ರಸ್ತೆ ಸುರಕ್ಷತೆ ಹೆಚ್ಚಿಸಲು ಮತ್ತು ಟ್ರಾಫಿಕ್ ದಟ್ಟಣೆ ನಿಯಂತ್ರಿಸಲು, ಬೆಂಗಳೂರು ಸಂಚಾರ ಪೊಲೀಸರು ನಗರದ 5 ಪ್ರಮುಖ ಫ್ಲೈಓವರ್‌ಗಳಲ್ಲಿ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಈ ನಿಯಮಗಳ ಅಡಿಯಲ್ಲಿ, ಕೆಲವು ಫ್ಲೈಓವರ್‌ಗಳಲ್ಲಿ ದ್ವಿಚಕ್ರ ವಾಹನಗಳು ಮತ್ತು ಆಟೋ ರಿಕ್ಷಾಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಬೆಂಗಳೂರು: ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ, ಅಪಘಾತಗಳ ಪ್ರಮಾಣಕ್ಕೆ ಕಡಿವಾಣ ಹಾಕುವ ಹಾಗೂ ಟ್ರಾಫಿಕ್ ಜಾಮ್ ಸಮಸ್ಯೆ ನಿಯಂತ್ರಿಸುವ ಸಮಗ್ರ ದೃಷ್ಟಿಯಿಂದ ಬೆಂಗಳೂರು ಸಂಚಾರ ಪೊಲೀಸ್ ವಿಭಾಗವು ನಗರದ ಪ್ರಮುಖ ಫ್ಲೈಓವರ್‌ಗಳಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.
ನಗರದ 2 ಪ್ರಮುಖ ಫ್ಲೈಓವರ್‌ಗಳ ಮೇಲೆ ದ್ವಿಚಕ್ರ ವಾಹನ (ಬೈಕ್) ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದ್ದರೆ, 3 ಫ್ಲೈಓವರ್‌ಗಳ ಮೇಲೆ ಆಟೋ ರಿಕ್ಷಾಗಳ ಸಂಚಾರಕ್ಕೆ ಸಂಪೂರ್ಣ ತಡೆ ನೀಡಲಾಗಿದೆ. ಕೆ.ಆರ್. ಮಾರ್ಕೆಟ್‌ನ ಬಿಜಿಎಸ್ ಫ್ಲೈಓವರ್, ಪೀಣ್ಯಾ ಫ್ಲೈಓವರ್, ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್, ರಾಗಿಗುಡ್ಡ ಡಬಲ್ ಡೆಕ್ಕರ್ ಫ್ಲೈಓವರ್ ಹಾಗೂ ಏರ್‌ಪೋರ್ಟ್ ಫ್ಲೈಓವರ್‌ಗಳಿಗೆ ಸಂಬಂಧಿಸಿದಂತೆ ಈ ನೂತನ ನಿಯಮಗಳು ಅನ್ವಯವಾಗಲಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಸುರಕ್ಷತೆಯ ಹಿತದೃಷ್ಟಿಯಿಂದ ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ಯಾವ ಫ್ಲೈಓವರ್ ಮೇಲೆ? ಯಾವ ವಾಹನ ಓಡಾಟ ನಿರ್ಬಂಧ?
1.ಕೆ ಆರ್ ಮಾರ್ಕೆಟ್ ನ ಬಿಜಿಎಸ್ ಫ್ಲೈಓವರ್
ಬಾರಿ ಸರಕು ಸಾಗಾಣಿಕೆ ವಾಹನಗಳ ಸಂಚಾರ ಸಂಪೂರ್ಣವಾಗಿ ನಿರ್ಬಂಧ. ದಿನದ 24 ಗಂಟೆಗಳ ಕಾಲ ಬಾರಿ ಸರಕು ಸಾಗಾಣಿಕೆ ವಾಹನಗಳ ಸಂಚಾರ ನಿರ್ಬಂಧ. ಬೆ.7 ರಿಂದ 11 ಗಂಟೆವರೆಗೂ ಹಾಗೂ ಸಂಜೆ 4 ಗಂಟೆಯಿಂದ ರಾ.10 ಗಂಟೆವರೆಗೆ ಎಲ್ಲಾ ಮಾದರಿಯ ಗೂಡ್ಸ್ ವಾಹನಗಳ ಸಂಚಾರ ನಿರ್ಬಂಧ. ಎಲ್ಲಾ ಮಾದರಿಯ ಗೂಡ್ಸ್ ವಾಹನಗಳು ಹಾಗೂ ಗೂಡ್ಸ್ ಆಟೋಗಳ ಸಂಚಾರವೂ ನಿರ್ಬಂದ. ಹೊಸ ರೂಲ್ಸ್ ಸಪ್ಟೆಂಬರ್ 4 ರಿಂದ ಜಾರಿ.
2.ಪೀಣ್ಯಾ ಫ್ಲೈಓವರ್
ಪ್ರಯಾಣಿಕರ ಆಟೋ ರಿಕ್ಷಾ ಹಾಗೂ ಗೂಡ್ಸ್ ಆಟೋಗಳ ಸಂಚಾರ ಸಂಪೂರ್ಣವಾಗಿ ನಿರ್ಬಂಧ. ಬಾರಿ ಹಾಗೂ ಮದ್ಯಮ ಸರಕು ವಾಹನಗಳ ಸಂಚಾರಕ್ಕೆ ಸಮಯ ನಿಗದಿ. ಬೆ.7 ರಿಂದ 11 ಗಂಟೆವರೆಗೂ ಹಾಗೂ ಸಂಜೆ 4 ಗಂಟೆಯಿಂದ ರಾ.10 ಗಂಟೆವರೆಗೆ ಬಾರಿ ಹಾಗೂ ಮದ್ಯಮ ಸರಕು ವಾಹನಗಳ ಸಂಚಾರ ನಿರ್ಬಂಧ.
3.ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್
ಬೈಕ್ ಸಂಚಾರ ಸಂಪೂರ್ಣವಾಗಿ ನಿರ್ಬಂಧ. ಪ್ರಯಾಣಿಕರ ಆಟೋರಿಕ್ಷಾ ಹಾಗೂ ತ್ರಿಚಕ್ರ ಗೂಡ್ಸ್ ಆಟೋಗಳ ಸಂಚಾರ ಸಂಪೂರ್ಣವಾಗಿ ನಿರ್ಬಂಧ. ಎಲ್ಲಾ ಗೂಡ್ಸ್ ವಾಹನಗಳ ಓಡಾಟಕ್ಕೆ ಸಮಯ ನಿಗದಿ ಮಾಡಿರುವ ಸಂಚಾರ ಪೊಲೀಸ್ರು. ಬೆ.6 ರಿಂದ ರಾತ್ರಿ 10 ವರೆಗೂ ಗೂಡ್ಸ್ ವಾಹನಗಳ ಸಂಚಾರ ಸಂಪೂರ್ಣವಾಗಿ ನಿರ್ಬಂಧ. ಸಪ್ಟೆಂಬರ್ 11 ರಿಂದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಗೆ ಹೊಸ ರೂಲ್ಸ್ ಜಾರಿ.
4.ರಾಗಿಗುಡ್ಡ ಡಬ್ಬಲ್ ಡೆಕ್ಕರ್
ಬಾರಿ ಸರಕು ಸಾಗಾಣಿಕೆ ವಾಹನಗಳ ಸಂಚಾರ ಸಂಪೂರ್ಣವಾಗಿ ನಿರ್ಬಂಧ.
5. ಏರ್ಪೋರ್ಟ್ ಫ್ಲೈಓವರ್
ಬೈಕ್ ಸಂಚಾರ ಸಂಪೂರ್ಣವಾಗಿ ನಿರ್ಬಂಧ. ಆಟೋ ರೀಕ್ಷಾ ಓಡಾಟ ಸಂಪೂರ್ಣವಾಗಿ ನಿರ್ಬಂಧ. ಎಲ್ಲಾ ಗೂಡ್ಸ್ ವಾಹನಗಳ ಓಡಾಟಕ್ಕೆ ಸಮಯ ನಿಗದಿ. ಬೆ.6 ರಿಂದ ರಾತ್ರಿ 10 ಗಂಟೆವರೆಗೂ ಗೂಡ್ಸ್ ವಾಹನಗಳ ಸಂಚಾರ ನಿರ್ಬಂಧ


