Sourav ganguly s luxurious lifestyle ಭಾರತದ ಮಾಜಿ ಕ್ರಿಕೆಟ್ ನಾಯಕ ಸೌರವ್ ಗಂಗೂಲಿ ಅವರ ಅದ್ಭುತ ಕ್ರಿಕೆಟ್ ವೃತ್ತಿಜೀವನ ಮತ್ತು ಸಾಧನೆಗಳನ್ನು ಈ ಲೇಖನ ವಿವರಿಸುತ್ತದೆ. ಜೊತೆಗೆ, ಕೋಲ್ಕತ್ತಾದ ಬೆಹಾಲಾದಲ್ಲಿನ ಅವರ 40 ಕೋಟಿ ರೂ. ಮೌಲ್ಯದ 60 ವರ್ಷಗಳ ಹಳೆಯ ಭವ್ಯ ಪೂರ್ವಜರ ಮನೆಯ ವಿಶೇಷತೆ ತಿಳಿಯಿರಿ.

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ತೊಂಭತ್ತರ ದಶಕದಲ್ಲಿ ಭಾರತೀಯ ಕ್ರಿಕೆಟ್ ತಂಡದ ಪಾಲಿಗೆ ಅದ್ಭುತ ಆಟಗಾರರಾಗಿದ್ದರು. ಸಚಿನ್ ತೆಂಡೂಲ್ಕರಂತೆ ಅತಿ ಹೆಚ್ಚು ಅಭಿಮಾನಿಗಳನ್ನ ಹೊಂದಿದ್ದರು. ಗಂಗೂಲಿ ಅವರನ್ನು ಕೋಲ್ಕತ್ತಾದ ಪ್ರಿನ್ಸ್, ಕೊಲ್ಕತ್ತಾ ರಾಜಕುಮಾರ್ ಎಂದೆಲ್ಲ ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಿದ್ದರು.

ಸೌರವ್ ಗಂಗೂಲಿ ಅವರು ಶಿಸ್ತಿನ ಬ್ಯಾಟಿಂಗ್‌ಗೆ ಹೆಸರುವಾಸಿ, ಕ್ರೀಸ್‌ಗೆ ಇಳಿದರೆ ಎದುರಾಳಿ ಪಾಳಯದಲ್ಲಿ ನಡುಕ ಹುಟ್ಟುತ್ತಿತ್ತು. ಅವರ ಬ್ಯಾಟಿಂಗ್ ಶೈಲಿಯೇ ಹಾಗಿತ್ತು. ಗಂಗೂಲಿ ಕ್ರಿಕಟ್ ವೃತ್ತಿ ಜೀವನದಲ್ಲಿ 49 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಆ ಪೈಕಿ 21 ಗೆಲುವು ಪಡೆದಿದ್ದರೆ 13 ಸೋಲು, 15 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ. ಇದರಲ್ಲಿ ಆ ಕಾಲಕ್ಕೆ 11 ವಿದೇಶದಲ್ಲಿ ಟೆಸ್ಟ್‌ಗಳನ್ನು ಆಡಿರುವುದು ಒಂದು ದಾಖಲೆಯೇ ಸರಿ. ಇದಲ್ಲದೆ ಅವರು ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ ತಂಡವು 146 ಏಕದಿನ ಪಂದ್ಯಗಳನ್ನಾಡಿದೆ. ಅದರಲ್ಲೂ 2002 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಮೆನ್ ಇನ್ ಬ್ಲೂಗಾಗಿ ಗೆದ್ದರು. 2003ರಲ್ಲಿ ಭಾರತ ತಂಡವನ್ನು ವಿಶ್ವಕಪ್ ಫೈನಲ್ ವರೆಗೆ ತಂಡವನ್ನು ಕೊಂಡೊಯ್ದರು.

ಸೌರವ್ ಗಂಗೂಲಿ ಅವರು ಕೊನೆಯ ಪಂದ್ಯ 2008 ರಲ್ಲಿ ಭಾರತದ ಪರ ಆಡಿದಾಗ ಅವರ ವಯಸ್ಸು 54 ವರ್ಷ ತುಂಬಿತ್ತು! ವಯಸ್ಸು ಹೆಚ್ಚಿದ್ದರೂ ಅವರ ಕ್ರೀಡಾ ಉತ್ಸಾಹ ಕಡಿಮೆಯಾಗಿರಲಿಲ್ಲ.

ಸೌರವ್ ಗಂಗೂಲಿ ಅವರ ಪೂರ್ವಜರ ಮನೆಯಲ್ಲಿ ವಾಸ

ಕ್ರಿಕೆಟಿನಲ್ಲಾಗಲಿ, ಆಡಳಿತ ಮಂಡಳಿಯಲ್ಲಾಗಲಿ ಕಾರ್ಯನಿರ್ವಹಿಸದ ಸಮಯದಲ್ಲಿ ಅವರು ಪತ್ನಿ ಡೋನಾ, ಮಗಳು ಸನಾ ಅವರೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ. ಬಂಗಾಳದಲ್ಲಿ ಗಂಗೂಲಿ ಅವರನ್ನ ದಾದಾ ಎಂದೇ ಕರೆಯುತ್ತಾರೆ. ಬೆಹಾಲಾ ಪ್ರದೇಶದಲ್ಲಿರುವ ಗಂಗೂಲಿ ಅವರ ಪೂರ್ವಜನರ ಭವ್ಯ ಮನೆಯಲ್ಲೇ ಈಗಲೂ ವಾಸಿಸುತ್ತಿದ್ದಾರೆ.

ಕೊಲ್ಕತ್ತಾದಲ್ಲಿ ಗಂಗೂಲಿ ಮನೆ ಎಲ್ಲಿದೆ?

ಕೊಲ್ಕತ್ತಾದಲ್ಲಿ ಗಂಗೂಲಿ ಅವರ ಪೂರ್ವಜನರ ಮನೆ ಬಿರೇನ್ ರಾಯ್ ರಸ್ತೆಯಲ್ಲಿರು ಭವ್ಯ, ಪುರಾತನ ಮನೆಯಲ್ಲಿ ಈಗಲೂ ವಾಸವಾಗಿದ್ದು, ಈ ಮನೆಯಲ್ಲಿ ಗಂಗೂಲಿ ಕುಟುಂಬ ಕಳೆದ ಆರವತ್ತು ವರ್ಷಳಿಂದಲೂ ವಾಸಿಸುತ್ತಿದ್ದಾರೆ! ಈ ಮನೆಯ ವಿಶೇಷತೆ ಎಂದರೆ ಸಂಪ್ರಾದಾಯಿಕ ವಾಸ್ತುಶೈಲಿ ಅಷ್ಟೇ ವಿಶಾಲವಾದ ಒಳಾಂಗಣವಿದೆ. ಸದ್ಯ ಈ ಮನೆ ಮಾರಾಟ ಮಾಡಲು ಮುಂದಾದರೆ ಇದರ ಬೆಲೆ ಸದ್ಯ ಮಾರುಕಟ್ಟೆ ಬೆಲೆಯ ಪ್ರಕಾರ 40 ಕೋಟಿ ಬೆಲೆ ಬಾಳತ್ತದೆ!

ಈ ಮನೆ ಒಂದು ಮ್ಯೂಸಿಯಂತೆಯೂ ಇದೆ. ಏಕೆಂದರೆ ಈ ಮನೆಯಲ್ಲಿ ಸೌರವ್ ಗಂಗೂಲಿ ಅವರ ಕ್ರಿಕೆಟ್ ಸಾಧನೆಯ ನೆನಪುಗಳಿವೆ. ಊಟದ ಕೋಣೆ, ಕುಟುಂಬ ಸದಸ್ಯರು ಒಟ್ಟಿಗೆ ಸೇರುವ ಕೊಠಡಿ, ವಿವಿಧ ಕಾರ್ಯಕ್ರಮಗಳ ಸಮಯದಲ್ಲಿ ಗೆಸ್ಟ್ ಗಳು ಬಂದರೆ ಅವರಿಗಾಗಿಯೇ ಈ ಮನೆಯಲ್ಲಿ ಊಟ, ವಿಶ್ರಾಂತಿಗಾಗಿ ಹಲವು ಕೊಠಡಿಗಳಿವೆ. ಇಷ್ಟೇ ಅಲ್ಲ, ಈ ಮನೆಯಲ್ಲಿ ಗಂಗೂಲಿ ಅವರ ಸಾಧನೆಯನ್ನ, ವೃತ್ತಿಜೀವನವನ್ನ ಪರಿಚಯಿಸುವ ವಿಶೇಷವಾದ 'ವಾಲ್ ಆಫ್ ಫೇಮ್' ಕೂಡ ಇದೆ.

ಈ ಭವ್ಯ ಬಂಗಲೆಯಲ್ಲಿ ಒಂದು ವಿಶೇಷ ಟ್ರೋಪಿ ಕೊಠಡಿಯಿದೆ ಗಂಗೂಲಿ ಅವರ ತಂದೆ ನಿಧನರಾಗವ ಮೊದಲು ಈ ಕೊಠಡಿ ನಿರ್ಮಿಸಲಾಗಿತ್ತು. ಈ ಕೊಠಡಿಯ ಒಳಗೆ ಹೋದರೆ ಕುಟುಂಬದ ಅನೇಕ ನೆನಪುಗಳು ಕಣ್ಮುಂದೆ ಬಂದು ನಿಂತಂತೆ ಭಾಸವಾಗುತ್ತೆ. ಏಕೆಂದರೆ ಈ ಕೊಠಡಿಯಲ್ಲಿ ಗಂಗೂಲಿ ಅವರ ಕ್ರಿಕೆಟ್ ಸಾಧನೆಗಳು, ಪ್ರಶಸ್ತಿಗಳು, ಸ್ಮರಣಿಕೆಗಳು, 1996 ರಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ಸತತ ಎರಡು ಟೆಸ್ಟ್ ಶತಕಗಳನ್ನು ಸಿಡಿಸುವ ಮೂಲಕ ದಾಖಲೆ ಬರೆದಿದ್ದ ಸಂದರ್ಭದಲ್ಲಿ ವಿಜಯೋತ್ಸವ ಆಚರಿಸಿದ ಪಾಂಪೇನ್ ಬಾಟಲಿಗಳೂ ಸಹ ಈ ಕೊಠಡಿಯಲ್ಲಿ ನೋಡಬಹುದು. ಕ್ರಿಕೆಟ್ ಬಗೆಗಿನ ಎಲ್ಲ ನೆನಪುಗಳನ್ನು ಗಂಗೂಲಿ ಅವರು ಈ ಕೊಠಡಿಯಲ್ಲಿ ಜತನದಿಂದ ಕಾಪಿಟ್ಟುಕೊಂಡು ಸಂರಕ್ಷಿಸಿದ್ದಾರೆ.

ಇನ್ನು ಮನೆ ಹಾಲ್ ಪ್ರವೇಶಿಸಿದರಂತೂ ಅವರ ಬಾಲ್ಯದ ನೆನಪುಗಳು ಕಣ್ಮುಂದೆ ಬರುತ್ತವೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ ಮೊದಲ ದಿನಗಳ ನೆನಪು ಇಲ್ಲಿವೆ. ಮನೆಯ ಹಿಂಭಾಗದಲ್ಲಿ ಓಟದ ಟ್ರ್ಯಾಕ್ ಕೂಡ ಇದೆ. ಗಂಗೂಲಿ ಅವರು ಚಿಕ್ಕಂದಿನಿಂದಲೂ ಇಲ್ಲಿ ಕ್ರಿಕೆಟ್ ಆಡಿದ್ದಾರೆ. ಈ ಮೈದಾನ ನೋಡದಿದ್ದರೆ ಪುರಾನತ ಮನೆಯ ನೋಡುವುದು ಪೂರ್ಣವಾಗುವುದಿಲ್ಲ.

ಕೊಲ್ಕತ್ತಾ ಪ್ರವಾಸಕ್ಕೆ ಹೋದಾಗ ಸೌರವ್ ಗಂಗೂಲಿ ಅವರ ಈ ಭವ್ಯ, ಪುರಾತನ ಬಂಗಲೆ ಮಿಸ್ ಮಾಡದೆ ನೋಡಿ!