ಬ್ರಿಕ್ಸ್ ಶೃಂಗಸಭೆಗೆ ಭಾರತಕ್ಕೆ ಆಗಮಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ 24 ಗಂಟೆ ಭಾರತದಲ್ಲಿ ಇರಲಿದ್ದಾರೆ. ಚೀನಾ ಅಧ್ಯಕ್ಷರಿಗೆ ಭದ್ರತಾ ಪಡೆ, ಅಧಿಕಾರಿಗಳು ಸೇರಿದಂತೆ 15 ಸಾವಿರ ಮಂದಿ ನಿಯೋಜಿಸಲಾಗಿದೆ. ಇನ್ನು ಕ್ಸಿ ಪ್ರಯಾಣಿಸುವ ಲಿಮೋಸಿನ್ ಸೇರಿ 50ಕ್ಕೂ ಹೆಚ್ಚು ಕಾರು ಕೂಡ ತಂದಿದ್ದಾರೆ.
ನವದೆಹಲಿ (ಸೆ.12) ವಿಶ್ವವೇ ಇದೀಗ ಭಾರತದಲ್ಲಿ ನೋಡುತ್ತಿದೆ. ನವದೆಹಲಿಯಲ್ಲಿ ನಡೆಯುತ್ತಿರುವ ಎರಡು ದಿನಗಳ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಮುಖ ನಾಯಕರು ಪಾಲ್ಗೊಂಡಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೇರಿದಂತೆ ಹಲವು ಗಣ್ಯರು ಭಾರತದಲ್ಲಿದ್ದಾರೆ. ಈ ಪೈಕಿ ಪುಟಿನ್ ಹಾಗೂ ಕ್ಸಿ ಜಿನ್‌ಪಿಂಗ್ ಭದ್ರತೆ ಎಲ್ಲರಿಗಂತ ಭಿನ್ನ. ಈ ಬಾರಿ ಕ್ಸಿ ಜಿನ್‌ಪಿಂಗ್ ಭಾರತ ಬೇಟಿಯಲ್ಲಿ 24 ಗಂಟೆ ಕಳೆಯಲಿದ್ದಾರೆ. ಇದಕ್ಕಾಗಿ ಚೀನಾದಿಂದ ಭದ್ರತಾ ಪಡೆಗಳು, ಅಧಿಕಾರಿಗಳು ಆಗಮಿಸಿದ್ದಾರೆ. ಚೀನಾ ಅಧ್ಯಕ್ಷರಿಗೆ ಒಟ್ಟು 15 ಸಾವಿರ ಮಂದಿ ನಿಯೋಜಿಸಲಾಗಿದೆ. ಇನ್ನು ಕ್ಸಿ ಜಿನ್‌ಪಿಂಗ್ ಪ್ರಯಾಣಿಸುವ ಲಿಮೋಸಿನ್ ಕಾರು ಸೇರಿದಂತೆ 50ಕ್ಕೂ ಹೆಚ್ಚು ಕಾರನ್ನು ಚೀನಾದಿಂದಲೇ ತಂದಿದ್ದಾರೆ. ಜಿನ್‌ಪಿಂಗ್ ಭದ್ರತೆ ಹಾಗೂ ಅಧಿಕಾರಿಗಳ ಬಳಗವೇ ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಕ್ಸಿ ಜಿನ್‌ಪಿಂಗ್‌ಗೆ ಹಲವು ಸ್ತರದ ಭದ್ರತೆ
ಕ್ಸಿ ಜಿನ್‌ಪಿಂಗ್ ಚೀನಾ ಏರ್ ವಿಮಾನ ಮೂಲಕ ಭಾರತಕ್ಕೆ ಆಗಮಿಸಿದ್ದಾರೆ. ಭಾರತದ ಹಲವು ಎಜೆನ್ಸಿಗಳು ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡ ನಾಯಕರಿಗೆ ಭದ್ರತೆ ನೀಡುತ್ತಿದೆ. ದೆಹಲಿ ಪೊಲೀಸ್, ಎನ್‌ಎಸ್‌ಜಿ ಕಮಾಂಡೋ, ಪ್ಯಾರಾ ಮಿಲಿಟರಿ ಸೇರಿದಂತೆ ಹಲವು ಎಜೆನ್ಸಿಗಳಿಂದ ಭಾರಿ ಭದ್ರತೆ ನೀಡುತ್ತಿದೆ. ಇದರ ಜೊತೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭದ್ರತಾ ಪಡೆಗಳು ಭಾರತಕ್ಕೆ ಆಗಮಿಸಿದ್ದಾರೆ. ಚೀನಾ ಭದ್ರತಾ ಪಡೆಗಳು, ಭದ್ರತಾ ಎಜೆನ್ಸಿ ಅಧಿಕಾರಿಗಳು, ರಾಜತಾಂತ್ರಿಕ ಅಧಿಕಾರಿಗಳು, ಸರ್ಕಾರದ ಪ್ರತಿನಿಧಿಗಳು ಸೇರಿದಂತೆ ಬರೋಬ್ಬರಿ 15 ಸಾವಿರ ಮಂದಿ ಇದ್ದಾರೆ.
ಲಿಮೋಸಿನ್ ಸೇರಿ 50ಕ್ಕೂ ಹೆಚ್ಚು ಕಾರು
ಚೀನಾ ಅಧ್ಯಕ್ಷರು ಪ್ರಯಾಣಿಸುವ ಅತೀ ಸುರಕ್ಷತೆ ಹಾಗೂ ಭದ್ರತೆಯ ಲಿಮೋಸಿನ್ ಕಾರನ್ನು ಚೀನಾದಿಂದಲೇ ತರಿಸಿಕೊಳ್ಳಲಾಗಿದೆ. ವಿಶೇಷ ಅಂದರೆ ಕ್ಸಿ ಜಿನ್‌ಪಿಂಗ್ ಪ್ರಯಾಣಿಸುವ ಲಿಮೋಸಿನ್ ಕಾರು ಭಾರತಕ್ಕೆ 10 ದಿನಗಳ ಮೊದಲೇ ಆಗಮಿಸಿದೆ. ಇದರ ಜೊತೆಗೆ ಬೆಂಗಾವಲು ಪಡೆ ಕಾರು ಸೇರಿದಂತೆ 50ಕ್ಕೂ ಹೆಚ್ಚು ಕಾರು ಭಾರತಕ್ಕೆ ಆಗಮಿಸಿದೆ. ಇದರ ಜೊತೆಗೆ ಭಾರತದ ಭದ್ರತಾ ಪಡೆಗಳ ಕಾರು ಇರಲಿದೆ.
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಚಾಣಾಕ್ಯಪುರಿಯ ಲಕ್ಷುರಿ ಹೊಟೆಲ್‌ನಲ್ಲಿ ತಂಗಲಿದ್ದಾರೆ. ಕ್ಸಿ ಜಿನ್‌ಪಿಂಗ್‌ಗೆ ಪ್ರತ್ಯೇಕ ಹೊಟೆಲ್ ವ್ಯವಸ್ಥೆ ಮಾಡಿದ್ದಾರೆ. ಹೊಟೆಲ್ ಸುತ್ತಲೂ ಭದ್ರತಾ ಪಡೆಗಳಿವೆ. ಇನ್ನು ಪ್ರತಿ ಚಲನವಲನಗಳನ್ನು ಕೂಡ ಪರಿಶೀಲಿಸಲಾಗುತ್ತದೆ. ಪ್ರತಿ ರಸ್ತೆ, ಹೊಟೆಲ್, ಶೃಂಗಸಭೆ ಸ್ಥಳ ಸೇರಿದಂತೆ ಎಲ್ಲೆಡೆ ಭದ್ರತೆ ನಿಯೋಜನೆ ಮಾಡಲಾಗಿದೆ. 700ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ, ಡ್ರೋನ್‌ಗಳ ಮೂಲಕ ಭದ್ರತಾ ಪಡೆಗಳು ಕಣ್ಗಾವಲು ಇಟ್ಟಿದ್ದಾರೆ. ಕಂಟ್ರೋಲ್ ರೂಂ ಮೂಕ ಎಲ್ಲವನ್ನು ಪರಿಶೀಲಿಸಲಾಗುತ್ತದೆ.


