MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
BJP Padayatra Ballari
ISRO Bengaluru
NHAI Toll Scam
Karnataka Agriculture
Horoscope Today
Bigg Boss Kannada 13
Reliance Ice Cream Business
September 2nd Daily Horoscope
Chikkamagaluru Gruhajyothi Yojana
PM Dhan Dhaanya Krishi Yojana
Vijayapura Road Development Project
Nepal Flood Compensation
Commercial LPG Cylinder Price
  • Home
  • Life
  • Health
  • ದಿನನಿತ್ಯ ಬಳಸುವ ಈ 5 ಸಾಮಾನ್ಯ ಐಟಂ ನಿಮ್ಮ ಲಿವರ್‌ ಅನ್ನು ಆಲ್ಕೋಹಾಲ್‌ಗಿಂತಲೂ ಹೆಚ್ಚು ಹಾನಿ ಮಾಡ್ತವೆ..! ಜಾಗ್ರತೆಯಿರಲಿ

ದಿನನಿತ್ಯ ಬಳಸುವ ಈ 5 ಸಾಮಾನ್ಯ ಐಟಂ ನಿಮ್ಮ ಲಿವರ್‌ ಅನ್ನು ಆಲ್ಕೋಹಾಲ್‌ಗಿಂತಲೂ ಹೆಚ್ಚು ಹಾನಿ ಮಾಡ್ತವೆ..! ಜಾಗ್ರತೆಯಿರಲಿ

ಈ ಹೆಡ್‌ಲೈನ್ ನೋಡಿದ ನಿಮಗೂ ಅಚ್ಚರಿಯೆನಿಸಬಹುದು. ಆಲ್ಕೋಹಾಲ್ ವಿಚಾರ ಬಿಡಿ, ಇದರ ಜತೆಗೆ ದಿನನಿತ್ಯ ಬಳಸುವ ಈ ಐದು ಸಾಮಾನ್ಯ ಐಟಂಗಳು ನಿಮ್ಮ ಲಿವರ್ ಹಾಳು ಮಾಡಿಬಿಡಬಹುದು. ಈ ಉತ್ಫನ್ನಗಳು ನಿಮ್ಮ ಲಿವರ್‌ ಅನ್ನು ಆಲ್ಕೋಹಾಲ್‌ಗಿಂತ ಹೆಚ್ಚು ಹಾನಿ ಮಾಡುತ್ತವೆ ಎಂದರೇ ನೀವು ನಂಬಲೇಬೇಕು.

1 Min read
Author : Naveen Kodase
Published : Jul 22 2026, 05:44 PM IST
Share this Photo Gallery
  • FB
  • TW
  • Linkdin
  • Whatsapp
16
ಲಿವರ್‌ಗೆ ಈ ಐಟಂಗಳು ಅಪಾಯಕಾರಿ
Image Credit : AI

ಲಿವರ್‌ಗೆ ಈ ಐಟಂಗಳು ಅಪಾಯಕಾರಿ

ಮದ್ಯಪಾನ ಹಾಗೂ ಧೂಮಪಾನ ಆರೋಗ್ಯಕ್ಕೆ ಹಾನಿಕರ ಎನ್ನುವುದು ಎಂದೆಂದಿಗೂ ನೆನಪಿನಲ್ಲಿರಲಿ. ಆದರೆ ನಾವು ದಿನನಿತ್ಯ ನಮಗೆ ಅರಿವಿಲ್ಲದಂತೆಯೇ ಬಳಸುವ ಈ ಕೆಳಗಿನ ಐದು ಉತ್ಫನ್ನಗಳು ಆಲ್ಕೋಹಾಲ್‌ಗಿಂತಲೂ ಹೆಚ್ಚು ನಮ್ಮ ಲಿವರ್ ಹಾಳು ಮಾಡುತ್ತದೆ ಎನ್ನುವ ವಿಚಾರ ಬಹುತೇಕ ಮಂದಿಗೆ ಗೊತ್ತಿಲ್ಲ. ಅಷ್ಟಕ್ಕೂ ಯಾವುದವೂ ಐಟಂ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
1. ಅತಿಯಾದ ನೋವು ನಿವಾರಕ ಇಂಜೆಕ್ಷನ್/ಮಾತ್ರೆಗಳು:
Image Credit : our own

1. ಅತಿಯಾದ ನೋವು ನಿವಾರಕ ಇಂಜೆಕ್ಷನ್/ಮಾತ್ರೆಗಳು:

ಪ್ಯಾರಸಿಟಮಾಲ್‌ನಂತಹ ನೋವು ನಿವಾರಕಗಳನ್ನು ಅತಿಯಾಗಿ ತೆಗೆದುಕೊಳ್ಳುವುದರಿಂದ ಯಕೃತಿಗೆ ಗಂಭೀರವಾದ ಹಾನಿಯನ್ನುಂಟು ಮಾಡುತ್ತದೆ. ಈ ರೀತಿ ಪೇನ್ ಕಿಲ್ಲರ್ ತಿನ್ನುವುದರಿಂದ ಆಯಾಸ, ವಾಂತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ವೈದ್ಯರನ್ನು ಸಂಪರ್ಕಿಸದೇ ಈ ಡೋಸ್‌ಗಳನ್ನು ತೆಗೆದುಕೊಳ್ಳಬೇಡಿ.

Related Articles

Related image1
ಫ್ಯಾಟಿ ಲಿವರ್ ಇದೆಯಾ? ಹಾಗಿದ್ರೆ ನಿಮ್ಮ ಡಯಟ್‌ನಲ್ಲಿ ಈ ಬದಲಾವಣೆಗಳನ್ನು ಖಂಡಿತ ಮಾಡಿ
Related image2
ಆಲ್ಕೋಹಾಲ್ ದೇಹದೊಳಗೆ ಇಷ್ಟೊಂದು ಸಮಯ ಇರುತ್ತಾ? ಕೊನೆಗೂ ನಿಜವಾದ ಟೈಮ್‌ಲೈನ್ ಪತ್ತೆಹಚ್ಚಿದ ವೈದ್ಯರು
36
2. ಸಂಸ್ಕರಿಸಿದ ಜಂಕ್ ಫುಡ್‌ಗಳು:
Image Credit : Google

2. ಸಂಸ್ಕರಿಸಿದ ಜಂಕ್ ಫುಡ್‌ಗಳು:

ಸಂಸ್ಕರಿಸಿದ ಜಂಕ್‌ ಫುಡ್‌ನಲ್ಲಿ ಟ್ರಾನ್ಸ್‌ ಕೊಬ್ಬುಗಳು ಹಾಗೂ ಹೆಚ್ಚಿನ ಸ್ಯಾಚುರೇಟೆಡ್ ಕೊಬ್ಬು ಹೊಂದಿರುತ್ತದೆ. ಇದು ಲಿವರ್‌ ಮೇಲೆ ಹೆಚ್ಚುವರಿ ಒತ್ತಡವನ್ನುಂಟು ಮಾಡುತ್ತದೆ. ಇದರಿಂದ ಯಕೃತ್ತಿಗೆ ತುಂಬಾ ಹಾನಿ ಮಾಡುವ ಸಾಧ್ಯತೆಯಿರುತ್ತದೆ. ಸಂಸ್ಕರಿಸಿದ ಜಂಕ್‌ ಫುಡ್ ತಿನ್ನುವ ಮುನ್ನ ಒಮ್ಮೆ ಯೋಚಿಸಿ.

46
3. ಅನಗತ್ಯ ಸಪ್ಲಿಮೆಂಟ್ಸ್‌ ಹಾಗೂ ಹರ್ಬಲ್‌ ಮೆಡಿಸಿನ್ಸ್‌:
Image Credit : pexels

3. ಅನಗತ್ಯ ಸಪ್ಲಿಮೆಂಟ್ಸ್‌ ಹಾಗೂ ಹರ್ಬಲ್‌ ಮೆಡಿಸಿನ್ಸ್‌:

ಅನೇಕ ನೈಸರ್ಗಿಕ ಎಂದು ಕರೆಸಿಕೊಳ್ಳುವ ಸಪ್ಲಿಮೆಂಟ್ಸ್‌ಗಳು ಬಾಡಿ ಬಿಲ್ಡರ್‌ಗಳು ತೆಗೆದುಕೊಳ್ಳುತ್ತಾರೆ. ಆದರೆ ಇವು ಲಿವರ್‌ ಪಾಲಿಗೆ ವಿಷಕಾರಿ ಅಂಶಗಳನ್ನು ಹೊಂದಿರುತ್ತವೆ. ವಿಶೇಷವಾಗಿ ಸ್ಟೀರಾಯ್ಡ್ಸ್‌ ಹಾಗೂ ಅನ್‌ವೆರಿಫೈಡ್‌ ಆಯುರ್ವೇದಿಕ್ ಔಷಧಿಗಳನ್ನು ತೆಗೆದುಕೊಳ್ಳಬೇಡಿ.

56
4. ವೈರಲ್ ಸೋಂಕುಗಳನ್ನು ನಿರ್ಲಕ್ಷಿಸಬೇಡಿ:
Image Credit : Getty

4. ವೈರಲ್ ಸೋಂಕುಗಳನ್ನು ನಿರ್ಲಕ್ಷಿಸಬೇಡಿ:

ಕೆಲವೊಮ್ಮೆ ಹೆಪಟೈಟಿಸ್ ಬಿ, ಹೆಪಟೈಟಿಸ್ ಸಿ ನಂತಹ ವೈರಸ್ ಸೋಂಕುಗಳನ್ನು ನಿರ್ಲಕ್ಷ್ಯ ಮಾಡಿಬಿಡುತ್ತೇವೆ. ಇವುಗಳಿಗೆ ಪ್ರಾರಂಭದಲ್ಲೇ ಚಿಕಿತ್ಸೆ ನೀಡದಿದ್ದರೇ ಅವು ಶಾಶ್ವತವಾಗಿ ಲಿವರ್‌ಗೆ ಹಾನಿಯನ್ನುಂಟು ಮಾಡಿ ಬಿಡಬಹುದು.

66
5. ಹೆಚ್ಚಿನ ಸಕ್ಕರೆಯುಕ್ತ ಮತ್ತು ಹೆಚ್ಚಿನ ಫ್ರಕ್ಟೋಸ್ ಆಹಾರಗಳು:
Image Credit : our own

5. ಹೆಚ್ಚಿನ ಸಕ್ಕರೆಯುಕ್ತ ಮತ್ತು ಹೆಚ್ಚಿನ ಫ್ರಕ್ಟೋಸ್ ಆಹಾರಗಳು:

ಕೂಲ್ಡ್‌ ಡ್ರಿಂಕ್ಸ್‌, ಕ್ಯಾಂಡಿಗಳು, ಕೇಕ್‌ಗಳು ಹಾಗೂ ಜೂಸ್ ಪ್ಯಾಕೇಟ್‌ನಂತಹ ಸಕ್ಕರೆಯುಕ್ತ ಪ್ರಕ್ಟೋಸ್ ಆಹಾರಗಳನ್ನು ಅತಿಯಾಗಿ ಸೇವಿಸುವುದರಿಂದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಗೆ(NAFLD) ಕಾರಣವಾಗಬಹುದು. ಇದು ಯಕೃತ್ತಿನ ಸಿರೋಸಿಸ್ ಆಗಿ ಬೆಳೆಯುವ ಸಾಧ್ಯತೆಯಿದೆ. ಹೀಗಾಗಿ ಈ ರೀತಿಯ ಆಹಾರ ಸೇವಿಸುವ ಮುನ್ನ ಜಾಗ್ರತೆಯಿರಿ.

ಆಲ್ಕೋಹಾಲ್ ಯಕೃತ್ತಿಗೆ ಹಾನಿಕಾರಕವಾಗಿದ್ದರೂ, ಮೇಲೆ ಪಟ್ಟಿ ಮಾಡಲಾದ ವಸ್ತುಗಳನ್ನು ನಿರಂತರವಾಗಿ ನಿರ್ಲಕ್ಷಿಸುವುದರಿಂದ ಕೂಡಾ ಅಷ್ಟೇ ಅಪಾಯವನ್ನುಂಟು ಮಾಡಬಹುದು. ಈ ವಿಚಾರ ನಿಮಗೆ ತಿಳಿದಿರಲಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಆರೋಗ್ಯಕರ ಆಹಾರಗಳು
ಜೀವನಶೈಲಿ
ಲಿವರ್ ಆರೋಗ್ಯ
ಆರೋಗ್ಯ

Latest Videos
Recommended Stories
Recommended image1
ಉಪವಾಸದ ಸಂದರ್ಭದಲ್ಲಿ ಈ ಐದು ವಸ್ತು ಸೇವಿಸಬೇಡಿ; ಸಮಸ್ಯೆ ಹೆಚ್ಚಾಗುತ್ತೆ
Recommended image2
ನಿಮ್ಮ ಮೆಡಿಕಲ್‌ ಬಿಲ್‌ನಲ್ಲಿ ಡಿಸ್ಕೌಂಟ್ ಆಗ್ಬೇಕಾ? ಹಾಗಿದ್ರೆ ಅಡುಗೆಮನೆಯಲ್ಲೇ ಇದೆ ಆ 'ರಹಸ್ಯ ಚಿನ್ನ'
Recommended image3
PMD: ಮೂತ್ರ ಮಾಡಿದ ಬಳಿಕ ಒಳಉಡುಪಿನಲ್ಲಿ ಲೀಕ್ ಆಗ್ತಿದೆಯಾ ? ಈ ಸಮಸ್ಯೆ ನಿರ್ಲಕ್ಷ್ಯ ಮಾಡಿದ್ರೆ ಜೀವಕ್ಕೆ ಕುತ್ತು!
Related Stories
Recommended image1
ಫ್ಯಾಟಿ ಲಿವರ್ ಇದೆಯಾ? ಹಾಗಿದ್ರೆ ನಿಮ್ಮ ಡಯಟ್‌ನಲ್ಲಿ ಈ ಬದಲಾವಣೆಗಳನ್ನು ಖಂಡಿತ ಮಾಡಿ
Recommended image2
ಆಲ್ಕೋಹಾಲ್ ದೇಹದೊಳಗೆ ಇಷ್ಟೊಂದು ಸಮಯ ಇರುತ್ತಾ? ಕೊನೆಗೂ ನಿಜವಾದ ಟೈಮ್‌ಲೈನ್ ಪತ್ತೆಹಚ್ಚಿದ ವೈದ್ಯರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved