MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • IND vs ZIM: ಹೊಸ ಚಾನೆಲ್‌ನಲ್ಲಿ ಈ ಸಲ ಭಾರತ-ಜಿಂಬಾಬ್ವೆ ಟಿ20 ಮ್ಯಾಚ್ ನೇರ ಪ್ರಸಾರ; ಆದ್ರೆ ಒಂದು ರುಪಾಯಿ ಖರ್ಚಿಲ್ಲದೇ ಇಲ್ಲಿ ಫ್ರೀ ಆಗಿ ಮ್ಯಾಚ್ ನೋಡಿ

IND vs ZIM: ಹೊಸ ಚಾನೆಲ್‌ನಲ್ಲಿ ಈ ಸಲ ಭಾರತ-ಜಿಂಬಾಬ್ವೆ ಟಿ20 ಮ್ಯಾಚ್ ನೇರ ಪ್ರಸಾರ; ಆದ್ರೆ ಒಂದು ರುಪಾಯಿ ಖರ್ಚಿಲ್ಲದೇ ಇಲ್ಲಿ ಫ್ರೀ ಆಗಿ ಮ್ಯಾಚ್ ನೋಡಿ

ಹರಾರೆ: ಭಾರತ ಹಾಗೂ ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಸರಣಿಯು ಹೊಸ ಚಾನೆಲ್‌ನಲ್ಲಿ ಭಾರತದಲ್ಲಿ ನೇರ ಪ್ರಸಾರವಾಗಲಿದೆ. ಇದರ ಜತೆಗೆ ಒಂದು ರುಪಾಯಿ ಖರ್ಚಿಲ್ಲದೇ ಭಾರತೀಯ ಕ್ರಿಕೆಟ್ ಫ್ಯಾನ್ಸ್ ಈ ಚಾನೆಲ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ.

1 Min read
Author : Naveen Kodase
Published : Jul 22 2026, 07:18 PM IST
Share this Photo Gallery
  • FB
  • TW
  • Linkdin
  • Whatsapp
16
ಭಾರತ ಜಿಂಬಾಬ್ವೆ ನಡುವಿನ ಮ್ಯಾಚ್‌ಗೆ ಕ್ಷಣಗಣನೆ
Image Credit : chat GPT

ಭಾರತ-ಜಿಂಬಾಬ್ವೆ ನಡುವಿನ ಮ್ಯಾಚ್‌ಗೆ ಕ್ಷಣಗಣನೆ

ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರು ಅವಮಾನಕಾರಿ ಸರಣಿ ಸೋಲಿನ ಬಳಿಕ ಇದೀಗ ಟೀಂ ಇಂಡಿಯಾ, ಜಿಂಬಾಬ್ವೆ ಎದುರು ಮೂರು ಪಂದ್ಯಗಳ ಟಿ20 ಸರಣಿ ಆಡಲು ರೆಡಿಯಾಗಿದೆ. ಭಾರತ-ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಜುಲೈ 23ರಿಂದ ಇಲ್ಲಿನ ಹರಾರೆ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಆರಂಭವಾಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ನಾಯಕನಾಗಿ ಶ್ರೇಯಸ್ ಅಯ್ಯರ್‌ಗೆ ಅಗ್ನಿ ಪರೀಕ್ಷೆ
Image Credit : X/BCCI

ನಾಯಕನಾಗಿ ಶ್ರೇಯಸ್ ಅಯ್ಯರ್‌ಗೆ ಅಗ್ನಿ ಪರೀಕ್ಷೆ

ನಾಯಕನಾಗಿ ಕಳೆದೆರಡು ಟಿ20 ಸರಣಿ ಸೋತಿರುವ ಶ್ರೇಯಸ್ ಅಯ್ಯರ್‌ಗೆ ಇದೀಗ ಜಿಂಬಾಬ್ವೆ ಎದುರಿನ ಸರಣಿಯು ಒಂದು ರೀತಿ ಅಗ್ನಿ ಪರೀಕ್ಷೆಯಾಗಿದೆ. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಭಾರತ ತಂಡವು ಮೊದಲ ಟಿ20 ಗೆಲುವಿಗಾಗಿ ಎದುರು ನೋಡುತ್ತಿದೆ. ಇನ್ನು ಭಾರತ-ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಹೊಸ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದೆ.

Related Articles

Related image1
ಇಂಗ್ಲೆಂಡ್ ಎದುರಿನ ಸರಣಿ ಸೋಲಿನ ಬೆನ್ನಲ್ಲೇ ಗೌತಮ್ ಗಂಭೀರ್ ಇನ್ನೆಷ್ಟು ಸಮಯ ಟೀಂ ಇಂಡಿಯಾ ಹೆಡ್ ಕೋಚ್ ಆಗಿ ಇರ್ತಾರೆ?
Related image2
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತೆ ಟೀಂ ಇಂಡಿಯಾ ಪರ ಮೈದಾನಕ್ಕಿಳಿಯೋದು ಯಾವಾಗ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
36
ಭಾರತ-ಜಿಂಬಾಬ್ವೆ ಟಿ20 ಸರಣಿ ಯುನೈಟ್8 ಚಾನೆಲ್‌ನಲ್ಲಿ ನೇರ ಪ್ರಸಾರ
Image Credit : Getty

ಭಾರತ-ಜಿಂಬಾಬ್ವೆ ಟಿ20 ಸರಣಿ ಯುನೈಟ್8 ಚಾನೆಲ್‌ನಲ್ಲಿ ನೇರ ಪ್ರಸಾರ

ಹೌದು, ಭಾರತದ ಮ್ಯಾಚ್‌ಗಳು ಭಾರತದಾಚೆ ಎಲ್ಲೇ ನಡೆದರೂ ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್ ಇಲ್ಲವೇ ಸೋನಿ ಸ್ಪೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗುವುದನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ ಈ ಬಾರಿ ಭಾರತ ಹಾಗೂ ಜಿಂಬಾಬ್ವೆ ನಡುವಿನ ಟಿ20 ಸರಣೀಯ ನೇರ ಪ್ರಸಾರದ ಹಕ್ಕನ್ನು ಯುನೈಟ್8 (Unite8) ಚಾನೆಲ್ ಪಡೆದುಕೊಂಡಿದೆ. ಹೀಗಾಗಿ ಭಾರತ-ಜಿಂಬಾಬ್ವೆ ಟಿ20 ಸರಣಿಯ ಮ್ಯಾಚ್‌ಗಳು ಯುನೈಟ್8 ಚಾನೆಲ್‌ನಲ್ಲಿ ನೇರ ಪ್ರಸಾರವಾಗಲಿದೆ.

46
ಫ್ಯಾನ್‌ಕೋಡ್‌ನಲ್ಲಿ 35 ರುಪಾಯಿ ರೀಚಾರ್ಜ್‌ ಮಾಡಿ ಮ್ಯಾಚ್ ನೋಡಬಹುದು
Image Credit : Getty

ಫ್ಯಾನ್‌ಕೋಡ್‌ನಲ್ಲಿ 35 ರುಪಾಯಿ ರೀಚಾರ್ಜ್‌ ಮಾಡಿ ಮ್ಯಾಚ್ ನೋಡಬಹುದು

ಇನ್ನು ಓಟಿಟಿ ಫ್ಲಾಟ್‌ಫಾರಂನಲ್ಲಿ ಜಿಯೋ ಹಾಟ್‌ಸ್ಟಾರ್ ಅಥವಾ ಸೋನಿ ಸ್ಪೋರ್ಟ್ಸ್‌ ಲಿವ್‌ನಲ್ಲಿಯೂ ಭಾರತ-ಜಿಂಬಾಬ್ವೆ ನಡುವಿನ ಮ್ಯಾಚ್ ನೇರ ಪ್ರಸಾರವಾಗುವುದಿಲ್ಲ. ಇದಕ್ಕೆ ಬದಲಾಗಿ ಫ್ಯಾನ್‌ಕೋಡ್ ಓಟಿಟಿಯಲ್ಲಿ ನೇರ ಪ್ರಸಾರವಾಗಲಿದೆ. ಫ್ಯಾನ್‌ಕೋಡ್‌ನಲ್ಲಿ ಮ್ಯಾಚ್‌ ವೀಕ್ಷಿಸಲು ನೀವು 35 ರುಪಾಯಿ ರೀಚಾರ್ಜ್ ಮಾಡಬೇಕಾಗುತ್ತದೆ.

56
ಭಾರತದಲ್ಲಿ ಉಚಿತವಾಗಿ ಎಲ್ಲಿ? ಹೇಗೆ ವೀಕ್ಷಿಸಬಹುದು?
Image Credit : Getty

ಭಾರತದಲ್ಲಿ ಉಚಿತವಾಗಿ ಎಲ್ಲಿ? ಹೇಗೆ ವೀಕ್ಷಿಸಬಹುದು?

ಇನ್ನು ಭಾರತ ಹಾಗೂ ಜಿಂಬಾಬ್ವೆ ನಡುವಿನ ಮ್ಯಾಚ್‌ ಅನ್ನು ಡಿಡಿ ಫ್ರೀ ಡಿಶ್‌ನಲ್ಲಿ ಡಿಡಿ ಸ್ಪೋರ್ಟ್ಸ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ. ಡಿಡಿ ಸ್ಪೋರ್ಟ್ಸ್‌ನಲ್ಲಿ ಯಾವುದೇ ರೀಚಾರ್ಜ್ ಮಾಡಬೇಕಿಲ್ಲ. ಇನ್ನು ನಿಮ್ಮ ಬಳಿ ಜಿಯೋಫೈಬರ್ ಸಂಪರ್ಕವಿದ್ದರೇ ಉಚಿತವಾಗಿ ಯುನೈಟ್‌8 ಚಾನೆಲ್‌ನಲ್ಲಿ ಭಾರತ-ಜಿಂಬಾಬ್ವೆ ನಡುವಿನ ಮ್ಯಾಚ್ ವೀಕ್ಷಿಸಬಹುದಾಗಿದೆ.

66
ಶುಭಾರಂಭ ಮಾಡುವ ವಿಶ್ವಾಸದಲ್ಲಿ ಟೀಂ ಇಂಡಿಯಾ
Image Credit : Getty

ಶುಭಾರಂಭ ಮಾಡುವ ವಿಶ್ವಾಸದಲ್ಲಿ ಟೀಂ ಇಂಡಿಯಾ

ಭಾರತ ಹಾಗೂ ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 4.30ರಿಂದ ಆರಂಭವಾಗಲಿದೆ. ಶ್ರೇಯಸ್ ಅಯ್ಯರ್ ನೇತೃತ್ವದ ಟೀಂ ಇಂಡಿಯಾ ಶುಭಾರಂಭ ಮಾಡುವ ಮೂಲಕ ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಟೀಮ್ ಇಂಡಿಯಾ
ಶ್ರೇಯಸ್ ಅಯ್ಯರ್
ಬಿಸಿಸಿಐ
Latest Videos
Recommended Stories
Recommended image1
16 ವರ್ಷ ಬಳಿಕ ಭಾರತಕ್ಕೆ ಮರಳುತ್ತಿದ್ದಾರೆ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ, ಆರಂಭವಾಗುತ್ತಾ ಹೊಸ ಲೀಗ್?
Recommended image2
ಟೀಂ ಇಂಡಿಯಾದಿಂದ ಸತತ ನಿರ್ಲಕ್ಷ್ಯ, ಬೇಸತ್ತ ಸ್ಟಾರ್ ಕ್ರಿಕೆಟರ್ ಇಂಗ್ಲೆಂಡ್ ಕೌಂಟಿ ಆಡಲು ಒಪ್ಪಂದಕ್ಕೆ ಸಹಿ
Recommended image3
6,6,6,6,6 ಪಾಕ್‌ ಬೌಲರ್ ಅಬ್ರಾರ್‌ ಚೆಂಡಾಡಿದ ನೀತಾ ಅಂಬಾನಿ ಮಾಲಿಕತ್ವದ ಮುಂಬೈ ತಂಡದ ವಿಸ್ಪೋಟಕ ಬ್ಯಾಟರ್! ವಿಡಿಯೋ ವೈರಲ್
Related Stories
Recommended image1
ಇಂಗ್ಲೆಂಡ್ ಎದುರಿನ ಸರಣಿ ಸೋಲಿನ ಬೆನ್ನಲ್ಲೇ ಗೌತಮ್ ಗಂಭೀರ್ ಇನ್ನೆಷ್ಟು ಸಮಯ ಟೀಂ ಇಂಡಿಯಾ ಹೆಡ್ ಕೋಚ್ ಆಗಿ ಇರ್ತಾರೆ?
Recommended image2
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತೆ ಟೀಂ ಇಂಡಿಯಾ ಪರ ಮೈದಾನಕ್ಕಿಳಿಯೋದು ಯಾವಾಗ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved