Asianet Suvarna News Asianet Suvarna News

ಕೋವಿಡ್‌ಗೆ ಮೃತಪಟ್ಟವರಲ್ಲಿ 50 ವರ್ಷದೊಳಗಿನವರೆ ಹೆಚ್ಚು; AIIMS ಅಧ್ಯಯನ ವರದಿ

  • ಕೊರೋನಾಗೆ ಮೃತಪಟ್ಟವರ ಕುರಿತು AIIMS ಅಧ್ಯಯನ ವರದಿ
  • 50 ವರ್ಷದೊಳಗಿನವರೆ ಕೊರೋನಾ ವೈರಸ್ ಟಾರ್ಗೆಟ್
More people lost their lives due to COVID 19 under 50 than any other age group AIIMS study report ckm
Author
Bengaluru, First Published Jun 29, 2021, 3:56 PM IST

ನವದೆಹಲಿ(ಜೂ.29): ಭಾರತದಲ್ಲಿ ಕೊರೋನಾ ನಿಜವಾದ ಸ್ವರೂಪ ತೋರಿಸಿರುವುದು 2ನೇ ಅಲೆಯಲ್ಲಿ. ಲಕ್ಷ ಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕೊರೋನಾದಿಂದ ಮೃತಪಟ್ಟವರ ಕುರಿತು ದೆಹೆಲಿಯ ಏಮ್ಸ್ (AIIMS ) ವರದಿಯೊಂದನ್ನು ಬಿಡುಗಡೆ ಮಾಡಿದೆ. ಈ ವರದಿ ಪ್ರಕಾರ 50 ವರ್ಷದೊಳಗಿನವರೆ ಕೊರೋನಾ ಟಾರ್ಗೆಟ್ ಎಂದಿದೆ.

ಕೊರೋನಾ ಸಾವಿನ ಲೆಕ್ಕಪರಿಶೋಧನೆ ಅಗತ್ಯ; ಏಮ್ಸ್ ನಿರ್ದೇಶಕ!.

ಕೊರೋನಾ ವೈರಸ್‌ನಿಂದ ಮೃತಪಟ್ಟವರಲ್ಲಿ ಹೆಚ್ಚಿನವರು 50 ವರ್ಷದೊಳಗಿವರು ಎಂದು ಏಮ್ಸ್ ಅಧ್ಯಯನ ವರದಿ ಹೇಳುತ್ತಿದೆ. ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ನೇತೃತ್ವದಲ್ಲಿ ನಡೆದ ಈ ಅಧ್ಯಯನ ವರದಿ ಹಲವು ವಿಚಾರಗಳ ಕುರಿತು ಬೆಳಕು ಚೆಲ್ಲಿದೆ. 

ಈ ಅಧ್ಯಯನಕ್ಕಾಗಿ ಎಪ್ರಿಲ್ 4 ರಿಂದ ಜುಲೈ 24, 2020ರ ವರೆಗೆ ಆಸ್ಪತ್ರೆ ದಾಖಲಾದ ಕೊರೋನಾ ಸೋಂಕಿತರ ವೈದ್ಯಕೀಯ ದಾಖಲೆಗಳನ್ನು ಬಳಸಿಕೊಳ್ಳಲಾಗಿದೆ.  ಈ ಅವಧಿಯಲ್ಲಿ ಒಟ್ಟು 654 ಸೋಂಕಿತರು ಐಸಿಯುಗೆ ದಾಖಲಾಗಿದ್ದಾರೆ. ಇದರಲ್ಲಿ 247 ಮಂದಿ ಸಾವನ್ನಪ್ಪಿದ್ದಾರೆ. ಮರಣ ಪ್ರಮಾ ಶೇಕಡಾ 37.7 . 

ಭಾರತಕ್ಕೆ ಕೊರೋನಾ 3ನೇ ಅಲೆ ಅಪಾಯವಿದೆಯಾ? AIIMS ನಿರ್ದೇಶಕರ ಉತ್ತರ!.

 ಸೋಂಕಿತರನ್ನು 18 ರಿಂದ 50, 51 ರಿಂದ 65 ಮತ್ತು 65 ಕ್ಕಿಂತ ಹೆಚ್ಚಿನ ವಯಸ್ಸಿನವರಾಗಿ ವಿಂಗಡಿಸಲಾಗಿದೆ. 18 ರಿಂದ 50 ವರ್ಷದೊಳಗಿನ ಸೋಂಕಿತರ ಪೈಕಿ ಶೇಕಡಾ 42.1 ರಷ್ಟು ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. 51 ರಿಂದ 65 ವರ್ಷದೊಳಗಿನವರ ಪೈಕಿ 34.8% ಮಂದಿ ಸಾವನ್ನಪ್ಪಿದರೆ, 65ಕ್ಕಿಂತ ಮೇಲ್ಪಟ್ಟವರ ಪೈಕಿ ಶೇಕಡಾ 23.1 ರಷ್ಟು ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ಹೇಳುತ್ತಿದೆ.

Follow Us:
Download App:
  • android
  • ios