ಪೇಪರ್ ಲೀಕ್ ಕುರಿತು ಪ್ರಧಾನಿ ಮೋದಿ ಮಧ್ಯರಾತ್ರಿ ವಿಡಿಯೋ ಪೋಸ್ಟ್ ಮಾಡಿದ್ದರು. ಈ ವಿಡಿಯೋಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಇಂದು ತಡ ರಾತ್ರಿ ಮೋದಿ ಯುವ ಸಮೂಹದ ಸ್ಟೈಲ್‌ನಲ್ಲಿ ಮತ್ತೊಂದು ವಿಡಿಯೋ ಮೂಲಕ ಮಹತ್ವದ ಸಂದೇಶ ನೀಡಿದ್ದಾರೆ.
- Home
- News
- India News
- National News Live: ಜೆನ್‌ಝಿ ಉದ್ದೇಶಿ ಮತ್ತೊಂದು ವಿಡಿಯೋ ಹಂಚಿಕೊಂಡ ಮೋದಿ, ಇನ್‌ಸ್ಟಾ ಮೂಲಕ ಮಹತ್ವದ ಸಂದೇಶ
National News Live: ಜೆನ್‌ಝಿ ಉದ್ದೇಶಿ ಮತ್ತೊಂದು ವಿಡಿಯೋ ಹಂಚಿಕೊಂಡ ಮೋದಿ, ಇನ್‌ಸ್ಟಾ ಮೂಲಕ ಮಹತ್ವದ ಸಂದೇಶ

ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಹಾಗೂ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ 26 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಹೋರಾಟಗಾರ ಸೋನಂ ವಾಂಗ್ಚುಕ್ ಅವರು ಗುರುವಾರ ತಡರಾತ್ರಿ ತಮ್ಮ ನಿರಶನವನ್ನು ಅಂತ್ಯಗೊಳಿಸಿದ್ದಾರೆ.
ವಾಂಗ್ಚುಕ್ ಅವರು ಚಿಕಿತ್ಸೆ ಪಡೆಯುತ್ತಿರುವ ಗುರುಗ್ರಾಮದ ಮೇದಾಂತ ಮೆಡಿಸಿಟಿ ಆಸ್ಪತ್ರೆಗೆ ಭೇಟಿ ನೀಡಿದ ಕೇಂದ್ರ ಸಚಿವ ಜೆ.ಪಿ.ನಡ್ಡಾ ಹಾಗೂ ಜಿತೇಂದ್ರ ಸಿಂಗ್ ಅವರು ವಾಂಗ್ಚುಕ್ ಮನವೊಲಿಸುವಲ್ಲಿ ಕಡೆಗೂ ಯಶಸ್ವಿಯಾಗಿದ್ದಾರೆ.
ಮಧ್ಯರಾತ್ರಿ ಮೋದಿ ಸೆಲ್ಫಿ ವಿಡಿಯೋ ಸಂದೇಶ
ಮತ್ತೊಂದೆಡೆ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧ ಜಿರಳೆ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರ ಪ್ರತಿಭಟನೆ ತೀವ್ರಗೊಂಡಿರುವಾಗಲೇ ಗುರುವಾರ ಮಧ್ಯರಾತ್ರಿ ಸುಮಾರು 3 ನಿಮಿಷಗಳ ಸೆಲ್ಫಿ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಶುಕ್ರವಾರ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ತರ ನಿರ್ಧಾರ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ.
India News Live Updates;ಜೆನ್‌ಝಿ ಉದ್ದೇಶಿ ಮತ್ತೊಂದು ವಿಡಿಯೋ ಹಂಚಿಕೊಂಡ ಮೋದಿ, ಇನ್‌ಸ್ಟಾ ಮೂಲಕ ಮಹತ್ವದ ಸಂದೇಶ
India News Live Updates;ಮೋದಿ ಮಧ್ಯರಾತ್ರಿ Instagram ವಿಡಿಯೋ ಸೂಪರ್‌ಹಿಟ್, 24 ಗಂಟೆಯಲ್ಲಿ 1 ಮಿಲಿಯನ್ ಫಾಲೋವರ್ಸ್ ಹೆಚ್ಚಳ!
ನೀಟ್ ಪೇಪರ್ ಲೀಕ್ ಕುರಿತು ಪ್ರಧಾನಿ ಮೋದಿ ಹಂಚಿಕೊಂಡ ಸೆಲ್ಫಿ ವೀಡಿಯೋದಿಂದಾಗಿ, ಅವರ ಇನ್‌ಸ್ಟಾಗ್ರಾಮ್ ಖಾತೆಗೆ ಒಂದೇ ರಾತ್ರಿಯಲ್ಲಿ 10 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳು ಸೇರ್ಪಡೆಯಾಗಿದ್ದಾರೆ.
India News Live Updates;ಕಾಕ್ರೋಚ್ ಪ್ರತಿಭಟನೆಯಲ್ಲಿ ಭಾಗವಹಿಸಲು ಹಣದ ಆಮಿಷ - ನಟಿ ಆಕಾಂಕ್ಷಾ ಪುರಿ ಗಂಭೀರ ಆರೋಪ!
ನಟಿ ಆಕಾಂಕ್ಷಾ ಪುರಿ ಅವರು ಜಂತರ್ ಮಂತರ್ ಪ್ರತಿಭಟನೆಯಲ್ಲಿ ಭಾಗವಹಿಸಲು ಕಲಾವಿದರಿಗೆ ಹಣದ ಆಮಿಷ ಒಡ್ಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ವಿದ್ಯಾರ್ಥಿಗಳ ಹೋರಾಟವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.
India News Live Updates;ಪ್ರತಿಭಟನೆ ಒತ್ತಡಗಳ ನಡುವೆ ಮಹತ್ವದ ಬೆಳವಣಿಗೆ, ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ರಾಜೀನಾಮೆ
ಒಂದೆಡೆ ನೀಟ್ ಪ್ರತಿಭಟನೆ, ಶಿ್ಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸೇರಿದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಮೇಲೆ ಒತ್ತಡ ತೀವ್ರಗೊಳ್ಳುತ್ತಿದೆ. ಇದರ ನಡುವೆ ಕೇಂದ್ರ ಸರ್ಕಾರದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಇದೀಗ ಸಚಿವ ರವನೀತ್ ಸಿಂಗ್ ಬಿಟ್ಟು ರಾಜೀನಾಮೆ ನೀಡಿದ್ದಾರೆ.
India News Live Updates;CJP ಪ್ರತಿಭಟನೆಯಲ್ಲಿ ಪಾಕಿಗಳ ಕುತಂತ್ರ - ಆಪರೇಷನ್ ಸಿಂದೂರಕ್ಕೂ ಲಿಂಕ್- ಶಾಕಿಂಗ್ ಮಾಹಿತಿ ಕೊಟ್ಟ ಪೊಲೀಸ್
India News Live Updates;ರೀಲ್ಸ್ ಸ್ಟಾರ್, ಯೂಟ್ಯೂಬರ್‌ಗಳಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಾದ ಜಂತರ್-ಮಂತರ್ ಪ್ರತಿಭಟನೆ!
ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯು ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳಿಗೆ ಕಂಟೆಂಟ್ ಕ್ರಿಯೇಷನ್ ತಾಣವಾಗಿ ಮಾರ್ಪಟ್ಟಿದೆ.ಇವರ ವೀಡಿಯೊಗಳು ಹೋರಾಟಕ್ಕೆ ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಚಾರ ನೀಡುತ್ತಿದ್ದು, ವೀಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದ್ದಾರೆ.
India News Live Updates;ರಾತ್ರಿ 8 ಗಂಟೆಗೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಹತ್ವದ ಘೋಷಣೆ, ತೀವ್ರ ಕುತೂಹಲ ಕೆರಳಿಸಿದ ನಡೆ
ಇಂದು (ಜು.24) ರಾತ್ರಿ ಗಂಟೆಗೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ದೇಶವನ್ನುದ್ದೇಶಿ ಮಾತನಾಡಲಿದ್ದಾರೆ. ಹಲವು ಘೋಷಣೆಗಳು ಹೊರಬೀಳಲಿದೆ. ನೀಟ್ ಪೇಪರ್ ಲೀಕ್ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪ್ರಧಾನ್ ನಡೆ ತೀವ್ರ ಕುತೂಹಲ ಕೆರಳಿಸಿದೆ.
India News Live Updates;ಇತಿಹಾಸ ಸೃಷ್ಟಿಸಿದ ಶ್ರೇಯಸ್ ಅಯ್ಯರ್, ಈ ಸಾಧನೆ ಮಾಡಿದ ಭಾರತದ ಮೊಟ್ಟಮೊದಲ ಕ್ಯಾಪ್ಟನ್...
ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆಲ್ಲುವ ಮೂಲಕ ಶ್ರೇಯಸ್ ಅಯ್ಯರ್ ಹೊಸ ದಾಖಲೆ ಬರೆದಿದ್ದಾರೆ. ಸತತ 8 ಟಿ20 ಪಂದ್ಯಗಳಲ್ಲಿ ಟಾಸ್ ಗೆದ್ದ ಅವರು, ಈ ಹಿಂದೆ 7 ಬಾರಿ ಟಾಸ್ ಗೆದ್ದಿದ್ದ ಎಂಎಸ್ ಧೋನಿ ಅವರ ದಾಖಲೆಯನ್ನು ಮುರಿದಿದ್ದಾರೆ.
India News Live Updates;ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪ್ರಶ್ನೆಯೇ ಇಲ್ಲ, ಕೇಂದ್ರ ಸರ್ಕಾರದ ಮೂಲಗಳ ಸ್ಪಷ್ಟನೆ
ನೀಟ್-ಯುಜಿ ಅಕ್ರಮದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ರಾಜೀನಾಮೆಯ ಬದಲು ಪರೀಕ್ಷಾ ವ್ಯವಸ್ಥೆಯ ಸುಧಾರಣೆಗೆ ಆದ್ಯತೆ ನೀಡುವುದಾಗಿ ಹೇಳಿದ್ದಾರೆ.
India News Live Updates;ಏಷ್ಯನ್ ಗೇಮ್ಸ್ ಕ್ರಿಕೆಟ್ ವೇಳಾಪಟ್ಟಿ ಪ್ರಕಟ; ಇಂಡೋ-ಪಾಕ್ ಹೈವೋಲ್ಟೇಜ್ ಮ್ಯಾಚ್ ಸೆಮಿ ಅಥವಾ ಫೈನಲ್‌ನಲ್ಲೇ ಫಿಕ್ಸ್!
India News Live Updates;ಕುಂಭಮೇಳ ಚೆಲುವೆ ಮೋನಾಲಿಸಾಗೆ ಪೊಲೀಸ್ ರಕ್ಷಣೆಗೆ 'ಒಕೆ' ಎಂದ ಕೋರ್ಟ್; ಎಲ್ಲಿದ್ದಾರೆ ಈಗ ರುದ್ರಾಕ್ಷಿ ಸುಂದರಿ?!
ಸೂತ್ರ ಕತ್ತರಿಸಿದ ಗಾಳಿಪಟದಂತಾಗಿರುವ ಮೋನಾಲಿಸಾ ಬಾಳು ಈಗ ಕಾನೂನು ಹೋರಾಟ ಮತ್ತು ಪೊಲೀಸ್ ರಕ್ಷಣೆಯ ನೆರಳಿನಲ್ಲಿ ಸಾಗುತ್ತಿದೆ. ಗ್ಲಾಮರ್ ಪ್ರಪಂಚದ ಮಿಂಚು ಹರಿಸಬೇಕಿದ್ದ ಹುಡುಗಿ, ಇಂದು ತನ್ನ ಪ್ರಾಣ ಉಳಿಸಿಕೊಳ್ಳಲು ಹೋರಾಡುತ್ತಿರುವುದು ವಿಪರ್ಯಾಸವೇ ಸರಿ!
India News Live Updates;ವಾರ್ಷಿಕೋತ್ಸವದ ಸಂಭ್ರಮದಲ್ಲಿ ಗೌರವ - ಕೇವಲ 85 ಅದೃಷ್ಟವಂತರಿಗೆ ಮಾತ್ರ ಸಿಗಲಿದೆ ಈ ಸ್ಪೆಷಲ್ ಎಡಿಷನ್ SUV!
India News Live Updates;"₹20 ಲಕ್ಷದ ಅದ್ದೂರಿ ಮದುವೆ ಬೇಕಾ?" ಬಂಧುಗಳನ್ನು ಮೆಚ್ಚಿಸಲು ಸಾಲದಲ್ಲಿ ಮುಳುಗಬೇಡಿ! ಬೆಂಗಳೂರು ಸಿಎ ನೀಡಿದ ಶಾಕ್
India News Live Updates;ಕೇವಲ 20 ದಿನಗಳಲ್ಲಿ 2 ಅಪರೂಪದ ದಾಖಲೆ ಮುರಿದ ವೈಭವ್ ಸೂರ್ಯವಂಶಿ! ಭಾರತದ ಭವಿಷ್ಯದ ಬ್ರಹಾಸ್ತ್ರವಾಗ್ತಾರಾ 15 ವರ್ಷದ ಆಟಗಾರ
India News Live Updates;ಪೇಪರ್ ಲೀಕ್ ವಿರೋಧಿ ಬಿಲ್‌ಗೆ ಕ್ಯಾಬಿನೆಟ್ ಒಪ್ಪಿಗೆ, 10 ಕೋಟಿ ದಂಡ, ಮೂರೇ ತಿಂಗಳಲ್ಲಿ ವಿಚಾರಣೆ ಪೂರ್ಣ!
ದೇಶದಲ್ಲಿ ಹೆಚ್ಚುತ್ತಿರುವ ಪರೀಕ್ಷಾ ಅಕ್ರಮ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳನ್ನು ತಡೆಯಲು ಕೇಂದ್ರ ಸರ್ಕಾರವು 'ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ, 2024'ಕ್ಕೆ ಕಠಿಣ ತಿದ್ದುಪಡಿ ತರಲು ಮುಂದಾಗಿದೆ.
India News Live Updates;ಭಾರತದ ಐಷಾರಾಮಿ ಬದುಕನ್ನು ಬಿಟ್ಟು ದುಬಾರಿ ಅಮೆರಿಕ ಆರಿಸಿಕೊಂಡ ಭಾರತೀಯ ಟೆಕ್ಕಿ ಹರಿಕಾ ಯಶೋಗಾಥೆ!
India News Live Updates;50 ವರ್ಷ ರೈಲಿನಲ್ಲಿ ಶೌಚಾಲಯವೇ ಇರಲಿಲ್ಲ.. ಈ ವ್ಯಕ್ತಿಯಿಂದ ಬಂದ ಹಾಸ್ಯಸ್ಪದ ಪತ್ರ ವ್ಯವಸ್ಥೆಯನ್ನೇ ಬದಲಾಯಿಸಿತು..
ಒಬ್ಬ ಪ್ರಯಾಣಿಕ ಬರೆದ ಒಂದು ತಮಾಷೆಯ ಮತ್ತು ಗಂಭೀರವಾದ ಪತ್ರವು ಭಾರತೀಯ ರೈಲ್ವೆಯ ಇತಿಹಾಸವನ್ನೇ ಬದಲಿಸಿತು. ಆ ಪತ್ರ ಯಾವುದು? ಅದನ್ನು ಬರೆದವರು ಯಾರು? ಇಲ್ಲಿದೆ ಕುತೂಹಲಕಾರಿ ಮಾಹಿತಿ. ಇಲ್ಲಿದೆ..
India News Live Updates;'ಜನನಾಯಗನ್' ನೋಡಿ ನಟಿ ತ್ರಿಷಾಗೆ ಖುಷಿ, ತಾಯಿಗೆ ಭಾರೀ ಬೇಸರ.. ಉಮಾ ಕೃಷ್ಣನ್ ಹೇಳಿಕೆಗೆ 'ವಿಜಯ್ ಫ್ಯಾನ್ಸ್' ಶಾಕ್!
ವಾಸ್ತವವಾಗಿ ಜನವರಿ 9ರಂದೇ ಪೊಂಗಲ್ ಹಬ್ಬಕ್ಕೆ ಬರಬೇಕಿದ್ದ ಈ ಚಿತ್ರ, ಸೆನ್ಸಾರ್ ಮಂಡಳಿಯ ತಕರಾರಿನಿಂದ ವಿಳಂಬವಾಯಿತು. ಚಿತ್ರದ ಕೆಲವು ದೃಶ್ಯಗಳು ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತವೆ ಎಂಬ ದೂರಿನ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಹೋರಾಟವೇ ನಡೆದಿತ್ತು. ಕೊನೆಗೂ ಎಲ್ಲಾ ಕಾನೂನು ಸಮರಗಳನ್ನು ಗೆದ್ದು ಸಿನಿಮಾ ಈಗ ಜನರ ಮುಂದೆ ಬಂದಿದೆ.
India News Live Updates;ಚಂಡೀಗಢದ ಸೈಕಲ್ ಪಯಣದಿಂದ ಐಐಟಿ ದೆಹಲಿಯವರೆಗೆ, ಭಾರತದ 2 ಉನ್ನತ ವಿಶ್ವವಿದ್ಯಾಲಯ ಸ್ಥಾಪಿಸಿದ ವಿನೀಶ್ ಗುಪ್ತಾ ಯಾರು?
India News Live Updates;ಚಿನ್ನ ಕೊಳ್ಳೋರಿಗೆ ಗುಡ್ ನ್ಯೂಸ್; ಬೆಲೆಯೇರಿಕೆಗೆ ಬಿತ್ತು ಬ್ರೇಕ್, ಸತತ ಏರಿಕೆ ಬಳಿಕ ದಿಢೀರ್ ಕುಸಿದ ಗೋಲ್ಡ್ ರೇಟ್!
ಬೆಂಗಳೂರು: ಅಮೆರಿಕ ಹಾಗೂ ಇರಾನ್ ನಡುವಿನ ಯುದ್ದ ಭೀತಿಯ ಪರಿಣಾಮ ಸತತ ಏರಿಕೆಯತ್ತ ಮುಖಮಾಡಿದ್ದ ಚಿನ್ನದ ಬೆಲೆ ಇಂದು ದಿಢೀರ್ ಕುಸಿತ ಕಂಡಿದೆ. ಜುಲೈ 24ರಂದು ಬೆಂಗಳೂರಿನಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಿದೆ ಎನ್ನುವುದನ್ನು ನೋಡೋಣ ಬನ್ನಿ