08:36 AM (IST) Nov 03

India News Live ನಿನ್ನೆ ಮೊನ್ನೆವರೆಗೂ र100 ಕೂಲಿ ಕೆಲಸ, ಇವತ್ತು र1.8 ಲಕ್ಷ ಕೋಟಿ ಒಡತಿ! ಇವರು ಸಂಪತ್ತಿನ ಕೋಟೆ ಕಟ್ಟಿದ್ದು ಹೇಗೆ?

ದಿನಕ್ಕೆ ಕೇವಲ 100 ರೂ. ಕೂಲಿ ಮಾಡುತ್ತಿದ್ದ ಝೌ ಕುನ್ಫೀ ಅವರು ಲೆನ್ಸ್ ಟೆಕ್ನಾಲಜಿ ಸ್ಥಾಪಿಸಿ ಆಪಲ್ ಐಫೋನ್‌ಗಳಿಗೆ ಗ್ಲಾಸ್ ಪೂರೈಸುವ ಮೂಲಕ ದೊಡ್ಡ ಬಿಲಿಯನೇರ್ ಆಗಿ ಬೆಳೆದಿದ್ದಾರೆ. ಪ್ರಸ್ತುತ ಇವರು 1.8 ಲಕ್ಷ ಕೋಟಿ ರೂ. ಸಂಪತ್ತಿನೊಂದಿಗೆ ಚೀನಾದ ಅತ್ಯಂತ ಶ್ರೀಮಂತ ಮಹಿಳೆಯಾಗಿ ಹೊರಹೊಮ್ಮಿದ್ದಾರೆ.
Read Full Story
08:20 AM (IST) Nov 03

India News Live ಜಿರಳೆ ಹೋರಾಟದಲ್ಲಿ ಭಾಗಿಯಾಗಿದ್ದ ಆಮಿರ್ ಅಳಿಯ ಕ್ಷಮೆ, ಇಮ್ರಾನ್‌ ಖಾನ್‌ಗೆ ಹಿಗ್ಗಾಮುಗ್ಗಾ ಜಾಡಿಸಿದ ಬಾಂಬೆ ಹೈಕೋರ್ಟ್

ಅಮೆರಿಕ ಪ್ರಜೆಯಾಗಿದ್ದರೂ ಭಾರತದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟ ಇಮ್ರಾನ್ ಖಾನ್ ಬಾಂಬೆ ಹೈಕೋರ್ಟ್‌ನಲ್ಲಿ ಕ್ಷಮೆಯಾಚಿಸಿದ್ದಾರೆ. ದೇಶ ಬಿಟ್ಟು ಹೋಗುವಂತೆ ಮುಂಬೈ ಪೊಲೀಸರು ನೀಡಿದ್ದ ನೋಟಿಸ್‌ಗೆ ಕೋರ್ಟ್ ಡಿಸೆಂಬರ್ 7ರವರೆಗೆ ತಡೆ ನೀಡಿದೆ. ಪ್ರಕರಣದ ಪೂರ್ಣ ವಿವರ ಇಲ್ಲಿದೆ ನೋಡಿ

Read Full Story
07:48 AM (IST) Nov 03

India News Live ಅರ್ನಾಬ್ ಬಳಿಕ ಆಂಧ್ರಪ್ರದೇಶಕ್ಕೆ ಅಪ್ಪಳಿಸಿದ 'ಮುರಸು' ಚಂಡಮಾರುತ, ಕರ್ನಾಟಕದಿಂದ ನೆರವು, 500 ಲೈನ್‌ಮನ್ ಆಂಧ್ರಕ್ಕೆ

ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾದ 'ಮುರಸು' ಚಂಡಮಾರುತ ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸಿದ್ದು, ಆಂಧ್ರ ಹಾಗೂ ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿದೆ. ರಕ್ಷಣೆಗಾಗಿ ಎನ್‌ಡಿಆರ್‌ಎಫ್‌ ತಂಡಗಳನ್ನು ನಿಯೋಜಿಸಲಾಗಿದ್ದು, ವಿದ್ಯುತ್ ಮರುಸ್ಥಾಪನೆಗೆ ಕರ್ನಾಟಕದಿಂದ 500 ಲೈನ್‌ಮೆನ್‌ಗಳನ್ನು ಆಂಧ್ರಕ್ಕೆ.

Read Full Story
07:41 AM (IST) Nov 03

India News Live ಏಕದಿನ ವಿಶ್ವಕಪ್ ಹೊಸ್ತಿಲಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸಿದ ಆಸ್ಟ್ರೇಲಿಯಾ ಮೂಲದ RCB ಸ್ಪೋಟಕ ಬ್ಯಾಟರ್..!

ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಹಾಗೂ ಆರ್‌ಸಿಬಿ ಮಾಜಿ ಆಟಗಾರ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 2023ರ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಅಜೇಯ 201 ರನ್ ಸಿಡಿಸಿ ಐತಿಹಾಸಿಕ ದಾಖಲೆ ಬರೆದಿದ್ದ ಇವರು, ಮೂರು ಐಸಿಸಿ ಟ್ರೋಫಿ ಗೆದ್ದ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದರು.

Read Full Story