11:18 PM (IST) Jul 22

India Latest News Live 22 July 2026 'ವಿದ್ಯಾರ್ಥಿಗಳಿಗೆ ಬೆಂಬಲವಿದೆ, ರಾಜಕೀಯವಾಗಿ ಇದನ್ನ ಹೈಜಾಕ್‌ ಮಾಡಬೇಡಿ..' ಜಂತರ್ ಮಂತರ್‌ ಪ್ರತಿಭಟನೆಗೆ ಸಲ್ಮಾನ್‌ ಖಾನ್‌ ಸಪೋರ್ಟ್‌

ನೀಟ್‌ ಪ್ರಶ್ನೆ ಪತ್ರಿಕೆ ಲೀಕ್‌ ವಿವಾದದ ಹಿನ್ನೆಲೆಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗೆ ನಟ ಸಲ್ಮಾನ್ ಖಾನ್ ಬೆಂಬಲ ಸೂಚಿಸಿದ್ದಾರೆ. ವಿದ್ಯಾರ್ಥಿಗಳ ಶಾಂತಿಯುತ ಹೋರಾಟವನ್ನು ಶ್ಲಾಘಿಸಿರುವ ಅವರು, ಈ ಚಳವಳಿಯನ್ನು ರಾಜಕೀಯವಾಗಿ ಹೈಜಾಕ್ ಮಾಡಬಾರದು ಎಂದು ಮನವಿ ಮಾಡಿದ್ದಾರೆ.

Read Full Story
10:54 PM (IST) Jul 22

India Latest News Live 22 July 2026 'ಬೆಂಕಿ ಇಲ್ಲದೆ ಹೊಗೆ ಬರಲ್ಲ'; ರೋಹಿತ್ ಶರ್ಮಾ ಭವಿಷ್ಯದ ಬಗ್ಗೆ ಹೊಸ ಬಾಂಬ್ ಸಿಡಿಸಿದ ರವಿಚಂದ್ರನ್ ಅಶ್ವಿನ್

ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ನಿವೃತ್ತಿ ವದಂತಿ ಹಬ್ಬಿತ್ತು. ಆದರೆ, ಶತಕ ಸಿಡಿಸಿ ಉತ್ತರ ನೀಡಿದ್ದ ರೋಹಿತ್ ಕುರಿತ ವದಂತಿಗಳ ಹಿಂದೆ ಸತ್ಯಾಂಶವಿತ್ತು ಎಂದು ರವಿಚಂದ್ರನ್ ಅಶ್ವಿನ್ ಇದೀಗ ಹೇಳಿದ್ದು, ಅವರ ಭವಿಷ್ಯದ ಬಗ್ಗೆಯೂ ಮಾತನಾಡಿದ್ದಾರೆ.
Read Full Story
09:53 PM (IST) Jul 22

India Latest News Live 22 July 2026 'ಅದೆಲ್ಲಾ ಕ್ರಿಕೆಟ್‌ನಲ್ಲಿ ಕಾಮನ್'; ಇಂಗ್ಲೆಂಡ್ ಎದುರಿನ ಸರಣಿಯಲ್ಲಿ ಅನುಭವಿಸಿದ ಘಟನೆ ಬಿಚ್ಚಿಟ್ಟ ವೈಭವ್ ಸೂರ್ಯವಂಶಿ

ಇಂಗ್ಲೆಂಡ್ ಸರಣಿಯಿಂದ ಕೈಬಿಟ್ಟ ಬಳಿಕ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಮತ್ತೆ ಪುಟಿದೇಳಲು ಸಜ್ಜಾಗಿದ್ದಾರೆ. ಜಿಂಬಾಬ್ವೆ ವಿರುದ್ಧದ ಸರಣಿಗೆ ಆತ್ಮವಿಶ್ವಾಸದಿಂದಿರುವ ಅವರು, ಈ ಹಿಂದೆ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಶತಕ ಸಿಡಿಸಿದ್ದ ಹರಾರೆ ಮೈದಾನದಲ್ಲೇ ಮತ್ತೆ ಉತ್ತಮ ಪ್ರದರ್ಶನ ನೀಡುವ ಭರವಸೆಯಲ್ಲಿದ್ದಾರೆ.
Read Full Story
09:38 PM (IST) Jul 22

India Latest News Live 22 July 2026 'ಇದೇ ಮೈದಾನದಲ್ಲಿ ಇತಿಹಾಸ ಬರೆದಿದ್ದೆವು' - ಹರಾರೆ ತಲುಪುತ್ತಿದ್ದಂತೆ ಭಾವಕರಾದ ವೈಭವ್ ಸೂರ್ಯವಂಶಿ!

ಜಿಂಬಾಬ್ವೆಯ ಹರಾರೆಗೆ ಆಗಮಿಸಿರುವ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ, ತಮ್ಮ ವೃತ್ತಿಜೀವನದ ಏಳು-ಬೀಳುಗಳ ಬಗ್ಗೆ ಮಾತನಾಡಿದ್ದಾರೆ. ಇದೇ ಮೈದಾನದಲ್ಲಿ ಅಂಡರ್-19 ವಿಶ್ವಕಪ್ ಗೆದ್ದ ಕ್ಷಣವನ್ನು ನೆನಪಿಸಿಕೊಂಡ ಅವರು, ಜಿಂಬಾಬ್ವೆ ವಿರುದ್ಧದ ಸರಣಿಗೆ ಆತ್ಮವಿಶ್ವಾಸದಿಂದ ಸಿದ್ಧರಾಗಿರುವುದಾಗಿ ತಿಳಿಸಿದ್ದಾರೆ.
Read Full Story
09:01 PM (IST) Jul 22

India Latest News Live 22 July 2026 ಟೀಂ ಇಂಡಿಯಾದ ಮೊದಲ ಟಿ20 ಕ್ಯಾಪ್ಟನ್ ಯಾರು ಗೊತ್ತಾ? ಧೋನಿಯಂತೂ ಅಲ್ಲವೇ ಅಲ್ಲ

ಭಾರತ ಪುರುಷರ ಕ್ರಿಕೆಟ್ ತಂಡವು ಟಿ20 ಮಾದರಿಯಲ್ಲಿ ಜಗತ್ತಿನ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ. ಮೂರು ಟಿ20 ವಿಶ್ವಕಪ್ ಗೆದ್ದ ಏಕೈಕ ತಂಡ ಎನ್ನುವ ಹೆಗ್ಗಳಿಕೆ ಭಾರತಕ್ಕಿದೆ. ಅಂದಹಾಗೆ ಮೊದಲ ಬಾರಿಗೆ ಭಾರತ ಟಿ20 ತಂಡವನ್ನು ನಾಯಕನಾಗಿ ಮುನ್ನಡೆಸಿದ್ದು ಯಾರು ಗೊತ್ತಾ?

Read Full Story
08:53 PM (IST) Jul 22

India Latest News Live 22 July 2026 CJP ಪ್ರತಿಭಟನೆ ಬೆನ್ನಲ್ಲಿಯೇ ತನ್ನ ಇನ್ಸ್‌ಟಾಗ್ರಾಮ್‌ ಖಾತೆ ಡಿಆಕ್ಟಿವೇಟ್‌ ಮಾಡಿದ Naimisha Pradhan

'ಕಾಕ್ರೋಚ್ ಜನತಾ ಪಾರ್ಟಿ'ಯ ನೀಟ್ ಪ್ರತಿಭಟನೆ ಮತ್ತು ತೀವ್ರ ಟ್ರೋಲಿಂಗ್‌ನಿಂದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ.

Read Full Story
08:36 PM (IST) Jul 22

India Latest News Live 22 July 2026 CJP ಪ್ರತಿಭಟನೆ ಕುರಿತು ನೀಟ್​ ಟಾಪರ್​ ಅಚ್ಚರಿಯ​ ಹೇಳಿಕೆ - ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ

ನೀಟ್​ ಮರುಪರೀಕ್ಷೆ ಕುರಿತ ಪ್ರತಿಭಟನೆಗಳ ನಡುವೆ, ಟಾಪರ್ ಪನ್ಶುಲ್ ಬನ್ಸಲ್ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮರುಪರೀಕ್ಷೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಹೆಚ್ಚು ಅಧ್ಯಯನಕ್ಕೆ ಸಿಕ್ಕ ಅವಕಾಶವೆಂದು ಪರಿಗಣಿಸಿ, ತಮ್ಮ ಅಂಕಗಳನ್ನು 706 ರಿಂದ 715ಕ್ಕೆ ಸುಧಾರಿಸಿಕೊಂಡಿದ್ದಾಗಿ ಅವರು ಹೇಳಿದ್ದಾರೆ. ಪ್ರತಿಭಟನೆಯಲ್ಲಿ ಸಮಯ ವ್ಯರ್ಥ ಮಾಡುವ ಬದಲು ಓದುವುದೇ ಲೇಸು ಎಂಬುದು ಅವರ ನಿಲುವಾಗಿದೆ.
Read Full Story
08:00 PM (IST) Jul 22

India Latest News Live 22 July 2026 ಗಂಡನನ್ನೇ ಎರಡು ಪಾಲು ಮಾಡಿದ ಪಂಚಾಯಿತಿ - ಇಬ್ಬರು ಹೆಂಡ್ತಿಯರಿಗೆ 50 - 50- ದೇಶದ ಗಮನ ಸೆಳೆದ ಕೇಸ್​

ಜಾರ್ಖಂಡ್‌ನ ರಾಂಪುರದಲ್ಲಿ ಪಂಚಾಯಿತಿಯೊಂದು ವಿಚಿತ್ರ ತೀರ್ಪು ನೀಡಿದೆ. ಇಬ್ಬರು ಹೆಂಡತಿಯರನ್ನು ಹೊಂದಿದ್ದ ಪತಿಯನ್ನು ವಾರದಲ್ಲಿ ಮೂರು ದಿನ ಒಬ್ಬರ ಬಳಿ, ಇನ್ನು ಮೂರು ದಿನ ಮತ್ತೊಬ್ಬರ ಬಳಿ ಇರುವಂತೆ ಹಂಚಿಕೆ ಮಾಡಿದ್ದು, ಈ ತೀರ್ಪಿಗೆ ಇಬ್ಬರೂ ಪತ್ನಿಯರು ಒಪ್ಪಿಕೊಂಡಿದ್ದಾರೆ.
Read Full Story
07:18 PM (IST) Jul 22

India Latest News Live 22 July 2026 IND vs ZIM - ಹೊಸ ಚಾನೆಲ್‌ನಲ್ಲಿ ಈ ಸಲ ಭಾರತ-ಜಿಂಬಾಬ್ವೆ ಟಿ20 ಮ್ಯಾಚ್ ನೇರ ಪ್ರಸಾರ; ಆದ್ರೆ ಒಂದು ರುಪಾಯಿ ಖರ್ಚಿಲ್ಲದೇ ಇಲ್ಲಿ ಫ್ರೀ ಆಗಿ ಮ್ಯಾಚ್ ನೋಡಿ

ಹರಾರೆ: ಭಾರತ ಹಾಗೂ ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಸರಣಿಯು ಹೊಸ ಚಾನೆಲ್‌ನಲ್ಲಿ ಭಾರತದಲ್ಲಿ ನೇರ ಪ್ರಸಾರವಾಗಲಿದೆ. ಇದರ ಜತೆಗೆ ಒಂದು ರುಪಾಯಿ ಖರ್ಚಿಲ್ಲದೇ ಭಾರತೀಯ ಕ್ರಿಕೆಟ್ ಫ್ಯಾನ್ಸ್ ಈ ಚಾನೆಲ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ.

Read Full Story
05:44 PM (IST) Jul 22

India Latest News Live 22 July 2026 ದಿನನಿತ್ಯ ಬಳಸುವ ಈ 5 ಸಾಮಾನ್ಯ ಐಟಂ ನಿಮ್ಮ ಲಿವರ್‌ ಅನ್ನು ಆಲ್ಕೋಹಾಲ್‌ಗಿಂತಲೂ ಹೆಚ್ಚು ಹಾನಿ ಮಾಡ್ತವೆ..! ಜಾಗ್ರತೆಯಿರಲಿ

ಈ ಹೆಡ್‌ಲೈನ್ ನೋಡಿದ ನಿಮಗೂ ಅಚ್ಚರಿಯೆನಿಸಬಹುದು. ಆಲ್ಕೋಹಾಲ್ ವಿಚಾರ ಬಿಡಿ, ಇದರ ಜತೆಗೆ ದಿನನಿತ್ಯ ಬಳಸುವ ಈ ಐದು ಸಾಮಾನ್ಯ ಐಟಂಗಳು ನಿಮ್ಮ ಲಿವರ್ ಹಾಳು ಮಾಡಿಬಿಡಬಹುದು. ಈ ಉತ್ಫನ್ನಗಳು ನಿಮ್ಮ ಲಿವರ್‌ ಅನ್ನು ಆಲ್ಕೋಹಾಲ್‌ಗಿಂತ ಹೆಚ್ಚು ಹಾನಿ ಮಾಡುತ್ತವೆ ಎಂದರೇ ನೀವು ನಂಬಲೇಬೇಕು.

Read Full Story
05:03 PM (IST) Jul 22

India Latest News Live 22 July 2026 ದೇಶದ ಇಡೀ ಶಿಕ್ಷಣ ವ್ಯವಸ್ಥೆ ಅಕ್ರಮದ ಕೂಪ - ಕಳೆದ 10 ವರ್ಷಗಳಲ್ಲಿ 152 ಪೇಪರ್‌ ಲೀಕ್‌, ಒಬ್ಬರಿಗೂ ಶಿಕ್ಷೆಯಾಗಿಲ್ಲ ಎಂದ ರಾಹುಲ್‌ ಗಾಂಧಿ

ಕಳೆದ 10 ವರ್ಷಗಳಲ್ಲಿ 152 ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದರೂ ಒಬ್ಬರಿಗೂ ಶಿಕ್ಷೆಯಾಗಿಲ್ಲ ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೇಶದ ಶಿಕ್ಷಣ ವ್ಯವಸ್ಥೆಯು ಅಕ್ರಮಗಳ ಕೂಪವಾಗಿದೆ ಎಂದು ಅರೋಪಿಸಿದ್ದಾರೆ.

Read Full Story
04:35 PM (IST) Jul 22

India Latest News Live 22 July 2026 ರಾಮಮಂದಿರ ಟ್ರಸ್ಟ್ ಸಿಇಒ ಹುದ್ದೆಗೆ ಭಾರಿ ಪೈಪೋಟಿ - 5,500ಕ್ಕೂ ಹೆಚ್ಚು ಅರ್ಜಿ; ಆಗಸ್ಟ್ 15ರ ವೇಳೆಗೆ ಆಯ್ಕೆ ಪ್ರಕ್ರಿಯೆ ಅಂತ್ಯ!

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸಿಇಒ ಹುದ್ದೆಗೆ 5,500ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಮೂವರು ಸದಸ್ಯರ ಸಮಿತಿಯು ಅರ್ಜಿಗಳನ್ನು ಪರಿಶೀಲಿಸುತ್ತಿದ್ದು, ಆಗಸ್ಟ್ 15ರೊಳಗೆ ಅಂತಿಮ ಆಯ್ಕೆ ನಡೆಯಲಿದೆ.

Read Full Story
04:35 PM (IST) Jul 22

India Latest News Live 22 July 2026 6,6,6,6,6 ಪಾಕ್‌ ಬೌಲರ್ ಅಬ್ರಾರ್‌ ಚೆಂಡಾಡಿದ ನೀತಾ ಅಂಬಾನಿ ಮಾಲಿಕತ್ವದ ಮುಂಬೈ ತಂಡದ ವಿಸ್ಪೋಟಕ ಬ್ಯಾಟರ್! ವಿಡಿಯೋ ವೈರಲ್

2026ರ ದಿ ಹಂಡ್ರೆಡ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ, ಎಂಐ ಲಂಡನ್ ತಂಡವು ಸನ್‌ರೈಸರ್ಸ್ ಲೀಡ್ಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ನಿಕೋಲಸ್ ಪೂರನ್ ಅವರ ಸ್ಫೋಟಕ ಅರ್ಧಶತಕ (58*) ಮತ್ತು ನಾಯಕ ಸ್ಯಾಮ್ ಕರ್ರನ್ ಅವರ 60 ರನ್‌ಗಳ ನೆರವಿನಿಂದ ಎಂಐ ಲಂಡನ್ ಸುಲಭವಾಗಿ ಗುರಿ ತಲುಪಿತು. ಈ ಮೂಲಕ ನೀತಾ ಅಂಬಾನಿ ಮಾಲೀಕತ್ವದ ತಂಡವು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
Read Full Story
04:29 PM (IST) Jul 22

India Latest News Live 22 July 2026 ಬ್ರಿಟನ್ ನೂತನ ಪ್ರಧಾನಿಯಾಗಿ ಆ್ಯಂಡಿ ಅಧಿಕಾರಕ್ಕೆ, ಸಚಿವ ಸಂಪುಟದಲ್ಲಿ ಇಬ್ಬರು ಭಾರತೀಯ ಮೂಲದವರಿಗೆ ಪ್ರಮುಖ ಸ್ಥಾನ

ಬ್ರಿಟನ್‌ನ ನೂತನ ಪ್ರಧಾನಿ ಆ್ಯಂಡಿ ಬರ್ನ್‌ಹ್ಯಾಮ್ ಅವರ ಸಂಪುಟದಲ್ಲಿ ಭಾರತೀಯ ಮೂಲದ ಇಬ್ಬರು ಸಂಸದರು ಪ್ರಮುಖ ಸ್ಥಾನ ಪಡೆದಿದ್ದಾರೆ. ಬಿಹಾರ ಮೂಲದ ಕಾನಿಷ್ಕ ನಾರಾಯಣ್ ದೇಶದ ಮೊದಲ 'ಕೃತಕ ಬುದ್ಧಿಮತ್ತೆ' ಸಚಿವರಾದರೆ, ಕೊಲ್ಕತ್ತಾ ಮೂಲದ ಲಿಸಾ ನಂದಿ ಸಾಂಸ್ಕೃತಿಕ ಸಚಿವೆಯಾಗಿ ಮುಂದುವರೆದಿದ್ದಾರೆ.

Read Full Story
04:20 PM (IST) Jul 22

India Latest News Live 22 July 2026 Toxic - ಟಾಕ್ಸಿಕ್- 'ವಯಸ್ಕರಿಗಾಗಿ' ಮಾಡಿರೋ ಸಿನಿಮಾ ಹೌದು, ಏಕೆ? ಯಶ್ ಸಿನಿಮಾದ ಗುಟ್ಟು ಬಿಚ್ಚಿಟ್ಟ ನಿರ್ಮಾಪಕರು!

"ಇದು ಕೇವಲ ಆಕ್ಷನ್ ಸಿನಿಮಾ ಅಲ್ಲ, ಇದರಲ್ಲಿ ಗೀತು ಮೋಹನ್ ದಾಸ್ ಅವರ ವಿಶಿಷ್ಟ ನಿರೂಪಣಾ ಶೈಲಿ ಮತ್ತು ಆಳವಾದ ಭಾವನೆಗಳಿವೆ. ನಾವೇ ಹೇಳಿದಂತೆ, ಇದು ದೊಡ್ಡವರಿಗಾಗಿಯೇ (ವಯಸ್ಕರು) ಮಾಡಿರುವ ಸಿನಿಮಾ.. ಬಹಳಷ್ಟು ಗುಟ್ಟು ಬಿಚ್ಚಿಟ್ಟಿದ್ದಾರೆ ಟಾಕ್ಸಿಕ್ ಸಿನಿಮಾ ನಿರ್ಮಾಪಕರು.

Read Full Story
04:10 PM (IST) Jul 22

India Latest News Live 22 July 2026 ಟಿವಿಎಸ್‌ ಬೈಕ್‌, ಸ್ಕೂಟರ್‌ ಖರೀದಿ ಮಾಡೋ ಪ್ಲ್ಯಾನ್‌ ಇದ್ರೆ ಆದಷ್ಟು ಬೇಗ ಮಾಡಿ, ಇಲ್ಲಿದೆ ಬಿಗ್‌ ರೀಸನ್‌!

ಟಿವಿಎಸ್ ಮೋಟಾರ್ ಕಂಪನಿಯು ತನ್ನ ದ್ವಿಚಕ್ರ ವಾಹನಗಳ ಬೆಲೆಯನ್ನು 2ನೇ ತ್ರೈಮಾಸಿಕದಲ್ಲಿ ಹೆಚ್ಚಿಸಲು ನಿರ್ಧರಿಸಿದೆ. ಇದರ ಜೊತೆಗೆ, ಬ್ರಿಟಿಷ್ ಬ್ರ್ಯಾಂಡ್ 'ನಾರ್ಟನ್' ವಿಸ್ತರಣೆ, ಎಲೆಕ್ಟ್ರಿಕ್ ವಾಹನಗಳು ಮತ್ತು ಒಟ್ಟಾರೆ ಉತ್ಪಾದನಾ ಸಾಮರ್ಥ್ಯ ಹೆಚ್ಚಳಕ್ಕಾಗಿ ಹೂಡಿಕೆ ಮಾಡಲು ಕಂಪನಿ ಮುಂದಾಗಿದೆ.

Read Full Story
03:53 PM (IST) Jul 22

India Latest News Live 22 July 2026 ಗೌತಮ್ ಅದಾನಿಗೆ ಭರ್ಜರಿ ಲಾಭ, ಮೊದಲ ತ್ರೈಮಾಸಿಕದಲ್ಲಿ 4,806 ಕೋಟಿ ರೂಪಾಯಿಗೆ ಜಿಗಿತ

ಗೌತಮ್ ಅದಾನಿ ಮಾಲೀಕತ್ವದ ಅದಾನಿ ಪವರ್ ಲಾಭದಲ್ಲಿ ಭರ್ಜರಿ ಜಿಗಿತ ಕಂಡಿದೆ. ಮೊದಲ ತ್ರೈಮಾಸಿಕದಲ್ಲಿ ಶೇಕಡಾ 42ರಷ್ಟು ಏರಿಕೆ ಕಂಡಿದೆ. ಈ ಮೂಲಕ 4,806 ಕೋಟಿ ರೂಪಾಯಿ ಜೇಬಿಗಿಸಿದ್ದಾರೆ.

Read Full Story
03:35 PM (IST) Jul 22

India Latest News Live 22 July 2026 IND vs ZIM T20 - ಐರ್ಲೆಂಡ್, ಇಂಗ್ಲೆಂಡ್ ಎದುರು ಸೋತು ಬಂದಿರುವ ಭಾರತಕ್ಕೆ ಖಡಕ್ ವಾರ್ನಿಂಗ್ ಕೊಟ್ಟ ಜಿಂಬಾಬ್ವೆ ಕ್ಯಾಪ್ಟನ್ ಸಿಕಂದರ್ ರಾಜಾ!

ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಸರಣಿ ಸೋಲಿನ ಬಳಿಕ ಭಾರತ ತಂಡ ಜಿಂಬಾಬ್ವೆ ಪ್ರವಾಸ ಕೈಗೊಂಡಿದೆ. ಸರಣಿ ಆರಂಭಕ್ಕೂ ಮುನ್ನವೇ ಜಿಂಬಾಬ್ವೆ ನಾಯಕ ಸಿಕಂದರ್ ರಾಜಾ, ತಮ್ಮ ತಂಡವನ್ನು ಹಗುರವಾಗಿ ಪರಿಗಣಿಸದಂತೆ ಭಾರತಕ್ಕೆ ಎಚ್ಚರಿಕೆ ನೀಡಿದ್ದು, ಈ ಸರಣಿ ರೋಚಕವಾಗಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Read Full Story
03:27 PM (IST) Jul 22

India Latest News Live 22 July 2026 ಪೆಹಲ್ಗಾಂ ಬಳಿಕ ಜಮ್ಮು ಕಾಶ್ಮೀರದಲ್ಲಿ ಮೊದಲ ಭಯೋತ್ಪಾದಕ ದಾಳಿ, ಅಮರನಾಥ ಭದ್ರತಾ ಪೊಲೀಸ್ ಸಾವು

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಬಳಿ ಭಯೋತ್ಪಾದಕ ದಾಳಿ ನಡೆದಿದೆ. ಪೊಲೀಸ್ ಪಾರ್ಟಿ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಓರ್ವ ಪೊಲೀಸ್ ಮೃತಪಟ್ಟಿದ್ದಾರೆ. ದಾಳಿ ಬೆನ್ನಲ್ಲೇ ಅಮರನಾಥ ಯಾತ್ರೆಗೆ ಹೆಚ್ಚಿನ ಸೆಕ್ಯೂರಿಟಿ ನೀಡಲಾಗಿದೆ.

Read Full Story
03:20 PM (IST) Jul 22

India Latest News Live 22 July 2026 ಸತ್ತ ವಿಷಪೂರಿತ ಹಾವುಗಳು ಜೀವಂತ ಹಾವುಗಳಿಗಿಂತ ಅಪಾಯಕಾರಿ ಯಾಕೆ? ಇದುವೇ ಆ ರಹಸ್ಯ ನೋಡಿ

ಸತ್ತ ವಿಷಪೂರಿತ ಹಾವುಗಳು ಜೀವಂತ ಹಾವುಗಳಷ್ಟೇ ಅಪಾಯಕಾರಿ. ಸಾವಿನ ಹಲವು ಗಂಟೆಗಳ ನಂತರವೂ ಅವುಗಳ ಹಲ್ಲುಗಳಲ್ಲಿನ ಹೆಮೊಟಾಕ್ಸಿನ್ ಎಂಬ ನರವಿಷ ಸಕ್ರಿಯವಾಗಿರುತ್ತದೆ. ಆಕಸ್ಮಿಕವಾಗಿ ಈ ಹಲ್ಲುಗಳು ಚರ್ಮಕ್ಕೆ ತಾಗಿದರೆ, ವಿಷ ದೇಹವನ್ನು ಪ್ರವೇಶಿಸಿ ಸಾವು ಸಂಭವಿಸಬಹುದು.
Read Full Story