ಕೇಂದ್ರ ಸರ್ಕಾರವು ಸೋಪು, ಶಾಂಪೂ ಮತ್ತು ಸೌಂದರ್ಯವರ್ಧಕಗಳಂತಹ ಉತ್ಪನ್ನಗಳಿಗೆ ಹೊಸ ಲೇಬಲಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದರ ಪ್ರಕಾರ ಸಸ್ಯಾಹಾರಿ ಉತ್ಪನ್ನಗಳಿಗೆ ಹಸಿರು ಮತ್ತು ಮಾಂಸಾಹಾರಿ ಉತ್ಪನ್ನಗಳಿಗೆ ಕೆಂಪು ಅಥವಾ ಕಂದು ಬಣ್ಣದ ಚುಕ್ಕೆ ಇರುವುದು ಕಡ್ಡಾಯವಾಗಿದೆ.
ಕಾರುಗಳ ಬಳಕೆ ಉದ್ದೇಶ ಬಳಕೆಗೆ ತಕ್ಕಂತೆ ಬಣ್ಣದ ನಂಬರ್ ಪ್ಲೇಟ್ ಇರುವಂತೆ ಇದೀಗ ಕೇಂದ್ರ ಸರ್ಕಾರ ಸಸ್ಯಾಹಾರಿ ಉತ್ನನ್ನಗಳಿಗೆ ಹಸಿರು, ಮಾಂಸಾಹಾರಿ ಉತ್ಪನ್ನಗಳಿಗೆ ಕೆಂಪು ಬಣ್ಣದಿಂದ ಕೂಡಿದ ಹೊಸ ಲೇಬಲಿಂಗ್ ವ್ಯವಸ್ಥೆಯೊಂದು ಜಾರಿಗೆ ತಂದಿರುವುದು ಚರ್ಚೆಗೆ ಗ್ರಾಸವಾಗಿದೆ.
ಸಸ್ಯಾಹಾರಿ ಹಸಿರು, ಮಾಂಸಾಹಾರಿ ಉತ್ಪನ್ನಗಳಿಗೆ ರೆಡ್
ಇದರಲ್ಲಿ ವೆನ್, ನಾನ್ ವೆಜ್ ಗಳಲ್ಲದೆ ಸೋಪುಗಳು, ಶಾಂಪೂಗಳಲಿಂದ ಹಿಡಿದು ಟೂತ್‌ಪೇಸ್ಟ್ ಇತರೆ ಸೌಂದರ್ಯವರ್ಧಕ ಉತ್ಪನ್ನಗಳು, ಶೌಚಾಲಯ ಬಳಕೆಯ ಉತ್ಪನ್ನಗಳಿಗೆ ನಿರ್ಧಿಷ್ಟ ಬಣ್ಣಗಳಿಂದ ಕೂಡಿದ ವ್ಯವಸ್ಥೆ ಮಾಡಿದೆ. ಅಂದರೆ ನೀವು ಶಾಪಿಂಗ್ ಹೋದಾಗ ಅದರ ಮೇಲಿನ ಬಣ್ಣಗಳಿಂದಲೇ ಅದು ಸಸ್ಯಹಾರಿಯೋ, ಮಾಂಸಾಹಾರಿ ಉತ್ಪನ್ನವೋ ಎಂಬುದನ್ನು ಗುರುತಿಸಬಹುದಾಗಿ. ರಸ್ತೆಯಲ್ಲಿ ಹಸಿರು ಬಣ್ಣದ ಬೋರ್ಡ್ ಹೊಂದಿರುವ ಕಾರು ಎದುರಾದರೆ ಅದು ಹೇಗೆ ಎಲೆಕ್ಟ್ರಿಕ್ ಕಾರು ಗುರುತಿಸುತ್ತೆವಲ್ಲ ಹಾಗೆಯೇ ಗ್ರಾಹಕರು ಈ ಒಂದು ಉತ್ಪನ್ನ ಸಸ್ಯಹಾರಿಯೋ ಅಥವಾ ಮಾಂಸಾಹಾರಿಯೋ ಎಂದು ಕಡ್ಡಾಯ ಚಿಹ್ನೆಯ ಮೂಲಕ ಗುರುತಿಸಲು ಸಾಧ್ಯವಾಗುತ್ತದೆ.
ಈ ಉತ್ಪನ್ನಗಳಿಗೆ ಲೇಬಲಿಂಗ್ ಅಗತ್ಯವನ್ನ ಗೊತ್ತುಪಡಿಸಲು ಕೇಂದ್ರ ಸರ್ಕಾರವು ಕಾನೂನು ಮಾಪನಶಾಸ್ತ್ರ(ಪ್ಯಾಕ್ ಮಾಡಿದ ಉತ್ಪನ್ನಗಳು) ನಿಯಮಗಳು, 2011 ಅನ್ನು ತಿದ್ದುಪಡಿ ಮಾಡಿದೆ. ಈ ತಿದ್ದುಪಡಿ ಸೋಮವಾರದಿಂದಲೇ ಜಾರಿಗೆ ಬಂದಿದೆ.
ತಿದ್ದಪಡಿಯಲ್ಲೇನಿದೆ?
ತಿದ್ದುಪಡಿ ಮಾಡಿದ ನಿಯಮಗಳ ಪ್ರಕಾರ ಸಸ್ಯಾಹಾರಿ ಮೂಲದ ಉತ್ಪನ್ನಗಳು ಹಸಿರು ಚುಕ್ಕೆಯನ್ನು ಹೊಂದಿರಬೇಕು, ಆದರೆ ಮಾಂಸಾಹಾರಿ ಮೂಲದ ಉತ್ಪನ್ನಗಳು ಕೆಂಪು ಅಥವಾ ಕಂದು ಚುಕ್ಕೆಯನ್ನು ಹೊಂದಿರಬೇಕು. ಗ್ರಾಹಕರು ಶಾಪಿಂಗ್ ಮಾಡುವಾಗ ಉತ್ಪನ್ನವನ್ನು ಗುರುತಿಸಲು ಸುಲಭವಾಗುವಂತೆ ಪ್ಯಾಕೇಜ್‌ನ ಮುಖ್ಯ ಪ್ರದರ್ಶನ ಫಲಕದ ಮೇಲ್ಭಾಗದಲ್ಲಿ ಚಿಹ್ನೆಯನ್ನು ಪ್ರದರ್ಶಿಸಬೇಕು. ಇವು ಮುಖ್ಯವಾಗಿ ಸೋಪ್, ಶಾಂಪೂ, ಟೂತ್‌ಪೇಸ್ಟ್, ಇತರ ಸೌಂದರ್ಯವರ್ಧಕಗಳು, ಶೌಚಾಲಯ ಬಳಕೆಯ ಉತ್ಪನ್ನಗಳಿಗೆ ಈ ಬಣ್ಣದ ಲೇಬಲ್‌ಗಳಿವೆ.


