ತಡರಾತ್ರಿ ಗೋವಾ ಬೀಚ್ ಬಳಿ ದಾರಿ ತಪ್ಪಿ ಕಂಗಾಲಾದ ವಿದೇಶಿ ಮಹಿಳೆಯನ್ನು ಮಹಿಳಾ ರ್ಯಾಪಿಕ್ ಬೈಕ್ ರೈಡರ್ ಮರಳಿ ಹೊಟೆಲ್ ತಲುಪಿಸಿದ್ದಾರೆ. ಮಹಿಳಾ ಬೈಕ್ ರೈಡರ್‌ಗೆ ಮೆಚ್ಚುಗೆಯ ಸುರಿಮಳೆ ವ್ಯಕ್ತವಾಗುತ್ತಿದೆ.
- Home
- News
- India News
- India Latest News Live: ತಡರಾತ್ರಿ ಗೋವಾ ಬೀಚ್ ಬಳಿ ದಾರಿ ತಪ್ಪಿ ಕಂಗಾಲಾದ ವಿದೇಶಿಯನ್ನು ಹೊಟೆಲ್ ತಲುಪಿಸಿದ ಮಹಿಳಾ ರೈಡರ್
India Latest News Live: ತಡರಾತ್ರಿ ಗೋವಾ ಬೀಚ್ ಬಳಿ ದಾರಿ ತಪ್ಪಿ ಕಂಗಾಲಾದ ವಿದೇಶಿಯನ್ನು ಹೊಟೆಲ್ ತಲುಪಿಸಿದ ಮಹಿಳಾ ರೈಡರ್

ಮುಂಬೈ: ಮಹಾರಾಷ್ಟ್ರದಲ್ಲಿ ಜ.15ರಂದು ನಗರಾಡಳಿತ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಮಹಿಳೆಯರಿಗೆ ಪ್ರತಿ ತಿಂಗಳು 1,500 ರು. ನೀಡುವ ‘ಲಡ್ಕಿ ಬಹಿನ್’ ಯೋಜನೆಯ ಜನವರಿಯ ಕಂತನ್ನು ತಡೆಹಿಡಿಯುವಂತೆ ರಾಜ್ಯ ಚುನಾವಣಾ ಆಯೋಗವು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಕಳೆದ ಡಿಸೆಂಬರ್ನ ಹಣ ಈವರೆಗೆ ಫಲಾನುಭವಿಗಳ ಖಾತೆ ತಲುಪಿಲ್ಲ. ಹೀಗಿರುವಾಗ, ಇದನ್ನು ಮತ ಸೆಳೆಯುವ ತಂತ್ರವಾಗಿ ಸರ್ಕಾರ ಬಳಸಬಹುದು ಹಾಗೂ 2 ತಿಂಗಳ (ಡಿಸೆಂಬರ್, ಜನವರಿ) ಹಣ ಸೇರಿ ಒಟ್ಟು 3000 ರು.ಅನ್ನು ಮಕರಸಂಕ್ರಾಂತಿಯ ಉಡುಗೊರೆಯೆಂದು ಘೋಷಿಸಿ ಖಾತೆಗಳಿಗೆ ಜಮೆ ಮಾಡುವ ಸಾಧ್ಯತೆಯಿದೆ ಎಂದು ಹಲವು ದೂರುಗಳು ದಾಖಲಾಗಿದ್ದವು. ಹೀಗಾಗಿ ಆಯೋಗ ಈ ಆದೇಶ ಹೊರಡಿಸಿದೆ. ಇತ್ತೀಚಗೆ ಬಿಹಾರ ವಿಧಾನಸಭೆ ಚುನಾವಣೆ ವೇಳೆ ಮುಖ್ಯಮಂತ್ರಿ ಮಹಿಳಾ ರೋಜ್ಗಾರ್ ಯೋಜನೆಯಡಿ 10,000 ರು. ಹಂಚಿದ್ದು ವಿವಾದವಾಗಿತ್ತು.
India Latest News Live 13 January 2026ತಡರಾತ್ರಿ ಗೋವಾ ಬೀಚ್ ಬಳಿ ದಾರಿ ತಪ್ಪಿ ಕಂಗಾಲಾದ ವಿದೇಶಿಯನ್ನು ಹೊಟೆಲ್ ತಲುಪಿಸಿದ ಮಹಿಳಾ ರೈಡರ್
India Latest News Live 13 January 20262ನೇ ಮಹಡಿಗೆ ಏಣಿ ಮೂಲಕ ಹತ್ತಿ ಮಲಗಿದ್ದ ಯುವತಿಯ ಚಿನ್ನದ ಸರ ಕದ್ದ ಕಳ್ಳ, ಸಿಸಿಟಿವಿ ದೃಶ್ಯ
2ನೇ ಮಹಡಿಗೆ ಏಣಿ ಮೂಲಕ ಹತ್ತಿ ಮಲಗಿದ್ದ ಯುವತಿಯ ಚಿನ್ನದ ಸರ ಕದ್ದ ಕಳ್ಳ, ಒಂದು ಸ್ವಲ್ಪವೂ ಶಬ್ದ ಬರದಂತೆ ಕೋಣೆಯೊಳಗೆ ನುಗ್ಗಿ ಮಲಗಿದ್ದ ಯುವತಿಗೆ ಗೊತ್ತೇ ಆಗದಂತೆ ಚಿನ್ನದ ಸರ ಕದ್ದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
India Latest News Live 13 January 2026ಅಣ್ಣಾಮಲೈಯಲ್ಲಿ ಏನಿದೆ? ಆತ ಝಿರೋ ಎಂದ ಠಾಕ್ರೆಗೆ ನೆಟ್ಟಿಗರ ಕ್ಲಾಸ್, ಪೇಚಿಗೆ ಸಿಲುಕಿದ ಶಿವಸೇನೆ
ಅಣ್ಣಾಮಲೈಯಲ್ಲಿ ಏನಿದೆ? ಆತ ಝಿರೋ ಎಂದು ಆದಿತ್ಯ ಠಾಕ್ರೆ ಗುಡುಗಿದ್ದಾರೆ. ಆದರೆ ಅಣ್ಣಾಮಲೈ ಅರ್ಹತೆ, ಐಪಿಎಸ್ ಅಧಿಕಾರಿ ಸೇರಿದಂತೆ ಹಲವು ಅಂಕಿ ಅಂಶಗಳ ಮುಂದಿಟ್ಟು ಸೋಶಿಯಲ್ ಮೀಡಿಯಾದಲ್ಲಿ ಠಾಕ್ರೆಗೆ ಸರಿಯಾಗಿ ಝಾಡಿಸಲಾಗಿದೆ.
India Latest News Live 13 January 202615ನೇ ವಾರ್ಷಿಕೋತ್ಸವಕ್ಕೆ ಗಿಫ್ಟ್ ಎಂದು ಡಿವೋರ್ಸ್ ನೀಡಿದ ಪತಿ - ಮಕ್ಕಳ ಭೇಟಿ ಮಾಡಲಾಗದೇ ಕೊರಗುತ್ತಿರುವ ನಟಿ
ಬಾಲಿವುಡ್ ನಟಿ ಸೆಲೀನಾ ಜೇಟ್ಲಿ ತಮ್ಮ ದಾಂಪತ್ಯ ಜೀವನದ ಕರಾಳ ಮುಖವನ್ನು ಬಹಿರಂಗಪಡಿಸಿದ್ದಾರೆ. ವಿವಾಹ ವಾರ್ಷಿಕೋತ್ಸವದ ಉಡುಗೊರೆ ನೀಡುವುದಾಗಿ ಕರೆದು ಪತಿ ವಿಚ್ಛೇದನ ನೋಟಿಸ್ ನೀಡಿದ್ದನ್ನು ನೆನೆದ ಅವರು
India Latest News Live 13 January 2026ಪೊಲೀಸರ ಮುಂದೆ ಡೀಲ್ ಮಾಡಲು ಹೋಗಿ ತಗಲಾಕೊಂಡ ಗ್ಯಾಂಗ್ - ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಐವರ ಬಂಧನ
ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಸಾಮಾನ್ಯ ವ್ಯಕ್ತಿ ಎಂದು ಭಾವಿಸಿ ಪೊಲೀಸ್ ಅಧಿಕಾರಿಯ ಮುಂದೆಯೇ ಡೀಲ್ ಮಾಡಲು ಹೋದಾಗ ಈ ದಂಧೆ ಬಯಲಾಗಿದ್ದು, ಐವರನ್ನು ಬಂಧಿಸಿ ಇಬ್ಬರು ಯುವತಿಯರನ್ನು ರಕ್ಷಿಸಲಾಗಿದೆ.
India Latest News Live 13 January 2026ಇದೇ ನನ್ನ ಮೊದಲ ಬ್ಯಾಟ್, ತೆಂಗಿನ ಹೆಡೆಯನ್ನು ವೇದಿಕೆಗೆ ತಂದು ತೋರಿಸಿದ ಟೀಮ್ ಇಂಡಿಯಾ ಬ್ಯಾಟರ್!
India Latest News Live 13 January 2026CSK ಫ್ರಾಂಚೈಸಿಗೆ ಬಲವಾದ ಹೊಡೆತ; ಗಾಯದಿಂದಾಗಿ ತಂಡದ ಕ್ಯಾಪ್ಟನ್ ಟೂರ್ನಿಯಿಂದಲೇ ಔಟ್!
ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ತಂಡದ ನಾಯಕ ಫಾಫ್ ಡು ಪ್ಲೆಸಿಸ್, ಉಂಗುರದ ಬೆರಳಿನ ಗಾಯದ ಸಮಸ್ಯೆಯಿಂದಾಗಿ 2025-26ನೇ ಸಾಲಿನ ಸೌಥ್ ಆಫ್ರಿಕಾ ಟಿ20 ಲೀಗ್‌ನಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಅವರ ಅನುಪಸ್ಥಿತಿಯಲ್ಲಿ, ತಂಡವು ಹೊಸ ನಾಯಕನ ಹುಡುಕಾಟದಲ್ಲಿದೆ.
India Latest News Live 13 January 2026ಇರಾನ್ ಪ್ರತಿಭಟನೆಯಲ್ಲಿ 12 ಸಾವಿರ ಮಂದಿ ಸಾವು? ಆಧುನಿಕ ಜಗತ್ತಿನ ಅತಿದೊಡ್ಡ ನರಮೇಧಕ್ಕೆ ಜಗತ್ತಿನ ಖಂಡನೆ
ಇರಾನ್‌ನಲ್ಲಿ ನಡೆದ ಸರ್ಕಾರಿ ವಿರೋಧಿ ಪ್ರತಿಭಟನೆಯಲ್ಲಿ 12 ಸಾವಿರ ಮಂದಿ ಹತರಾಗಿದ್ದಾರೆ ಎಂದು ವರದಿಯಾಗಿದ್ದು, ಇದನ್ನು ಇರಾನ್ ಸರ್ಕಾರ ನಿರಾಕರಿಸಿದೆ. ಈ ನಡುವೆ, ಅಮೆರಿಕ ಅಧ್ಯಕ್ಷ ಟ್ರಂಪ್ ಇರಾನ್ ಜೊತೆ ವ್ಯಾಪಾರ ಮಾಡುವ ದೇಶಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ.
India Latest News Live 13 January 2026ಯೂಟ್ಯೂಬ್‌ನಲ್ಲಿರುವ ಟಾಕ್ಸಿಕ್ ಟೀಸರ್ ವಿರುದ್ಧ ಅಸಮಾಧಾನ, ಸೆನ್ಸರ್ ಬೋರ್ಡ್ ಮಹತ್ವದ ಹೇಳಿಕೆ
ಯೂಟ್ಯೂಬ್‌ನಲ್ಲಿರುವ ಟಾಕ್ಸಿಕ್ ಟೀಸರ್ ವಿರುದ್ಧ ಅಸಮಾಧಾನ, ಪ್ರಮುಖವಾಗಿ ಮಹಿಳಾ ಆಯೋಗ ಸೆನ್ಸರ್ ಮಂಡಳಿಗೆ ಪತ್ರ ಬರೆದಿತ್ತು. ಯಶ್ ಟಾಕ್ಸಿಕ್ ಸಿನಿಮಾಗೆ ಕಾನೂನು ಸಂಕಷ್ಟ ಎದುರಾಗುತ್ತಿದ್ದಂತೆ ಸಿಬಿಎಫ್‌ಸಿ ಉತ್ತರ ನೀಡಿದೆ.
India Latest News Live 13 January 2026ಖಮೇನಿ ವಿರೋಧಿ ಪ್ರತಿಭಟನೆ - 26 ವರ್ಷದ ಯುವಕನ ಗಲ್ಲಿಗೇರಿಸಲಿರುವ ಇರಾನ್ ಸರ್ಕಾರ
ದೇಶದೆಲ್ಲೆಡೆ ಕಳೆದ ವಾರ ತೀವ್ರಗೊಂಡಿದ್ದ ಆಡಳಿತ ವಿರೋಧಿ ಪ್ರತಿಭಟನೆಗೆ ಸಂಬಂಧಿಸಿದಂತೆ ಸಾಮೂಹಿಕ ಬಂಧನದ ನಂತರ ಇರಾನ್ ಈಗ ತನ್ನ ಮೊದಲ ಪ್ರತಿಭಟನಾಕಾರರನನ್ನು ಗಲ್ಲಿಗೇರಿಸಲು ಸಜ್ಜಾಗಿದೆ ಎಂದು ವರದಿಯಾಗಿದೆ.
India Latest News Live 13 January 2026ಅಧ್ಯಕ್ಷನ ಬೆಡ್‌ರೂಮ್‌ಗೆ ನುಗ್ಗಿದ್ರೂ ವೆನುಜುವೇಲ ಆರ್ಮಿ ಏನ್ಮಾಡ್ತಿತ್ತು..! ಹೀಗಿತ್ತು ಅಮೆರಿಕ ಸೇನೆಯ ಆಪರೇಷನ್..
ಅಮೆರಿಕವು 'ಆಪರೇಷನ್ ಅಬ್ಸೊಲ್ಯೂಟ್ ರೆಸಲ್ವ್' ಮೂಲಕ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿದೆ. ಈ ಕಾರ್ಯಾಚರಣೆಯ ವೇಳೆ, ವೆನೆಜುವೆಲಾದ ರಷ್ಯಾದ ನಿರ್ಮಿತ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಗಳು ಕಾರ್ಯನಿರ್ವಹಿಸದೆ ವಿಫಲವಾದವು.
India Latest News Live 13 January 2026ರಾಹುಲ್ ದ್ರಾವಿಡ್ ಅದೊಂದು ತಪ್ಪು ತೀರ್ಮಾನ ಮಾಡಿದ್ರೆ ಧೋನಿ ಕ್ಯಾಪ್ಟನ್ ಆಗ್ತಾನೇ ಇರಲಿಲ್ಲ!
ಬೆಂಗಳೂರು: ಎಂ ಎಸ್ ಧೋನಿ ಭಾರತ ಕ್ರಿಕೆಟ್ ಕಂಡ ದಿಗ್ಗಜ ನಾಯಕ. ಮೂರು ಐಸಿಸಿ ಟ್ರೋಫಿ ಗೆದ್ದ ಏಕೈಕ ಟೀಂ ಇಂಡಿಯಾ ಎನ್ನುವ ಹೆಗ್ಗಳಿಕೆ ಧೋನಿಗಿದೆ. ಆದ್ರೆ ರಾಹುಲ್ ದ್ರಾವಿಡ್ ಒಂದು ತಪ್ಪು ತೀರ್ಮಾನ ಮಾಡಿದ್ದಿದ್ರೆ ಬಹುಶಃ ಧೋನಿ ನಾಯಕನಾಗಿ ನಮಗೆ ಸಿಗುತ್ತಿರಲಿಲ್ಲ. ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.
India Latest News Live 13 January 2026ಅರ್ಜುನ್ ತೆಂಡುಲ್ಕರ್ ಮದುವೆ ನಿಶ್ಚಯವಾದ ಬೆನ್ನಲ್ಲೇ ಸಚಿನ್ ದೊಡ್ಡ ನಿರ್ಧಾರ, ಶೀಘ್ರವೇ ಸಾರಾ ತೆಂಡುಲ್ಕರ್ ವಿವಾಹ
Arjun Tendulkar to Marry Saniya Chandhok on March 5; Sara's Wedding Next? ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಸಚಿನ್ ತೆಂಡುಲ್ಕರ್ ಮಾತ್ರವಲ್ಲ, ಅವರ ಮಗಳು ಸಾರಾ ತೆಂಡುಲ್ಕರ್ ಮತ್ತು ಮಗ ಅರ್ಜುನ್ ತೆಂಡುಲ್ಕರ್ ಕೂಡ ಸಾಕಷ್ಟು ಸುದ್ದಿಯಲ್ಲಿರುತ್ತಾರೆ.
India Latest News Live 13 January 2026ಬುದ್ಧನ ಪ್ರತಿಮೆ ಎಂದು ನಾಲ್ಕು ವರ್ಷದಿಂದ ಪೂಜಿಸುತ್ತಿದ್ದ ಮಹಿಳೆಗೆ ಶಾಕ್, ಸತ್ಯ ಗೊತ್ತಾದಾಗ ಅಚ್ಚರಿ
ಬುದ್ಧನ ಪ್ರತಿಮೆ ಎಂದು ನಾಲ್ಕು ವರ್ಷದಿಂದ ಪೂಜಿಸುತ್ತಿದ್ದ ಮಹಿಳೆಗೆ ಶಾಕ್, ಪ್ರತಿ ದಿನ ಬುದ್ಧನ ಪ್ರತಿಮೆ ಕುಳಿತು ಧ್ಯಾನ, ಪೂಜೆ ಮಾಡುತ್ತಿದ್ದ ಮಹಿಳೆಗೆ ತಾನು ಪೂಜಿಸಿದ್ದು ಬುದ್ಧನಲ್ಲ ಎಂಬ ಸತ್ಯ ಗೊತ್ತಾಗಿದೆ. ಮುಂದೇನಾಯ್ತು?
India Latest News Live 13 January 2026ತಾಯಿ ಹಾಗೂ ಹೆಂಡ್ತಿ ಕೊಲೆ ಮಾಡಿ ಮಿದುಳಿನಿಂದ ಮಾಂಸ ಹೊರತೆಗೆದು ಸೇವಿಸಿದ ಮಾದಕ ವ್ಯಸನಿ
ಉತ್ತರ ಪ್ರದೇಶದ ಕುಶಿನಗರದಲ್ಲಿ, ವ್ಯಕ್ತಿಯೊಬ್ಬ ತನ್ನ ತಾಯಿ ಮತ್ತು ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ನಂತರ ಅವರ ತಲೆಗಳನ್ನು ಜಜ್ಜಿ, ಮಾಂಸವನ್ನು ಕಿತ್ತು ಗ್ರಾಮಸ್ಥರ ಮುಂದೆಯೇ ತಿಂದಿದ್ದಾನೆ.
India Latest News Live 13 January 2026ಕಿವೀಸ್ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರೋ ವಿಶ್ವದಾಖಲೆ ಮುರೀತಾರಾ ವಿರಾಟ್ ಕೊಹ್ಲಿ?
ಏಕದಿನ ಕ್ರಿಕೆಟ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ, ನ್ಯೂಜಿಲೆಂಡ್ ವಿರುದ್ಧ ಸತತ ಐದನೇ 50+ ರನ್ ಗಳಿಸಿದ್ದಾರೆ. ರಾಜ್‌ಕೋಟ್‌ನಲ್ಲಿ ನಡೆಯಲಿರುವ ಮುಂದಿನ ಪಂದ್ಯದಲ್ಲಿ ಅವರು ಸಚಿನ್ ತೆಂಡೂಲ್ಕರ್‌ರ ಎರಡು ಮಹತ್ವದ ದಾಖಲೆಗಳನ್ನು ಮುರಿಯುವ ನಿರೀಕ್ಷೆಯಲ್ಲಿದ್ದಾರೆ.
India Latest News Live 13 January 2026ನೈಟ್ ಶಿಫ್ಟ್ ನರ್ಸ್ ಸಹಾಯಕ್ಕೆ ಬಂದ ಪ್ರಿಯಕರ; ಮೈಮರೆತು ಕೆಲಸ ಮಾಡಿದ ವಿಡಿಯೋ ವೈರಲ್ ಬೆನ್ನಲ್ಲೇ ಸಸ್ಪೆಂಡ್!
ನರ್ಸ್ ಒಬ್ಬಳು ತನ್ನ ನೈಟ್ ಶಿಫ್ಟ್ ವೇಳೆ ಪ್ರಿಯಕರನನ್ನು ಆಸ್ಪತ್ರೆಗೆ ಕರೆತಂದು ರೋಗಿಗಳಿಗೆ ಔಷಧಿ ಸಿದ್ಧಪಡಿಸಲು ಬಿಟ್ಟಿದ್ದಾಳೆ. ಈ ದೃಶ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನಂತರ ವಿಡಿಯೋ ವೈರಲ್ ಆಗಿದ್ದು, ಆಸ್ಪತ್ರೆ ಆಡಳಿತ ಮಂಡಳಿ ಆಕೆಯನ್ನು ಕೆಲಸದಿಂದ ಅಮಾನತುಗೊಳಿಸಿದೆ.
India Latest News Live 13 January 2026ವೈದ್ಯೆಯಾಗೋ ಕನಸು ಕಂಡಾಕೆಯ ಪ್ರಾಣ ತೆಗೆದ ಎಲೆಕೋಸಿನ ಹುಳು - ಪಿಜ್ಜಾ, ಬರ್ಗರ್ ಪ್ರಿಯರಿಗೆ ವೈದ್ಯರ ಎಚ್ಚರಿಕೆ
ಎಲೆಕೋಸಿನಲ್ಲಿರುವ ಹುಳುವಿನಿಂದಾಗಿ 19 ವರ್ಷದ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿದೆ. ಸರಿಯಾಗಿ ತೊಳೆಯದ ಎಲೆಕೋಸನ್ನು ಸೇವಿಸಿದ್ದರಿಂದ, ಅದರಲ್ಲಿನ ಪರಾವಲಂಬಿ ಕೀಟವು ಆಕೆಯ ಮೆದುಳನ್ನು ಸೇರಿ ಮಾರಣಾಂತಿಕವಾಗಿ ಪರಿಣಮಿಸಿದೆ.
India Latest News Live 13 January 2026ಮೇರಿ ಕೋಮ್ ಅಕ್ರಮ ಸಂಬಂಧ ಬಹಿರಂಗಪಡಿಸಿದ ಪತಿ, ಬೀದಿ ಜಗಳವಾದ ಡಿವೋರ್ಸ್ ಕಲಹ
ಮೇರಿ ಕೋಮ್ ಅಕ್ರಮ ಸಂಬಂಧ ಬಹಿರಂಗಪಡಿಸಿದ ಪತಿ, 2013, 2017ರಲ್ಲಿನ ಮೇರಿ ಕೋಮ್ ಅಫೈರ್ ಕುರಿತ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ಪತಿ ವಿರುದ್ದ ಮೇರಿ ಕೋಮ್ ಮಾಡಿದ ಆರೋಪದ ಬೆನ್ನಲ್ಲೇ ಇದೀಗ ಕಲಹ ಬೀದಿ ಜಗಳವಾಗಿದೆ.
India Latest News Live 13 January 2026ಆನ್‌ಲೈನ್‌ನಲ್ಲಿ ಬುಕ್ ಮಾಡಿದ್ರೆ ಇನ್ನು 10 ನಿಮಿಷದಲ್ಲಿ ಡೆಲಿವರಿ ಇರೋದಿಲ್ಲ!
No More 10-Minute Delivery: Blinkit, Zepto, Zomato Drop Time Deadline ಕೇಂದ್ರ ಕಾರ್ಮಿಕ ಸಚಿವರ ಮಧ್ಯಸ್ಥಿಕೆಯ ನಂತರ, ಡೆಲಿವರಿ ಏಜೆಂಟ್‌ಗಳ ಸುರಕ್ಷತೆಯ ಕಾಳಜಿಯಿಂದಾಗಿ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ ಬ್ಲಿಂಕಿಟ್ ತನ್ನ '10 ನಿಮಿಷಗಳ ಡೆಲಿವರಿ' ಜಾಹೀರಾತನ್ನು ಹಿಂಪಡೆದಿದೆ.