Arjun Tendulkar to Marry Saniya Chandhok on March 5; Sara's Wedding Next? ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಸಚಿನ್ ತೆಂಡುಲ್ಕರ್ ಮಾತ್ರವಲ್ಲ, ಅವರ ಮಗಳು ಸಾರಾ ತೆಂಡುಲ್ಕರ್ ಮತ್ತು ಮಗ ಅರ್ಜುನ್ ತೆಂಡುಲ್ಕರ್ ಕೂಡ ಸಾಕಷ್ಟು ಸುದ್ದಿಯಲ್ಲಿರುತ್ತಾರೆ. 

ದಿಗ್ಗಜ ಕ್ರಿಕಟಿಗ ಸಚಿನ್ ತೆಂಡುಲ್ಕರ್ ಅವರ ಮನೆಯಲ್ಲಿ ವಿವಾಹ ಸಿದ್ಧತೆಗಳು ನಡೆಯುತ್ತಿವೆ. ಸಚಿನ್ ತೆಂಡುಲ್ಕರ್‌ ಅವರ ಮಗ ಅರ್ಜುನ್ ತೆಂಡುಲ್ಕರ್ ಸಾನಿಯಾ ಚಂದೋಕ್ ಅವರನ್ನು ವಿವಾಹವಾಗುತ್ತಿದ್ದಾರೆ. ಇಬ್ಬರೂ ಕೂಡ ಬಾಲ್ಯದ ಸ್ನೇಹಿತರು. ಅರ್ಜುನ್‌ ತೆಂಡುಲ್ಕರ್‌ ತನ್ನ ತಂದೆಗಿಂತ ಭಿನ್ನ ಹಾದಿ ಹಿಡಿದಿದ್ದು ಕ್ರಿಕೆಟ್‌ನ ಉತ್ತಮ ಆಲ್ರೌಂಡರ್‌ ಆಗುವ ನಿಟ್ಟಿನಲ್ಲಿ ಗಮನಹರಿಸುತ್ತಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಅರ್ಜುನ್‌ ತೆಂಡುಲ್ಕರ್‌ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪರ ಆಡುತ್ತಿದ್ದರು. ಅರ್ಜುನ್‌ ತೆಂಡುಲ್ಕರ್‌ ಹಾಗೂ ಸಾನಿಯಾ ಚಾಂದೋಕ್‌ ಅವರ ನಿಶ್ಚಿತಾರ್ಥ ಕೆಲ ದಿನಗಳ ಹಿಂದೆ ಆಪ್ತರ ಸಮ್ಮುಖದಲ್ಲಿ ನಡೆದಿದೆ. ನಿಶ್ಚಿತಾರ್ಥದ ಕೆಲವು ಫೋಟೋಗಳು ಕೂಡ ಬೆಳಕಿಗೆ ಬಂದವು. ಅದಕ್ಕೂ ಮುನ್ನ ಸಚಿನ್‌ ತೆಂಡುಲ್ಕರ್‌ ಸೊಸೆ ಯಾರು ಮತ್ತು ಅರ್ಜುನ್‌ ತೆಂಡುಲ್ಕರ್‌ ಯಾರೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆ? ಎನ್ನುವ ಬಗ್ಗೆ ಯಾವುದೇ ಕಲ್ಪನೆ ಇದ್ದಿರಲಿಲ್ಲ. ಸಾನಿಯಾ ಚಾಂದೋಕ್‌ ಅವರ ತಂದೆ ಮತ್ತು ಅಜ್ಜ ಬಹಳ ದೊಡ್ಡ ಉದ್ಯಮಿಗಳು. ಸಾನಿಯಾ ಮತ್ತು ಅರ್ಜುನ್ ಕಳೆದ ಹಲವು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು, ನಂತರ ಅವರ ನಿಶ್ಚಿತಾರ್ಥ ಮುಂಬೈನಲ್ಲಿ ನಡೆಯಿತು.

ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಚಂದೋಕ್ ಅವರ ವಿವಾಹ ಐಪಿಎಲ್‌ಗೂ ಮುನ್ನ ನಡೆಯಲಿದೆ. ಅರ್ಜುನ್ ಮತ್ತು ಸಾನಿಯಾ ಅವರ ವಿವಾಹ ಮಾರ್ಚ್ 5 ರಂದು ನಡೆಯುವುದು ಫಿಕ್ಸ್‌ ಆಗಿದ್ದು. ವಿವಾಹ ಪೂರ್ವ ಸಮಾರಂಭಗಳು ಮಾರ್ಚ್ 3 ರಂದು ಪ್ರಾರಂಭವಾಗಲಿವೆ. ಸಚಿನ್ ತೆಂಡೂಲ್ಕರ್ ಮತ್ತು ಅವರ ಇಡೀ ಕುಟುಂಬವು ಮದುವೆಗೆ ಭರದಿಂದ ಸಿದ್ಧತೆ ನಡೆಸುತ್ತಿದೆ. ಅಂಜಲಿ ತೆಂಡೂಲ್ಕರ್ ಮತ್ತು ಸಾರಾ ತೆಂಡೂಲ್ಕರ್ ಕೆಲವು ದಿನಗಳ ಹಿಂದೆ ತಮ್ಮ ಮದುವೆಗಾಗಿ ಶಾಪಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಅದರ ಫೋಟೋಗಳು ವೈರಲ್ ಆಗಿದ್ದವು.

ಅರ್ಜುನ್‌ ವಿವಾಹದ ಬೆನ್ನಲ್ಲಿಯೇ ಸಾರಾ ತೆಂಡುಲ್ಕರ್‌ ಮದುವೆ

ಬಂದಿರುವ ಮಾಹಿತಿ ಪ್ರಕಾರ, ಅರ್ಜುನ್‌ ತೆಂಡುಲ್ಕರ್‌ ಅವರ ಮದುವೆಯ ನಂತರ ಸಾರಾ ತೆಂಡುಲ್ಕರ್‌ ಅವರ ವಿವಾಹ ನಡೆಯಲಿದೆ. ಸಾನಿಯಾ ಸೊಸೆಯಾಗಿ ಮನೆಗೆ ಬಂದರೆ, ಸಾರಾ ತೆಂಡುಲ್ಕರ್‌ ಅತ್ತೆ-ಮಾವನ ಮನೆಗೆ ಹೋಗುತ್ತಾರೆ. ಸಾರಾ ತೆಂಡುಲ್ಕರ್‌ ಹಾಗೂ ಶುಭ್‌ಮನ್‌ ಗಿಲ್‌ ನಡುವೆ ಡೇಟಿಂಗ್‌ ನಡೆಯುತ್ತಿದೆ ಎನ್ನುವ ಸುದ್ದಿ ಈಗಲೂ ಕೂಡ ಚಾಲ್ತಿಯಲ್ಲಿದೆ. ಆದರೆ, ಈ ಬಗ್ಗೆ ಯಾರೂ ಕೂಡ ಹೇಳಿಕೆ ನೀಡಿಲ್ಲ. ಅರ್ಜುನ್ ತೆಂಡೂಲ್ಕರ್ ನಂತರ ಸಾರಾ ಕೂಡ ಮದುವೆಯಾಗುತ್ತಾರೆ ಅನ್ನೋದು ಬಹುತೇಕ ನಿಜ.

ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಯಾರನ್ನು ಮದುವೆಯಾಗುತ್ತಾರೆ ಎಂಬುದರ ಕುರಿತು ಸ್ಪಷ್ಟತೆ ಇಲ್ಲ. ಡಿಸೆಂಬರ್‌ನಲ್ಲಿ, ಗೋವಾದ ಸಾರಾ ತೆಂಡೂಲ್ಕರ್ ಅವರ ಕೆಲವು ಫೋಟೋಗಳು ವೈರಲ್ ಆಗಿದ್ದವು. ಸಾರಾ ಪ್ರಸ್ತುತ ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ ಮತ್ತು ಅವರು ಶೀಘ್ರದಲ್ಲೇ ಮದುವೆಯಾಗುತ್ತಾರೆ ಎಂದು ಊಹಿಸಲಾಗುತ್ತಿದೆ. ಆದರೆ, ಸಾರಾ ತೆಂಡೂಲ್ಕರ್ ಅವರ ಮದುವೆಯ ಬಗ್ಗೆ ತೆಂಡೂಲ್ಕರ್ ಕುಟುಂಬದಿಂದ ಇನ್ನೂ ಏನನ್ನೂ ಹೇಳಲಾಗಿಲ್ಲ.