- Home
- Karnataka Districts
- Bengaluru Urban
- ಬೆಂಗಳೂರು ಟ್ರಾಫಿಕ್ ಸಾವಾಸ ಬೇಡ ಅಂತ ದುಬೈನಲ್ಲಿ ಸೆಟ್ಲ್ ಆಗಿರೋ ರಾಬಿನ್ ಉತ್ತಪ್ಪರಿಂದ ಸಿಎಂ ಡಿಕೆಶಿ ಬಳಿ ಅಚ್ಚರಿ ಬೇಡಿಕೆ..!
ಬೆಂಗಳೂರು ಟ್ರಾಫಿಕ್ ಸಾವಾಸ ಬೇಡ ಅಂತ ದುಬೈನಲ್ಲಿ ಸೆಟ್ಲ್ ಆಗಿರೋ ರಾಬಿನ್ ಉತ್ತಪ್ಪರಿಂದ ಸಿಎಂ ಡಿಕೆಶಿ ಬಳಿ ಅಚ್ಚರಿ ಬೇಡಿಕೆ..!
ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಕೊಡಗಿನ ಕುವರ ರಾಬಿನ್ ಉತ್ತಪ್ಪ, ಇಂದು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಅಚ್ಚರಿಯ ಬೇಡಿಕೆಯಿಟ್ಟಿದ್ದಾರೆ. ಅಷ್ಟಕ್ಕೂ ರಾಬಿನ್ ಉತ್ತಪ್ಪ ಬೇಡಿಕೆ ಏನು ಎನ್ನುವುದನ್ನು ನೋಡೋಣ ಬನ್ನಿ.

ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ
ತಮ್ಮ ಅದ್ಭುತ ಬ್ಯಾಟಿಂಗ್ ಸ್ಕಿಲ್ ಹಾಗೂ ಡಿಫರೆಂಟ್ ಬ್ಯಾಟಿಂಗ್ ಸ್ಟ್ಯಾನ್ಸ್ ಮೂಲಕ ಗಮನ ಸೆಳೆದಿದ್ದ ಕನ್ನಡಿಗ ರಾಬಿನ್ ಉತ್ತಪ್ಪ, ಕರ್ನಾಟಕ ಹಾಗೂ ಭಾರತ ತಂಡದ ಪರ ಹಲವಾರು ಪಂದ್ಯಗಳಲ್ಲಿ ತಂಡಕ್ಕೆ ಏಕಾಂಗಿಯಾಗಿ ಗೆಲುವು ತಂದುಕೊಟ್ಟಿದ್ದಾರೆ. ಭಾರತ ತಂಡವನ್ನು ಪ್ರತಿನಿಧಿಸಿದ ಅದ್ಭುತ ಕ್ರಿಕೆಟಿಗರ ಪೈಕಿ ರಾಬಿನ್ ಉತ್ತಪ್ಪ ಕೂಡಾ ಒಬ್ಬರು. ಇದಷ್ಟೇ ಅಲ್ಲದೇ 2007ರ ಐಸಿಸಿ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಲ್ಲಿ ರಾಬಿನ್ ಉತ್ತಪ್ಪ ಕೂಡಾ ಒಬ್ಬರಾಗಿದ್ದಾರೆ.
ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ಉತ್ತಪ್ಪ
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ, ಕ್ರಿಕೆಟ್ ಕಾಮೆಂಟ್ರಿ ಮೂಲಕ ಸಕ್ರಿಯವಾಗಿರುವ ರಾಬಿನ್ ಉತ್ತಪ್ಪ, ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತು, ದುಬೈಗೆ ಸ್ಥಳಾಂತರವಾಗಿದ್ದಾರೆ. ತಮ್ಮ ಮಕ್ಕಳು ಹಾಗೂ ಕುಟುಂಬ ಬೆಂಗಳೂರಿನ ಈ ಭಯಂಕರ ಟ್ರಾಫಿಕ್ ಕಿರಿಕಿರಿಯಿಂದ ನರಳುವುದು ಬೇಡ ಎನ್ನುವ ನಿರ್ಧಾರಕ್ಕೆ ಬಂದು ತಾವು ದುಬೈಗೆ ಸ್ಥಳಾಂತರವಾಗುತ್ತಿರುವುದಾಗಿ ಈ ಹಿಂದೆ ರಾಬಿನ್ ಉತ್ತಪ್ಪ ಹೇಳಿದ್ದರು.
ಬೆಂಗಳೂರು ಟ್ರಾಫಿಕ್ ಕಿರಿಕಿರಿಯಿಂದ ಬೆಂಗಳೂರು ತೊರೆದ ಉತ್ತಪ್ಪ
ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ ಎಂದೇ ಖ್ಯಾತವಾಗಿರುವ ಬೆಂಗಳೂರು ಇತ್ತೀಚಿಗಿನ ವರ್ಷಗಳಲ್ಲಿ ಹೆಚ್ಚು ಟ್ರಾಫಿಕ್ ಸಿಟಿ ಎನ್ನುವ ಕುಖ್ಯಾತಿಗೆ ಒಳಗಾಗಿದೆ. ಈ ವಿಚಾರವಾಗಿ ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ್ದ ಉತ್ತಪ್ಪ, ನಾನು ನನ್ನ ಪ್ರೀತಿಯ ಬೆಂಗಳೂರನ್ನು ತೊರೆಯುತ್ತಿದ್ದೇನೆ. ಯಾಕಂದ್ರೆ ನನ್ನ ಮಕ್ಕಳು ಬೆಂಗಳೂರಿನ ಟ್ರಾಫಿಕ್‌ನಲ್ಲಿ ಅರ್ಧ ಆಯಸ್ಸು ಕಳೆಯುವುದನ್ನು ನಾನು ಬಯಸುವುದಿಲ್ಲ. ಇದೇ ನಾನು ಬೆಂಗಳೂರು ಬಿಟ್ಟು ಸ್ಥಳಾಂತರವಾಗಲು ಇರುವ ನೈಜ ಕಾರಣ ಎಂದಿದ್ದರು.
ಬಿಡಿಎ ಸೈಟ್‌ಗೆ ಉತ್ತಪ್ಪ ಮನವಿ
ಇದು ಬೆಂಗಳೂರು ಟ್ರಾಫಿಕ್ ಬಗ್ಗೆ ಮತ್ತೊಮ್ಮೆ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಯನ್ನು ಹುಟ್ಟುಹಾಕಿತ್ತು. ಇದೆಲ್ಲದರ ನಡುವೆ ಇಂದು ಕ್ರಿಕೆಟಿಗ ರಾಬಿನ್ ಉತ್ತಪ್ಪ, ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ತಮಗೆ ಬಿಡಿಎನಲ್ಲಿ ನಿವೇಶನ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಮಾಹಿತಿ ಹಂಚಿಕೊಂಡ ಎ ಎಸ್ ಪೊನ್ನಣ್ಣ
ಈ ವಿಚಾರವನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ ಎಸ್ಬ ಪೊನ್ನಣ್ಣ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ರಾಬಿನ್ ಉತ್ತಪ್ಪನವರನ್ನು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ಅವರೊಂದಿಗೆ ಭೇಟಿ ಮಾಡಿಸಿದ ಸಂದರ್ಭ. ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ತನಗೆ ಬಿಡಿಎ ನಿವೇಶನ ನೀಡುವಂತೆ ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದಲಾಯಿತು ಎಂದು ಫೋಟೋ ಹಂಚಿಕೊಂಡಿದ್ದಾರೆ.
2006ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದ ರಾಬಿನ್ ಉತ್ತಪ್ಪ
2006ರ ಏಪ್ರಿಲ್‌ನಲ್ಲಿ ಇಂಗ್ಲೆಂಡ್ ವಿರುದ್ದ ಭಾರತ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ರಾಬಿನ್ ಉತ್ತಪ್ಪ, ತಾವಾಡಿದ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯದಲ್ಲೇ 86 ರನ್ ಸಿಡಿಸಿ ಗಮನ ಸೆಳೆದಿದ್ದರು. ಭಾರತ 2007ರ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಉತ್ತಪ್ಪ, 2022ರ ಸೆಪ್ಟೆಂಬರ್‌ನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

