ದೆಹಲಿ ಯೂನಿವರ್ಸಿ ಸ್ಟುಡೆಂಟ್ ಯೂನಿಯನ್ ಚುನಾವಣೆಯಲ್ಲಿ 4ರಲ್ಲಿ ಮೂರು ಸ್ಥಾನ ಎಬಿವಿಪಿ ಗೆದ್ದುಕೊಂಡಿದೆ. ಜಂತರ್ ಮಂತರ್‌ನಲ್ಲಿ ಇತ್ತೀಚೆಗೆ ನಡೆದ ಕಾಕ್ರೋಚ್ ಪ್ರತಿಭಟನೆ ಬಳಿಕ ಈ ಫಲಿತಾಂಶ ಇದೀಗ ಭಾರಿ ಚರ್ಚೆಯಾಗುತ್ತಿದೆ.
ದೆಹಲಿ (ಸೆ.19) ದೆಹಲಿಯ ಜಂತರ್ ಮಂತರ್‌ನಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳು ಕಾಕ್ರೋಚ್ ಜನತಾ ಪಾರ್ಟಿ ಜೊತೆ ಸೇರಿ ಭಾರಿ ಪ್ರತಿಭಟನೆ ನಡೆಸಿದ್ದರು. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ಪ್ರತಿಭಟನೆ ವೇಳೆ ದೆಹಲಿ ಸೇರಿದಂತೆ ದೇಶದ ಜನ ಮೋದಿ ಸರ್ಕಾರ, ಬಿಜೆಪಿ, ಸಂಘ ಪರಿಪಾರದಿಂದ ದೂರವಿದ್ದಾರೆ ಎಂದು ಬಿಂಬಿಸಲಾಗಿತ್ತು. ಆದರೆ ಇದೀಗ ದೆಹಲಿ ವಿಶ್ವವಿದ್ಯಾಲದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಆರ್‌ಎಸ್‌ಎಸ್ ಭಾಗವಾಗಿರುವ ವಿದ್ಯಾರ್ಥಿ ಸಂಘಟನೆ ಎಬಿವಿಪಿ ನಾಲ್ಕು ಸ್ಥಾನಗಳಲ್ಲಿ ಮೂರು ಸ್ಥಾನ ಗೆದ್ದುಕೊಂಡಿದೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ಗೆ ಅಧ್ಯಕ್ಷ ಸೇರಿ 3 ಸ್ಥಾನ
ದೆಹಲಿ ಯೂನಿವರ್ಸಿಟಿ ಸ್ಟುಡೆಂಟ್ ಯೂನಿಯನ್ ( DUSU) ಚುನಾವಣೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಒಟ್ಟು ಮೂರು ಸ್ಥಾನ ಗೆದ್ದುಕೊಂಡಿದೆ. ಅಧ್ಯಕ್ಷ, ಕಾರ್ಯದರ್ಶಿ, ಹಾಗೂ ಜಂಟಿ ಕಾರ್ಯದರ್ಶಿ ಮೂರು ಸ್ಥಾನ ಎಬಿವಿಪಿ ಗೆದ್ದುಕೊಂಡಿದೆ. ಉಪಾಧ್ಯಕ್ಷ ಸ್ಥಾನ ಪಕ್ಷೇತರ ಅಭ್ಯರ್ಥಿಗೆ ದಕ್ಕಿದೆ.
ಯಶ್ ದಬಾಸ್ ಅಧ್ಯಕ್ಷ
ಎಬಿವಿಪಿಯ ಯಶ್ ದಬಾಸ್ ದೆಹಲಿ ಯೂನಿವರ್ಸ್ ಸ್ಟುಡೆಂಟ್ ಯೂನಿಯನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 24,576 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ. ಇನ್ನು ಎಬಿವಿಯ ರಿಯಾ ಚಾವ್ಡಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ರಿಯಾ 21,650 ಮತ ಪಡೆದಿದ್ದಾರೆ. ಇನ್ನು ಎಬಿವಿಯ ಲಕ್ಷ್ಯ ರಾಜ್ ಸಿಂಗ್ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಲಕ್ಷ್ಯ 16,641 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದೀಪಾಂಶು ಶೋಕಿನ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ದೀಪಾಂಶು 30,615 ಮತಗಳನ್ನು ಪಡೆದಿದ್ದಾರೆ.
ಕಾಂಗ್ರೆಸ್ ಬೆಂಬಲಿತ ವಿದ್ಯಾರ್ಥಿ ಸಂಘಟನೆ ಎನ್‌ಎಸ್‌ಯುಐ ದೆಹಲಿ ಯೂನಿವರ್ಸಿಟಿ ಸ್ಟುಡೆಂಟ್ ಯೂನಿಯನ್‌ನ ಎಲ್ಲಾ ಸ್ಥಾನಗಳಿಗೆ ಸ್ಪರ್ಧಿಸಿತ್ತು. ಆದರೆ ಗೆಲುವು ಸಾಧಿಸುವಲ್ಲಿ ವಿಫಲವಾಗಿದೆ. ಸೋಲು ಖಚಿತವಾಗುತ್ತಿದ್ದಂತೆ ಎನ್‌ಎಸ್‌ಯುಐ ಗಂಭೀರ ಆರೋಪ ಮಾಡಿದೆ. ದೆಹಲಿ ವಿಶ್ವವಿದ್ಯಾಲಯದ ಆರ್‌ಎಸ್ಎಸ್ ಬೆಂಬಲಿತ ಎಬಿವಿಪಿ ಸಂಘಟನೆಗೆ ನೆರವು ನೀಡಿದೆ. ಹೀಗಾಗಿ ಅಕ್ರಮವಾಗಿ ಗೆಲುವು ಕಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇತ್ತೀಚೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ದೊಡ್ಡ ಮಟ್ಟದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆದಿತ್ತು. ದೇಶದ ಹಲವು ಭಾಗಗಳಿಂದ ವಿದ್ಯಾರ್ಥಿಗಳು ದೆಹಲಿಗೆ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ಶಿಕ್ಷಣ, ಪರೀಕ್ಷೆ ಸುಧಾರಣೆ ಘೋಷಣೆಗಳಿಗಿಂತ ಪ್ರಧಾನಿ ನರೇಂದ್ರ ಮೋದಿ, ಮೋದಿ ತಾಯಿ, ಬಿಜೆಪಿ, ಆರ್‌ಎಸ್ಎಸ್ ವಿರುದ್ಧ ಅವಾಚ್ಯ ಶಬ್ದಗಳ, ವಿವಾದಾತ್ಮಕ ಘೋಷಣೆಗಳು ಕೇಳಿಬಂದಿತ್ತು. ಇದೇ ವೇಳೆ ದೇಶದ ವಿದ್ಯಾರ್ಥಿಗಳು ಬಿಜೆಪಿ, ಮೋದಿ ಸರ್ಕಾರ, ಆರ್‌ಎಸ್‌ಎಸ್ ಜೊತೆಗಿಲ್ಲ ಎಂದು ಮಹತ್ವದ ಹೇಳಿಕೆಗಳನ್ನು ನೀಡಿದ್ದರು. ಆದರೆ ಇದೀಗ ದೆಹಲಿ ವಿಶ್ವವಿದ್ಯಾಲಯದ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಆರ್‌ಎಸ್ಎಸ್ ವಿದ್ಯಾರ್ಥಿ ಸಂಘಟನೆ ಎಬಿವಿಪಿಗೆ ಹೆಚ್ಚಿನ ಮತ ನೀಡಿ ನಾಲ್ಕರಲ್ಲಿ ಮೂರು ಸ್ಥಾನ ಗೆಲ್ಲುವಂತೆ ಮಾಡಿದ್ದಾರೆ. ದೇಶದ ಯುವ ಜನತೆ ಅಭಿಪ್ರಾಯದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ.


