NMACC ಲೈಬ್ರರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಧರಿಸಿದ್ದ 'ಸೋರಿಂಗ್ ಸ್ಪಿರಿಟ್' ಎಂಬ ಡ್ರಾಗನ್ ಫ್ಲೈ ಬ್ರೂಚ್ ಎಲ್ಲರ ಗಮನ ಸೆಳೆದಿದೆ. ವ್ಯಾಲೇಸ್ ಚಾನ್ ವಿನ್ಯಾಸಗೊಳಿಸಿದ ಈ ಆಭರಣವನ್ನು ತಯಾರಿಸಲು 10 ವರ್ಷಗಳು ಬೇಕಾಯಿತು. ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಈ ಬ್ರೂಚ್‌ನ ಬಗ್ಗೆ ಕರೀನಾ ಕಪೂರ್ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆ NMACC ಕೇಂದ್ರದಲ್ಲಿ (ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರ) ಲೈಬ್ರರಿ ಉದ್ಘಾಟನಾ ಕಾರ್ಯಕ್ರಮ ನಡೆದಿತ್ತು. ಈ ಸಂದರ್ಭದಲ್ಲಿ ನೀತಾ ಅಂಬಾನಿ ಧರಿಸಿದ್ದ ಬ್ರೂಚ್ ಎಲ್ಲರ ಗಮನ ಸೆಳೆಯಿತು. ಇದೀಗ ಈ ಐಷಾರಾಮಿ ಆಭರಣದ ಬಗ್ಗೆ ಒಂದೊಂದೇ ಸುದ್ದಿಗಳು ಹೊರ ಬರುತ್ತಿವೆ.

ವಿಶೇಷ ಅಂದ್ರೆ ಈ ಕಾರ್ಯಕ್ರಮದಲ್ಲಿ ಕರೀನಾ ಕಪೂರ್‍‌ನಿಂದ ಹಿಡಿದು ಅನೇಕ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡರು. ಸ್ಟಾರ್ ಸೆಲೆಬ್ರಿಟಿಗಳ ನಡುವೆಯೂ ನೀತಾ ಅಂಬಾನಿ ಲಕಲಕ ಅಂತಾ ಹೊಳೆಯುತ್ತಿದ್ದರು. ಅಂದರೆ ಅವರು ಎಲ್ಲರ ಗಮನ ಸೆಳೆಯುತ್ತಿದ್ದರು. ಅದಕ್ಕೆ ಕಾರಣ ಅವರು ಧರಿಸಿದ್ದ ಬ್ರೂಚ್.

ನೂತನ ಲೈಬ್ರರಿಯನ್ನು ಸೋಶಿಯಲ್ ಮೀಡಿಯಾ ಸ್ಟಾರ್ ಓರಿ ಅವರು ಉದ್ಘಾಟಿಸಿದರು. ನಂತರ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಒಂದನ್ನ ಹಾಕಿಕೊಂಡರು. ಆ ವಿಡಿಯೋದಲ್ಲಿ ಕರೀನಾ ಕಪೂರ್, ಸೈಫ್ ಅಲಿ ಖಾನ್, ಶಾಹಿದ್ ಕಪೂರ್, ಸೊಹೈಲ್ ಖಾನ್, ವಿಕ್ರಾಂತ್ ಮಾಸ್ಸಿ ಸೇರಿದಂತೆ ಅನೇಕ ಸ್ಟಾರ್‍‌ಗಳು ಕಾಣಿಸಿಕೊಂಡಿದ್ದಾರೆ.

ಅದೇ ವಿಡಿಯೋದಲ್ಲಿ ನೀತಾ ಅಂಬಾನಿ ಮತ್ತು ಕರೀನಾ ಕಪೂರ್ ನಿಂತು ಮಾತನ್ನಾಡುತ್ತಿರುವ ದೃಶ್ಯವೂ ಇದೆ. ಈ ವೇಳೆ ಕರೀನಾ ಕಪೂರ್, ನೀತು ಅಂಬಾನಿ ಅವರ ಬ್ರೂಚ್‌ ಮುಟ್ಟಿ ಅದರ ಬಗ್ಗೆ ಚರ್ಚಿಸಿದ್ದಾರೆ. ಇಬ್ಬರು ಅದರ ಬಗ್ಗೆ ಕಲ ಕಾಲ ಮಾತನ್ನಾಡುತ್ತಿರೋದು ಕಂಡುಬಂದಿದೆ.

View post on Instagram
 

ನೀತು ಅಂಬಾನಿ ಧರಿಸಿದ್ದ ಬ್ರೂಚ್‌ನ ವಿಶೇಷತೆ ಏನು?

ಇನ್ನೂ ಬ್ರೂಚ್‌ನ ವಿಶೇಷತೆ ಏನು ಅಂತಾ ನೋಡೋದಾದರೆ.. ಇದನ್ನ ಪ್ರಸಿದ್ಧ ಆಭರಣ ಕಲಾವಿದ ವ್ಯಾಲೇಸ್ ಚಾನ್ ಅವರು ವಿನ್ಯಾಸಗೊಳಿಸಿದ್ದಾರೆ. ಸೋರಿಂಗ್ ಸ್ಪಿರಿಟ್ ಎಂದು ಹೆಸರಿಸಲಾದ ಈ ಬ್ರೂಚ್‌ಗೆ ಡ್ರಾಗನ್ ಫ್ಲೈಬ್ರೂಚ್ ವಿನ್ಯಾಸ ಮಾಡಿದ್ದಾರೆ. ಇದನ್ನ ಡಿಸೈನ್ ಮಾಡಲು ಸುಮಾರು 10 ವರ್ಷಗಳು ಬೇಕಾಯಿತು. 17.67 ಕ್ಯಾರೆಟ್ ಟ್ಸಾವೋರೆಟ್ ಗಾರ್ನೆಟ್, ಹಳದಿ ವಜ್ರಗಳು, ಬಿಳಿ ವಜ್ರಗಳು ಮತ್ತು ಅಲಂಕಾರಿಕ ಬಣ್ಣಗಳ ವಜ್ರಗಳು, ಮಾಣಿಕ್ಯಗಳು ಸೇರಿದಂತೆ ಟೈಟಾನಿಯಂನಿಂದ ವಿನ್ಯಾಸ ಮಾಡಲಾಗಿದೆ. ಇನ್ನು ಈ ವಿನ್ಯಾಸ ಹಿಂದೆ ಒಂದು ವಿಶೇಷ ಸಂದೇಶ ಕೂಡ ಅಡಗಿದೆಯಂತೆ!

ವ್ಯಾಲೇಸ್ ಚಾನ್ ಅವರ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿ ಪ್ರಕಾರ.. ಅದರ ರೆಕ್ಕೆಗಳು ಅಬ್ಯಾಕಸ್‌ನಂತೆ ಡಿಸೈನ್ ಮಾಡಲಾಗಿದೆ. ಇದು ಕೇವಲ ವಿನ್ಯಾಸವಲ್ಲ. ಡ್ರಾಗನ್ ಫ್ಲೈ ಅನ್ನು ಕನಸುಗಳು,ಸ್ವಾತಂತ್ರ್ಯ ಮತ್ತು ಅನಂತ ಸಾಧ್ಯತೆಗಳ ಸಂಕೇತ ಎಂದು ಪರಿಗಣಿಸಲಾಗಿದೆಯಂತೆ.

ವಜ್ರಗಳು ಮತ್ತು ಆಭರಣಗಳಿಂದ ಅಲಂಕರಿಸಲ್ಪಟ್ಟ ಈ ಬ್ರೂಚ್ ಅನ್ನು ವಿಶೇಷ ಟೈಟಾನಿಯಂ ವಸ್ತುವಿನಿಂದ ತಯಾರಿಸಲಾಗಿದ್ದು, ಇದು ಹೊಂದಿಕೊಳ್ಳುವ ಮತ್ತು ಧರಿಸುವವರ ಚಲನೆಗಳೊಂದಿಗೆ ಚಲಿಸುವಂತೆ ಮಾಡುತ್ತದೆ. ಇದರ ಬೆಲೆ $1.5 ಮಿಲಿಯನ್ ನಿಂದ $1.8 ಮಿಲಿಯನ್ ವರೆಗೆ ಇರುತ್ತದೆ ಎಂದು ಅಂದಾಜಿಸಲಾಗಿದೆ, ಇದು ಭಾರತೀಯ ಕರೆನ್ಸಿಯಲ್ಲಿ ಸುಮಾರು ₹120 ಮಿಲಿಯನ್ ನಿಂದ ₹150 ಮಿಲಿಯನ್ ವರೆಗೆ ಇರುತ್ತದೆ.

View post on Instagram