- Home
- News
- India News
- India Latest News Live: ಕೇರಳದಲ್ಲಿ ಪಟಾಕಿ ಕಾರ್ಖಾನೆ ಭೀಕರ ಸ್ಫೋಟ - 13 ಸಾವು, ಛಿದ್ರಗೊಂಡ ದೇಹಗಳು; ತ್ರಿಶೂರ್‌ನಲ್ಲಿ ಭೀಕರ ದುರಂತ
India Latest News Live: ಕೇರಳದಲ್ಲಿ ಪಟಾಕಿ ಕಾರ್ಖಾನೆ ಭೀಕರ ಸ್ಫೋಟ - 13 ಸಾವು, ಛಿದ್ರಗೊಂಡ ದೇಹಗಳು; ತ್ರಿಶೂರ್‌ನಲ್ಲಿ ಭೀಕರ ದುರಂತ

ಕೋಲ್ಕತಾ: ಭಾನುವಾರ ಚುನಾವಣಾ ಪ್ರಚಾರಕ್ಕೆಂದು ಪಶ್ಚಿಮ ಬಂಗಾಳಕ್ಕೆ ತೆರಳಿದ್ದ ವೇಳೆಪ್ರಧಾನಿ ನರೇಂದ್ರ ಮೋದಿ, ಕುರುಕಲು ತಿಂಡಿ ಅಂಗಡಿಯಲ್ಲಿ ಮಂಡಕ್ಕಿ ಖರೀದಿಸಿದ್ದು ಬರೀ ನಾಟಕ ಎಂದು ಸಿಎಂ ಮಮತಾ ಬ್ಯಾನರ್ಜಿ ವ್ಯಂಗ್ಯವಾಡಿದ್ದಾರೆ.
ನರೇಂದ್ರ ಮೋದಿ ಹೆಸರು ಹೇಳದೆಯೇ ಚುನಾವಣಾ ರ್ಯಾಲಿಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ದೀದಿ, ‘ಇದೆಲ್ಲ ನಾಟಕ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಇದ್ದಕ್ಕಿದ್ದಂತೆ ಅಂಗಡಿಗೆ ತೆರಳಿದಾಗ ಅಂಗಡಿಗೆ ಕ್ಯಾಮರಾಮ್ಯಾನ್ ಏಕೆ ಬಂದಿದ್ದ? ಇಡೀ ಘಟನೆಯನ್ನು ಹೇಗೆ ಚಿತ್ರೀಕರಿಸಲಾಯಿತು? ಅವರು ಜೇಬಿನಲ್ಲಿ 10 ರು. ನೋಟು ಇರಿಸಿಕೊಂಡಿದ್ದು ಕಂಡು ಬಂದಿದೆ. ಇದು ನಂಬುವುದಕ್ಕೆ ಸಾಧ್ಯವೇ?’ ಎಂದು ಪ್ರಶ್ನಿಸಿದರು.
ಮೋದಿ ಚುನಾವಣಾ ಪ್ರಚಾರಕ್ಕೆಂದು ಭಾನುವಾರ ಬಂಗಾಳಕ್ಕೆ ಬಂದಾಗ ಝಾರ್ಗ್ರಾಮದ ಕುರುಕಲು ತಿಂಡಿ ಅಂಗಡಿಗೆ ‘ಅನಿರೀಕ್ಷಿತವಾಗಿ’ ತೆರಳಿ, ಮಂಡಕ್ಕಿ ಖರಿದಿಸಿ ತಿಂದಿದ್ದಲ್ಲದೆ ಮಕ್ಕಳಿಗೆ ಹಂಚಿದ್ದರು.
India Latest News Live 21 April 2026ಕೇರಳದಲ್ಲಿ ಪಟಾಕಿ ಕಾರ್ಖಾನೆ ಭೀಕರ ಸ್ಫೋಟ - 13 ಸಾವು, ಛಿದ್ರಗೊಂಡ ದೇಹಗಳು; ತ್ರಿಶೂರ್‌ನಲ್ಲಿ ಭೀಕರ ದುರಂತ
India Latest News Live 21 April 2026ಪಿತೃತ್ವದ ಬಗ್ಗೆ ಹೆಚ್ಚುತ್ತಿದೆ ಅನುಮಾನ, ಅಹಮದಾಬಾದ್‌ನಲ್ಲಿ ವರ್ಷಕ್ಕೆ 550 ಡಿಎನ್‌ಎ ಪರೀಕ್ಷೆ!
ಗುಜರಾತ್‌ನ ಅಹಮದಾಬಾದ್‌ನಲ್ಲಿ, ಮಗುವಿನ ನಿಜವಾದ ತಂದೆಯನ್ನು ಪತ್ತೆಹಚ್ಚಲು ನಡೆಸುವ ಡಿಎನ್‌ಎ ಪರೀಕ್ಷೆಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಹಿಂದೆ ವೈದ್ಯಕೀಯ ಕಾರಣಗಳಿಗೆ ಸೀಮಿತವಾಗಿದ್ದ ಈ ಪರೀಕ್ಷೆಗಳು, ಈಗ ದಂಪತಿಗಳ ನಡುವಿನ ಅನುಮಾನಗಳನ್ನು ಬಗೆಹರಿಸಿಕೊಳ್ಳಲು ಬಳಕೆಯಾಗುತ್ತಿವೆ.
India Latest News Live 21 April 2026ಬದುಕು ಕಿತ್ತುಕೊಂಡ ವಿಧಿ, ನೆಲೆ ಕಿತ್ತುಕೊಳ್ಳುತ್ತಿದೆ ಬ್ರಿಟನ್ - ಏರ್ ಇಂಡಿಯಾ ಅಪಘಾತದಲ್ಲಿ ಕುಟುಂಬ ಕಳೆದುಕೊಂಡ ವ್ಯಕ್ತಿಯ ಗಡೀಪಾರಿಗೆ ಆದೇಶ!
ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಪತ್ನಿ ಮತ್ತು ಮಗಳನ್ನು ಕಳೆದುಕೊಂಡ ಮೊಹಮ್ಮದ್ ಶೇತ್ವಾಲಾ ಎಂಬ ಭಾರತೀಯನಿಗೆ ಬ್ರಿಟನ್ ಸರ್ಕಾರವು ದೇಶ ತೊರೆಯುವಂತೆ ಆದೇಶಿಸಿದೆ. ಮಾನವೀಯ ನೆಲೆಯಲ್ಲಿ ವಾಸ್ತವ್ಯ ವಿಸ್ತರಿಸಲು ಸಲ್ಲಿಸಿದ್ದ ಅವರ ಮನವಿಯನ್ನು ತಿರಸ್ಕರಿಸಿದೆ.
India Latest News Live 21 April 2026ಈ ಇಂಡಸ್ಟ್ರಿ ಹಿಟ್ ಸಿನಿಮಾ ಮಾಡ್ಬೇಡಿ ಅಂದಿದ್ರು ಶ್ರೀಹರಿ ಪತ್ನಿ ಡಿಸ್ಕೋ ಶಾಂತಿ - ಆದ್ರೆ ಆಗಿದ್ದೇ ಬೇರೆ!
ನಟ ಶ್ರೀಹರಿಗೆ ವಿಶೇಷ ಸ್ಥಾನವಿದೆ. ಅವರು ಹೀರೋ, ವಿಲನ್ ಹಾಗೂ ಪೋಷಕ ನಟನಾಗಿ ಪ್ರೇಕ್ಷಕರನ್ನು ರಂಜಿಸಿದ್ದರು. ತೆರೆಮೇಲೆ ಸಿಕ್ಸ್ ಪ್ಯಾಕ್ ತೋರಿಸಿದ ಮೊದಲ ಹೀರೋ ಎಂಬ ಹೆಗ್ಗಳಿಕೆ ಶ್ರೀಹರಿಗಿದೆ. ಅವರು ಅನಾರೋಗ್ಯದಿಂದ ನಿಧನರಾದರು.
India Latest News Live 21 April 2026ಭಾರತೀಯ ಸೇನೆಗೆ 'ಮೈನ್‌ಫೀಲ್ಡ್' ಭೇದಿಸುವ ಶಕ್ತಿ - 975 ಕೋಟಿ ರೂ. ವೆಚ್ಚದ 'ಟ್ರಾಲ್' ಸಿಸ್ಟಮ್ ಖರೀದಿಗೆ ಒಪ್ಪಂದ!
ಭಾರತೀಯ ಸೇನೆಯ T-72 ಮತ್ತು T-90 ಟ್ಯಾಂಕ್‌ಗಳಿಗಾಗಿ 975 ಕೋಟಿ ರೂಪಾಯಿ ಮೌಲ್ಯದ 'ಟ್ರಾಲ್' ವ್ಯವಸ್ಥೆಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಈ ತಂತ್ರಜ್ಞಾನವು ಯುದ್ಧಭೂಮಿಯಲ್ಲಿ ಮೈನ್‌ಗಳನ್ನು ತೆರವುಗೊಳಿಸಿ, ಸೈನಿಕರ ಸುರಕ್ಷಿತ ಸಂಚಾರಕ್ಕೆ ನೆರವಾಗಲಿದೆ.
India Latest News Live 21 April 2026ಬೆಲ್ಜಿಯಂ ಕಾರ್ ರೇಸ್‌ನಲ್ಲಿ ನಟ ಅಜಿತ್ ಧೂಳೆಬ್ಬಿಸಿದ ಕ್ಷಣ - ಭಾರತದ ಬಾವುಟ ಹಿಡಿದು ಸಂಭ್ರಮ!
ನಟ ಅಜಿತ್ ಸಿನಿಮಾ ಮಾತ್ರವಲ್ಲದೆ ಬೇರೆ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಅದರಲ್ಲೂ ಕಾರ್ ರೇಸಿಂಗ್‌ನಲ್ಲಿ ಅವರ ಆಸಕ್ತಿ ಮತ್ತು ಪ್ರತಿಭೆ ಅಭಿಮಾನಿಗಳನ್ನು ಹಾಗೂ ಕ್ರೀಡಾ ಜಗತ್ತನ್ನು ಬೆರಗುಗೊಳಿಸಿದೆ.
India Latest News Live 21 April 2026ಪುರುಷರ ಕೋಣೆಯೊಳಗೆ ಹೋಗದೆ ಶೇ. 90 ಮಹಿಳೆಯರು ರಾಜಕಾರಣಕ್ಕೆ ಪ್ರವೇಶಿಸಲು ಸಾಧ್ಯವಿಲ್ಲ - ಸಂಸದ ಪಪ್ಪು ಯಾದವ್
India Latest News Live 21 April 2026ಉಜ್ಜಯಿನಿ ಮಹಾಕಾಳೇಶ್ವರನ ದರ್ಶನ ಪಡೆದ ನಟ ಅನುಪಮ್ ಖೇರ್ - 'ಬದುಕೇ ಸಾರ್ಥಕ' ಎಂದಿದ್ದೇಕೆ?
ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್, ಉಜ್ಜಯಿನಿಯ ಪ್ರಸಿದ್ಧ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ತಮ್ಮ ಆಧ್ಯಾತ್ಮಿಕ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಭೇಟಿಯನ್ನು 'ದೆೈವಿಕ' ಮತ್ತು 'ಮನಸ್ಸನ್ನು ಕಲಕುವ' ಅನುಭವ ಎಂದು ಅವರು ಬಣ್ಣಿಸಿದ್ದಾರೆ.
India Latest News Live 21 April 2026ನೀತಾ ಅಂಬಾನಿಗೆ 'ಭಾಭಿ' ಎಂದ ಆಲಿಯಾ - ವೇದಿಕೆ ಮೇಲೆ ಕ್ಷಣಕಾಲ ಮೌನ, ತಕ್ಷಣವೇ ನಟಿ ಮಾಡಿದ್ದೇನು?
ಒಂದು ಅವಾರ್ಡ್ ಶೋನಲ್ಲಿ ಆಲಿಯಾ ಭಟ್, ನೀತಾ ಅಂಬಾನಿಯವರನ್ನು 'ಭಾಭಿ' ಎಂದು ಕರೆದ ವಿಡಿಯೋ ವೈರಲ್ ಆಗಿದೆ. ನೀತಾ ಅವರ ಪ್ರತಿಕ್ರಿಯೆಯಿಂದ ತಪ್ಪು ಅರಿತ ಆಲಿಯಾ, ತಕ್ಷಣವೇ 'ನೀತಾ ಮ್ಯಾಮ್' ಎಂದು ಸರಿಪಡಿಸಿಕೊಂಡರು.
India Latest News Live 21 April 2026ಕೌಟುಂಬಿಕ ಕಲಹದ ನಂತರ ಇಬ್ಬರು ಮುದ್ದಾದ ಮಕ್ಕಳೊಂದಿಗೆ ಕೆರೆಗೆ ಹಾರಿದ 25ರ ಹರೆಯದ ತಾಯಿ
ಮಹಾರಾಷ್ಟ್ರದ ಲಾತೂರ್‌ನಲ್ಲಿ, ಕೌಟುಂಬಿಕ ಕಲಹದಿಂದ ಬೇಸತ್ತ 25 ವರ್ಷದ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ. ಈ ದುರಂತ ಘಟನೆಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಅವರ ಮೃತದೇಹಗಳು ಸೋಮವಾರ ಪತ್ತೆಯಾಗಿವೆ.
India Latest News Live 21 April 2026ಶಾರುಖ್‌ಗೆ ಶಾರುಖ್ ಖಾನೇ ಸಾಟಿ - 'ಕಿಂಗ್' ಚಿತ್ರದ ಬ್ಯುಸಿನೆಸ್ ಮೊತ್ತ ಕೇಳಿ ಬೆಚ್ಚಿಬಿದ್ದ ಬಾಲಿವುಡ್!
2023ರಲ್ಲಿ ಭರ್ಜರಿ ಯಶಸ್ಸು ಕಂಡಿದ್ದ ಶಾರುಖ್ ಖಾನ್, 'ಪಠಾಣ್' ನಿರ್ದೇಶಕ ಸಿದ್ಧಾರ್ಥ್ ಆನಂದ್ ಜೊತೆ 'ಕಿಂಗ್' ಚಿತ್ರಕ್ಕಾಗಿ ಮತ್ತೆ ಒಂದಾಗಿದ್ದಾರೆ. ಈ ಚಿತ್ರ ಬಿಡುಗಡೆಗೂ ಮುನ್ನವೇ ದೊಡ್ಡ ಮೊತ್ತದ ಬಿಸಿನೆಸ್ ಮಾಡಿದೆ.
India Latest News Live 21 April 2026ಹಿಂದೂಗಳಿಗೆ ತಿಲಕ, ಪಾಕ್ನಲ್ಲಿ ಉರಿ - ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಿಯೇ ತೀರುತ್ತೇವೆ - ಓಪನ್ ಚಾಲೆಂಜ್ ಕೇಳಿ
India Latest News Live 21 April 2026ಪ್ರಶಾಂತ್ ನೀಲ್-ಜೂ.ಎನ್‌ಟಿಆರ್ ಕಾಂಬಿನೇಷನ್‌ನ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ - ಫಸ್ಟ್ ಗ್ಲಿಂಪ್ಸ್ ಯಾವಾಗ?
ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಹಾಗೂ ಜೂ.ಎನ್‌ಟಿಆರ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಚಿತ್ರದ ರಿಲೀಸ್ ಡೇಟ್ ಘೋಷಣೆಯಾಗಿದೆ. ಮೇ 20ರಂದು ಫಸ್ಟ್ ಗ್ಲಿಂಪ್ಸ್ ಬಿಡುಗಡೆಯಾಗಲಿದೆ. ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.
India Latest News Live 21 April 2026ಪ್ರಧಾನಿ ವಿರುದ್ಧ ಕೀಳು ಮಟ್ಟದ ಹೇಳಿಕೆ, ಕೂಡಲೇ ಕ್ಷಮೆಯಾಚಿಸಿ ಎಂದು ಖರ್ಗೆಗೆ ಆಗ್ರಹಿಸಿದ ಬಿಎಸ್ ಯಡಿಯೂರಪ್ಪ
ಪ್ರಧಾನಿ ನರೇಂದ್ರ ಮೋದಿಯವರನ್ನು 'ಭಯೋತ್ಪಾದಕ' ಎಂದು ಕರೆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯು ರಾಷ್ಟ್ರಮಟ್ಟದಲ್ಲಿ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಯನ್ನು ಬಿಜೆಪಿ ನಾಯಕರು, ಅದರಲ್ಲೂ ವಿಶೇಷವಾಗಿ ಬಿ.ಎಸ್. ಯಡಿಯೂರಪ್ಪ ತೀವ್ರವಾಗಿ ಖಂಡಿಸಿದ್ದಾರೆ.
India Latest News Live 21 April 2026ಸಂಭಾವನೇ ಬೇಡ, ಕಲೆಕ್ಷನ್‌ನಲ್ಲಿ ಶೇ.30 ಪಾಲು - 'ಪುಷ್ಪ'ದಿಂದ ಅಲ್ಲು ಅರ್ಜುನ್‌ಗೆ ಬಂದ ಹಣವೆಷ್ಟು ಗೊತ್ತಾ?
ಪುಷ್ಪ ಫ್ರಾಂಚೈಸಿ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದ ಅಲ್ಲು ಅರ್ಜುನ್, ಈ ಚಿತ್ರಕ್ಕಾಗಿ ಅಡ್ವಾನ್ಸ್ ಸಂಭಾವನೆಯನ್ನೇ ಪಡೆದಿರಲಿಲ್ಲ. ಬದಲಿಗೆ, ಸಿನಿಮಾ ಗಳಿಸಿದ ಲಾಭದಲ್ಲಿ ಪಾಲು ಪಡೆಯುವ ಒಪ್ಪಂದ ಮಾಡಿಕೊಂಡಿದ್ದರು. ಇದರ ಅಸಲಿ ಲೆಕ್ಕಾಚಾರ ಇಲ್ಲಿದೆ.
India Latest News Live 21 April 2026ವಿಜಯ್ ದೇವರಕೊಂಡಗೆ ನಾನಿ ಸಾಥ್ - ಪೌರಾಣಿಕ ಹಿನ್ನೆಲೆಯ ಸಿನಿಮಾಗೆ ಹಾಲಿವುಡ್ ತಂತ್ರಜ್ಞರ ದಂಡು!
'ಹಾಯ್ ನಾನ್ನ' ಚಿತ್ರದ ಮೂಲಕ ಗಮನ ಸೆಳೆದ ನಿರ್ದೇಶಕ ಶೌರ್ಯುವ್ ಜೊತೆ ವಿಜಯ್ ದೇವರಕೊಂಡ ಕೈಜೋಡಿಸಿದ್ದು, ಈ ಹೊಸ ಗ್ಲೋಬಲ್ ಪ್ರಾಜೆಕ್ಟ್‌ಗೆ ಹೈದರಾಬಾದ್‌ನಲ್ಲಿ ಚಾಲನೆ ಸಿಕ್ಕಿದೆ. ನಾನಿ ಮೊದಲ ಶಾಟ್‌ಗೆ ಕ್ಲ್ಯಾಪ್.
India Latest News Live 21 April 2026ಮೋದಿ ಒಬ್ಬ 'ಭಯೋತ್ಪಾದಕ' - ತಮಿಳುನಾಡಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಸ್ಫೋಟಕ ಹೇಳಿಕೆ!
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ಮೋದಿಯವರನ್ನು 'ಭಯೋತ್ಪಾದಕ' ಎಂದು ಕರೆದು ವಿವಾದ ಸೃಷ್ಟಿಸಿದ್ದಾರೆ. ನಂತರ, ಅವರು ಎಲ್ಲರನ್ನೂ ಬೆದರಿಸುತ್ತಾರೆ ಎಂಬ ಅರ್ಥದಲ್ಲಿ ಹೇಳಿದ್ದಾಗಿ ಸ್ಪಷ್ಟನೆ ನೀಡಿದರು.
India Latest News Live 21 April 2026ರೈಡ್ ಮುಗಿದ ಮೇಲೆ ಗ್ರಾಹಕಿಗೆ ವಾಟ್ಸಾಪ್‌ನಲ್ಲಿ ಮೆಸೇಜ್ ಮಾಡಿದ Rapido ರೈಡರ್! ಸ್ಕ್ರೀನ್‌ಶಾಟ್ ವೈರಲ್!
ರಾಪಿಡೋ ರೈಡ್ ಮುಗಿದ ನಂತರ ಚಾಲಕನೊಬ್ಬ ಮಹಿಳಾ ಗ್ರಾಹಕಿಗೆ ವೈಯಕ್ತಿಕ ವಾಟ್ಸಾಪ್ ಸಂಖ್ಯೆಗೆ ಸಂದೇಶ ಕಳುಹಿಸಿ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ. ಈ ಘಟನೆಯು ರೈಡ್-ಹೇಲಿಂಗ್ ಅಪ್ಲಿಕೇಶನ್‌ಗಳಲ್ಲಿ ಬಳಕೆದಾರರ ಡೇಟಾ ಗೌಪ್ಯತೆ ಮತ್ತು ಸುರಕ್ಷತೆಯ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ.
India Latest News Live 21 April 2026ನಡುರಸ್ತೆಯಲ್ಲೇ ದಾಂಧಲೆ, ಕ್ರಿಕೆಟಿಗ-ಟಿಎಂಸಿ ಸಂಸದ ಯೂಸುಫ್ ಪಠಾಣ್ ಮಾವ, ಭಾವ ಅರೆಸ್ಟ್
ಮುಂಬೈನ ಬೈಕುಲ್ಲಾದಲ್ಲಿ ಟಿಎಂಸಿ ಸಂಸದ ಯೂಸುಫ್ ಪಠಾಣ್ ಅವರ ಸಂಬಂಧಿಕರು ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ. ಕಾರಿನಿಂದ ನೀರು ಸಿಡಿದ ಸಣ್ಣ ಕಾರಣಕ್ಕೆ ಆರಂಭವಾದ ಜಗಳವು, ದೊಣ್ಣೆ ಮತ್ತು ಬ್ಯಾಟ್‌ಗಳಿಂದ ನಡೆದ ಬರ್ಬರ ಹಲ್ಲೆಯಲ್ಲಿ ಅಂತ್ಯಗೊಂಡಿದೆ.