ದೇಶದೆಲ್ಲೆಡೆ ಕಳೆದ ವಾರ ತೀವ್ರಗೊಂಡಿದ್ದ ಆಡಳಿತ ವಿರೋಧಿ ಪ್ರತಿಭಟನೆಗೆ ಸಂಬಂಧಿಸಿದಂತೆ ಸಾಮೂಹಿಕ ಬಂಧನದ ನಂತರ ಇರಾನ್ ಈಗ ತನ್ನ ಮೊದಲ ಪ್ರತಿಭಟನಾಕಾರರನನ್ನು ಗಲ್ಲಿಗೇರಿಸಲು ಸಜ್ಜಾಗಿದೆ ಎಂದು ವರದಿಯಾಗಿದೆ.
ದೇಶದೆಲ್ಲೆಡೆ ಕಳೆದ ವಾರ ತೀವ್ರಗೊಂಡಿದ್ದ ಆಡಳಿತ ವಿರೋಧಿ ಪ್ರತಿಭಟನೆಗೆ ಸಂಬಂಧಿಸಿದಂತೆ ಸಾಮೂಹಿಕ ಬಂಧನದ ನಂತರ ಇರಾನ್ ಈಗ ತನ್ನ ಮೊದಲ ಪ್ರತಿಭಟನಾಕಾರರನನ್ನು ಗಲ್ಲಿಗೇರಿಸಲು ಸಜ್ಜಾಗಿದೆ ಎಂದು ವರದಿಯಾಗಿದೆ. ಇರಾನ್ ರಾಜಧಾನಿ ಟೆಹ್ರಾನ್ ಬಳಿಯ ಕರಾಜ್‌ನಲ್ಲಿ ಕಳೆದ ವಾರ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಬಂಧಿಸಲ್ಪಟ್ಟ 26 ವರ್ಷದ ಎರ್ಫಾನ್ ಸೋಲ್ಟಾನಿಯನ್ನು ಬುಧವಾರ ಸರಿಯಾದ ಯಾವುದೇ ವಿಚಾರಣೆಯಿಲ್ಲದೆ ಗಲ್ಲಿಗೇರಿಸಲು ನಿರ್ಧರಿಸಲಾಗಿದೆ ಎಂದು ಇರಾನ್‌ನಲ್ಲಿ ಕಾರ್ಯಾಚರಿಸುತ್ತಿರುವ ಮಾನವ ಹಕ್ಕುಗಳ ಗುಂಪುಗಳು ತಿಳಿಸಿವೆ.
26 ವರ್ಷದ ಎರ್ಫಾನ್ ಸೋಲ್ಟಾನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ ಮತ್ತು ಜನವರಿ 14 ರಂದು ಆತನಿಗೆ ಶಿಕ್ಷೆಯನ್ನು ಜಾರಿಗೊಳಿಸಲಾಗುವುದು ಎಂದು ಅವರ ಕುಟುಂಬಕ್ಕೆ ತಿಳಿಸಲಾಗಿದೆ ಎಂದು ನಾರ್ವೆ ಮೂಲದ ಎನ್‌ಜಿಒ ಇರಾನ್ ಮಾನವ ಹಕ್ಕುಗಳ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.
ಪ್ರತಿಭಟನೆಯ ಸಮಯದಲ್ಲಿ ಒಂಬತ್ತು ಅಪ್ರಾಪ್ತ ವಯಸ್ಕರು ಸೇರಿದಂತೆ 648 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿರುವ ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆ ಸಾವಿನ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ಎಚ್ಚರಿಸಿದೆ. ಕೆಲವು ಅಂದಾಜಿನ ಪ್ರಕಾರ, 6,000 ಕ್ಕಿಂತ ಹೆಚ್ಚು ಸಾವು ಸಂಭವಿಸಿದೆ. ಇಂಟರ್ನೆಟ್ ಸ್ಥಗಿತದಿಂದಾಗಿ ಈ ವರದಿಗಳನ್ನು ಸ್ವತಂತ್ರವಾಗಿ ಪರಿಶೀಲಿಸುವುದು ಅತ್ಯಂತ ಕಷ್ಟಕರವಾಗಿದೆ ಎಂದು ಐಎಚ್‌ಆರ್ ಹೇಳಿದ್ದು, ಇರಾನ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂದಾಜು 10,000 ಜನರನ್ನು ಬಂಧಿಸಲಾಗಿದೆ ಎಂದು ಹೇಳಿದೆ.
ಇಸ್ಲಾಮಿಕ್ ರಿಪಬ್ಲಿಕ್‌ನಿಂದ ಇರಾಕ್‌ನಲ್ಲಿಇತ್ತೀಚಿನ ದಿನಗಳಲ್ಲಿ ಪ್ರತಿಭಟನೆ ಮಾಡುತ್ತಿರುವವರನ್ನು ಹತ್ಯೆ ಮಾಡುವುದನ್ನು ನೋಡಿದರೆ ಇದು 1980 ರ ದಶಕದಲ್ಲಿದ್ದ ಇಸ್ಲಾಮಿಕ್ ಆಡಳಿತದ ಅಪರಾಧಗಳನ್ನು ನೆನಪಿಸುತ್ತಿವೆ ಇವುಗಳನ್ನು ಮಾನವೀಯತೆಯ ವಿರುದ್ಧದ ಅಪರಾಧಗಳೆಂದು ಗುರುತಿಸಲಾಗಿತ್ತು ಎಂದು ಐಎಚ್‌ಆರ್ ನಿರ್ದೇಶಕ ಮಹಮೂದ್ ಅಮಿರಿ-ಮೊಗದ್ದಮ್ ಹೇಳಿದ್ದಾರೆ. ಇಸ್ಲಾಮಿಕ್ ಗಣರಾಜ್ಯದ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಜನರನ್ನು ಸಾಮೂಹಿಕ ಹತ್ಯೆಗಳಿಂದ ರಕ್ಷಿಸುವುದು ಅಂತರರಾಷ್ಟ್ರೀಯ ಸಮುದಾಯದ ಕರ್ತವ್ಯ ಎಂದು ಅವರು ಹೇಳಿದ್ದಾರೆ.
ಮತ್ತೊಂದು ಮಾನವ ಹಕ್ಕುಗಳ ಗುಂಪಾದ ನ್ಯಾಷನಲ್ ಯೂನಿಯನ್ ಫಾರ್ ಡೆಮಾಕ್ರಸಿ ಇನ್ ಇರಾನ್ (NUFD) ಈಗ ಮರಣದಂಡನೆಗೊಳಗಾಗಿರುವ ಎರ್ಫಾನ್ ಸೋಲ್ತಾನಿ ಅವರ ಶಿಕ್ಷೆಯನ್ನು ತಡೆಯುವುದಕ್ಕೆ ಅಂತರರಾಷ್ಟ್ರೀಯ ಬೆಂಬಲವನ್ನು ಕೋರಿದೆ. ಎರ್ಫಾನ್ ಸೋಲ್ತಾನಿಯ ಅವನ ಏಕೈಕ ಅಪರಾಧ ಇರಾನ್‌ನ ಸ್ವಾತಂತ್ರ್ಯಕ್ಕಾಗಿ ಕೂಗಿದ್ದು, ಆತನಿಗೆ ಧ್ವನಿಯಾಗಿ ಎಂದು ಮಾನವ ಹಕ್ಕುಗಳ ಗುಂಪು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಶನಿವಾರ ಕರಾಜ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಎರ್ಫಾನ್ ಸೋಲ್ತಾನಿಯನ್ನು ಬಂಧಿಸಲಾಯಿತು ಮತ್ತು ಇರಾನ್‌ನಲ್ಲಿ ಮರಣದಂಡನೆಗೆ ಗುರಿಯಾಗಬಹುದಾದ ಅಪರಾಧವಾದ ದೇವರ ವಿರುದ್ಧ ಯುದ್ಧ ಸಾರಿದ ಆರೋಪವನ್ನು ಆತನ ವಿರುದ್ಧ ಹೊರಿಸಲಾಯಿತು ಎಂದು ದಿ ಯುಎಸ್ ಸನ್ ವರದಿ ಮಾಡಿದೆ. ಎರ್ಫಾನ್ ಸೋಲ್ತಾನಿ ಅವರಿಗೆ ವಕೀಲರ ಸಹಾಯವನ್ನು ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ತಾಯಿ ಹಾಗೂ ಹೆಂಡ್ತಿ ಕೊಲೆ ಮಾಡಿ ಮಿದುಳಿನಿಂದ ಮಾಂಸ ಹೊರತೆಗೆದು ಸೇವಿಸಿದ ಮಾದಕ ವ್ಯಸನಿ
ಇರಾನ್‌ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಆಡಳಿತವು ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಪ್ರಯತ್ನಿಸುತ್ತ ದೇಶದಲ್ಲಿ ಸಂವಹನ ಕಡಿತಗೊಳಿಸಿರುವುದರಿಂದ ಸೊಲ್ತಾನಿಯ ಮರಣದಂಡನೆಯನ್ನು ಇನ್ನೂ ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ ಎಂದು ತಿಳಿದು ಬಂದಿದೆ. ಸೋಮಾರ ಇರಾನ್‌ನಲ್ಲಿ ಬೀದಿಗಿಳಿದ ಪ್ರತಿಭಟನಾಕಾರರು ರಾಷ್ಟ್ರವ್ಯಾಪಿ ಅಲಿ ಖಮೇನಿ ಆಡಳಿತದ ವಿರುದ್ಧ ರಾಲಿ ನಡೆಸಿದರು. 1989ರಿಂದಲೂ ಅಧಿಕಾರದಲ್ಲಿರುವ ಖಮೇನಿಗೆ ಈಗ 86 ವರ್ಷವಾಗಿದೆ.
ಇದನ್ನೂ ಓದಿ: ಹೊಸ ಟಾಟಾ ಪಂಚ್ ಫೇಸ್‌ಲಿಫ್ಟ್: ರಸ್ತೆಗಿಳಿದ ಅಚ್ಚರಿಯ ಪವರ್‌ಪ್ಯಾಕ್ : ಬೆಲೆ ಕೇವಲ 5.59 ಲಕ್ಷ ವಿಶೇಷತೆ ಏನು?


