Asianet Suvarna News Asianet Suvarna News

ಒನ್ ನೇಷನ್- ಒನ್ ರೇಷನ್ ಜಾರಿಗೊಳಿಸಲು ಗಡುವು ಕೊಟ್ಟ ಸುಪ್ರೀಂ!

* ವಲಸೆ ಕಾರ್ಮಿಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಮಹತ್ವದ ಆದೇಶ ಕೊಟ್ಟ ಸುಪ್ರೀಂ 

* ದೇಶಾದ್ಯಂತ ಒನ್ ನೇಷನ್ - ಒನ್ ರೇಷನ್ ಯೋಜನೆ ಜಾರಿಗೊಳಿಸಲು ಜುಲೈ 31ರವರೆಗೆ ಗಡುವು 

* ಅಸಂಘಟಿತ ವಲಯದ ಕಾರ್ಮಿಕರ ನೋಂದಣಿಗೆ ರಾಷ್ಟ್ರೀಯ ಪೋರ್ಟಲ್ ಪೋರ್ಟಲ್ ಸಿದ್ಧಪಡಿಸಲು ಕ್ರಮ ಕೈಗೊಳ್ಳಲೂ ಸೂಚನೆ

Supreme Court directs all states UTs to implement One Nation One Ration Card scheme by July 31 pod
Author
Bangalore, First Published Jun 29, 2021, 3:40 PM IST

ನವದೆಹಲಿ(ಜೂ.29): ಸುಪ್ರಿಂ ಕೋರ್ಟ್‌ ಬಡವರಿಗಾಗಿ ಅದರಲ್ಲೂ ವಿಶೇಷವಾಗಿ ವಲಸೆ ಕಾರ್ಮಿಕರ ಹಿತವನ್ನು ಗಮನದಲ್ಲಿಟ್ಟುಕೊಂಡು ದೇಶಾದ್ಯಂತ ಒನ್ ನೇಷನ್ - ಒನ್ ರೇಷನ್ ಯೋಜನೆ ಜಾರಿಗೊಳಿಸಲು ಜುಲೈ 31ರವರೆಗೆ ಗಡುವು ಕೊಟ್ಟಿದೆ. ಕೊರೋನಾ ಸಂಕಟದ ಸಮಯದಲ್ಲಿ ವಲಸೆ ಕಾರ್ಮಿಕರ ಹಿತದೃಷ್ಟಿಯಿಂದ ಸುಪ್ರೀಂ ಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಅನೇಕ ಸಲಹೆ ಸೂಚನೆ ನೀಡಿದೆ. 

ಪಡಿತರ ಪಡೆಯಲು ಬೆರಳಚ್ಚು (ಬಯೋಮೆಟ್ರಿಕ್) ಕಡ್ಡಾಯವಲ್ಲ..!

ಹೌದು ಈ ನಿಟ್ಟಿನಲ್ಲಿ ಮಂಗಳವಾರದಂದು ಮಹತ್ವದ ಆದೇಶ ನೀಡಿದ ಸುಪ್ರಿಂ ಕೋರ್ಟ್ ಅಸಂಘಟಿತ ವಲಯದ ಕಾರ್ಮಿಕರ ನೋಂದಣಿಗೆ ರಾಷ್ಟ್ರೀಯ ಪೋರ್ಟಲ್ ಪೋರ್ಟಲ್ ಸಿದ್ಧಪಡಿಸಲು ಕ್ರಮ ಕೈಗೊಳ್ಳಬೇಕು, ಅಸಂಘಟಿತ ವಲಯದ ಕಾರ್ಮಿಕರ ನೋಂದಣಿ ಪ್ರಕ್ರಿಯೆಗೆ ರಾಷ್ಟ್ರೀಯ ಪೋರ್ಟಲ್ ಮಾಡಬೇಕು. ಜುಲೈ 31 ರ ಒಳಗೆ ಎಲ್ಲಾ ರಾಜ್ಯಗಳು ಒಂದು ರಾಷ್ಟ್ರ, ಒಂದು ಪಡಿತರ ಚೀಟಿ (ಒನ್ ನೇಷನ್, ಒನ್ ರೇಷನ್ ಕಾರ್ಡ್) ಯೋಜನೆ ಜಾರಿಗೊಳಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. 

ಕೋವಿಡ್ ಲಸಿಕೆ ಪಡೆಯದಿದ್ದರೆ ಪಡಿತರ ಚೀಟಿ ರದ್ದು

ಇದೇ ವೇಳೆ ಪಡಿತರ ಚೀಟಿ ಇಲ್ಲದವರಿಗೆ ಆಹಾರ ಧಾನ್ಯ ವಿತರಿಸಲು ರಾಜ್ಯಗಳು ಯೋಜನೆ ರೂಪಿಸಬೇಕು ಎಂದು ತಿಳಿಸಲಾಗಿದೆ. ಅಲ್ಲದೇ, ಇದಕ್ಕೆ ಕೇಂದ್ರ ಸರ್ಕಾರ ಆಹಾರ ಧಾನ್ಯ ಹಂಚಿಕೆ ಮಾಡಬೇಕು ಎನ್ನುವುದನ್ನೂ ಸೂಚಿಸಲಾಗಿದೆ. ಇನ್ನು ಸಮುದಾಯ ಕಿಚನ್ ಸೌಲಭ್ಯದ ಬಗ್ಗೆ ಅಭಿಪ್ರಾಯ ತಿಳಿಸಿರುವ ಸರ್ವೋಚ್ಛ ನ್ಯಾಯಾಲಯ ಕೊರೊನಾ ಇರುವವರೆಗೂ ಸಮುದಾಯ ಕಿಚನ್ ಸೌಲಭ್ಯ ಮುಂದುವರಿಸಬೇಕು ಎಂದೂ ಸುಪ್ರಿಂ ಸೂಚಿಸಿದೆ. 

ಅನೇಕ ರಾಜ್ಯಗಳಿಂದ ಕಡೆಗಣನೆ

ಇನ್ನು ಈ ಯೋಜನೆ ಬಗ್ಗೆ ಅನೇಕ ರಾಜ್ಯಗಳು ನಿರ್ಲಕ್ಷ್ಯ ತೋರಿಸುತ್ತಿವೆ. ಕೆಲ ದಿನಗಳ ಹಿಂದಷ್ಟೇ ನಡೆದ ವಿಚಾರಣೆಯಲ್ಲಿ ಸುಪ್ರಿಂ ಕೋರ್ಟ್‌ ಈ ಸಂಬಂಧ ದೆಹಲಿ ಹಾಗೂ ಬಂಗಾಳ ಸರ್ಕಾರಕ್ಕೆ ಮಾತಿನೇಟು ಕೊಟ್ಟಿತ್ತು. 
 

Follow Us:
Download App:
  • android
  • ios