ತಮಿಳುನಾಡಿನ ಅಣ್ಣಾಮಲೈ ಕಾಡಿನಲ್ಲಿ ಸಾವಿರಾರು 'ಚೆಸ್ಟ್ನಟ್ ತಲೆಯ ಜೇನುನೊಣ ಭಕ್ಷಕ' ಹಕ್ಕಿಗಳು ಬೋಳು ಮರದ ಮೇಲೆ ಕುಳಿತು ಸೃಷ್ಟಿಸಿದ ಅದ್ಭುತ ದೃಶ್ಯದ ವೀಡಿಯೋ ವೈರಲ್ ಆಗಿದೆ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಹಂಚಿಕೊಂಡ ಈ ವೀಡಿಯೋ, ಅನೇಕರ ಸೆಳೆದಿದೆ.

ಇಂದು ಎಐ ವೀಡಿಯೋಗಳು ಸತ್ಯದ ತಲೆಗೆ ಹೊಡೆಯುವಷ್ಟು ಸೊಗಸಾಗಿ ಬಹುತೇಕ ನೈಸರ್ಗಿಕ ದೃಶ್ಯಗಳಂತೆ ಕಂಡು ಬರುತ್ತದೆ. ಇವುಗಳ ನಡುವೆ ನಿಜ ಯಾವುದು ಸುಳ್ಳು ಯಾವುದು ಎಂಬುದನ್ನು ಪತ್ತೆ ಮಾಡುವುದೇ ಒಂದು ದೊಡ್ಡ ಸವಾಲಾಗಿದೆ. ಹೀಗಿರುವಾಗ ಒಂದು ಎಐ ಸೃಷ್ಟಿಗಿಂತಲೂ ಅದ್ಭುತವಾದ ನೈಸರ್ಗಿಕ ವೀಡಿಯೋವೊಂದು ವೈರಲ್ ಆಗಿದೆ. ಹೌದು ತಮಿಳುನಾಡಿನ ಅಣ್ಣಾಮಲೈ ಕಾಡಿನಲ್ಲಿ ಕಂಡು ಬಂದ ಅದ್ಭುತ ದೃಶ್ಯವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿಯೊಬ್ಬರು ಪೋಸ್ಟ್ ಮಾಡಿದ್ದು, ಈ ವೀಡಿಯೋ ಭಾರಿ ವೈರಲ್ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಣ್ಣಾಮಲೈ ಕಾಡಿನಲ್ಲಿ ಕಂಡು ಬಂದ ಅದ್ಭುತ ದೃಶ್ಯ ವೈರಲ್

ನೈಸರ್ಗಿಕ ಸೃಷ್ಟಿಯ ಮುಂದೆ ಮಾನವ ಸೃಷ್ಟಿ ಏನೇನು ಅಲ್ಲ, ಹಾಗೆಯೇ ಇಲ್ಲಿ ಬೋಳಾದ ಮರದ ಮೇಲೆ ಕುಳಿತ ಹಕ್ಕಿಗಳ ಗುಂಪೊಂದು ಅದ್ಭುತ ದೃಶ್ಯಕಾವ್ಯವನ್ನೇ ಸೃಷ್ಟಿಸಿದ್ದು, ಈ ದೃಶ್ಯನ್ನು ತಮಿಳುನಾಡು ಸರ್ಕಾರದ ಪರಿಸರ ಹವಾಮಾನ ಬದಲಾವಣೆ ಮತ್ತು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಎಸ್ ಅಧಿಕಾರಿ Supriya Sahu(@supriyasahuias) ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ಪಕ್ಷಿಗಳ ಆರ್ಕೆಸ್ಟ್ರಾ ಅತ್ಯುತ್ತಮವಾಗಿದೆ! ಮತ್ತು ಈ ಹರಟೆಯಲ್ಲಿ ಅಡಗಿರುವುದು ಒಂದು ಸುಂದರವಾದ ಜೀವನ ಪಾಠ. ಅಣ್ಣಾಮಲೈ ಹುಲಿ ಅಭಯಾರಣ್ಯದ ತಪ್ಪಲಿನಲ್ಲಿ, ಸಾವಿರಾರು ಚೆಸ್ಟ್ನಟ್ ತಲೆಯ ಜೇನುನೊಣ ಭಕ್ಷಕರು (Chestnut-headed Bee-eaters) ಒಟ್ಟಿಗೆ ಸೇರುವ ಮೊದಲು ಆಕಾಶದಲ್ಲಿ ಚಿತ್ತಾರ ಬರೆದಿದ್ದಾರೆ. ಅವು ಸುರಕ್ಷತೆಗಾಗಿ ಒಟ್ಟುಗೂಡುತ್ತವೆ, ನಿರಂತರ ಸಂಗೀತ ಕರೆಗಳ ಮೂಲಕ ಸಂಪರ್ಕದಲ್ಲಿರುತ್ತವೆ ಮತ್ತು ಗುಂಪಿನಲ್ಲಿದ್ದು ಹೆಚ್ಚು ಪರಿಣಾಮಕಾರಿಯಾಗಿ ಬೇಟೆಯಾಡುತ್ತವೆ.

ಕಾಡಿನಲ್ಲಿ ಕೀಟಗಳ ಸಂಖ್ಯೆ ನಿಯಂತ್ರಿಸಿ ಪರಿಸರ ಸಮತೋಲನ ಮಾಡುತ್ತವೆ ಈ ಹಕ್ಕಿಗಳು

ಕಾಡಿನ ಅಂಚುಗಳು ಮತ್ತು ತೆರೆದ ಸ್ಥಳಗಳಲ್ಲಿ ಕಂಡುಬರುವ ಈ ರೋಮಾಂಚಕ ಪಕ್ಷಿಗಳು ಕಾಡಿನಲ್ಲಿ ಕೀಟಗಳ ಸಂಖ್ಯೆಯನ್ನು ನಿಯಂತ್ರಿಸುವ ಮೂಲಕ ಪ್ರಮುಖ ಪರಿಸರ ಪಾತ್ರವನ್ನು ವಹಿಸುತ್ತವೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದಕ್ಕೆ ಇವುಗಳು ಪರಿಪೂರ್ಣ ಜ್ಞಾಪನೆ. ಈ ಅದ್ಭುತ ದೃಶ್ಯವನ್ನು @sriram_p_murali ಅವರು ಸೆರೆ ಹಿಡಿದಿದ್ದಾರೆ ಎಂದು ಅಧಿಕಾರಿ ಸುಪ್ರಿಯಾ ಸಾಹು ಅವರು ಎಕ್ಸ್‌ನಲ್ಲಿ ವೀಡಿಯೋ ಪೋಸ್ಟ್ ಮಾಡಿ ಬರೆದಿದ್ದಾರೆ.

ಇದನ್ನೂ ಓದಿ: ಇವರು ನೀರಲ್ಲಿ ಬಿದ್ದು ಸತ್ತ ಪ್ರೇಮಿಗಳಲ್ಲ: ಇದು ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಭಾರಿ ವೈರಲ್

ವೀಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದು, ಈ ಅದ್ಭುತ ದೃಶ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೀಡಿಯೋದಲ್ಲಿ ಕಾಣುವಂತೆ ಎಲೆಗಳು ಉದುರಿರುವ ಬೋಳು ಮರದ ರೆಂಬೆಕೊಂಬೆಗಳಲ್ಲಿ ಮೇಲಿನಿಂದ ಕೆಳಗಿನವರೆಗೆ ಸಾಲಾಗಿ ಹಕ್ಕಿಗಳು ಕುಳಿತಿದ್ದು, ಹಸಿರು ದೇಹ ಕೆಂಪು ಬಣ್ಣದ ತಲೆಯನ್ನು ಹೊಂದಿರುವ ಈ ಹಕ್ಕಿಗಳು ಮರದಲ್ಲಿ ಕುಳಿತು ಚಿಲಿಪಿಲಿ ಗುಟ್ಟುತ್ತಿದ್ದು, ಅದ್ಭುತ ದೃಶ್ಯ ಕಾವ್ಯವನ್ನು ಸೃಷ್ಟಿಸಿವೆ. ಪ್ರತಿ ರೆಂಬೆಕೊಂಬೆಯ ತುಂಬೆಲ್ಲಾ ಇವು ಕುಳಿತಿದ್ದು, ದೂರದಿಂದ ನೋಡುವುದಕ್ಕೆ ಮರದ ಎಲೆಗಳಂತೆ ಗೋಚರಿಸುತ್ತಿವೆ.

ಇದನ್ನೂ ಓದಿ: ಭಾರತದಲ್ಲಿ ನಕ್ಸಲರು ಹಾಗೂ ದಂಗೆಕೋರ ಗುಂಪುಗಳಿಗೆ ತರಬೇತಿ : ಅಮೆರಿಕನ್ ಪ್ರಜೆಯೂ ಸೇರಿ 7 ವಿದೇಶಿಗರ ಬಂಧನ

ವೀಡಿಯೋ ನೋಡಿದ ಅನೇಕರು ಹಲವು ಕಾಮೆಂಟ್ ಮಾಡಿದ್ದಾರೆ. ಒಬ್ಬರು ಇದಕ್ಕೆ ಎಐ ವೀಡಿಯೋ ಎಂದು ಕಾಮೆಂಟ್ ಮಾಡಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರಿಯಾ ಸಾಹು ದಯವಿಟ್ಟು ಫೋಟೋಗ್ರಾಪರ್ ಕೆಲಸಕ್ಕೆ ಗೌರವ ಕೊಡಿ ಇದು ಎಐ ಅಲ್ಲ ಎಂದು ಹೇಳಿದ್ದಾರೆ. ಬರ್ಡ್ ಆರ್ಕೆಸ್ಟ್ರಾ' ವಾಸ್ತವವಾಗಿ ಸಾಮಾಜಿಕ ಸಮನ್ವಯದಲ್ಲಿ ಒಂದು ಮಾಸ್ಟರ್‌ಕ್ಲಾಸ್ ಆಗಿದೆ. ​ಅಣಾಮಲೈನಲ್ಲಿ ಸಾವಿರಾರು ಜೇನುನೊಣ ಭಕ್ಷಕ ಹಕ್ಕಿಗಳು ಒಟ್ಟು ಸೇರುವುದನ್ನು ನೋಡುವುದು ಭದ್ರತೆ ಎಂಬುದನ್ನು ನೆನಪಿಸುತ್ತದೆ. ಹಕ್ಕಿಗಳು ಈ ಕರೆಗಳ ಮೂಲಕ ಸಂಪರ್ಕದಲ್ಲಿ ಉಳಿಯುವ ಮೂಲಕ, ಅವರು ಕೇವಲ ಸುರಕ್ಷತೆಯನ್ನು ಕಂಡುಕೊಳ್ಳುವುದಿಲ್ಲ, ಅವರು ಸಾಮೂಹಿಕ ಬುದ್ಧಿಮತ್ತೆಯನ್ನು ಸೃಷ್ಟಿಸುತ್ತಾರೆ, ಅದು ಅವರನ್ನು ಅಂತಿಮ ಕೀಟ ನಿಯಂತ್ರಣ ತಂಡವನ್ನಾಗಿ ಮಾಡುತ್ತದೆ. ಪ್ರಕೃತಿ ಸ್ಪರ್ಧಿಸುವುದಿಲ್ಲ ಅದು ಸಹಕರಿಸುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇಲ್ಲಿದೆ ನೋಡಿ ಆ ಅಪರೂಪದ ವೈರಲ್ ವೀಡಿಯೋ:

Scroll to load tweet…