ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ಬೆಕ್ಕು ಅಡ್ಡ ಬಂದ ಕಾರಣ ಚಾಲಕ ಹಠಾತ್ತಾಗಿ ಬ್ರೇಕ್ ಹಾಕಿದ್ದರಿಂದ ಕೂಲಿ ಕಾರ್ಮಿಕರಿದ್ದ ಆಟೋ ಪಲ್ಟಿಯಾಗಿ 10 ಮಹಿಳೆಯರು ಗಾಯಗೊಂಡಿದ್ದಾರೆ. ಬೆಕ್ಕನ್ನು ಉಳಿಸಲು ಹೋಗಿ ನಡೆದ ಈ ಅಪಘಾತದಲ್ಲಿ ಮೂವರು ಮಹಿಳೆಯರ ಸ್ಥಿತಿ ಗಂಭೀರವಾಗಿದೆ.
- Home
- News
- India News
- India Latest News Live: ಪ್ರಾಣಕ್ಕೆ ಕುತ್ತು ತಂದ ಬೆಕ್ಕು.. ಆಸ್ಪತ್ರೆ ಸೇರಿದ 10 ಮಹಿಳೆಯರು..
India Latest News Live: ಪ್ರಾಣಕ್ಕೆ ಕುತ್ತು ತಂದ ಬೆಕ್ಕು.. ಆಸ್ಪತ್ರೆ ಸೇರಿದ 10 ಮಹಿಳೆಯರು..
ಅಯೋಧ್ಯಾ/ರಾಯ್ಬರೇಲಿ: ಶ್ರೀರಾಮ ಜನ್ಮಭೂಮಿ ಅಯೋಧ್ಯೆಯ 15 ಕಿ.ಮೀ. ವ್ಯಾಪ್ತಿಯಲ್ಲಿ ಮಾಂಸಾಹಾರ ಸೇವನೆಗೆ ನಿಷೇಧವಿದ್ದರೂ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರಾಯ್ ಮೀನು ತಿಂದಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ. ಈ ಆರೋಪವನ್ನು ತಳ್ಳಿಹಾಕಿರುವ ರಾಯ್, ಸಾಕ್ಷ್ಯಕೊಡಿ ಎಂದು ಸವಾಲು ಹಾಕಿದ್ದಾರೆ.
ರಾಯ್ ಅಯೋಧ್ಯೆಯ ಹನುಮಾನ್ ಗಢಿ ಹಾಗೂ ರಾಮಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಮಾಡಿದ್ದರು. ಆ ಬಳಿಕ 30 ಕಿ.ಮೀ. ದೂರದ ತರುಣ್ಗೆ ತೆರಳಿ ನಿಷಾದ ಸಮುದಾಯ ಸಭೆಯಲ್ಲಿ ಭಾಗವಹಿಸಿ ಭೋಜನ ಮಾಡಿದ್ದರು. ಆ ವೇಳೆ ಅವರು ಮೀನೂಟ ಮಾಡಿದ್ದಾರೆ ಎಂದು ಆರೋಪಿಸಿರುವ ಯೋಗಿ, ‘ಕಾಂಗ್ರೆಸ್ ಅಧ್ಯಕ್ಷರು ದರ್ಶನಕ್ಕಾಗಿ ಹನುಮಾನ್ಗಢಿಗೆ ಹೋಗುತ್ತಾರೆ, ಹೊರಬಂದ ನಂತರ ಮೀನೂಟ ಸವಿಯುತ್ತಾರೆ. ನಂತರ ರಾಮ್-ರಾಮ್ ಎನ್ನುತ್ತಾರೆ. ನಿರ್ಲಜ್ಜತನಕ್ಕೂ ಒಂದು ಮಿತಿಯಿರುತ್ತದೆ’ ಎಂದಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ರಾಯ್, ‘ಸಿಎಂ ತಮ್ಮ ಆರೋಪಕ್ಕೆ ವಿಡಿಯೋ ಅಥವಾ ಫೋಟೊ ಸಾಕ್ಷ್ಯ ನೀಡಬೇಕು. ಹಾಗಾದರೆ ನಾನು ಅಧ್ಯಕ್ಷ ಸ್ಥಾನಕ್ಕೇ ರಾಜೀನಾಮೆ ಕೊಡುತ್ತೇನೆ’ ಎಂದಿದ್ದಾರೆ.
India Latest News Live 25 August 2026 ಪ್ರಾಣಕ್ಕೆ ಕುತ್ತು ತಂದ ಬೆಕ್ಕು.. ಆಸ್ಪತ್ರೆ ಸೇರಿದ 10 ಮಹಿಳೆಯರು..
India Latest News Live 25 August 2026 ಆಪರೇಷನ್ ಸಿಂದೂರ್ ವೇಳೆ ಪಾಕ್ ಅಣ್ವಸ್ತ್ರ ಕೇಂದ್ರ Kirana Hills ದಾಳಿ ಮಾಡಿದ್ದನ್ನು ಕಡೆಗೂ ಒಪ್ಪಿಕೊಂಡ ಭಾರತ!
ಪಾಕಿಸ್ತಾನದ ಕಿರಾನಾ ಹಿಲ್ಸ್ ಅಣ್ವಸ್ತ್ರ ತಾಣದ ಮೇಲಿನ ದಾಳಿ ಉದ್ದೇಶಪೂರ್ವಕವಾಗಿರಲಿಲ್ಲ ಎಂದು ಮಾಜಿ ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಸ್ಪಷ್ಟಪಡಿಸಿದ್ದಾರೆ. 'ಆಪರೇಷನ್ ಸಿಂಧೂರ್' ವೇಳೆ ರಡಾರ್ ಪತ್ತೆಗಾಗಿ ಕಳುಹಿಸಿದ್ದ ಡ್ರೋನ್ ಇಂಧನ ಖಾಲಿಯಾಗಿ ಅಲ್ಲಿ ಅಪ್ಪಳಿಸಿತ್ತು ಎಂದು ಅವರು ವಿವರಿಸಿದ್ದಾರೆ.
India Latest News Live 25 August 2026 IND vs SL test - ಭಾರತದ ಗೆಲುವಿನಲ್ಲಿ ಮಳೆ ಪ್ರಮುಖ ಪಾತ್ರವಹಿಸುತ್ತದೆಯೇ? ಬುಧವಾರ ಏನಾಗಬಹುದು?
ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಭಾರತ ಗೆಲುವಿನ ಹಾದಿಯಲ್ಲಿದ್ದರೂ, ಕೊಲಂಬೊದಲ್ಲಿ ಬುಧವಾರ ಭಾರಿ ಮಳೆಯ ಮುನ್ಸೂಚನೆ ಇರುವುದು ಗೆಲುವಿಗೆ ಅಡ್ಡಿಯಾಗಬಹುದು. ಫಾಲೋ-ಆನ್ ತಪ್ಪಿಸಿಕೊಳ್ಳಲು ಲಂಕಾ ಪಡೆಗೆ ಇನ್ನೂ 39 ರನ್‌ಗಳ ಅಗತ್ಯವಿದ್ದು, ಸೋನಲ್ ದಿನುಶಾ ಅವರ ಬ್ಯಾಟಿಂಗ್ ಪಂದ್ಯವನ್ನು ಡ್ರಾ ಮಾಡುವತ್ತ ಕೊಂಡೊಯ್ಯುವ ಸಾಧ್ಯತೆಯಿದೆ.
India Latest News Live 25 August 2026 ಸ್ವಿಗ್ಗಿ ಡೆಲಿವರಿ ಕೆಲಸ ಮಾಡಿ ಕೂಡಿಟ್ಟ ದುಡ್ಡಲ್ಲಿ ಅಮ್ಮನಿಗೆ ಸ್ಮಾರ್ಟ್ ಟಿವಿ ಗಿಫ್ಟ್! ಮಗನ ಪ್ರೀತಿಗೆ ಕಣ್ಣೀರಾದ ಕುಟುಂಬ, ವಿಡಿಯೋ ವೈರಲ್
India Latest News Live 25 August 2026 ಶಿವಭಕ್ತರಿಗೆ ಸದ್ಗುರು ಸರ್ಪ್ರೈಸ್ ಗಿಫ್ಟ್ - 2027ಕ್ಕೆ ಬೆಳ್ಳಿಪರದೆಗೆ ಬರಲಿದೆ ‘ಶಿವ - ದಿ ಆದಿಯೋಗಿ’ ಅನಿಮೇಷನ್ ಸಿನಿಮಾ
ಇಶಾ ಫೌಂಡೇಶನ್ ಮತ್ತು 'ದಿ ಲೆಜೆಂಡ್ ಆಫ್ ಹನುಮಾನ್' ಖ್ಯಾತಿಯ ಗ್ರಾಫಿಕ್ ಇಂಡಿಯಾ ಸಂಸ್ಥೆಯು 'ಶಿವ – ದಿ ಆದಿಯೋಗಿ' ಎಂಬ ಅನಿಮೇಷನ್ ಚಲನಚಿತ್ರವನ್ನು ನಿರ್ಮಿಸುತ್ತಿವೆ. ಸದ್ಗುರುಗಳ ಬೋಧನೆಗಳನ್ನು ಆಧರಿಸಿದ ಈ ಚಿತ್ರವು ಯೋಗದ ಉಗಮ ಮತ್ತು ಆದಿಯೋಗಿಯ ಜೀವನವನ್ನು ಚಿತ್ರಿಸಲಿದೆ.
India Latest News Live 25 August 2026 ಕೆಲಸದಿಂದ ನಿವೃತ್ತಿ? ಸಚಿವ ಗಡ್ಕರಿ ಹೇಳಿದ್ದೇ ಒಂದು, ವೈರಲ್ ಆಗ್ತಿರೋದೇ ಇನ್ನೊಂದು! ಏನಿದರ ಅಸಲಿಯತ್ತು
India Latest News Live 25 August 2026 ಬೆಂಗಳೂರು ಟ್ರಾಫಿಕ್ ಸಾವಾಸ ಬೇಡ ಅಂತ ದುಬೈನಲ್ಲಿ ಸೆಟ್ಲ್ ಆಗಿರೋ ರಾಬಿನ್ ಉತ್ತಪ್ಪರಿಂದ ಸಿಎಂ ಡಿಕೆಶಿ ಬಳಿ ಅಚ್ಚರಿ ಬೇಡಿಕೆ..!
ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಕೊಡಗಿನ ಕುವರ ರಾಬಿನ್ ಉತ್ತಪ್ಪ, ಇಂದು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಅಚ್ಚರಿಯ ಬೇಡಿಕೆಯಿಟ್ಟಿದ್ದಾರೆ. ಅಷ್ಟಕ್ಕೂ ರಾಬಿನ್ ಉತ್ತಪ್ಪ ಬೇಡಿಕೆ ಏನು ಎನ್ನುವುದನ್ನು ನೋಡೋಣ ಬನ್ನಿ.
India Latest News Live 25 August 2026 ರೈತನ ಹೊಲದಲ್ಲಿ ಅಚ್ಚರಿ.. ಒಂದೇ ಜಾಗದಲ್ಲಿ ರಹಸ್ಯ ಹೊದ್ದು ಮಲಗಿದ್ದವು 32 ನಾಗಪಡಗ ಶಿಲೆಗಳು
ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ರೈತನೊಬ್ಬ ಹೊಲವನ್ನು ಸಮತಟ್ಟು ಮಾಡುವಾಗ ಬರೋಬ್ಬರಿ 32 ಪುರಾತನ ನಾಗಪಡಗ ಶಿಲೆಗಳು ಪತ್ತೆಯಾಗಿವೆ. ಭಾರೀ ಕುತೂಹಲ ಮೂಡಿಸಿರುವ ಶಿಲೆಗಳು ಒಂದಷ್ಟು ರಹಸ್ಯಗಳನ್ನು ಹೊದ್ದು ನಿಂತಿರುವ ಅನುಮಾನ ಸ್ಥಳೀಯರಲ್ಲಿ ಕಾಡಿದೆ.
India Latest News Live 25 August 2026 ಸಮವಸ್ತ್ರ ಇರುವುದು ಹಿಜಾಬ್ ಧರಿಸಲು ಅಲ್ಲ- ಶಾಲಾ-ಕಾಲೇಜುಗಳಲ್ಲಿ ಅನುಮತಿ ಸಾಧ್ಯವಿಲ್ಲ ಎಂದ ಹೈಕೋರ್ಟ್
India Latest News Live 25 August 2026 AI ಬರುವ ಮೊದಲು ಡೇಟಾ ಸೆಂಟರ್‌ಗಳ ಉದ್ದೇಶ ಏನಾಗಿತ್ತು? ನಿಮಗೆ ಅಚ್ಚರಿ ಮೂಡಿಸುವ ಮಾಹಿತಿ ಇಲ್ಲಿದೆ!
ಕೃತಕ ಬುದ್ಧಿಮತ್ತೆ (ಎಐ) ಬರುವ ಮುನ್ನವೇ ಡೇಟಾ ಸೆಂಟರ್‌ಗಳು ಅಸ್ತಿತ್ವದಲ್ಲಿದ್ದವು, ಇವು ವೆಬ್‌ಸೈಟ್‌ಗಳು, ಆನ್‌ಲೈನ್ ಸೇವೆಗಳು ಮತ್ತು ಸರ್ಕಾರಿ ಡೇಟಾವನ್ನು ಸುರಕ್ಷಿತವಾಗಿ ಸಂಗ್ರಹಿಸಿ, ಪ್ರಕ್ರಿಯೆಗೊಳಿಸುತ್ತಿದ್ದವು.
India Latest News Live 25 August 2026 ವಿಶೇಷ ಚೇತನನ ಬದುಕನ್ನೇ ಬದಲಿಸಿದ 10 ಸೆಕೆಂಡ್ ವಿಡಿಯೋ - 10 ವರ್ಷಗಳಿಂದ ಕಾಣೆಯಾದವನ ಮನಕಲುಕುವ ಸ್ಟೋರಿ
India Latest News Live 25 August 2026 ನ್ಯೂಜಿಲೆಂಡ್, ಆಸ್ಟ್ರೇಲಿಯಾ ಸರಣಿ ಭಾರತದ WTC Final ಭವಿಷ್ಯ ನಿರ್ಧರಿಸುತ್ತಾ? ರಾಹುಲ್ ದ್ರಾವಿಡ್ ಹೇಳಿದ್ದೇನು?
India Latest News Live 25 August 2026 ಪೆಟ್ರೋಲ್ ತುಂಬಿಸುವಾಗ ನೋಡಿ ಹೇಗೆ ಮೋಸ ಮಾಡ್ತಾರೆಂದು - ವಿಡಿಯೋ ಮಾಡಿದ್ದಕ್ಕೆ ಅಸಲಿಯತ್ತು ಗೊತ್ತಾಯ್ತು
India Latest News Live 25 August 2026 ಮಗನ ಸಾವಿನ ನೋವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು.. 17 ವರ್ಷದ ಪುತ್ರನ ಅಂಗಾಂಗ ದಾನ..
ಕೇರಳದಲ್ಲಿ ಬೈಕ್ ಅಪಘಾತದಲ್ಲಿ ಮೃತಪಟ್ಟ 17 ವರ್ಷದ ಆದಿಲ್ ಎಂಬ ಬಾಲಕನ ಪೋಷಕರು, ಮಗನ ಸಾವಿನ ನೋವಿನ ನಡುವೆಯೂ ಆತನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ಹೃದಯದ ಕವಾಟಿನ ದೋಷದಿಂದಾಗಿ ಹೃದಯ ದಾನ ಮಾಡಲು ಸಾಧ್ಯವಾಗದಿದ್ದರೂ, ಆತನ ಮೂತ್ರಪಿಂಡ ಹಾಗೂ ಯಕೃತ್ತನ್ನು ದಾನ ಮಾಡುವ ಮೂಲಕ ಇತರರಿಗೆ ಮರುಜೀವ ನೀಡಲು ಪೋಷಕರು ಮುಂದಾಗಿದ್ದಾರೆ.
India Latest News Live 25 August 2026 'ಸಂಸ್ಕೃತಿ ಇರೋದು ಮಹಿಳೆಯ ಹೃದಯದಲ್ಲಿ, ಆಕೆಯ ನೆಕ್‌ಲೈನ್‌ನಲ್ಲಲ್ಲ' ರಕ್ಷಾಬಂಧನ ಜಾಹೀರಾತು ಟ್ರೋಲ್‌ಗೆ ನಟಿ ತಿರುಗೇಟು!
ನಟಿ ಕೃತಿ ಸನೋನ್ ಅವರ ರಕ್ಷಾಬಂಧನ ಜಾಹೀರಾತು, ಅವರ ಉಡುಪು ಮತ್ತು ನಾಯಿಗೆ ರಾಖಿ ಕಟ್ಟಿದ್ದಕ್ಕಾಗಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಕೃತಿ, 'ಸಂಸ್ಕೃತಿ ಇರುವುದು ಮನಸ್ಸಿನಲ್ಲಿ, ಉಡುಪಿನ ನೆಕ್‌ಲೈನ್‌ನಲ್ಲಿ ಅಲ್ಲ' ಎಂದು ಟ್ರೋಲ್‌ಗಳಿಗೆ ತಿರುಗೇಟು ನೀಡಿದ್ದಾರೆ.
India Latest News Live 25 August 2026 ಮತ್ತೊಂದು ಅತೀ ದೊಡ್ಡ ಹಗರಣ - ನಕಲಿ ದಾಖಲೆ ಸೃಷ್ಟಿಸಿ ವಿದೇಶಕ್ಕೆ 2,395 ರೂಪಾಯಿ ಟ್ರಾನ್ಸ್‌ಫರ್
ಜೈಪುರದ ಸಿಎ ಒಬ್ಬರು 3,168 ನಕಲಿ 15CB ಪ್ರಮಾಣಪತ್ರಗಳನ್ನು ಬಳಸಿ 2,395 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ವಿದೇಶಕ್ಕೆ ವರ್ಗಾಯಿಸಿದ ಆರೋಪದ ಮೇಲೆ ಎಫ್‌ಐಆರ್ ಎದುರಿಸುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆಯ ತನಿಖೆಯಲ್ಲಿ, ಯಾವುದೇ ವಹಿವಾಟು ನಡೆಸದ 40ಕ್ಕೂ ಹೆಚ್ಚು ಶಂಕಾಸ್ಪದ ಕಂಪನಿಗಳ ಮೂಲಕ ಈ ಹಣ ರವಾನೆಯಾಗಿರುವುದು ಬಯಲಾಗಿದೆ.
India Latest News Live 25 August 2026 ಭಾರತದಲ್ಲಿ ಜಂಕ್‌ಫುಡ್, ತಂಪಾನೀಯಕ್ಕೆ ರೆಡ್ ಸಿಗ್ನಲ್ ನೀಡಲು ಹಿಂದೇಟು - ಆಹಾರ ದೈತ್ಯರ ಒತ್ತಡಕ್ಕೆ ಮಣಿದ FSSAI?
ಜಾಗತಿಕ ಆಹಾರ ದೈತ್ಯ ಕಂಪನಿಗಳಾದ ಕೊಕಾ-ಕೋಲಾ, ನೆಸ್ಲೆ ಭಾರತದಲ್ಲಿ ಪ್ಯಾಕ್ ಮಾಡಿದ ಆಹಾರಗಳ ಮೇಲೆ ಆರೋಗ್ಯ ಮುನ್ನೆಚ್ಚರಿಕೆ ಲೇಬಲ್‌ಗಳನ್ನು ವಿರೋಧಿಸುತ್ತಿವೆ. ಯುರೋಪ್‌ಗೆ ಹೋಲಿಸಿದರೆ ಭಾರತದಲ್ಲಿ ಮಾರಾಟವಾಗುವ ಇಂಥ ಪ್ರಾಡಕ್ಟ್‌ಗಳಲ್ಲಿ ಮುನ್ನೆಚ್ಚರಿಕೆಗಳೂ ಇರೋದಿಲ್ಲ.
India Latest News Live 25 August 2026 ಭಾರತಕ್ಕೆ ಬಂದ್ರು ಸುಂದರ ಕ್ರಿಕೆಟ್ ಆಟಗಾರ್ತಿ; ರಾತ್ರೋರಾತ್ರಿ ಫ್ಯಾನ್ಸ್ ಕ್ರಶ್, ಸ್ಮೃತಿ ಮಂಧನಾರನ್ನೇ ಹಿಂದಿಕ್ಕಿದ ಚೆಲುವೆ..! ಯಾರೀಕೆ?
ಬೆಂಗಳೂರು: ಭಾರತದ ಮಹಿಳಾ ಕ್ರಿಕೆಟ್ ಇತ್ತೀಚಿಗಿನ ವರ್ಷಗಳಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಕಳೆದ ಕೆಲವು ವರ್ಷಗಳಿಂದ ಭಾರತೀಯ ಕ್ರಿಕೆಟಿಗ ಕ್ರಶ್ ಆಗಿದ್ದ ಸ್ಮೃತಿ ಮಂಧನಾ ಅವರನ್ನೇ ಹಿಂದಿಕ್ಕುವಂತಹ ಸುಂದರಿ ಕ್ರಿಕೆಟ್‌ಗೆ ಎಂಟ್ರಿಕೊಟ್ಟಿದ್ದಾರೆ. ಅಷ್ಟಕ್ಕೂ ಯಾರೀಕೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
India Latest News Live 25 August 2026 BCCIನಲ್ಲಿ ಕೆಲಸ ಮಾಡಬೇಕಾ? ಇಲ್ಲಿದೆ ನೋಡಿ ಸುವರ್ಣಾವಕಾಶ, ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜೂನಿಯರ್ ಕ್ರಿಕೆಟ್ ಸಮಿತಿಯ ಐದು ಸ್ಥಾನಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಕನಿಷ್ಠ 25 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿ, ಐದು ವರ್ಷಗಳ ಹಿಂದೆ ನಿವೃತ್ತರಾದ ಮಾಜಿ ಕ್ರಿಕೆಟಿಗರು ಸೆಪ್ಟೆಂಬರ್ 5, 2026 ರೊಳಗೆ ಅರ್ಜಿ ಸಲ್ಲಿಸಬಹುದು.