MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಕಾಕ್ರೋಚ್‌ ಪ್ರತಿಭಟನೆಯಲ್ಲಿ ಭಾಗವಹಿಸಲು ಹಣದ ಆಮಿಷ: ನಟಿ ಆಕಾಂಕ್ಷಾ ಪುರಿ ಗಂಭೀರ ಆರೋಪ!

ಕಾಕ್ರೋಚ್‌ ಪ್ರತಿಭಟನೆಯಲ್ಲಿ ಭಾಗವಹಿಸಲು ಹಣದ ಆಮಿಷ: ನಟಿ ಆಕಾಂಕ್ಷಾ ಪುರಿ ಗಂಭೀರ ಆರೋಪ!

ನಟಿ ಆಕಾಂಕ್ಷಾ ಪುರಿ ಅವರು ಜಂತರ್ ಮಂತರ್ ಪ್ರತಿಭಟನೆಯಲ್ಲಿ ಭಾಗವಹಿಸಲು ಕಲಾವಿದರಿಗೆ ಹಣದ ಆಮಿಷ ಒಡ್ಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ವಿದ್ಯಾರ್ಥಿಗಳ ಹೋರಾಟವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.

2 Min read
Author : Santosh Naik
Published : Jul 24 2026, 09:07 PM IST
Share this Photo Gallery
  • FB
  • TW
  • Linkdin
  • Whatsapp
15
ಪ್ರತಿಭಟನೆ ಹೆಸರಲ್ಲಿ ಹಣಗಳಿಕೆಗೆ ಆಮಿಷ: ನಟಿ ಆಕಾಂಕ್ಷಾ ಪುರಿ ಬಾಂಬ್‌!
Image Credit : X

ಪ್ರತಿಭಟನೆ ಹೆಸರಲ್ಲಿ ಹಣಗಳಿಕೆಗೆ ಆಮಿಷ: ನಟಿ ಆಕಾಂಕ್ಷಾ ಪುರಿ ಬಾಂಬ್‌!

ಟಿವಿ, ಸಿನಿಮಾದಲ್ಲಿ ಸಕ್ರಿಯರಾಗಿರುವ ಪ್ರಸಿದ್ಧ ನಟಿ ಆಕಾಂಕ್ಷಾ ಪುರಿ, ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ನಟ-ನಟಿಯರು ಹಾಗೂ ಕಂಟೆಂಟ್ ಕ್ರಿಯೇಟರ್ಸ್‌ಗೆ ಹಣದ ಆಮಿಷ ಒಡ್ಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪ್ರತಿಭಟನೆಯನ್ನು ವೈಯಕ್ತಿಕ ಪ್ರಚಾರಕ್ಕೆ ಅಥವಾ ಹಣ ಮಾಡುವ ಮಾರ್ಗವನ್ನಾಗಿ ಮಾಡಿಕೊಳ್ಳಬೇಡಿ ಎಂದು ಕಲಾವಿದರಲ್ಲಿ ಮನವಿ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಈ ಮಾರ್ಕೆಟಿಂಗ್‌ ಕಸದ ಭಾಗವಾಗಲು ನನಗಿಷ್ಟವಿಲ್ಲ
Image Credit : X

ಈ ಮಾರ್ಕೆಟಿಂಗ್‌ ಕಸದ ಭಾಗವಾಗಲು ನನಗಿಷ್ಟವಿಲ್ಲ

ಸಂದರ್ಶನವೊಂದರಲ್ಲಿ ಮಾತನಾಡಿದ ಆಕಾಂಕ್ಷಾ ಪುರಿ, ನನ್ನೊಂದಿಗೆ ಇರುವ ಹಲವು ನಟರು ಹಾಗೂ ಕಂಟೆಂಟ್ ಕ್ರಿಯೇಟರ್ಸ್‌ಗಳಿಗೆ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಆಪ್ರೋಚ್ ಮಾಡುತ್ತಿವೆ. ಪ್ರತಿಭಟನಾ ರ‍್ಯಾಲಿಗೆ ತೆರಳಿ ಮುಖ ತೋರಿಸಲು ಹಾಗೂ ಅದನ್ನು ಮಾರ್ಕೆಟಿಂಗ್ ಮಾಡಿಕೊಳ್ಳಲು ಹಣ ನೀಡುವ ಆಫರ್ ನೀಡಲಾಗುತ್ತಿದೆ. ಆದರೆ, ಈ ರೀತಿಯ ಕಸದ ಭಾಗವಾಗಲು ನನಗಿಷ್ಟವಿಲ್ಲ. ಧರಣಿ ಸ್ಥಳದಲ್ಲಿ ನಾನು ಸ್ಥಳದಲ್ಲಿ ಇರುತ್ತೇನೆಯೋ ಇಲ್ಲವೋ ಮುಖ್ಯವಲ್ಲ, ಆದರೆ ನಾನು ನಿಜವಾದ ಮತ್ತು ಸರಿಯಾದ ವಿಷಯಕ್ಕೆ ಮಾತ್ರ ಬೆಂಬಲ ನೀಡುತ್ತೇನೆ ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ.

Related Articles

Related image1
'ಇಷ್ಟೊಂದು ದುರಹಂಕಾರ..' ಜಂತರ್‌ ಮಂತರ್‌ನಿಂದ ಸೋನಮ್ ಸ್ಥಳಾಂತರ, ಮೋದಿ ಸರ್ಕಾರದ ವಿರುದ್ಧ ಕೇಜ್ರಿ, ಅಜಾದ್ ವಾಗ್ದಾಳಿ
Related image2
ರೀಲ್ಸ್‌ ಸ್ಟಾರ್‌, ಯೂಟ್ಯೂಬರ್‌ಗಳಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಾದ ಜಂತರ್‌-ಮಂತರ್‌ ಪ್ರತಿಭಟನೆ!
35
ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟ; ಆಕಾಂಕ್ಷಾ ಕಳವಳ
Image Credit : X

ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟ; ಆಕಾಂಕ್ಷಾ ಕಳವಳ

ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ ನಟಿ, ವಿದ್ಯಾರ್ಥಿಗಳು ಈ ದೇಶದ ಭವಿಷ್ಯ. ಅವರ ಪ್ರಸ್ತುತ ಪರಿಸ್ಥಿತಿ ಹಾಗೂ ಜಂತರ್ ಮಂತರ್‌ನ ದೃಶ್ಯಗಳನ್ನು ಕಂಡು ನನಗೆ ತೀವ್ರ ಬೇಸರವಾಗಿದೆ. ವಿದ್ಯಾರ್ಥಿಗಳು ಕೇಳುತ್ತಿರುವುದು ಬಹಳ ಸಣ್ಣ ವಿಷಯ. ಅವರ ಧ್ವನಿಯನ್ನು ಸರ್ಕಾರ ಆಲಿಸಬೇಕು ಮತ್ತು ಪ್ರತಿಯೊಬ್ಬರೂ ನಿಜವಾದ ಸಂತ್ರಸ್ತ ವಿದ್ಯಾರ್ಥಿಗಳ ಪರವಾಗಿ ನಿಲ್ಲಬೇಕು. ಇದನ್ನು ಸ್ವಾರ್ಥಕ್ಕೆ ಬಳಸಿಕೊಳ್ಳಬಾರದು ಎಂದಿದ್ದಾರೆ.

45
ಸೋನಮ್ ವಾಂಗ್ಚುಕ್ ಬಲವಂತದ ತೆರವು ಹಾಗೂ ತೀವ್ರಗೊಂಡ ಹೋರಾಟ
Image Credit : X

ಸೋನಮ್ ವಾಂಗ್ಚುಕ್ ಬಲವಂತದ ತೆರವು ಹಾಗೂ ತೀವ್ರಗೊಂಡ ಹೋರಾಟ

ಜುಲೈ 18 ರಂದು ಜಂತರ್ ಮಂತರ್‌ನಲ್ಲಿ 21 ದಿನಗಳ ಸುದೀರ್ಘ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಿದ್ದ ಪ್ರಸಿದ್ಧ ಪರಿಸರ ಮತ್ತು ಶಿಕ್ಷಣ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ದೆಹಲಿ ಪೊಲೀಸರು ಬಲವಂತವಾಗಿ ತೆರವುಗೊಳಿಸಿದ ನಂತರ ಈ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ. ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ಕ್ಷೀಣಿಸಿದ ಹಿನ್ನೆಲೆಯಲ್ಲಿ, ವೈದ್ಯಕೀಯ ಸಲಹೆ ಹಾಗೂ ದೆಹಲಿ ಹೈಕೋರ್ಟ್ ಆದೇಶದಂತೆ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.

55
ಪರೀಕ್ಷಾ ಅಕ್ರಮ ಖಂಡಿಸಿ ಶಿಕ್ಷಣ ಸಚಿವರ ರಾಜೀನಾಮೆಗೆ ಪಟ್ಟು
Image Credit : X

ಪರೀಕ್ಷಾ ಅಕ್ರಮ ಖಂಡಿಸಿ ಶಿಕ್ಷಣ ಸಚಿವರ ರಾಜೀನಾಮೆಗೆ ಪಟ್ಟು

ದೇಶಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ (ನೀಟ್ ಸೇರಿದಂತೆ) ನಡೆದಿದೆ ಎನ್ನಲಾದ ಭಾರಿ ಅಕ್ರಮ ಹಾಗೂ ಪೇಪರ್ ಲೀಕ್ ಪ್ರಕರಣಗಳನ್ನು ಖಂಡಿಸಿ ಸೋನಮ್ ವಾಂಗ್ಚುಕ್ ಹಾಗೂ ವಿವಿಧ ವಿದ್ಯಾರ್ಥಿ ಸಂಘಟನೆಗಳು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಿರಂತರ ಹೋರಾಟ ನಡೆಸುತ್ತಿವೆ. ಈ ಹೋರಾಟದ ಸುತ್ತಲೂ ಈಗ ಮಾರ್ಕೆಟಿಂಗ್ ಮತ್ತು ಹಣದ ವ್ಯವಹಾರ ನಡೆಯುತ್ತಿದೆ ಎಂಬ ಆಕಾಂಕ್ಷಾ ಪುರಿ ಅವರ ಹೇಳಿಕೆಯು ತೀವ್ರ ಸಂಚಲನ ಮೂಡಿಸಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಪ್ರತಿಭಟನೆ
ನೀಟ್
ಮನರಂಜನಾ ಸುದ್ದಿ
ಟಿವಿ ಶೋ
ಮುಂಬೈ
Latest Videos
Recommended Stories
Recommended image1
ಮೈಸೂರು ಹುಡುಗನ ಕೈಹಿಡಿದ ಮಹಾನಟಿ ಖ್ಯಾತಿಯ ದಿವ್ಯಾಂಜಲಿ, ಅನಾಥೆಯ ಬಾಳಲ್ಲಿ ಸಂಭ್ರಮದ ಅಧ್ಯಾಯ!
Recommended image2
ದೇವಾಲಯಕ್ಕೆ ಬಂದಾಗ ಪ್ಲೀಸ್ ನಮ್ಮನ್ನು ವಿಲನ್​ ಥರ ನೋಡ್ಬೇಡಿ: ನಟಿ ಅಶ್ವಿನಿ ಗೌಡ ಮನವಿ ಮಾಡಿದ್ಯಾಕೆ
Recommended image3
300 ಸಂಚಿಕೆ ಪೂರೈಸಿದ ‘ನಂದಗೋಕುಲ’, ಯಶಸ್ಸಿಗೆ ಪತ್ನಿಯೇ ಕಾರಣ ಎಂದ ನಿರ್ದೇಶಕ ಶ್ರವಂತ್
Related Stories
Recommended image1
'ಇಷ್ಟೊಂದು ದುರಹಂಕಾರ..' ಜಂತರ್‌ ಮಂತರ್‌ನಿಂದ ಸೋನಮ್ ಸ್ಥಳಾಂತರ, ಮೋದಿ ಸರ್ಕಾರದ ವಿರುದ್ಧ ಕೇಜ್ರಿ, ಅಜಾದ್ ವಾಗ್ದಾಳಿ
Recommended image2
ರೀಲ್ಸ್‌ ಸ್ಟಾರ್‌, ಯೂಟ್ಯೂಬರ್‌ಗಳಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಾದ ಜಂತರ್‌-ಮಂತರ್‌ ಪ್ರತಿಭಟನೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved