಲ್ಲಿ ₹10,000 ಕನಿಷ್ಠ ಬ್ಯಾಲೆನ್ಸ್ ಇರಬೇಕು. 

Read Full Story
07:40 AM (IST) Aug 09

India News Live 9th August: ಭಾರತ ಜತೆ ವ್ಯಾಪಾರ ಮಾತುಕತೆ ಸದ್ಯಕ್ಕಿಲ್ಲ : ಟ್ರಂಪ್‌

ತೆರಿಗೆ ವಿವಾದ ಪರಿಹಾರ ಆಗುವವರೆಗೂ ಭಾರತದ ಜತೆಗೆ ವ್ಯಾಪಾರ ವಿಚಾರದಲ್ಲಿ ಯಾವುದೇ ಮಾತುಕತೆ ನಡೆಯುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸ್ಪಷ್ಟಪಡಿಸಿದ್ದಾರೆ.

Read Full Story
07:39 AM (IST) Aug 09

India News Live 9th August: ದಕ್ಷಿಣದ ಇಡ್ಲಿ ಹೋಟೆಲ್‌ ಮಾಲೀಕನ ಮೇಲೆ ಎಂಎನ್‌ಎಸ್‌ ಹಲ್ಲೆ

ಮಹಾರಾಷ್ಟ್ರ ನವನಿರ್ಮಾಣ ಸೇನಾ ಕಾರ್ಯಕರ್ತರು ದಕ್ಷಿಣ ಭಾರತದ ಇಡ್ಲಿ ಹೋಟೆಲ್ ಮಾಲೀಕನೊಬ್ಬನನ್ನು ಥಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

Read Full Story
07:39 AM (IST) Aug 09

India News Live 9th August: ಕಪಿಲ್‌ ಕೆಫೆ ಮೇಲೆ ದಾಳಿ ಮಾಡಿದ್ದು ಬಿಷ್ಣೋಯಿ ಗ್ಯಾಂಗ್‌

ಕೆನಡಾದ ಸರ್ರೆಯಲ್ಲಿ ಇರುವ ಹಾಸ್ಯ ಕಲಾವಿದ ಕಪಿಲ್‌ ಶರ್ಮಾ ಅವರ ‘ಕ್ಯಾಪ್ಸ್‌ ಕೆಫೆ’ ಮೇಲೆ ಗುರುವಾರ ಬೆಳಗಿನ ಜಾವ ಗುಂಡಿನ ದಾಳಿ ನಡೆದಿತ್ತು. ಇದರ ಹಿಂದೆ ಪಾತಕಿ ಲಾರೆನ್ಸ್‌ ಬಿಷ್ಣೋಯಿ ತಂಡದ ಕೈವಾಡವಿರುವುದು ಬೆಳಕಿಗೆ ಬಂದಿದೆ.

Read Full Story
07:39 AM (IST) Aug 09

India News Live 9th August: ಮೋದಿ ಮನ್‌ ಕೀ ಬಾತ್‌ನಿಂದ ₹34 ಕೋಟಿ ಆದಾಯ : ಕೇಂದ್ರ

‘ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಡುವ ಜನಪ್ರಿಯ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್‌’ನಿಂದ ಆಕಾಶವಾಣಿಯು ಆರಂಭವಾದ ದಿನದಿಂದ ಇದುವರೆಗೆ 34.13 ಕೋಟಿ ರು. ಆದಾಯ ಗಳಿಸಿದೆ’ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಶುಕ್ರವಾರ ಮಾಹಿತಿ ನೀಡಿದೆ.

Read Full Story
07:38 AM (IST) Aug 09

India News Live 9th August: ತಮಿಳ್ನಾಡು ರಾಜ್ಯ ಶಿಕ್ಷಣ ನೀತಿ ಪ್ರಕಟ : ಹಿಂದಿಗೆ ಕೊಕ್‌

ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್‌ ಹೊಸ ರಾಜ್ಯ ಶಿಕ್ಷಣ ನೀತಿಯನ್ನು ಅನಾವರಣಗೊಳಿಸಿದ್ದಾರೆ. ಇದು ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿಗೆ ಸ್ಪಷ್ಟ ಪರ್ಯಾಯವಾಗಿದೆ. ಈ ಮೂಲಕ, ತಮಿಳುನಾಡು ತನ್ನದೇ ಆದ ಶಿಕ್ಷಣ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಎನಿಸಿಕೊಂಡಿದೆ.

Read Full Story
07:38 AM (IST) Aug 09

India News Live 9th August: ಭಾರತ-ಪಾಕ್‌ ಯುದ್ಧ ನಿಲ್ಲಿಸುವಲ್ಲಿ ಟ್ರಂಪ್‌ ನೇರ ಪಾತ್ರ : ರುಬಿಯೋ

ಪಹಲ್ಗಾಂ ದಾಳಿ ಬಳಿಕದ ಭಾರತ-ಪಾಕ್‌ ನಡುವಿನ ಸಂಘರ್ಷ ನಿಲ್ಲಿಸುವಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೇರ ಪಾತ್ರವಹಿಸಿದ್ದರು ಎಂದು ಇದೀಗ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೋ ಕೂಡ ಹೇಳಿದ್ದಾರೆ.

Read Full Story
07:37 AM (IST) Aug 09

India News Live 9th August: ಮೋದಿ-ಪುಟಿನ್‌ ಮಾತು : ದ್ವಿಪಕ್ಷೀಯ ಬಾಂಧವ್ಯಕ್ಕೆ ಬದ್ಧತೆ

ಭಾರತ ಮತ್ತು ರಷ್ಯಾ ಸಂಬಂಧದಿಂದ ಕುಪಿತರಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತೆರಿಗೆ ಬರೆ ಹಾಕುತ್ತಿರುವ ಹೊತ್ತಲ್ಲೇ, ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ದೂರವಾಣಿ ಮೂಲಕ ಶುಕ್ರವಾರ ಮಾತುಕತೆ ನಡೆಸಿದ್ದಾರೆ.

Read Full Story
07:37 AM (IST) Aug 09

India News Live 9th August: ಚುನಾವಣಾ ವಂಚನೆ ವಿರುದ್ಧ ದೇಶವ್ಯಾಪಿ ಅಭಿಯಾನಕ್ಕೆ ಕಾಂಗ್ರೆಸ್‌ ಚಿಂತನೆ

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಚುನಾವಣಾ ಆಯೋಗ ಮತ್ತು ಬಿಜೆಪಿ ವಿರುದ್ಧ ‘ಮತ ಚೋರಿ’ ಆರೋಪ ಮಾಡಿದ ಬೆನ್ನಲ್ಲೇ ಈ ಬಗ್ಗೆ ದೇಶವ್ಯಾಪಿ ಆಂದೋಲನ ನಡೆಸಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಈ ಬಗ್ಗೆ ಪಕ್ಷದ ಕಾರ್ಯತಂತ್ರದ ಕುರಿತು ಸೋಮವಾರ ಸಂಜೆ 4ಕ್ಕೆ ಸಭೆ ನಡೆಯಲಿದೆ.

Read Full Story
07:37 AM (IST) Aug 09

India News Live 9th August: ಉತ್ತರಾಖಂಡ ಪ್ರವಾಹ : 3 ಅಂತಸ್ತಿನ ಕಟ್ಟಡದಷ್ಟು ಎತ್ತರ ಅವಶೇಷ ರಾಶಿ!

ಉತ್ತರಾಖಂಡದ ಧರಾಲೀ ಎಂಬಲ್ಲಿ ಪ್ರವಾಹವು ಭಯಂಕರ ಸನ್ನಿವೇಶವನ್ನು ಸೃಷ್ಟಿಸಿದ್ದು, ಅವಶೇಷಗಳು 3 ಅಂತಸ್ತಿನ ಕಟ್ಟಡಗಳಷ್ಟು ಎತ್ತರ ರಾಶಿ ಬಿದ್ದಿವೆ. ಅಂದರೆ ಸುಮಾರು ಸುಮಾರು 50 ಅಡಿಯಷ್ಟು ಕಲ್ಲು, ಮಣ್ಣು, ಕುಸಿದ ಮನೆಯ ಅವಶೇಷಗಳು ಕಂಡುಬಂದಿವೆ.

Read Full Story