ನ್ಯೂಜಿಲೆಂಡ್ ವಿರುದ್ಧದ ಟಿ-ಸರಣಿ ಗೆದ್ದ ಬೆನ್ನಲ್ಲೇ ಟೀಂ ಇಂಡಿಯಾ ಮತ್ತೊಂದು ಅಖಾಡಕ್ಕೆ ಸಜ್ಜಾಗುತ್ತಿದೆ. ನಾಳೆಯಿಂದ ಐದು ಪಂದ್ಯಗಳನ ಏಕದಿನ ಸರಣಿ ನಡೆಯಲಿದ್ದು, ಬೆಳಗ್ಗೆ 7.30 ರಿಂದ ಪಂದ್ಯ ಶುರುವಾಗಲಿದೆ. ODI ಸರಣಿಗೆ ಇರುವ ಸವಾಲುಗಳು ಏನೇನು ಅನ್ನೋ ವಿವರ ಇಲ್ಲಿದೆ.
ನ್ಯೂಜಿಲೆಂಡ್ ವಿರುದ್ಧದ ಟಿ-ಸರಣಿ ಗೆದ್ದ ಬೆನ್ನಲ್ಲೇ ಟೀಂ ಇಂಡಿಯಾ ಮತ್ತೊಂದು ಅಖಾಡಕ್ಕೆ ಸಜ್ಜಾಗುತ್ತಿದೆ. ನಾಳೆಯಿಂದ ಐದು ಪಂದ್ಯಗಳನ ಏಕದಿನ ಸರಣಿ ನಡೆಯಲಿದ್ದು, ಬೆಳಗ್ಗೆ 7.30 ರಿಂದ ಪಂದ್ಯ ಶುರುವಾಗಲಿದೆ. ಟಿ-20 ಸರಣಿ ಗೆದ್ದದ್ದಂತೆ ಏಕದಿನ ಪಂದ್ಯಗಳನ್ನ ನ್ಯೂಜಿಲೆಂಡ್ ವಿರುದ್ಧ ಗೆಲ್ಲೋದು ಅಷ್ಟು ಸುಲಭ ಇಲ್ಲ.
ಯಾಕೆಂದರೆ ಟೀಂ ಇಂಡಿಯಾ ಅನೇಕ ಸಮಸ್ಯೆಗಳನ್ನ ಎದುರಿಸುತ್ತಿದೆ. ಅದರಲ್ಲಿ ಮುಖ್ಯವಾಗಿ ಅನುಭವದ ಕೊರತೆ ಇರುವ ಬೌಲಿಂಗ್ ಲೈನ್ ಅಪ್ ಎದುರಿಸುತ್ತಿದೆ. ಟೆಸ್ಟ್ ಸರಣಿಯ ಸಿದ್ಧತೆಯ ನಡುವೆ ಭಾರತ ತಂಡವು ಏಕದಿನ ಪಂದ್ಯಗಳನ್ನ ಆಡುತ್ತಿದ್ದು, ಇದು ಮ್ಯಾನೇಜ್ಮೆಂಟ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಯಾವ ಆಟಗಾರರನ್ನ ಯಾವ ರೀತಿ ಬಳಸಿಕೊಳ್ಳಬೇಕು ಅನ್ನೋ ಗೊಂದಲದಲ್ಲಿ ಕೋಚ್ ಗೌತಮ್ ಗಂಭೀರ್ ಬಳಗ ಇದೆ.
ಐದು ಸವಾಲುಗಳು
ಇನ್ನು ಟೀಂ ಇಂಡಿಯಾದ ಐದು ಸವಾಲುಗಳಲ್ಲಿ ಮೊದಲನೇಯ ಚಾಲೆಂಜಸ್ ಏನೆಂದರೆ.. ಬೌಲಿಂಗ್ನಲ್ಲಿ ಯಾವುದೇ ಅನುಭವ ಇಲ್ಲ. ಇದು ನ್ಯೂಜಿಲೆಂಡ್ನಂಥ ದೈತ್ಯ ತಂಡದ ಎದುರು ಭಾರತದ ಬೌಲಿಂಗ್ ಪಡೆ ಮಂಕಾಗಿ ಕಾಣಿಸುವ ಸಾಧ್ಯತೆ ಇದೆ. ಅನುಭವಿ ಮೊಹ್ಮದ್ ಸಿರಾಜ್ ತಂಡದಲ್ಲಿದ್ದರೂ ಮೂರು ಪಂದ್ಯಗಳ ನಂತರ ಟೆಸ್ಟ್ ಸರಣಿ ಹಿನ್ನೆಲೆಯಲ್ಲಿ ಅಭ್ಯಾಸಕ್ಕೆ ಮರಳಲಿದ್ದಾರೆ. ಹೀಗಾಗಿ ಸಿರಾಜ್ ಅನುಪಸ್ಥಿತಿಯಲ್ಲಿ ಯುವ ಪಡೆ ಬೌಲಿಂಗ್ ಜವಾಬ್ದಾರಿಯನ್ನ ಹೊರಬೇಕಿದೆ.
ಕೆಲವೇ ಕೆಲವು ಪಂದ್ಯಗಳನ್ನ ಆಡಿರುವ ಹರ್ಮನ್ ಪ್ರೀತ್ ಸಿಂಗ್ ಹೊರತುಪಡಿಸಿದ್ರೆ ಮತ್ಯಾರೂ ಬೌಲಿಂಗ್ ವಿಭಾಗದಲ್ಲಿ ಅನುಭವ ಇರೋರು ಯಾರೂ ಇಲ್ಲ. ಗುರ್ನೂರ್ ಬ್ರಾರ್, ಅನ್ಶುಲ್ ಕಾಂಬೋಜ್, ಔಕಿಬ್ ನಬಿಗೆ ಅಂತಾರಾಷ್ಟ್ರೀಯ ಪಂದ್ಯಗಳ ಅನುಭವವೇ ಇಲ್ಲ. ಈ ಸವಾಲು ಅನ್ನು ಸ್ವತಃ ಗಂಭೀರ್ ಅವರೇ ಒಪ್ಪಿಕೊಂಡಿದ್ದಾರೆ.
ಎರಡನೇಯದು ಇಬ್ಬರು ನಾಯಕರು
ಸದ್ಯ ಭಾರತದ ಮುಂದೆ ಟೆಸ್ಟ್ ಚಾಂಪಿಯನ್ಶಿಪ್ ಗುರಿ ಇದೆ. ಹೀಗಾಗಿ ಅದರ ಮೇಲೆ ಮ್ಯಾನೇಜ್ಮೆಂಟ್ ಹೆಚ್ಚು ಕೇಂದ್ರೀಕರಿಸಿದೆ. ಅದೇ ಕಾರಣಕ್ಕೆ ಏಕದಿನ ಸರಣಿಯಲ್ಲಿ ಮಧ್ಯದಲ್ಲಿ ಟೀಂ ಇಂಡಿಯಾದ ನಾಯಕತ್ವ ಬದಲಾಗಲಿದೆ. ಶುಬ್ಮನ್ ಗಿಲ್ ಅವರು ಟೆಸ್ಟ್ ಪಂದ್ಯಗಳು ಇರುವ ಕಾರಣ ಮೂರು ಪಂದ್ಯಗಳಿಗೆ ಮಾತ್ರ ನಾಯಕರಾಗಿರಲಿದ್ದಾರೆ. ಉಳಿದ ಎರಡು ಪಂದ್ಯಗಳಿಗೆ ಶ್ರೇಯಸ್ ಅಯ್ಯರ್ ಅವರು ತಂಡದ ಜವಾಬ್ದಾರಿಯನ್ನ ಹೊರಲಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ತಂಡದಲ್ಲಿದ್ದರೂ.. ಮೂರು ಪಂದ್ಯಗಳು ಮುಗಿದ ಬಳಿಕ ಗಿಲ್ ಮತ್ತು ಕೆಎಲ್ ರಾಹುಲ್, ಸಿರಾಜ್ ಅವರಂಥ ಹಿರಿಯ ಆಟಗಾರರು ಉಳಿದ ಎರಡು ಪಂದ್ಯಗಳಿಗೆ ಲಭ್ಯ ಇರೋದಿಲ್ಲ.
ನ್ಯೂಜಿಲೆಂಡ್ ಪಿಚ್ಗಳು
ಸರಣಿಯ ಮೊದಲ ಪಂದ್ಯವು ಆಂಕ್ಲೆಂಡ್ನ ಈಡನ್ ಪಾರ್ಕ್ನಲ್ಲಿ ನಡೆಯಲಿದೆ. ಈ ಮೈದಾನದ ನೇರ ಬೌಂಡರಿಗಳು 55 ರಿಂದ 60 ಮೀಟರ್ಗಳಿಷ್ಟಿದೆ. ತುಂಬಾ ಚಿಕ್ಕದಾದ ಮೈದಾನದಲ್ಲಿ ಬೌಲರ್ಗಳು ಒಂದೇ ಒಂದು ಸಣ್ಣ ತಪ್ಪು ಮಾಡಿದರೂ ಅಪಾಯ. ಬಾಲ್ಗಳು ಬ್ಯಾಟ್ನ ಎಡ್ಜಿಗೆ ಬಿದ್ದರೂ ಸುಲಭವಾಗಿ ಸಿಕ್ಸರ್ಗಳು ಹೋಗುತ್ತವೆ. ಜೊತೆಗೆ ನ್ಯೂಜಿಲೆಂಡ್ ಬಹುತೇಕ ಪಿಚ್ಗಳು ಸ್ವಿಂಗ್ ಆಗುತ್ತವೆ. ಜೊತೆಗೆ ಬೌನ್ಸ್ ರೇಟ್ ಕೂಡ ಜಾಸ್ತಿ ಇವೆ. ಇದು ಟೀಂ ಇಂಡಿಯಾಗೆ ಸವಾಲಾಗುವ ಸಾಧ್ಯತೆ ಹೆಚ್ಚಿದೆ.
ವೆದರ್
ಪಂದ್ಯಗಳು ಅಲ್ಲಿನ ಕಾಲಮಾನ ಪ್ರಕಾರ ಮಧ್ಯಾಹ್ನ 3 ಗಂಟೆಗೆ ಪ್ರಾರಂಭ ಆಗಲಿದೆ. ಅದು ಭಾರತೀಯ ಕಾಲಮಾನದಲ್ಲಿ ಬೆಳಗ್ಗೆ 7 ಗಂಟೆಯಿಂದ. ಮೊದಲ ಇನ್ನಿಂಗ್ಸ್ಗೆ ಸಿಕ್ಕಾಪಟ್ಟೆ ಬಿಸಿಲು ಇದ್ದರೆ.. ಎರಡನೇ ಇನ್ನಿಂಗ್ಸ್ಗೆ ವಿಪರಿತ ಚಳಿ ಇರಲಿದೆ. ತಂಗಾಳಿಯೂ ಬೀಸಲಿದೆ. ಹವಾಮಾನದಲ್ಲಿ ಆಗುವ ನಾಟಕಕ್ಕೆ ಟೀಂ ಇಂಡಿಯಾ ಆಟಗಾರರು ಒಮ್ಮಿಂದ ಒಮ್ಮೆಲೇ ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ಕೆಟ್ಟ ಇತಿಹಾಸ
ಅಷ್ಟೇ ಅಲ್ಲ ನ್ಯೂಜಿಲೆಂಡ್ ನೆಲದಲ್ಲಿ ಟೀಂ ಇಂಡಿಯಾ ಅತ್ಯಂತ ಕೆಟ್ಟ ಇತಿಹಾಸವನ್ನು ಹೊಂದಿದೆ. ಇಲ್ಲಿಯವರೆಗೆ ಈಡನ್ ಪಾರ್ಕ್ ಮೈದಾನದಲ್ಲಿ ನಡೆದ ಪಂದ್ಯಗಳಲ್ಲಿ ಭಾರತದ ಏಕದಿನ ದಾಖಲೆಗಳು ಅಷ್ಟೊಂದು ಚೆನ್ನಾಗಿ ಇಲ್ಲ. ಇಲ್ಲಿ ಆಡಿದ 11 ಪಂದ್ಯಗಳಲ್ಲಿ ಭಾರತ ಕೇವಲ 4 ಪಂದ್ಯವನ್ನು ಮಾತ್ರ ಗೆದ್ದುಕೊಂಡಿದೆ. ಟಿ-20 ಸರಣಿಯಲ್ಲಿ ಆರಂಭದ ಮೂರು ಪಂದ್ಯಗಳನ್ನ ಭಾರತ ತಂಡವು ಗೆದ್ದುಕೊಂಡಿತ್ತು. ಆದರೆ, ನ್ಯೂಜಿಲೆಂಡ್ ಕಂಬ್ಯಾಕ್ ಮಾಡಿದಾಗ ಟೀಂ ಇಂಡಿಯಾಗೆ ದೊಡ್ಡ ಆಘಾತವೇ ಆಗಿತ್ತು.
ಇಲ್ಲಿಯವರೆಗೆ ಉಭಯ ತಂಡಗಳು 123 ಬಾರಿ ಮುಖಾಮುಖಿ ಆಗಿವೆ. ಅದರಲ್ಲಿ ಭಾರತ 63, ನ್ಯೂಜಿಲೆಂಡ್ 52 ಬಾರಿ ಗೆಲುವು ಸಾಧಿಸಿದೆ. ಒಂದು ಪಂದ್ಯ ಟೈ ಆದರೆ, 7 ಮ್ಯಾಚ್ಗಳು ಯಾವುದೇ ರೆಸಲ್ಟ್ ಬಂದಿಲ್ಲ. ಒಟ್ಟಾರೆ ಟೀಂ ಇಂಡಿಯಾ ಮುಂದೆ ಸವಾಲುಗಳೇ ಇವೆ. ಅದನ್ನು ಹೇಗೆ ಮೆಟ್ಟಿ ನಿಲ್ಲಲಿದೆ ಅನ್ನೋದು ತುಂಬಾ ಕುತೂಹಲಕಾರಿ ಆಗಿದೆ.






