Asianet Suvarna News Asianet Suvarna News

ಪ್ರಜಾಪ್ರಭುತ್ವ ಪಟ್ಟಿಯಲ್ಲಿ 10 ಸ್ಥಾನ ಕೆಳಗಿಳಿದ ಭಾರತ: ವರದಿ!

ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಕಳಪೆ ಪ್ರದರ್ಶನ| ಡೆಮಾಕ್ರಸಿ ಇಂಡೆಕ್ಸ್-2019 ಪಟ್ಟಿ ಬಿಡುಗಡೆ| ಪಟ್ಟಿಯಲ್ಲಿ 10 ಅಂಕ ಕೆಳಗೆ ಕುಸಿದ ಭಾರತ|  6.9 ಅಂಕ ಗಳಿಸಿ ಸಾರ್ವಕಾಲಿಕ ಕುಸಿತ ಕಂಡ ಭಾರತ| 2014ರಲ್ಲಿ 7.91 ಅಂಕ ಗಳಿಸಿದ್ದು ಇದುವರೆಗಿನ ಶ್ರೇಷ್ಠ ದಾಖಲೆ| ಸಿಎಎ, ಎನ್‌ಆರ್‌ಸಿ, ಜಮ್ಮು ಮತ್ತು ಕಾಶ್ಮೀರ ಉಲ್ಲೇಖಿಸಿದ ವರದಿ| 

India Slips 10 Places In Democracy Index 2019
Author
Bengaluru, First Published Jan 22, 2020, 6:27 PM IST

ನವದೆಹಲಿ(ಜ.22): ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳ ಪಟ್ಟಿಯಲ್ಲಿ  10 ಸ್ಥಾನ ಕೆಳಗೆ ಕುಸಿದಿರುವ ಭಾರತ, 167ರಾಷ್ಟ್ರಗಳ ಪೈಕಿ 51ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

ಡೆಮಾಕ್ರಸಿ ಇಂಡೆಕ್ಸ್-2019 ಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ಭಾರತ ಕೇವಲ 6.9 ಅಂಕ ಗಳಿಸಿದ್ದು, ಇದು ಸಾರ್ವಕಾಲಿಕ ಕುಸಿತ ಎಂದು ವರದಿ ತಿಳಿಸಿದೆ.

2017 ಹಾಗೂ 2018ರಲ್ಲಿ ಭಾರತ ಪಟ್ಟಿಯಲ್ಲಿ 7.3 ಅಂಕ ಗಳಿಸಿದ್ದು,  2016ರಲ್ಲಿ 7.81 ಅಂಕ ಗಳಿಸಿತ್ತು. 2014ರಲ್ಲಿ 7.91 ಅಂಕ ಗಳಿಸಿದ್ದು ಇದುವರೆಗಿನ ಶ್ರೇಷ್ಠ ದಾಖಲೆಯಾಗಿದೆ.

ಇನ್ನು  ಡೆಮಾಕ್ರಸಿ ಇಂಡೆಕ್ಸ್-2019 ಪಟ್ಟಿಯಲ್ಲಿ ಭಾರತ ಕಳಪೆ ಪ್ರದರ್ಶನ ಮಾಡಲು ಕಾರಣಗಳನ್ನು ನೀಡಿರುವ ವರದಿ, ಸಿಎಎ ವಿರೋಧಿ ಹೋರಾಟ ಮತ್ತು ಅದನ್ನು ಹತ್ತಿಕ್ಕುವ ಸರ್ಕಾರದ ನೀತಿ, ವಿಶೇಷ ಸ್ಥಾನಮಾನ ರದ್ತಿ ಬಳಿಕ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ, ಆರ್ಥಿಕ ಕುಸಿತ ಮುಂತಾದ ಅಂಶಗಳನ್ನು ಪಟ್ಟಿ ಮಾಡಲಾಗಿದೆ.

ಸಿಎಎ ಜಾರಿ ಸಿದ್ಧ, 3 ತಿಂಗಳಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬದ್ಧ: ಅಮಿತ್ ಶಾ!

ದೇಶದಲ್ಲಿ ನಾಗರಿಕ ಸ್ವಾತಂತ್ರ್ಯ ಕುಸಿಯುತ್ತಿದ್ದು, ಪ್ರಜಾಪ್ರಭುತ್ವ ಮೌಲ್ಯಗಳು ಕುಂಠಿತಗೊಳ್ಳುತ್ತಿರುವುದು ಪಟ್ಟಿಯಲ್ಲಿ ಭಾರತ ಕುಸಿತ ಕಂಡಿರುವುದಕ್ಕೆ ಕಾರಣ ಎಂದು ಹೇಳಲಾಗಿದೆ.

ಪ್ರಮುಖವಾಗಿ ಸಿಎಎ ವಿರುದ್ಧ ಕೆಲವು ರಾಜ್ಯಗಳು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದು, ದೇಶಾದ್ಯಂತ  ಸಿಎಎ ವಿರೋಧಿ ಹೋರಾಟ ಹೆಚ್ಚಾಗಿದ್ದು, ಇವೇ ಮುಂತಾದ ಅಂಶಗಳನ್ನು ಗಮನಿಸಿ ಪಟ್ಟಿ ಸಿದ್ಧಪಡಿಸಲಾಗಿದೆ ಎನ್ನಲಾಗಿದೆ.

Follow Us:
Download App:
  • android
  • ios