Husband Wife Dispute ಪತ್ನಿ ತನ್ನನ್ನು ಡುಮ್ಮಾ ಮತ್ತು ಕರಿಯಾ ಎಂದು ಹೀಯಾಳಿಸುತ್ತಾಳೆ ಎಂದು ಆರೋಪಿಸಿ ಪತಿಯೊಬ್ಬ ವಿಚ್ಛೇದನ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದನು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ನೀಡಿದ ತೀರ್ಪು ಏನು ಗೊತ್ತಾ?

ಚಂಢೀಗಢ: ನನ್ನನ್ನು ಡುಮ್ಮಾ, ಕಪ್ಪು ಬಣ್ಣದವನೆಂದು ಹೀಯಾಳಿಸುತ್ತಾಳೆ ಎಂದು ಹೇಳಿ ಡಿವೋರ್ಸ್ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾನೆ. ಇದು ಪತ್ನಿಯ ಕ್ರೂರತೆ ಎಂದು ಪತಿ ಆರೋಪಿಸಿದ್ದಾನೆ. ಛತ್ತೀಸಗಢ ಹೈಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆದಿದೆ. ನ್ಯಾಯಾಧೀಶರಾದ ಪಾರ್ಥ ಪ್ರತೀಮ್ ಸಾಹು ಮತ್ತು ಸಚಿನ ಸಾಹು ರಜಪೂತ ಅವರ ಪೀಠ ಈ ಅರ್ಜಿಯ ವಿಚಾರಣೆಯನ್ನು ನಡೆಸಿದೆ. 28 ವರ್ಷದ ವ್ಯಕ್ತಿ ಮತ್ತು ಆತನ ಕುಟುಂಬದವರು, 25 ವರ್ಷದ ಮಹಿಳೆ ವಿರುದ್ಧ ಮಾಡಿದ ಆರೋಪಗಳನ್ನು ಸಾಬೀತುಪಡಿಸಲು ವಿಫಲವಾಗಿದ್ದಾನೆ. ಗರ್ಭಪಾತದ ಬಳಿಕ ಮಹಿಳೆಯನ್ನು ತವರಿಗೆ ಕಳುಹಿಸಲಾಗಿತ್ತು.

ನ್ಯಾಯಾಲಯ ಹೇಳಿದ್ದೇನು?

ಆಗಸ್ಟ್ 2024ರಲ್ಲಿ ಕೌಟುಂಬಿಕ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ, ಪತ್ನಿಯ ಕುಟುಂಬದಿಂದ ಪಡೆದುಕೊಳ್ಳಲಾದ ಎಲ್ಲಾ ಗಿಫ್ಟ್‌ಗಳನ್ನು ಒಂದು ತಿಂಗಳಲ್ಲಿ ಮರಳಿಸುವಂತೆ ನ್ಯಾಯಾಲಯ ಆದೇಶಿಸಿದೆ.

ನನ್ನನ್ನು ಡುಮ್ಮಾ ಮತ್ತು ಕಪ್ಪು ಬಣ್ಣದವನು ಎಂದು ಪತ್ನಿ ಹೀಯಾಳಿಸುತ್ತಾಳೆ ಎಂದು ಪತಿ ಆರೋಪಿಸಿದ್ದನು. ಆದರೆ ಈ ಕಾರಣಕ್ಕಾಗಿ ವಿಚ್ಚೇದಮ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪತ್ನಿ ವಿರುದ್ಧ ಗಂಡನ ಆರೋಪ ಏನು?

2019ರಲ್ಲಿ ದಂಪತಿಯ ಮದುವೆ ನಡೆದಿತ್ತು. ಮದುವೆಯಾದ ಎರಡ್ಮೂರು ತಿಂಗಳು ಪತಿ ಹಾಗೂ ಆತನ ಕುಟುಂಬಸ್ಥರೊಂದಿಗೆ ಮಹಿಳೆ ವಾಸವಾಗಿದ್ದಳು. ಪತಿಯ ಪ್ರಕಾರ, ಈ ಸಮಯದಲ್ಲಿ ಹೆಂಡ್ತಿ ತನ್ನನ್ನು ಬಂಧಿಯನ್ನಾಗಿ ಮಾಡಿಕೊಂಡಿದ್ದಳು. ಈ ವೇಳೆ ಸುಳ್ಳು ಪ್ರಕರಣ ದಾಖಲಿಸಿ ತನ್ನನ್ನು ಜೈಲಿಗೆ ಕಳುಹಿಸುವ ಬೆದರಿಕೆ ಹಾಕಿದ್ದಳು. ಇಷ್ಟು ಮಾತ್ರವಲ್ಲ ಪದೇ ಪದೇ ತವರಿಗೆ ಹೋಗುತ್ತಿದ್ದಳು. ಅವಳಿ ಮಕ್ಕಳ ಗರ್ಭಿಣಿಯಾಗಿದ್ದಳು. ಆದ್ರೆ ಗರ್ಭಪಾತ ಆಯ್ತು ಎಂದು ಹೇಳಿಕೊಂಡಿದ್ದನು.

ಗಂಡನ ಆರೋಪಕ್ಕೆ ಪತ್ನಿಯ ಪ್ರಕ್ರಿಯೆ!

ಗಂಡನಿಗೆ ಮತ್ತೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿತ್ತು. ಈ ವಿಷಯ ಪ್ರಶ್ನಿಸಿದಾಗ ಮದ್ಯ ಕುಡಿದು ಬಂದು ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡಲಾರಂಭಿಸಿದನು. ಗರ್ಭಾವಸ್ಥೆಯಲ್ಲಿ ಉತ್ತಮ ಚಿಕಿತ್ಸೆ ಕೊಡಿಸದ ಹಿನ್ನೆಲೆಯಲ್ಲಿ ಗರ್ಭಪಾತವಾಯ್ತು. ಈ ಘಟನೆ ಬಳಿಕ ನನ್ನ ತಾಯಿ ಹೆಚ್ಚಿನ ಆರೈಕೆಗಾಗಿ ತವರಿಗೆ ಕರೆದುಕೊಂಡು ಹೋದರು. ಈ ವೇಳೆ ಮತ್ತೆ ನನ್ನನ್ನು ಕರೆದುಕೊಂಡು ಬರದಂತೆ ಗಂಡ ಹೇಳಿದ್ದನು. ಕೊನೆಗೆ 2020ರಲ್ಲಿ ನನ್ನ ತಾಯಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋದರು ಎಂದು ಮಹಿಳೆ ಹೇಳುತ್ತಾರೆ.

ಹೈಕೋರ್ಟ್‌ನಲ್ಲಿ ಇಬ್ಬರ ವಾದ ಏನಾಗಿತ್ತು?

ನಾಲ್ಕು ವರ್ಷ ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು. ಕೌಟುಂಬಿಕ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ವ್ಯಕ್ತಿ ಹೈಕೋರ್ಟ್ ಮೆಟ್ಟಿಲೇರಿದ್ದಾನೆ. ಇಲ್ಲಿಯೂ ಪತಿಯ ಡಿವೋರ್ಸ್ ಅರ್ಜಿ ವಜಾಗೊಂಡಿದೆ. ನಾಲ್ಕು ವರ್ಷದಿಂದ ಪ್ರತ್ಯೇಕವಾಗಿ ವಾಸವಾಗಿದ್ದು, ನನಗೆ ಪತ್ನಿಯೊಂದಿಗಿರಲು ಆಸೆ ಇದೆ. ಆದ್ರೆ ಪತ್ನಿಯಿಂದ ಸಹಮತವಿಲ್ಲ ಎಂದಿದ್ದನು. ಇತ್ತ ಪತ್ನಿ ಕೌಟುಂಬಿಕ ನ್ಯಾಯಾಲಯದ ತೀರ್ಪಿಗೆ ಒಮ್ಮತವಿದ್ದು, ಗಂಡನ ಅರ್ಜಿ ವಜಾಗೊಳಿಸುವಂತೆ ಮನವಿ ಮಾಡಿಕೊಂಡಿದ್ದರು.

ಇದನ್ನೂ ಓದಿ: ವಿಮಾನದ ಕಿಟಕಿ ಮೇಲೆ ಗಣಪತಿ ಚಿತ್ರ ಬಿಡಿಸಿದ ಕಲಾವಿದೆ: 'ನೋ ಫ್ಲೈ ಲಿಸ್ಟ್'ಗೆ ಸೇರಿಸಲು ನೆಟ್ಟಿಗರ ಆಗ್ರಹ!

ಇದನ್ನೂ ಓದಿ: ₹1.72 ಕೋಟಿ ಅಕ್ರಮ ಕೃಷಿ ಸಾಲ ವಿತರಣೆ; ಎಂಸಿಡಿಸಿಸಿ ಬ್ಯಾಂಕಿನ ಇಬ್ಬರು ಅಧಿಕಾರಿಗಳು ಅಮಾನತು