Asianet Suvarna News

50ರೊಳಗಿನವರೆ ಕೊರೋನಾ ಟಾರ್ಗೆಟ್, ಬಹಿರಂಗವಾಯ್ತು ರಮ್ಯಾ ಸೀಕ್ರೆಟ್; ಜೂ.29ರ ಟಾಪ್ 10 ಸುದ್ದಿ!

ರಾಹುಲ್ ಗಾಂಧಿ ವಿಚಾರದಲ್ಲಿ ಕಾಂಗ್ರೆಸ್ ಐಟಿ ಸೆಲ್ ಹೆಡ್ ಆಗಿದ್ದ ನಟಿ ರಮ್ಯಾ ಮಾಡಿದ ತಪ್ಪೊಂದನ್ನು ಬಿಚ್ಚಿಟ್ಟಿದ್ದಾರೆ. ಇನ್ನುಕೊರೋನಾಗೆ 50 ವರ್ಷದೊಳಗಿನವರೆ ಹೆಚ್ಚು ಟಾರ್ಗೆಟ್ ಎಂದು ಏಮ್ಸ್ ವರದಿ ನೀಡಿದೆ. ಒನ್ ನೇಷನ್- ಒನ್ ರೇಷನ್ ಜಾರಿಗೊಳಿಸಲು ಸುಪ್ರೀಂ ಗಡುವು ನೀಡಿದೆ. ಮಗುವಿನ ರಕ್ಷಣೆಗೆ ಜರ್ಸಿ ಹರಾಜಿಗಿಟ್ಟ ಟಿಮ್ ಸೌಥಿ, ನಕ್ಷೆ ಎಡವಟ್ಟಿಗೆ ಟ್ವಿಟರ್ ಎಂಡಿ ಮೇಲೆ ಕೇಸ್ ಸೇರಿದಂತೆ ಜೂನ್ 29ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Coronavirus death to kannada Actress ramy top 10 News of June 29 ckm
Author
Bengaluru, First Published Jun 29, 2021, 4:56 PM IST
  • Facebook
  • Twitter
  • Whatsapp

ರಾಹುಲ್‌ ಗಾಂಧಿ ವಿಚಾರದಲ್ಲಿ ನಾನಿಂಥ ತಪ್ಪು ಮಾಡಬಾರದಿತ್ತು ಎಂದ ರಮ್ಯಾ!...

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಸಂಬಂಧಿಸಿ ನಾನೊಂದು ತಪ್ಪು ಮಾಡಿದ್ದೇನೆ ಎಂದಿರುವ ರಮ್ಯಾ, ಆ ಘಟನೆಯ ವಿವರಗಳನ್ನು ಇನ್‌ಸ್ಟಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಕೋವಿಡ್‌ಗೆ ಮೃತಪಟ್ಟವರಲ್ಲಿ 50 ವರ್ಷದೊಳಗಿನವರೆ ಹೆಚ್ಚು; AIIMS ಅಧ್ಯಯನ ವರದಿ...

ಭಾರತದಲ್ಲಿ ಕೊರೋನಾ ನಿಜವಾದ ಸ್ವರೂಪ ತೋರಿಸಿರುವುದು 2ನೇ ಅಲೆಯಲ್ಲಿ. ಲಕ್ಷ ಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕೊರೋನಾದಿಂದ ಮೃತಪಟ್ಟವರ ಕುರಿತು ದೆಹೆಲಿಯ ಏಮ್ಸ್ (AIIMS ) ವರದಿಯೊಂದನ್ನು ಬಿಡುಗಡೆ ಮಾಡಿದೆ. ಈ ವರದಿ ಪ್ರಕಾರ 50 ವರ್ಷದೊಳಗಿನವರೆ ಕೊರೋನಾ ಟಾರ್ಗೆಟ್ ಎಂದಿದೆ.

ಒನ್ ನೇಷನ್- ಒನ್ ರೇಷನ್ ಜಾರಿಗೊಳಿಸಲು ಗಡುವು ಕೊಟ್ಟ ಸುಪ್ರೀಂ...

ಸುಪ್ರಿಂ ಕೋರ್ಟ್‌ ಬಡವರಿಗಾಗಿ ಅದರಲ್ಲೂ ವಿಶೇಷವಾಗಿ ವಲಸೆ ಕಾರ್ಮಿಕರ ಹಿತವನ್ನು ಗಮನದಲ್ಲಿಟ್ಟುಕೊಂಡು ದೇಶಾದ್ಯಂತ ಒನ್ ನೇಷನ್ - ಒನ್ ರೇಷನ್ ಯೋಜನೆ ಜಾರಿಗೊಳಿಸಲು ಜುಲೈ 31ರವರೆಗೆ ಗಡುವು ಕೊಟ್ಟಿದೆ. ಕೊರೋನಾ ಸಂಕಟದ ಸಮಯದಲ್ಲಿ ವಲಸೆ ಕಾರ್ಮಿಕರ ಹಿತದೃಷ್ಟಿಯಿಂದ ಸುಪ್ರೀಂ ಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಅನೇಕ ಸಲಹೆ ಸೂಚನೆ ನೀಡಿದೆ. 

ಭಾರತದ ನಕ್ಷೆ ಎಡವಟ್ಟು: ಟ್ವಿಟರ್ ಇಂಡಿಯಾ MD ಮನೀಷ್ ಮಹೇಶ್ವರಿಗೆ ಸಂಕಷ್ಟ!...

ಭಾರತ ನಕ್ಷೆಯಲ್ಲಿ ಎಡವಟ್ಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟರ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಮನೀಷ್ ಮಹೆಶ್ವರಿ ವಿರುದ್ಧ ಉತ್ತರ ಪ್ರದೇಶದ ಬುಲಂದರ್‌ಶಹರ್‌ನಲ್ಲಿ ಎಫ್‌ಐಆರ್‌ ದಾಖಲಾಗಿದೆ. 

ಲಡಾ​ಖ್‌​ನಲ್ಲೇ ನಿಂತು ಚೀನಾ​ಕ್ಕೆ ರಾಜ​ನಾಥ್‌ ನೇರ ಎಚ್ಚ​ರಿ​ಕೆ!...

‘ಭಾರ​ತವು ಸದಾ​ಕಾಲ ಶಾಂತಿಪ್ರಿಯ ರಾಷ್ಟ್ರ​ವಾ​ಗಿದ್ದು, ಯಾವುದೇ ಕಾರ​ಣಕ್ಕೂ ಯಾರೊಂದಿಗೂ ಸಹ ಕಾಲು​ಕೆ​ರೆದು ಕಾದಾ​ಟಕ್ಕೆ ಹೋಗಲ್ಲ. ಆದರೆ ತಮ್ಮ ಮೇಲೆ ದಾಳಿಗೆ ಮುಂದಾ​ದವ​ರಿಗೆ ತಕ್ಕ ತಿರು​ಗೇಟು ನೀಡಲು ನಮ್ಮ ಸೈನ್ಯ ಸರ್ವ ಸನ್ನ​ದ್ಧ​ವಾ​ಗಿರಲಿ​ದೆ’ ಎಂದು ರಕ್ಷಣಾ ಸಚಿವ ರಾಜ​ನಾಥ್‌ ಸಿಂಗ್‌ ಗುಡು​ಗಿ​ದ್ದಾರೆ.

ಲಂಕಾಗೆ ಬಂದಿಳಿದ ಟೀಂ ಇಂಡಿಯಾಗೆ ಕಠಿಣ ಕ್ವಾರಂಟೈನ್‌...

ಶ್ರೀಲಂಕಾ ವಿರುದ್ದ ಸೀಮಿತ ಓವರ್‌ಗಳ ಸರಣಿಯನ್ನಾಡಲು ಕೊಲಂಬೊಗೆ ಬಂದಿಳಿದ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ಕಠಿಣ ಕ್ವಾರಂಟೈನ್‌ಗೆ ಒಳಗಾಗಿದೆ. ಲಂಕಾ ಎದುರಿನ ಸೀಮಿತ ಓವರ್‌ಗಳ ಸರಣಿ ಜುಲೈ 13ರಿಂದ ಆರಂಭವಾಗಲಿದೆ.

ಜೋಗ ವೀಕ್ಷಣೆಗೆ ಮುಕ್ತ ಅವಕಾಶ : ಮಾರ್ಗಸೂಚಿ ಪಾಲನೆ ಕಡ್ಡಾಯ...

ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಕೋವಿಡ್ 19 ಎರಡನೇ ಅಲೆಯ ಲಾಕ್‌ಡೌನ್‌ನಿಂದಾಗಿ ಪ್ರವಾಸಿಗರ ವೀಕ್ಷಣೆಗೆ ಹೇರಲಾಗಿದ್ದ ನಿಷೇಧ ತೆರವು ಮಾಡಲಾಗಿದೆ.  ಜೂನ್ 28ರಿಂದಲೇ ಅವಕಾಶ ನೀಡಲಾಗುತ್ತಿದೆ.

8 ವರ್ಷದ ಹೆಣ್ಣು ಮಗುವಿನ ಜೀವ ಉಳಿಸಲು ಜೆರ್ಸಿ ಹರಾಜಿಗಿಟ್ಟ ಟಿಮ್ ಸೌಥಿ...

ಕ್ಯಾನ್ಸರ್ ವಿರುದ್ದ ಜೀವನ್ಮರಣ ಹೋರಾಟ ನಡೆಸುತ್ತಿರುವ 8 ವರ್ಷದ ಹೆಣ್ಣು ಮಗುವಿನ ಜೀವ ಉಳಿಸಲು ನ್ಯೂಜಿಲೆಂಡ್ ಅನುಭವಿ ವೇಗಿ ಟಿಮ್ ಸೌಥಿ ಮುಂದಾಗಿದ್ದು, ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಧರಿಸಿದ್ದ ಜೆರ್ಸಿಯೊಂದನ್ನು ಹರಾಜಿಗಿಟ್ಟಿದ್ದಾರೆ.

ಪಂಜಾಬ್ ಮಿಷನ್ ಆರಂಭ: AAP ಗೆದ್ದರೆ 300 ಯೂನಿಟ್ ವಿದ್ಯುತ್ ಫ್ರೀ ಎಂದ ಕೇಜ್ರೀವಾಲ್!...

ಸಿಎಂ ಕೇಜ್ರೀವಾಲ್, ಪಂಜಾಬ್‌ನಲ್ಲಿ AAP ಗೆದ್ದರೆ 300 ಯೂನಿಟ್ ವಿದ್ಯುತ್ ಉಚಿತವಾಗಿ ನಿಡುತ್ತೇವೆ, ಹಳೆ ಬಿಲ್‌ಗಳನ್ನೂ ಮನ್ನಾ ಮಾಡಲಾಗುತ್ತದೆ ಮತ್ತು 24 ಗಂಟೆ ವಿದ್ಯುತ್ ಪೂರೈಕೆ ಮಾಡುವುದಾಗಿ ಹೇಳಿದ್ದಾರೆ.

ಹಾರ ಹಾಕಲು ಎತ್ತಿದಾತನಿಗೆ ಕೂಡಲೇ ಕಪಾಳ ಮೋಕ್ಷ ಮಾಡಿದ ವಧು!...

ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ ಎಂಬ ಮಾತು ಎಲ್ಲರಿಗೂ ತಿಳಿದಿರುವಂತದ್ದೇ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ಈ ಮಾತು ಶೇ. 100ರಷ್ಟು ಸತ್ಯ ಎಂಬುವುದನ್ನು ತೋರಿಸಿಕೊಟ್ಟಿದೆ. ಇಲ್ಲಿ ವಧು ತನ್ನನ್ನು ಎತ್ತಿದಾತನಿಗೆ ವೇದಿಕೆಯಲ್ಲೇ ಕಪಾಳ ಮೋಕ್ಷ ಮಾಡಿದ ದೃಶ್ಯಗಳಿವೆ. ಇತ್ತೀಚೆಗೆ ಮದುವೆ ಮನೆಯಲ್ಲಿ ನಡೆಯುತ್ತಿರುವ ವಿಚಿತ್ರ ಪ್ರಸಂಗಗಳು ವೈರಲ್ ಆಗುತ್ತಿದ್ದು, ಅವುಗಳ ನಡುವೆ ಈ ಹಳೇ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಲಾರಂಭಿಸಿದೆ.

ಬಂಗಾಳ ರಾಜ್ಯ​ಪಾ​ಲರ ಮೇಲೆ ದೀದಿ ಭ್ರಷ್ಟಾಚಾ​ರ ಆರೋ​ಪ!...

ಪಶ್ಚಿಮ ಬಂಗಾಳ ರಾಜ್ಯಪಾ​ಲ ಜಗ​ದೀಪ್‌ ಧನಕರ್‌ ಮತ್ತು ಮುಖ್ಯ​ಮಂತ್ರಿ ಮಮತಾ ಬ್ಯಾನರ್ಜಿ ಅವರ ನಡು​ವಿನ ವಾಕ್ಸ​ಮರ ಮತ್ತು ತಿಕ್ಕಾಟ ಮುಂದು​ವ​ರೆದಿದೆ.

Follow Us:
Download App:
  • android
  • ios