Asianet Suvarna News Asianet Suvarna News

ಪಂಜಾಬ್ ಮಿಷನ್ ಆರಂಭ: AAP ಗೆದ್ದರೆ 300 ಯೂನಿಟ್ ವಿದ್ಯುತ್ ಫ್ರೀ ಎಂದ ಕೇಜ್ರೀವಾಲ್!

* ವರ್ಷದ ಮೊದಲೇ ಪಂಜಾಬ್ ಚುನಾವಣೆಗೆ ಸಿದ್ಧತೆ

* ಪಂಜಾಬ್‌ನಲ್ಲಿ ಕೇಜ್ರೀವಾಲ್ ಚುನಾವಣಾ ಪ್ರಚಾರ

* ಪಂಜಾಬ್‌ನಲ್ಲಿ ದೆಹಲಿಯ ದಾಳ ಉರುಳಿಸಿದ AAP 

300 Units Free Power To All Punjab Families If AAP Wins Arvind Kejriwal pod
Author
Bangalore, First Published Jun 29, 2021, 3:26 PM IST

ಚಂಣಡೀಗಢ(ಜೂ.29): 2022ರಲ್ಲಿ ಪಂಜಾಬ್ ಚುನಾವಣೆ ನಡೆಯಲಿದೆ. ಆದರೆ ಒಂದು ವರ್ಷದ ಮೊದಲೇ ಎಲ್ಲಾ ಪಕ್ಷಗಳು ಚುನಾವಣೆಗೆ ಭರದ ಸಿದ್ಧತೆ ಆರಂಭಿಸಿವೆ. ಇನ್ನು ಮಂಗಳವಾರದಂದು ದೆಹಲಿ ಸಿಎಂ ಅರವಿಂದ್ ಕೇಜ್ರೀವಾಲ್ ಪಂಜಾಬಿಗರ ಮನವೊಲಿಸುವ ಯತ್ನ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಪ್ರಮುಖ ಘೋಷಣೆಯೊಂದನ್ನು ಮಾಡಿದ ಸಿಎಂ ಕೇಜ್ರೀವಾಲ್, ಪಂಜಾಬ್‌ನಲ್ಲಿ AAP ಗೆದ್ದರೆ 300 ಯೂನಿಟ್ ವಿದ್ಯುತ್ ಉಚಿತವಾಗಿ ನಿಡುತ್ತೇವೆ, ಹಳೆ ಬಿಲ್‌ಗಳನ್ನೂ ಮನ್ನಾ ಮಾಡಲಾಗುತ್ತದೆ ಮತ್ತು 24 ಗಂಟೆ ವಿದ್ಯುತ್ ಪೂರೈಕೆ ಮಾಡುವುದಾಗಿ ಹೇಳಿದ್ದಾರೆ.

ಪಂಜಾಬ್‌ನಲ್ಲಿ ದೆಹಲಿಯ ದಾಳ ಉರುಳಿಸಿದ AAP 

ಮಂಗಳವಾರದಂದು ಕೇಜ್ರೀವಾಲ್ ಪಂಜಾಬ್‌ನ ರಾಜಧಾನಿ ಚಂಡೀಗಢದಲ್ಲಿ Rally ಒಂದನ್ನು ಆಯೋಜಿಸಿದ್ದರು. ಹೀಗಿರುವಾಗ ಅವರು ಪಂಜಾಬಿಗರಿಗೆ ಅನೇಕ ಮಾತುಗಳನ್ನು ಕೊಟ್ಟಿದ್ದಾರೆ. ಇಡೀ ದೇಶದಲ್ಲಿ ವಿದ್ಯುತ್‌ಗೆ ಅತೀ ಹೆಚ್ಚು ಶುಲ್ಕ ಪಂಜಾಬ್‌ನಲ್ಲೇ. ಇಲ್ಲೇ ವಿದ್ಯುತ್ ತಯಾರಾಗುತ್ತಿದ್ದರೂ ಶುಲ್ಕ ಮಾತ್ರ ಭಾರೀ ಪ್ರಮಾಣದಲ್ಲಿ ಹಾಕಲಾಗುತ್ತಿದೆ. ಯಾಕೆಂದರೆ ಸರ್ಕಾರ ಹಾಗೂ ಕಂಪನಿಗಳ ಹುನ್ನಾರವಿದು ಎಂದು ಕಿಡಿ ಕಾರಿದ್ದಾರೆ.

ದೆಹಲಿ ಕತೆ ಹೇಳಿದ ಕೇಜ್ರೀವಾಲ್

ಇದೇ ವೇಢಳೆ ಕೇಜ್ರೀವಾಲ್ ಪಂಜಾಬಿಗರಿಗೆ ದೆಹಲಿಯ ಯಶಸ್ಸಿನ ಕತೆಯನ್ನೂ ತಿಳಿಸಿದ್ದಾರೆ. ನಾವು 2013ರಲ್ಲಿ ಮೊದಲ ಬಾರಿ ದೆಹಲಿಯಲ್ಲಿ ಚುನಾವಣೆ ಎದುರಿಸಿದಾಗ ಜನರಿಗೆ ಬೇಕಾಬಬಿಟ್ಟಿ ವಿದ್ಯುತ್ ಬಿಲ್ ನಿಡಲಾಗುತ್ತಿತ್ತು. ಯಾಕೆಂದರೆ ಅಲ್ಲೂ ಪಂಜಾಬ್‌ನಂತೆ ಸರ್ಕಾರ ವಿದ್ಯುತ್ ಕಂಪನಿ ಜೊತೆ ಕೈ ಮಿಲಾಯಿಸಿತ್ತು. ಆದರೆ ಇಂದು ದೆಹಲಿಯಲ್ಲಿ 24 ಗಂಟೆಯೂ ಅತೀ ಕಡಿಮೆ ಬೆಲೆಗೆ ವಿದ್ಯುತ್ ಪೂರೈಸಲಾಗುತ್ತಿದೆ. ಮುಂದೆ ಇದೇ ಕೆಲಸ ಪಂಜಾಬ್‌ನಲ್ಲೂ ಮಾಡುತ್ತೇವೆ. ಇಲ್ಲಿನ ಜನರಿಗೂ ವಿದ್ಯುತ್ ಸಂಬಂಧಿತ ಸಮಸ್ಯೆ ಎದುರಾಗಬಾರದೆಂಬುವುದು ನಮ್ಮ ಆಶಯ ಎಂದು ಅವರು ಹೇಳಿದ್ದಾರೆ.
 

Follow Us:
Download App:
  • android
  • ios