ಏರ್‌ ಇಂಡಿಯಾ ಸಿಬ್ಬಂದಿಯೊಬ್ಬರು ದೆಹಲಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಯ ನಂತರ ಏನೆಲ್ಲ ಆಗಿದೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

ದೆಹಲಿ: ಏರ್‌ ಇಂಡಿಯಾ ಸಿಬ್ಬಂದಿಯೊಬ್ಬರು ದೆಹಲಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವರದಿಗಳ ಪ್ರಕಾರ ವಸಂತ್‌ ಕುಂಚ್‌ನಲ್ಲಿರುವ ಹೋಟೆಲ್‌ ಒಂದರಲ್ಲಿ ಏರ್‌ ಇಂಡಿಯಾದ ಕಾಕ್‌ಪಿಟ್‌ ಸಿಬ್ಬಂದಿ ಒಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ನಂತರದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಪೊಲೀಸರು ಹೇಳಿದ್ದೇನು?

ದೆಹಲಿ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಹೋಟೆಲ್‌ ದಿ ಗ್ರ್ಯಾಂಡ್‌ನಿಂದ ಕರೆ ಬಂದಿದೆ. ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು. ಅಲ್ಲಿಗೆ ಭದ್ರತಾ ಅಧಿಕಾರಿಗಳು ಹೋಗಿ ತಲುಪಿದಾಗ, ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇರೋದು ಪತ್ತೆಯಾಗಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದೇವು.

ಆದರೆ ಅಲ್ಲಿನ ವೈದ್ಯರು ಮೃತಪಟ್ಟಿದ್ದಾರೆ ಎಂದು ತಿಳಿಸಿದರು. ನಂತರ ನಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೇವು. ಮೃತ ವ್ಯಕ್ತಿ ವಿಮಾನ ಸಂಸ್ಥೆಯ ಕ್ಯಾಪ್ಟನ್‌ ಆಗಿ ಕೆಲಸ ಮಾಡುತ್ತಿದ್ದರು. ಸೆಪ್ಟೆಂಬರ್‌ 10 ರಂದು ಹೋಟೆಲ್‌ಗೆ ಭೇಟಿ ನೀಡಿದ್ದರು. ಸೆಪ್ಟೆಂಬರ್‌ 11 ಸಂಜೆ ಅವರ ಸಹೋದರ ಹೋಟೆಲ್‌ ವ್ಯವಸ್ಥಾಪಕರನ್ನು ಸಂಪರ್ಕಿಸಿದ್ದರು. ಸಹೋದರ ನನ್ನ ಕರೆಗಳನ್ನ ಸ್ವೀಕರಿಸುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಬೆನ್ನಲ್ಲೇ ಹೋಟೆಲ್‌ ಮ್ಯಾನೇಜರ್‌ ಅವರಿಗೆ ನೀಡಲಾಗಿದ್ದ ಹೋಟೆಲ್‌ ರೂಮ್‌ಗೆ ಹೋಗಿದ್ದಾರೆ. ಆಗಲೂ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಹೋಟೆಲ್‌ನ ಇನ್ನೊಂದು ಕೀನಿಂದ ರೂಮ್‌ನ ಡೋರ್‌ ಓಪನ್‌ ಮಾಡಲಾಗಿದೆ. ಆಗ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇರೋದು ಪತ್ತೆಯಾಗಿದೆ. ಕೂಡಲೇ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು.

ವೈದ್ಯರು ಮೃತಪಟ್ಟಿದ್ದಾರೆ ಎಂದು ಹೇಳಿದ ಕೂಡಲೇ ನಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ. ಮರಣೋತ್ತರ ಪರೀಕ್ಷೆ ಕೂಡ ಮುಗಿದಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) ಸೆಕ್ಷನ್ 194 ರ ಅಡಿಯಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಇನ್ನೊಂದು ಕಡೆ ಏರ್‌ ಇಂಡಿಯಾ ಕೂಡ ತನ್ನ ಸಿಬ್ಬಂದಿ ಸಾವನ್ನು ಖಚಿತಪಡಿಸಿದೆ. ನಿನ್ನೆ ರಾತ್ರಿ ನಮ್ಮ ಕಾಕ್‌ಪಿಟ್‌ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಹೇಳಲು ತುಂಬಾ ದುಃಖವಾಗುತ್ತಿದೆ ಅಂತಾ ವಕ್ತಾರರು ತಿಳಿಸಿದ್ದಾರೆ.

ಏರ್‌ ಇಂಡಿಯಾ ಅವರ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದೆ. ದುಃಖದ ಸಮಯದಲ್ಲಿ ನಾವು ಆ ಕುಟುಂಬದ ಜೊತೆ ನಿಲ್ಲುತ್ತೇವೆ ಎಂದು ಏರ್‌ ಇಂಡಿಯಾ ಹೇಳಿದೆ.

Scroll to load tweet…