ಗೌತಮ್ ಅದಾನಿ ಮಾಲೀಕತ್ವದ ಅದಾನಿ ಪವರ್ ಲಾಭದಲ್ಲಿ ಭರ್ಜರಿ ಜಿಗಿತ ಕಂಡಿದೆ. ಮೊದಲ ತ್ರೈಮಾಸಿಕದಲ್ಲಿ ಶೇಕಡಾ 42ರಷ್ಟು ಏರಿಕೆ ಕಂಡಿದೆ. ಈ ಮೂಲಕ 4,806 ಕೋಟಿ ರೂಪಾಯಿ ಜೇಬಿಗಿಸಿದ್ದಾರೆ.

ನವದೆಹಲಿ (ಜು.22) ಉದ್ಯಮಿ ಗೌತಮ್ ಅದಾನಿ ಸಮೂಹದ ಅದಾನಿ ಪವರ್ ಭರ್ಜರಿ ಲಾಭ ಕಂಡಿದೆ. ಅದಾನಿ ಪವರ್ ಲಿಮಿಟೆಡ್ ಕಂಪನಿ ಮೊದಲ ತ್ರೈಮಾಸಿಕದಲ್ಲಿ ಲಾಭ ಶೇಕಡಾ 46ರಷ್ಟು ಏರಿಕೆಯಾಗಿದೆ. ಅದಾನಿ ಪವರ್ ಬರೋಬ್ಬರಿ 4806 ಕೋಟಿ ರೂಪಾಯಿ ಲಭಾ ಕಂಡಿದೆ. ಕಳೆದ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 3385 ಕೋಟಿ ರೂಪಾಯಿ ಲಾಭ ಕಂಡಿತ್ತು. ಈ ಬಾರಿ ಲಾಭದಲ್ಲಿ ಭಾರಿ ಜಿಗಿತ ಕಂಡಿದೆ.

15 ಸಾವಿರ ಕೋಟಿ ಬಂಡವಾಳ ಸಂಗ್ರಹಕ್ಕೆ ಗ್ರೀನ್ ಸಿಗ್ನಲ್

ಅದಾನಿ ಪವರ್ ಭರ್ಜರಿ ಲಾಭ ಕಾಣುತ್ತಿದ್ದಂತೆ ಅರ್ಹತಾ ಆಧಾರಿತ ಸಾಂಸ್ಥಿಕ ಹೂಡಿಕೆ (QIP) ಇದೀಗ ಇತರ ಮೂಲಗಳ ಮೂಲಕ ಬರೋಬ್ಬರಿ 15 ಸಾವಿರ ಕೋಟಿ ರೂಪಾಯಿ ಬಂಡವಾಳ ಸಂಗ್ರಹಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ ಅದಾನಿ ಪವಾರ್ ಮತ್ತಷ್ಟು ವಿಸ್ತರಣೆಗೊಳ್ಳಲಿದೆ. ಇಷ್ಟೇ ಅಲ್ಲ ಮುಂದಿನ ಹಣಕಾಸು ವರ್ಷದಲ್ಲಿ ಲಾಭ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಪವರ್ ಯೂನಿಟ್

ವಿದ್ಯುತ್ ಬೇಡಿಕೆ ಹೆಚ್ಚಾಗಿರುವ ಕಾರಣ ಅದಾನಿ ಪವರ್ ಭರ್ಜರಿ ಲಾಭದಲ್ಲಿದೆ. ಇದೇ ವೇಳೆ ಕಂಪನಿ ಕಾರ್ಯನಿರ್ವಹಣೆಯಲ್ಲಿ ಮಹತ್ತರ ಬದಲಾವಣೆಯಾಗಿದೆ. ಪವರ್ ಯುನಿಟ್, ಹಂಚಿಕೆ ಹೆಚ್ಚಿಸಲಾಗಿದೆ. ಜೂನ್ ತ್ರೈಮಾಸಿಕ ಆದಾಯ ಶೇಕಡಾ 34ರಷ್ಟು ಏರಿಕೆಯಾಗಿವು ಮೂಲ 18,902 ಕೋಟಿ ರೂಪಾಯಿಗೆ ತಲುಪಿತ್ತು. ವಿದ್ಯುತ್ ಪ್ರಮಾಣ 16.9ರಷ್ಟು ಹೆಚ್ಚಳವಾಗಿದೆ. ಈ ಮೂಲಕ 28.8 ಬಿಲಿಯನ್ ಯೂನಿಟ್ ತಲುಪಿದೆ.

EBITDA ಬಡ್ಡಿ ತೆರಿಗೆ ಶೇಕಡಾ 40 ರಷ್ಟು ಏರಿಕೆ ಕಂಡು 7,948 ಕೋಟಿ ರೂಪಾಯಿ ತಲುಪಿದೆ. ಇದರಿಂದಾಗಿ ಕಂಪನಿಯ ಇಬಿಐಟಿಡಿಎ ಮಾರ್ಜಿನ್ ಶೇ. 40.3 ರಿಂದ ಶೇ. 42.05 ಕ್ಕೆ ವಿಸ್ತರಿಸಿದೆ.