ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆಲ್ಲುವ ಮೂಲಕ ಶ್ರೇಯಸ್ ಅಯ್ಯರ್ ಹೊಸ ದಾಖಲೆ ಬರೆದಿದ್ದಾರೆ. ಸತತ 8 ಟಿ20 ಪಂದ್ಯಗಳಲ್ಲಿ ಟಾಸ್ ಗೆದ್ದ ಅವರು, ಈ ಹಿಂದೆ 7 ಬಾರಿ ಟಾಸ್ ಗೆದ್ದಿದ್ದ ಎಂಎಸ್ ಧೋನಿ ಅವರ ದಾಖಲೆಯನ್ನು ಮುರಿದಿದ್ದಾರೆ.

ಹರಾರೆ (ಜು.24): ಜೂನ್ 26 ರಂದು ಐರ್ಲೆಂಡ್ ವಿರುದ್ಧ ಭಾರತ ತಂಡದ ಪರ ಟಿ20ಐ ನಾಯಕತ್ವಕ್ಕೆ ಪಾದಾರ್ಪಣೆ ಮಾಡಿದ ಅಯ್ಯರ್, ಗುರುವಾರ ನಡೆದ ತಮ್ಮ ಎಂಟನೇ ಟಿ20ಐ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದಾರೆ . ಇದುವರೆಗಿನ ಎಲ್ಲಾ ಎಂಟು ಪಂದ್ಯಗಳಲ್ಲಿ ಅವರು ಟಾಸ್ ಗೆದ್ದಿದ್ದಾರೆ. ಶ್ರೇಯಸ್ ಅಯ್ಯರ್ ಗುರುವಾರ (ಜುಲೈ 23) ಜಿಂಬಾಬ್ವೆ ವಿರುದ್ಧದ ಮೊದಲ ಟಿ20ಐನಲ್ಲಿ ಭಾರತವನ್ನು ಮುನ್ನಡೆಸಿ ಟಾಸ್‌ ಗೆಲ್ಲುವ ಮೂಲಕ ದಾಖಲೆ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಮುಂಬೈನ 31 ವರ್ಷದ ಬಲಗೈ ಬ್ಯಾಟ್ಸ್‌ಮನ್ ಟಿ20ಐಗಳಲ್ಲಿ ಸತತ ಎಂಟು ಟಾಸ್ ಗೆದ್ದ ಭಾರತದ ಮೊದಲ ನಾಯಕರಾಗಿದ್ದಾರೆ.

ಜೂನ್ 26 ರಂದು ಬೆಲ್‌ಫಾಸ್ಟ್‌ನಲ್ಲಿ ಐರ್ಲೆಂಡ್ ವಿರುದ್ಧ ಭಾರತ ತಂಡದ ಪರ ಟಿ20ಐ ನಾಯಕತ್ವಕ್ಕೆ ಪಾದಾರ್ಪಣೆ ಮಾಡಿದ ಅಯ್ಯರ್,ಇದುವರೆಗಿನ ಎಲ್ಲಾ ಎಂಟು ಪಂದ್ಯಗಳಲ್ಲಿ ಟಾಸ್ ಗೆದ್ದಿದ್ದಾರೆ.

ಇದಕ್ಕೂ ಮುನ್ನ ಸತತ ಟಿ20 ಪಂದ್ಯಗಳಲ್ಲಿ ಟೀಮ್‌ ಇಂಡಿಯಾ ಪರವಾಗಿ ಗರಿಷ್ಠ ಪಂದ್ಯಗಳಲ್ಲಿ ಟಾಸ್‌ ಗೆದ್ದ ದಾಖಲೆ ಮಹೇಂದ್ರ ಸಿಂಗ್‌ ಧೋನಿ ಹೆಸರಲ್ಲಿತ್ತು. 2010ರ ಮೇ ತಿಂಗಳಿನಿಂದ 2012ರ ಫೆಬ್ರವರಿವರೆಗೆ ಎಂಎಸ್‌ ಧೋನಿ ಸತತ 7 ಟಿ20 ಪಂದ್ಯಗಳಲ್ಲಿ ಟಾಸ್‌ ಗೆದ್ದಿದ್ದರು.

ಟಿ20 ತಂಡದ ನಾಯಕನಾಗಿ ಗರಿಷ್ಠ ಸತತ ಪಂದ್ಯಗಳಲ್ಲಿ ಟಾಸ್‌ ಗೆಲುವು

  • 8*-ಶ್ರೇಯಸ್‌ ಅಯ್ಯರ್‌ (ಜೂನ್‌ 2026-ಜುಲೈ 2026)
  • 7 – ಎಂಎಸ್ ಧೋನಿ (ಮೇ 2010 – ಫೆಬ್ರವರಿ 2012)
  • 6 – ವಿರಾಟ್ ಕೊಹ್ಲಿ (ಆಗಸ್ಟ್ 2019 – ಡಿಸೆಂಬರ್ 2019)
  • 5 – ರೋಹಿತ್ ಶರ್ಮಾ (ಫೆಬ್ರವರಿ 2020 – ಫೆಬ್ರವರಿ 2022)
  • 5 – ಎಂಎಸ್ ಧೋನಿ (ಸೆಪ್ಟೆಂಬರ್ 2007)

ಪೂರ್ಣ ಸದಸ್ಯ ತಂಡಗಳ ಪೈಕಿ T20I ಗಳಲ್ಲಿ ಸತತವಾಗಿ ಅತಿ ಹೆಚ್ಚು ಟಾಸ್ ಗೆದ್ದ ವಿಶ್ವ ದಾಖಲೆಯು ವೆಸ್ಟ್ ಇಂಡೀಸ್‌ನ ಮಾಜಿ ಆಲ್‌ರೌಂಡರ್ ಡೇರೆನ್ ಸ್ಯಾಮಿ ಅವರ ಹೆಸರಿನಲ್ಲಿದೆ, ಅವರು ಸತತ 10 ಪಂದ್ಯಗಳಲ್ಲಿ ಟಾಸ್ ಗೆದ್ದಿದ್ದಾರೆ.

T20I ಗಳಲ್ಲಿ ಸತತ ಹೆಚ್ಚು ಟಾಸ್ ಗೆಲುವುಗಳನ್ನು ಗೆದ್ದ ನಾಯಕರು (ಪೂರ್ಣ ಸದಸ್ಯ ತಂಡಗಳು)

  • 10 – ಡೇರೆನ್ ಸ್ಯಾಮಿ (ವೆಸ್ಟ್ ಇಂಡೀಸ್, 2015-2016)
  • 9 – ಸಲ್ಮಾನ್ ಅಘಾ (ಪಾಕಿಸ್ತಾನ, 2025-2026)
  • 8 – ಹ್ಯಾರಿ ಬ್ರೂಕ್ (ಇಂಗ್ಲೆಂಡ್, 2025-2026)
  • 8 – ಆರನ್ ಫಿಂಚ್ (ಆಸ್ಟ್ರೇಲಿಯಾ, 2022)
  • 8* – ಶ್ರೇಯಸ್ ಅಯ್ಯರ್ (ಭಾರತ, 2026)